ಲಾಲಿಸಿದಳು ಯಶೋಧೆ

ಮೊದಲ ಕವಿತೆಯ ರೋಮಾಂಚನ

ವೀಣಾ ಹಂಪಿಹೊಳಿ

Photography of Book Page

 ನನ್ನ ಮೊದಲ ಕವನ ಹುಟ್ಟಿದ ಸಮಯ ವಿಚಿತ್ರ ಆದರೂ ಸತ್ಯ ಕೊನೆ ಅಂಕಿಗಳೆಲ್ಲ ೩,೩,೩. (೧೩/೦೩/೨೦೧೩)

ಆಗ ನಾನು ದ್ವಿತೀಯ ಎಮ್ ಎ ಕನ್ನಡ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಸಮಯ.ದಿನವೂ ಸುಮಾರು ೧೧ ಗಂಟೆಗೆ ಕಿಟಕಿಯ ಪಕ್ಕದಲ್ಲಿ ಓದಲು ಕುಳಿತಾಗ  ಕಿಟಕಿಯ ಆಚೆಯಿಂದ ಪಕ್ಕದ ಅಪಾರ್ಟ್ಮೆಂಟನಲ್ಲಿ ಪ್ರತಿದಿನ ೧೨ ಗಂಟೆಗೆ ಮೂರುನಾಲ್ಕು ಮಹಿಳೆಯರು ಕೈಯಲ್ಲಿ ತಿಂಡಿ ಡಬ್ಬ ಹಿಡಿದುಕೊಂಡು ಪುಟ್ಟ ಪುಟ್ಟ ಮಕ್ಕಳ ಹಿಂದೆ ಓಡಾಡಿ ಅವರಿಗೆ ಅಲ್ಲಿ ನೋಡು, ಇಲ್ಲಿ ನೋಡು ,ಎಂದು ಗಿಡದಲ್ಲಿಯ ಪಕ್ಷಿಗಳನ್ನು ತೋರಿಸುತ್ತ ,ಮಗು ಬಾಯಿ ತೆರೆ ಯುವುದನ್ನೇ ಕಾಯುತ್ತ ,ತೆಗೆದ ಕೂಡಲೇ ಒಂದು ತುತ್ತು ಹಾಕಿದಾಗ, ಅವಳಿಗೆ ಆಗುವ ಸಂತೋಷ ಹೇಳಲಸಾಧ್ಯ .ಕ್ರಿಕೆಟ್ ಆಟಗಾರ ಸಿಕ್ಸರ್ ಹೊಡೆದಾಗ ಆಗುವ ಸಂಭ್ರಮ ಆ ಮಹಿಳೆಯಲ್ಲಿ .ಮಗು ತುತ್ತು ತಿಂದಾಗಲೆಲ್ಲ ಅವಳಲ್ಲಿ ಧನ್ಯತೆಯ ಭಾವ . ಮಗುವಿಗೂ ಮನೆಯಿಂದ ಆಚೆ ಬಂದ ಖುಷಿ ,ಈ ಮಹಿಳೆಯರಿಗೂ ಆಚೆ ಬಂದು ಆಟ  ಆಡಿಸುತ್ತಾ ಮಕ್ಕಳಿಗೆ ತಿನ್ನಿಸುವ ಖುಷಿ ಆಮೇಲೆ ಸ್ವಲ್ಪ ತಮ್ಮ ತಮ್ಮಲ್ಲೇ ದಿನನಿತ್ಯದ ಮಾತು ಹರಟೆ , ನಗು ಎಲ್ಲ .ಈ ದೃಶ್ಯ ವನ್ನು  ದಿನವೂ ನೋಡುತ್ತಿದ್ದ ನನಗೆ ಇಷ್ಟುಮಾತ್ರ ಗೊತ್ತಾಗಿದ್ದು ,ಏನೆಂದರೆ  ಈ ಪುಟ್ಟ ಮಕ್ಕಳ ತಾಯಿ ಆಚೆ ಕೆಲಸ ಮಾಡಲು ಹೋದರೆ ಬರುವುದು ಸಂಜೆಯ ವೇಳೆ ,ಅಲ್ಲಿಯವರೆಗೆ ಈ  ಮಕ್ಕಳು ಯಶೋದೆಯರ ಮಡಿಲಲ್ಲಿ ..ಈ ಒಂದು ಹಿನ್ನಲೆಯಲ್ಲಿ ನನ್ನ ಮೊದಲ ಕವನ ಹುಟ್ಟಲು ಕಾರಣವಾಯಿತು .ಆ ದಿನಗಳಲ್ಲಿ ದಿನವೂ ಓದುವ ಕಾರಣದಿಂದಾಗಿ ಪದ ,ವಾಕ್ಯಗಳೊಡನೆ ನಿತ್ಯ ಒಡನಾಟದಿಂದ ನನ್ನದೇ ರೀತಿಯಿಂದ ಅವುಗಳನ್ನು ಹೆಣೆಯುವ ಆಸೆಯಾಗಿ ಈ ಕವನ ಹುಟ್ಟಿತೆಂದರೆ ತಪ್ಪಾಗಲಾರದು.ಒಂದು ಬರೆದ ಮೇಲೆ ಇನ್ನೊಂದು ,ಇನ್ನೊಂದರ ಮೇಲೆ ಮತ್ತೊಂದು ಹಾಗೆ ಬರೆಯುತ್ತ ಹೋದೆ .ಬರೀತಾ ಬರೀತಾ ಒಂದು ಸುಮಾರು ನಲವತ್ತು ಕವನಗಳು ಮೂಡಿಬಂದವು. ಒಮ್ಮೆ ದಕ್ಷಿಣ ಕನ್ನಡದ ಒಂದು ಸಂಸ್ಥೆ ಯಿಂದ ಅಪ್ರಕಟಿತ ಕವನಗಳಿಗೆ ಆಹ್ವಾನ ಬಂದಿತು , ಸರಿ ಹಾಗಿದ್ರೆ ನನ್ನ ಕವನಗಳು ನೋಟುಬುಕ್ನಲ್ಲಿ ಹಾಯಾಗಿ ಮಲಗಿದ್ದವು .ಅವುಗಳನ್ನು ಚೆನ್ನಾಗಿ ಬರೆದು ,ಅವಗಳನ್ನು ಓದಲು ನನ್ನ ಆತ್ಮೀಯ ಹಿರಿಯರೊಬ್ಬರಿಗೆ ಕೊಟ್ಟೆನುಅವರು ಓದಿ ಸಣ್ಣ ಸಣ್ಣ ತಿದ್ದುಪಡಿ ಮಾಡಲು ತಿಳಿಸಿದರು.ಆನಂತರ ಅವುಗಳನ್ನ ಕೊರಿಯರ್ ಮಾಡಿ ಬಂದೆ.ಸೆಲೆಕ್ಟ್ ಆಗಲಿ ಬಿಡಲಿ ಅವುಗಳನ್ನು ತಿದ್ದುಪಡಿ ಮಾಡಿ ಬರೆಯುವಾಗ ,ಅವುಗಳನ್ನು ಪೋಸ್ಟ್ ಮಾಡಿ ಬರುವಾಗ ಆದ ಸಂಭ್ರಮಕ್ಕೆ ಬೆಲೆಯೇ ಇಲ್ಲ .ಅಂತೂ ಕಳಿ ಸುವ ಪ್ರಕ್ರಿಯೆ ಮುಗಿಯಿತು . ಕೆಲ ದಿವಸಗಳ ನಂತರ ಒಂದು ಪೋಸ್ಟ್ಕಾರ್ಡ್ ನನ್ನ ಹೆಸರಿಗೆ ಬಂದಿತು .ಅದರಲ್ಲಿ ಅವರು ಸಂಕಲನ ಕಲಿಸಿದ್ದಕ್ಕಾಗಿ ಧನ್ಯವಾದಗಳು ಹಾಗೂ ಆ ಒಂದು ಸ್ಪರ್ಧೆಯಲ್ಲಿ ಸೆಲೆಕ್ಟ್ ಆದ ಕವನ ಸಂಕಲನ ಹೆಸರು “ಜೀನ್ಸ್ ಹಾಕಿದ ದೇವರು”.ಹಾಗೂ ಕಳಿಸಿದ ಸಂಕಲನವನ್ನು ಹಿಂದಿರುಗಿಸುವ ಪ್ರಕ್ರಿಯೆ ನಮ್ಮಲ್ಲಿಲ್ಲದಕಾರಣ ನಾವು ಅದನ್ನು ಕಳಿಸಲಾಗಲಿಲ್ಲ ಎಂದು ಬರೆದಿದ್ದರು. ಹೆಚ್ಚಿನ expectations ಇಲ್ಲವಾದುದರಿಂದ , ನನ್ನ ಹೆಸರಿಗೆ ಪೋಸ್ಟ್ಕಾರ್ಡ್ ಬಂದದ್ದೇ ನಂಗೆ ಸಂತಸದ ವಿಷಯವಾಗಿತ್ತು.ಆ ಪೋಸ್ಟ್ ಕಾರ್ಡ್ ಇನ್ನೂ ನನ್ನಲ್ಲಿ ಜೋಪಾನವಾಗಿದೆ.

ಇರಲಿ ಇಲ್ಲಿಗೆ ಮುಗಿಯಿತು ನನ್ನ ಮೊದಲ ಕವನದಿಂದ ಶುರುವಾಗಿ ಕವನ ಸಂಕಲನದ ವರೆಗಿನ ಸಂಕ್ಷಿಪ್ತ ವರದಿ .ಆಮೇಲೆ ಆ ಸಂಕಲನಕ್ಕೆ ಹಾಗೆ ಹಾಗಾಗಿ ಹೊಸ ಹೊಸ ಕವನಗಳನ್ನು ಸೇರಿಸುತ್ತ ಹೋದೆ . ಈ ಎಲ್ಲ ಘಟನೆಗೆ ಕಾರಣ ವಾದದ್ದು ನಾನು ಬರೆದ ಮೊದಲ ಕವನ .

ಈ ಕವನ ತಾನೊಂದೇ ಇರದೇ ತನ್ನೊಡನೆ ಹಲವಾರು ಕವನಗಳನ್ನು ಸೇರಿಸಲು ನಾಂದಿ  ಹಾಡಿತು,ಇದರ ಬಗ್ಗೆ ಹಾಗು ಇದರ ಹಿಂದೆ ಮುಂದೆ ಏನಿತ್ತು ಮತ್ತು ಏನಾಯಿತು ಎಂಬುದನ್ನು ನೆನಪಿಸಿಕೊಳ್ಳುವ ಕೆಲಸ ಕೊಟ್ಟ ಸಂಗತಿ ಪತ್ರಿಕೆಗೆ ನನ್ನ ಅನಂತ  ಧನ್ಯವಾದಗಳು .

ಸುಮಾರು ೮ ವರುಷಗಳ ಹಿಂದೆ ನೋಡಿ ನೆನಪಿಸಿಕೊಂಡು,ಈ ನೆನಪಿನ ದೋಣಿಯಲ್ಲಿ ವಿಹಾರ ಮಾಡಲು ಅವಕಾಶ ವೊದಗಿ ಬಂದದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳೊಂದಿಗೆ ನನ್ನ ಮಾತುಗಳನ್ನು ಮುಗಿಸುವೆ.

************************

6 thoughts on “ಲಾಲಿಸಿದಳು ಯಶೋಧೆ

Leave a Reply

Back To Top