ಕಾವ್ಯಯಾನ

ಭಾವ ಬಂಧುರ

Necklace,perspective,necklace,element

ರೇಮಾಸಂ

ಬಂಧುರದ ಭಾವದಲಿ ಬಿದ್ದಿರುವೆ ನಲ್ಲ,
ಬಿಡದೆ ಮನದಿ ನಿನ್ನ ಸಾಯುವ ಮಾತೇಕೆ ?
ಇರುವೆ ನಾ ನಿನ್ನುಸಿರಲಿ
ಹಠ ಮಾಡದಿರು ಸಖ ಮುನಿಸಿನಲಿ/
ನಾನಿರುವೆ ಕರ್ಮದ ಪಥದಲಿ
ಗೊತ್ತೇನು ಒಲವೇ//ಪ//

ಸಂತೈಸಿದ ಎನ್ನ ಮನಕೆ ಮುಗಿದಿಲ್ಲ ಬಾಳು /
ಕಂಡ ಕಣ್ಣ ಕನಸು ಆಗುವದೇ ಗೋಳು/
ಬರಡಾಗಲು ಮನಸು ನಿನದಲ್ಲ
ಮರುಳೇ/
ಬಾ ಎನಲು ನಾ ಹೋಗಿರುವೆನೇನು
ನಿನ್ನಲ್ಲೇ ಇರುವೆನು ಗೊತ್ತೇನು ಒಲವೇ//

ನೀನೇಕೆ ಬಡಪಾಪಿ ಜೀವನಕೆ ಚೇತನವಾಗಿರುವೆ/
ಎನ್ನ ಹೃದಯವಿದೆ ನಿನ್ನಲ್ಲೇ
ಕಾಯವ ಕಾಯದಿರು ಕಲ್ಪವೇ/
ಕಂದಕ ಮಾತಿನ ಕ್ಷಮೆಯೇಕೆ, ಕಾಣುವ ಕನಸಿಗೆ ಸಾವಿನ ಮಾತೇಕೆ /
ನಾ,ನೀನಾಗಿರುವೆನು ಗೊತ್ತೇನು ಒಲವೇ//
***********

Leave a Reply

Back To Top