ಕವಿತೆ
ಎನ್. ಶೈಲಜಾ ಹಾಸನ
ಅವೀರ್ಭವಿಸಿದೆ ಮೂರ್ತ
ಅಮೂರ್ತಗಳ ನಡುವಿನ ಸ್ವರೂಪ
ಮುಂದಕ್ಕಿಡುವ ಹಾದಿ
ಹಿಂದಕ್ಕೋಡುತಿದೆ
ಅಲ್ಲೊಂದು ಕಡಲು
ಮೇಲೊಂದು ಮುಗಿಲು
ದಾಟಿ ನದಿ ತಟವ
ಕಾಡು ಗಿರಿಯ ಹಾದು,
ಮುಗಿಲಂಚನು
ಮುಟ್ಟುವಾಗಿನ ಸಂಭ್ರಮ
ಗೆಲುವ ಮೀಟಿ
ಪಿಸು ಪಿಸು ಧ್ವನಿ
ಎಲ್ಲಿ? ಎಲ್ಲಿ? ಬೆನ್ನ ಹಿಂದೆ!
ಹಿಂತಿರುಗಿದರೆ
ಧ್ವನಿ ಮಾಯ
ಮುನ್ನಡೆದರೆ
ಮತ್ತೆ ಧ್ವನಿ, ಮತ್ತೂ
ನಡೆದರೆ
ಗಹಗಹಿಸುವ
ವಿಕಟನಗೆ
ಸೋಲೋ ಗೆಲುವೋ
ಮೂರ್ತವೋ
ಅಮೂರ್ತವೋ?
*********************
ಕಾಣ್ಕ- ಕಣ್ಕಟ್ಟುಗಳ ನಡುವೆ ಗೆರೆ ಬಲು ತೆಳುವು
– ಗೋಪಾಲಕೃಷ್ಣ ಅಡಿಗ
ಸೂಪರ್ ಮೇಡಂ ಕವಿತೆಯ ಭಾವ ಚೆನ್ನಾಗಿ ಬಂದಿದೆ.
ಚೆನ್ನಾಗಿದೆ ಮೇಡಂ, ಆಧುನಿಕ ಜಗತ್ತಿನ ಪ್ರತಿಧ್ವನಿಯಾಗಿದೆ.