ನಿನ್ನ ನೆನಪು

ಕವಿತೆ

ಮಾಲತಿ ಶಶಿಧರ್ 

ನಿನ್ನ ನೆನಪೊಂದು ಉತ್ತರ
ಗೋಳಾರ್ಧದ ಬೇಸಿಗೆ
ದಿನದಂತೆ
ಎಷ್ಟು ಮುದ ಅಷ್ಟೇ ತಾಪ

ಗಾಳಿಯ ಒರಟು
ಸ್ಪರ್ಶಕ್ಕೆ ಹಿತ್ತಲಿನ
ಚಂಗುಲಾಬಿಯೊಂದು
ಉದುರಿದಂತೆ
ಹಿತ್ತಿಲ ತುಂಬೆಲ್ಲಾ
ಚದುರಿದಂತೆ..

ಸಣ್ಣ ಇರುಳೊಂದ
ಗುತ್ತಿಗೆ ಪಡೆದಿರುವೆ,
ಅಧಿಕ ದಿನಯೊಂದಕ್ಕೆ
ಬಾಡಿಗೆ ಇಟ್ಟಿರುವೆ
ಎರಡೂ ನನ್ನದ್ದೇ
ಆದರೂ ಖಾಸಾ ಅಲ್ಲಾ.

ಸಂಜೆ ವೇಳೆಗೆ ರಸ್ತೆ
ಬದಿಯಲ್ಲಿ ಸೆರಗೊಡ್ಡಿ ನಿಂತೆ
ಮುಗಿಲ್ಗಲ್ಲಿನ ನಿರೀಕ್ಷೆಯಲ್ಲಿ
ಸೆರಗು ತುಂಬಿದ್ದು ಮಾತ್ರ
ಕಟು ತಾಪ..

ತೊಟ್ಟ ಚಿನ್ನದ ಬೆಂಡೋಲೆ
ಮಂಕಾಯಿತೆ ಹೊರೆತು
ಕಾವು ಮಾತ್ರ
ಹೆಚ್ಚುತ್ತಲೇ ಇತ್ತು ನೆನಪಿನ
ಕುಲುಮೆಯಲ್ಲಿ..

ಹಸಿರು ಮರದ ರೆಂಬೆಯೊಂದ
ನೀ ಕತ್ತರಿಸಿದಷ್ಟು
ಸುಲಭವಾಗಿ
ನೆನಪಿನ ಕೊಂಬೆಯ
ಛೇದಿಸಲಾಗದು,
ನ್ಯಾಯೋಚಿತ ಸ್ವಾಧೀನದ
ಕ್ಲೇಶವನು ಸಹಿಸಲಾಗದು.

***********************

2 thoughts on “ನಿನ್ನ ನೆನಪು

Leave a Reply

Back To Top