ದೇದೀಪ್ಯಮಾನ
ರೇಶ್ಮಾ ಗುಳೇದಗುಡ್ಡಾಕರ್
ಎಲ್ಲ ಕಳೆದುಕೊಂಡೆ ಎಂದು
ಗೀಳಿಟ್ಟವು ಸುತ್ತಲಿನ ಜನಮನಗಳು
ಮನದಲ್ಲೆ ನಕ್ಕು ಮಾತಿಗಾಗಿ
ಅನುಕಂಪ ತೂರಿದವರೆಷ್ಟೊ…
ನನ್ನದಲ್ಲದ ವಸ್ತುಗಳಿಗೆ
ಬೆಲೆಕಟ್ಟಿ ಮುನಿದವರೆಷ್ಟೋ..!!
ಇವುಗಳ ಮಧ್ಯೆ ನನ್ನಲ್ಲಿ
ಎನೀಲ್ಲ ಎಂದರೊ ಮಡುಗಟ್ಟಿ
ಎದೆಯಾಳದಲಿ ಹುದುಗಿ
ಸಣ್ಣ ಸದ್ದು ಮಾಡುತ್ತಿತ್ತು “ನನ್ನತನ “
ದೇಹ ಮಾಗಿ ,ಬದುಕು ಬೆಂದರೂ
ಪರಿಪಕ್ವವಾಗಿ ನನ್ನೇ ಬಿಗಿದಪ್ಪಿ ಸಂತೈಸುತ
ಒಳಗಣ್ಣ ತೆರಸುತ ಭರವಸೆಯ
ಲೋಕಕ್ಕೆ ಲಗ್ಗೆ ಇಟ್ಟು
ಭಾವನೆಗಳ ಸಂಘರ್ಷಕೆ ಉದ್ವೇಗ ಗಳ
ಅರ್ತನಾದಕೆ ಮೌನ ಸವಿ ಸಾಗರವ
ಉಡುಗೂರೆ ನೀಡಿ ಜೀವನದ ಪ್ರೀತಿಯ
ಕಲಿಸಿ ಉತ್ಸಹಾದ ಬುಗ್ಗೆಯ ಹರಿಸಿತು
ಕಳೆದುಕೊಂಡಷ್ಟು ಬದುಕಿನಲ್ಲಿ
ಪಡೆಯುವದು ಅಗಾಧ ಬದ್ದತೆ
ಭರವಸೆಯ ಕಿರಣ ದೇದೀಪ್ಯಮಾನವಾಯಿತು ….
*******