ಅಸಹಾಯಕತೆ

ಅಸಹಾಯಕತೆ

ಕವಿತೆ ಎನ್. ಶೈಲಜಾ ಹಾಸನ ಅವೀರ್ಭವಿಸಿದೆ ಮೂರ್ತಅಮೂರ್ತಗಳ ನಡುವಿನ ಸ್ವರೂಪಮುಂದಕ್ಕಿಡುವ ಹಾದಿಹಿಂದಕ್ಕೋಡುತಿದೆ ಅಲ್ಲೊಂದು ಕಡಲುಮೇಲೊಂದು ಮುಗಿಲುದಾಟಿ ನದಿ ತಟವಕಾಡು ಗಿರಿಯ ಹಾದು,ಮುಗಿಲಂಚನು ಮುಟ್ಟುವಾಗಿನ ಸಂಭ್ರಮಗೆಲುವ ಮೀಟಿಪಿಸು ಪಿಸು ಧ್ವನಿಎಲ್ಲಿ? ಎಲ್ಲಿ? ಬೆನ್ನ ಹಿಂದೆ!ಹಿಂತಿರುಗಿದರೆ ಧ್ವನಿ ಮಾಯಮುನ್ನಡೆದರೆಮತ್ತೆ ಧ್ವನಿ, ಮತ್ತೂನಡೆದರೆ ಗಹಗಹಿಸುವವಿಕಟನಗೆಸೋಲೋ ಗೆಲುವೋಮೂರ್ತವೋಅಮೂರ್ತವೋ? *********************

ನಿನ್ನ ನೆನಪು

ಕವಿತೆ ಮಾಲತಿ ಶಶಿಧರ್  ನಿನ್ನ ನೆನಪೊಂದು ಉತ್ತರಗೋಳಾರ್ಧದ ಬೇಸಿಗೆದಿನದಂತೆಎಷ್ಟು ಮುದ ಅಷ್ಟೇ ತಾಪ ಗಾಳಿಯ ಒರಟುಸ್ಪರ್ಶಕ್ಕೆ ಹಿತ್ತಲಿನಚಂಗುಲಾಬಿಯೊಂದುಉದುರಿದಂತೆಹಿತ್ತಿಲ ತುಂಬೆಲ್ಲಾಚದುರಿದಂತೆ.. ಸಣ್ಣ ಇರುಳೊಂದಗುತ್ತಿಗೆ ಪಡೆದಿರುವೆ,ಅಧಿಕ ದಿನಯೊಂದಕ್ಕೆಬಾಡಿಗೆ ಇಟ್ಟಿರುವೆಎರಡೂ ನನ್ನದ್ದೇಆದರೂ ಖಾಸಾ ಅಲ್ಲಾ. ಸಂಜೆ ವೇಳೆಗೆ ರಸ್ತೆಬದಿಯಲ್ಲಿ ಸೆರಗೊಡ್ಡಿ ನಿಂತೆಮುಗಿಲ್ಗಲ್ಲಿನ ನಿರೀಕ್ಷೆಯಲ್ಲಿಸೆರಗು ತುಂಬಿದ್ದು ಮಾತ್ರಕಟು ತಾಪ.. ತೊಟ್ಟ ಚಿನ್ನದ ಬೆಂಡೋಲೆಮಂಕಾಯಿತೆ ಹೊರೆತುಕಾವು ಮಾತ್ರಹೆಚ್ಚುತ್ತಲೇ ಇತ್ತು ನೆನಪಿನಕುಲುಮೆಯಲ್ಲಿ.. ಹಸಿರು ಮರದ ರೆಂಬೆಯೊಂದನೀ ಕತ್ತರಿಸಿದಷ್ಟುಸುಲಭವಾಗಿನೆನಪಿನ ಕೊಂಬೆಯಛೇದಿಸಲಾಗದು,ನ್ಯಾಯೋಚಿತ ಸ್ವಾಧೀನದಕ್ಲೇಶವನು ಸಹಿಸಲಾಗದು. ***********************

ಆನು ಒಲಿದಂತೆ ಹಾಡುವೆನು ನಿನಗೆ ಕೇಡಿಲ್ಲವಾಗಿ

ಒಳನೋಟಿ ನಾಗರಾಜ ಹರಪನಹಳ್ಳಿ ಆನು ಒಲಿದಂತೆ ಹಾಡುವೆನು ನಿನಗೆ ಕೇಡಿಲ್ಲವಾಗಿ ಎಂಬುದು ಕವಿ ಬಸವಣ್ಣನ ಪ್ರಸಿದ್ಧ ಸಾಲು. ಸಂಸ್ಕೃತ ಭೂಯಿಷ್ಟವಾಗಿದ್ದ ಕನ್ನಡ ಕಾವ್ಯ, ಅರಮನೆಗೆ,ಪಂಡಿತರಿಗೆ ಮೀಸಲಾಗಿದ್ದ ಕನ್ನಡ ಕಾವ್ಯವನ್ನು ಜನ ಸಾಮಾನ್ಯನ ನೋವು ನಲಿಗೆ, ಮನಸಿನ ಸೂಕ್ಷ್ಮತೆ ಮತ್ತು ಬದುಕಿಗೆ  ಒಗ್ಗಿಸಿದ್ದು ವಚನ ಸಾಹಿತ್ಯ. ಜನ ಸಾಮಾನ್ಯನ ಕುರಿತಾಗಿ ಅಷ್ಟೇ ಅಲ್ಲ, ಜನ ಸಾಮಾನ್ಯನೂ ಬರೆಯುವಂತೆ ಮಾಡಿದ ಕಾಲ ಅದು. 12ನೇ ಶತಮಾನದ 25 ವರ್ಷಗಳ ಕಾಲ ಕರ್ನಾಟಕವನ್ನು ಅದರಲ್ಲೂ ಕಲ್ಯಾಣ ಕರ್ನಾಟಕವನ್ನು ಹರಡಿಕೊಂಡಿದ್ದ ವಚನ ಚಳುವಳಿ […]

ಸಂತಸ ಅರಳಿದ ಸಮಯಾ

ಮೊದಲ ಕವಿತೆಯ ರೋಮಾಂಚನ ವಸುಂದರಾ ಕದಲೂರು    ‘ಸಂಗಾತಿ’ ಬರಹಗಾರರನ್ನು ತಮ್ಮ ಮೊದಲ ಕಾವ್ಯದ ಹುಟ್ಟನ್ನು ಕುರಿತು ಬರೆಯುವಂತೆ ಪ್ರೇರೇಪಿಸಿದೆ. ಎಲ್ಲರೂ ಅಂದದ ತೊಟ್ಟಿಲೊಳಗೆ ಮಲಗಿ ನಿದ್ರಿಸುವ ತಮ್ಮ ಮುದ್ದಿನ ಮಗುವನ್ನು ಜತನದಿಂದ ಮೇಲೆತ್ತಿ ಮುದ್ದು ಮಾಡಿ ಓಲೈಸಿ ಆಡಿಸುವಂತೆ ಮೊದಲ ಕವನದ ನವಿರು ನೆನಪುಗಳನ್ನು ಕುರಿತು ಹೇಳುತ್ತಿದ್ದಾರೆ. ಓದಲು ಬಹಳ ಖುಷಿ ಎನಿಸುತ್ತದೆ.  ಹಳೆಯದನ್ನು ನೆನೆದು ಬರೆಯುವುದು ಆ ಕ್ಷಣದ ಮಟ್ಟಿಗೆ  ಒಂದು ಆನಂದ ಲಹರಿಯೇ..    ಮನೆಯಲ್ಲಿ ಅಪ್ಪ ಅಮ್ಮ ಇಬ್ಬರೂ ಸಾಹಿತ್ಯ ಪ್ರಿಯರು. ಮನೆಗೆ  ತಪ್ಪದೇ ಮಯೂರ, […]

ಹೂಗಳು ಅರಳುವ ಸಮಯ :

ಮೊದಲ ಕವಿತೆಯ ರೋಮಾಂಚನ ಅನುಪಮಾ ತುರುವೇಕೆರೆ ನನ್ನ ಜನ ಈಗ ನಿರಾಶ್ರಿತರು ಮತ್ತೊಮ್ಮೆ ಸಾಗಬೇಕು ಈ ದಾರಿಯಲ್ಲಿ ?ಪಯಣವನ್ನು ಇನ್ನೆಷ್ಟು ಸಾಗಿಸಬೇಕು!ಹಸಿವಿನ ಸಮುದ್ರವ ಬೆನ್ನಲಿ ಕಟ್ಟಿನಿರಾಸೆಯ ಕಾಂತಾರವ ಕಣ್ಣೊಳಗೆ ಬಂಧಿಸಿನಡೆಯುತ್ತಲೇ ಇದ್ದಾರೆ ನನ್ನ ಜನಊರಿಂದ ಪೇಟೆಗೆ ಅನ್ನಬಯಸಿಪೇಟೆಯಿಂದ ಊರಿಗೆ ಜೀವ ಬಯಸಿ ಆಶ್ರಯದ ಭರವಸೆಗಳ ಹೆಣಗಳುಹೇಷಾರವ ಮಾಡುತಿವೆಮಹಲಿನ ಸ್ಮಶಾನಗಳಲಿಅಲ್ಲಿ ಚಿಗುರಿದ ಗರಿಕೆ ನನ್ನ ಜನಹೆದರಿಕೆಯ ನಲ್ಲೆಯನು ಮುದ್ದಿಸುತಸಾಗುತ್ತಲೇ ಇದ್ದಾರೆ. ಬಾಗಿದ ಬೆನ್ನಲಿಶತಮಾನದ ನೋವ ಹೊತ್ತವರುಮಣ್ಣ ಕಣದೊಳಗೆ ಕಣ್ಣ ಕಣವನು ಕಂಡಎರೆಯಹುಳದಂತೆಹಸುರೊಳಗೆ ಪತ್ರಹರಿತ್ತುವಿನಂತೆಸಮ್ಮಾನವ ಬಯಸದ ನನ್ನ ಜನನಿರಾಶ್ರಿತರು ನಿರಾಸೆಯ […]

ಮೊದಲ ಕವಿತೆಯ ಅನುಭವದ ಸಾರ

ಮೊದಲ ಕವಿತೆಯ ರೋಮಾಂಚನ ಪೂಜಾ ನಾರಾಯಣ ನಾಯಕ            ಅದ್ಯಾಕೋ ಗೊತ್ತಿಲ್ಲ ಬಾಲ್ಯದ ದಿನದಿಂದಲೂ ಕನ್ನಡ ಭಾಷೆ ಮತ್ತು ಸಾಹಿತ್ಯ ಮೇಲೆ ಇತರ ಯಾವ ಭಾಷೆಯ ಮೇಲೂ ಇಲ್ಲದ ಒಲವು, ವಾತ್ಸಲ್ಯ, ಕರುಣೆ ಎಲ್ಲಕ್ಕಿಂತ ಹೆಚ್ಚಾಗಿ ಒಂದು ರೀತಿಯ ಗೌರವದ ಭಾವ ನನ್ನಲ್ಲಿ ನೆಲೆಯಾಗಿಬಿಟ್ಟಿದೆ. ಅದೇ ಕಾರಣಕ್ಕೋ ಏನೋ ಕವಿತೆಯನ್ನು ಬರೆಯಬೇಕು ಎನ್ನುವ ಸಣ್ಣ ತುಡಿತ ನನ್ನಲ್ಲಿ ಮೊಳಕೆಯೊಡೆದದ್ದು. ಆದರೆ ಶಾಲಾ-ಕಾಲೇಜಿನ ಪುಸ್ತಕದಲ್ಲಿನ ಕವಿಗಳ ಸಾಹಿತ್ಯದ ಹೊರತಾಗಿ ಬೇರಾವ ಹೆಚ್ಚಿನ ಸಾಹಿತ್ಯದ ಬಗ್ಗೆಯೂ ಗೊತ್ತಿಲ್ಲದ ನನಗೆ ಕಾವ್ಯವನ್ನು […]

ಮೊದಮೊದಲ ತೊದಲುಗಳು

ಮೊದಲ ಕವಿತೆಯ ರೋಮಾಂಚನ -ಶೋಭಾ ನಾಯ್ಕ‌ .ಹಿರೇಕೈ ಕಂಡ್ರಾಜಿ.‌ ನಾನಾಗ ಶಿಕ್ಷಕರ ತರಬೇತಿ ಪಡೆಯುತ್ತಿದ್ದ ದಿನಗಳು. 99ರ ಕಾಲಘಟ್ಟ. ಹಾಸ್ಟೆಲ್ನಿಂದ  ಎಲ್ಲ ಸೋದರಿಯರಿಂದ  ಬೀಳ್ಕೊಂಡು  ಹೊಸ ಊರು, ಹೊಸ ಸ್ಥಳ, ಹೊಸ ಬಾಡಿಗೆ ಮನೆಯಲ್ಲಿ ಒಂಟಿತನ ಕಾಡಿದಾಗ ನನಗೆ ಈ ಕವಿತೆಗಳ ನಂಟು ಬೆಳೆಯಿತು. ತೋಚಿದ್ದನ್ನು  ಗೀಚಲು ಪ್ರಾರಂಭಿಸಿದ್ದು ಆಗಲೇ. ಮತ್ತೆ ಆಗಲೇ ಕಾರ್ಗಿಲ್ ಯುದ್ಧದ ಸಂದರ್ಭ ಕೂಡ. ಗಡಿ ಮತ್ತು ಬಂದೂಕಿನ ಗುಂಡು ನನ್ನನ್ನು ಆಗಲೇ ಕಾಡಲು ಪ್ರಾರಂಭಿಸಿದ್ದು. ಆಗ ಯುದ್ಧದ ಬಗ್ಗೆ ಬರೆದ ಮೊದಲ […]

ಮೊದಲ ಕವಿತೆಯ ಮಧುರ ಅನುಭವ

ಮೊದಲ ಕವಿತೆಯ ರೋಮಾಂಚನ ಎಂ.ಜಿ.ತಿಲೋತ್ತಮೆ ಕವಿತೆಯೆಂದರೆ ಕೇವಲ ಹಾಳೆ, ಲೇಖನಿ, ಪದ,ಸಾಲು ವಸ್ತುವಿನ ಆಯ್ಕೆಯಿಂದ  ಕೂಡಿರಲು  ಸಾಧ್ಯವಿಲ್ಲ. ನಮ್ಮ ಅನುಭವಕ್ಕೆ ಬರುವ ಎಲ್ಲಾ ಭಾವನೆಯನ್ನು ಕವಿತೆಯಲ್ಲಿ ಕಾಣಬಹುದು. ಮಾತಿನಲ್ಲಿಹೇಳಲಾಗದ ಪ್ರೇಮ,ವಿರಹ,ದುಗುಡ,ಹತಾಶೆ,  ಹೀಗೆ  ಎಲ್ಲವೂ ಕವಿತೆಯಲ್ಲದೇ ಬೇರೆ ಯಾವುದೇ ಮಾರ್ಗ ದಿಂದ ಹೇಳಿಕೊಳ್ಳುವುದು ಸುಲಭವಲ್ಲ.  ಕವಿತೆಯ ಹುಟ್ಟು , ಹರಿವು ಅದು ನಾವು ಅಂದುಕೊಂಡ  ಶುಭ ಘಳಿಗೆ ಅಥವಾ ಪುರೊಸೊತ್ತಿನ ಸಮಯದಲ್ಲಿ ಮನದ ಭಾವನೆಯ  ಕಿಂಡಿಯಿಂದ ನುಗ್ಗಿ ಬರುತ್ತದೆ ಎಂದು ಹೇಳಲಾಗದು. ಅದು ನೀಲಿ ಆಕಾಶದಲ್ಲಿ ಹಾರುವ ಹಕ್ಕಿಯ […]

ಲಾಲಿಸಿದಳು ಯಶೋಧೆ

ಮೊದಲ ಕವಿತೆಯ ರೋಮಾಂಚನ ವೀಣಾ ಹಂಪಿಹೊಳಿ  ನನ್ನ ಮೊದಲ ಕವನ ಹುಟ್ಟಿದ ಸಮಯ ವಿಚಿತ್ರ ಆದರೂ ಸತ್ಯ ಕೊನೆ ಅಂಕಿಗಳೆಲ್ಲ ೩,೩,೩. (೧೩/೦೩/೨೦೧೩) ಆಗ ನಾನು ದ್ವಿತೀಯ ಎಮ್ ಎ ಕನ್ನಡ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಸಮಯ.ದಿನವೂ ಸುಮಾರು ೧೧ ಗಂಟೆಗೆ ಕಿಟಕಿಯ ಪಕ್ಕದಲ್ಲಿ ಓದಲು ಕುಳಿತಾಗ  ಕಿಟಕಿಯ ಆಚೆಯಿಂದ ಪಕ್ಕದ ಅಪಾರ್ಟ್ಮೆಂಟನಲ್ಲಿ ಪ್ರತಿದಿನ ೧೨ ಗಂಟೆಗೆ ಮೂರುನಾಲ್ಕು ಮಹಿಳೆಯರು ಕೈಯಲ್ಲಿ ತಿಂಡಿ ಡಬ್ಬ ಹಿಡಿದುಕೊಂಡು ಪುಟ್ಟ ಪುಟ್ಟ ಮಕ್ಕಳ ಹಿಂದೆ ಓಡಾಡಿ ಅವರಿಗೆ ಅಲ್ಲಿ ನೋಡು, […]

ಹರಿಯುವ ಕವಿತೆಗೆ ಒಡ್ಡು ಕಟ್ಟದಿರಿ!

ಕಬ್ಬಿಗರ ಅಬ್ಬಿ – ಸಂಚಿಕೆ ೫ ನನ್ನ ಗೆಳೆಯನ ಪುಟ್ಟ ಮಗು ನನ್ ಹತ್ರ ಕೇಳಿದ,  ” ಮಾಮಾ, ಈ ಚಂದಾಮಾಮ ಎಷ್ಟೆತ್ತರ? “. ನಾನಂದೆ! ” ತುಂಬಾ ಎತ್ತರದಲ್ಲಿ ಇದ್ದಾನೆ ಪುಟ್ಟಾ”. “ಹೇಗೆ ತಲಪೋದು! ” ಪುಟ್ಟನ ಪ್ರಶ್ನೆ! ರಾಕೆಟ್ಟು..ಜೆಟ್ ಪ್ರಿನ್ಸಿಪಲ್ ಅಂತ ಒಂದಷ್ಟು ಕೊರೆದೆ!. ಪುಟ್ಟನ ಕಣ್ಣೊಳಗೆ ಏನೋ ಮಿಂಚು! ಆತ ಅಂದ, ” ಮಾಮಾ, ಅಷ್ಟೆಲ್ಲ ಕಷ್ಟ ಯಾಕೆ! ನಮ್ಮ ತಾರಸಿಯ ಮೇಲೆ ಒಂದು ಮೆಟ್ಟಿಲು ಕಟ್ಟೋಣ!, ಆ ಮೆಟ್ಟಿಲು ಹತ್ತಿ ನಿಂತು […]

Back To Top