ಸಾಮರಸ್ಯ
ನೆನಪಾಗುತ್ತಾರೆ ಈದ್ ದಿನ ಬಾನು,ಅಹ್ಮದರು
ಯುಗಾದಿ ದೀಪಾವಳಿಗೆ
ಶುಭ ಕೋರುವ ಇವರು
ಅಳುವಲ್ಲಿ ನಗುವಲ್ಲಿ
ಒಂದಾಗುವ ನಾವು
ಕಾಣುವ ಕನಸುಗಳಿಗೆ
ಬಿಳಿಹಸಿರುಕೇಸರಿ
ಎಂಬ ಭೇದವಿಲ್ಲ
ಅಂತರಂಗದ ಮಿಡಿತ ನಮ್ಮದು
ವೇಷ-ಭೂಷ, ಆಚಾರ-ವಿಚಾರಗಳಿಲ್ಲದ
ನಮ್ಮ ಸ್ನೇಹ ತೊಟ್ಟಿದೆ
ಸಾಮರಸ್ಯದ ಅಂಗಿಯನ್ನು
ಇಣುಕಲಾರವು
ಜಾತಿ ಮತ ಧರ್ಮಗಳು
ಹೆಡೆಮುರಿ ಕಟ್ಟಿಕೊಂಡು
ಬಿದ್ದಿರುತ್ತವೆ ಅವು.
*****
ಗೌರಿ.ಚಂದ್ರಕೇಸರಿ
ಜಾತಿ ಮತ ಧರ್ಮಗಳು ಹೆಡೆಮುರಿ ಕಟ್ಟಿಕೊಂಡು ಬಿದ್ದಿರಲಿ
ಸದಾಶಯದ ಕವನ