ಕರೋನ ಮುಕ್ತ ಶಾಲೆ
ಸರಿತಾಮಧು ಎಂದಿಗೆ ಬರಲಿದೆಯೋ ಶಾಲೆಗೆ ಹೋಗಿ ನಲಿಯುವ ದಿನಗಳು ಎಂದು ಕಾತರಿಸುವ ಮಕ್ಕಳಿಗೆ ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೊರಟಾಗ ಮನೆಯಲ್ಲಿ ತಾವಷ್ಟೇ ಇರಬೇಕಾ ಎನ್ನುವ ಭಯ. ಹಾಗೆ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವ ಪೋಷಕರಿಗೂ ಇದೇ ಚಿಂತೆಯಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಶಾಲೆಗಳು ತೆರೆಯುವ ಸೂಚನೆ ಸದ್ಯಕ್ಕೆ ಇಲ್ಲವೇನೋ? ಹೀಗಿರುವಾಗ ಮಕ್ಕಳ ಕಲಿಕೆ ಹೇಗೆ ಎಂದು ಚಿಂತಿಸಿ ಆನ್ಲೈನ್ ಮೂಲಕ ಶಿಕ್ಷಣ ನೀಡುವುದು ಒಳಿತೋ ಕೆಡುಕೋ ಎಂಬ ಜಿಜ್ಞಾಸೆ ಎಲ್ಲರ ಮನದಲ್ಲೂ ಮೂಡಿದೆ.ಪ್ರಾಥಮಿಕ ಹಂತದಿಂದಲೇ ಈ […]
ಅವ್ವ ಮತ್ತು ಅಬ್ಬಲಿಗೆ
ನನಗೆ ಅವ್ವ ಮತ್ತು ಅಬ್ಬಲಿಗೆ ಇಡೀ ಕವನ ಸಂಕಲನದಲ್ಲಿ ಲಂಕೇಶರ ಅವ್ವ ಆಧುನಿಕ, ನಗರವಾಸಿ ಅವ್ವನಾಗಿ ಕಾಣುತ್ತಿದ್ದಾಳೆ. ಅಬ್ಬಲಿಗೆಯಲ್ಲಿನ ಆಧುನಿಕ ಅವ್ವ ನೌಕರಿ ಮಾಡುತ್ತಾ, ಗಂಡನ ಸಂಭಾಳಿಸುತ್ತಾ , ತವರು ಮನೆಯ ನೆನಪ ಮೆಲುಕು ಹಾಕುತ್ತಾ , ಆಧುನಿಕ ವೈರುದ್ಧ್ಯಗಳಿಗೆ ಮುಖಾಮುಖಿಯಾಗುತ್ತಾ ನಡೆಯುತ್ತಾಳೆ. ಅನ್ಯಾಯಕ್ಕೆ ಕವಿತೆಯ ಮೂಲಕ ಸಣ್ಣ ಧ್ವನಿಯಲ್ಲಿ ಅತ್ಯಂತ ಖಚಿತವಾಗಿ ವ್ಯವಸ್ಥೆಯನ್ನು ಟೀಕಿಸುತ್ತಾಳೆ. ದೇವರು, ದೇವಾಲಯ,ಯುದ್ಧ ಗಳ ನಿರರ್ಥಕತೆಯನ್ನು ಬಿಡಿಸಿಡುತ್ತಾಳೆ. ಹೆಣ್ಣಿನ ಅಂತರಂಗದ ತಳಮಳಕ್ಕೆ ಭಾಷ್ಯ ಬರೆಯುತ್ತಾಳೆ. ಆಧುನಿಕ ಯಶೋಧರೆಯ ಅಂತರಂಗವನ್ನು ಇವತ್ತಿನ ಅಕ್ಷರಸ್ಥ […]
ಹೇಳದೇ ಹೋಗದಿರು
ಗಝಲ್ ಶ್ರೀದೇವಿ ಕೆರೆಮನೆ ಅದೆಷ್ಟೊ ಶತಮಾನಗಳಿಂದ ಕಾದಿರುವೆ ಹೇಳದೇ ಹೋಗದಿರುನೀ ಬರುವ ಹಾದಿಗೆ ಕಣ್ಣು ಕೀಲಿಸಿರುವೆ ಹೇಳದೇ ಹೋಗದಿರು ಬರಿದೆ ಮತ್ತೇರದಿರು ಸುರೆಗೆಲ್ಲಿದೆ ನಿನ್ನ ಮರೆಸುವ ತಾಕತ್ತುದೇಹದ ಬಟ್ಟಲಿಗೆ ಮದಿರೆ ತುಂಬಿಸಿರುವೆ ಹೇಳದೇ ಹೋಗದಿರು ಹಗಲಿರುಳೂ ಮತ್ತೇನೂ ಇಲ್ಲ ನಿನ್ನದೇ ಧ್ಯಾನದ ಹೊರತಾಗಿತಲಬಾಗಿಲ ಮೆಟ್ಟಿಲಲಿ ಕಾದು ಕುಳಿತಿರುವೆ ಹೇಳದೇ ಹೋಗದಿರು ಜೋಡಿಮಂಚದ ಬದಿಯಲ್ಲಿ ಹಚ್ಚಿಟ್ಟ ದೀಪದ ಎಣ್ಣೆ ತೀರಿದೆದೇವರ ಗೂಡಿಂದ ಹಣತೆಯೊಂದ ತರುವೆ ಹೇಳದೇ ಹೋಗದಿರು ವಿರಹ ತುಂಬಿದ ರಾತ್ರಿ ನಿದ್ದೆಯಿರದೆ ಬಲು ದೀರ್ಘವಾಗುವುದಂತೆಜೋಗುಳ ಹಾಡಿ ಮಡಿಲೊಳಗೆ […]
ವಚನ ಚಿಂತನೆ
ಚಿಂತನೆ ಡಾ.ವೈ.ಎಂ.ಯಾಕೊಳ್ಳಿ ಕಾಮ ಕಾಲದ ಕಾಡುವ ಮಾಯೆ ನಳಲುಗತ್ತಲೆ ನೀನು ಮಾಯೆ ಸಂಗ ಸುಖದಿಂದ ಹಿಂಗುವರಾರು ಇಲ್ಲ ಬಿಗಿದ ಕುಚ,ಉರ ಮಧ್ಯವು ಲಿಂಗಾಕಾರವು ಮಹೇಶ್ವರಗೆಯೂ ಪ್ರೀತಿಯು ಸನ್ಮೋಹ ಅಮೃತ ಸಾರವು ಇಳೆ ಉತ್ಪತ್ಯಕ್ಕೆ ಆಧಾರವು ಇಂಥ ಮೋಹ ಪ್ರಿಯವಾದ ಮೋಹಿನಿಯರ ಅಗಲುವದೆಂತೋ ಕರಸ್ಥಳದ ಇಷ್ಟಲಿಂಗೇಶ್ವರಾ ಇಡೀ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದರೂ ಒಂದು ವಿಶೇಷ ನೆಲೆಯಲ್ಲಿ ನಿಲ್ಲುವ ವಚನ ಇದು . ಇದನ್ನು ರಚಿಸಿದವನು ಮೆಡ್ಲೇರಿ ಶಿವಲಿಂಗನೆಂಬ ಹದಿನಾರನೆಯ ಶತಮಾನದ ವಚನಕಾರ.ಡಾ ವೀರಣ್ಣ ರಾಜೂರ ಅವರು ಸಂಪಾದಿಸಿದ […]
ಬಣ್ಣದ ವೇಷ
ಕಥೆ ಪ್ರಜ್ಞಾ ಮತ್ತಿಹಳ್ಳಿ ನೀಲಕಮಲವೆಂದು ಚೆಂದನೆಯ ಸ್ಟಿಕ್ಕರ್ ಅಂಟಿಸಿಕೊಂಡು ಫಳಫಳ ಹೊಳೆಯುತ್ತಿದ್ದ ಸ್ಟೀಲು ತಾಟು ಢಮಾರ್ ಎಂಬ ದೊಡ್ಡ ಸಪ್ಪಳದೊಂದಿಗೆ ಗೋಡೆಗೆ ಮುಖ ಗುದ್ದಿಕೊಂಡು ನೆಲಕಪ್ಪಳಿಸುವುದು, ಅದೇ ಗೋಡೆಯ ಮೇಲೆ ನೇತಾಡುವ ಬಂಗಾರ ಬಣ್ಣದ ಗುಂಡು ಮೋರೆಯ ಗಡಿಯಾರ ಢಣ್ ಢಣ್ ಎಂದು ಒಂಭತ್ತು ಸಲ ಹೊಡೆದುಕೊಳ್ಳುವುದೂ ಏಕಕಾಲದಲ್ಲಿಯೇ ಘಟಿಸುವ ಮೂಲಕ ತಗ್ಗಿನಕೇರಿಯೆನ್ನುವ ಊರಿನಲ್ಲೇ ಹೆಚ್ಚು ತಗ್ಗಾಗಿರುವ ಆ ಕೇರಿಯಲ್ಲೊಂದು ಯುದ್ಧ ಘೋಷಣೆಯಾಗಿತ್ತು. ದುರವೀಳ್ಯವನ್ನು ತನ್ನ ಕುದಿಯುವ ಮನಸ್ಸಿನಲ್ಲಿಯೇ ತಯಾರಿಸಿಕೊಂಡ ನಾಗಲಕ್ಷ್ಮಿ ಹೆಡೆಯಾಡಿಸುವ ಘಟಸರ್ಪದಂತೆ ಧುಸ್ ಧುಸ್ […]
ಕಾಲ ಎಂದಿಗೂ ನಿಲ್ಲುವದಿಲ್ಲ
ಸ್ಮಿತಾ ಭಟ್ ಮಿಲಿಯನ್ ಗಟ್ಟಲೆ ವರ್ಷಗಳಿಂದ ಈ ಭೂಮಿಯ ಮೇಲೆ ಏನೆಲ್ಲ ಸಂಭವಿಸಿತೋ ಇಂದಿನವರೆಗೂ ಯಾರಿಗೂ ಸ್ಪಷ್ಟವಾದ ಮಾಹಿತಿ ಇಲ್ಲ. ಹೀಗಿತ್ತು,ಹಾಗಿತ್ತು,ಏನೋ ನಡೆದಿತ್ತು, ಎಂದು ಇತಿಹಾಸ ಪುಟಗಳಿಂದ ಅಷ್ಟೊ ಇಷ್ಟೊ ತಿಳಿಯುತ್ತೇವೆ,ಮತ್ತೊಂದಿಷ್ಟು ನಮ್ಮ ಊಹೆ. ಕಾಲದ ಜೊತೆಗೆ ಎಲ್ಲವೂ ಉರುಳುತ್ತವೆ ಎನ್ನುವದು ನಿತ್ಯ ಸತ್ಯ. ಸವೆದ ಹೆಜ್ಜೆಗಳ ಜಾಡು ಎಷ್ಟರ ಮಟ್ಟಿಗೆ ಇಂದು ಉಳಿದುಕೊಂಡಿದೆ.ಎಲ್ಲವೂ ಮಸುಕಾಗುತ್ತಲೇ ಹೋಗುತ್ತದೆ. ಹೊಸ ನೀರಿಗೆ ಹಳೆಯ ನೀರು ಕೊಚ್ಚಿಹೋಗಿ ಸಮುದ್ರಸೇರಿ ಅಸ್ತಿತ್ವವನ್ನೇ ಕಳೆದುಕೊಂಡಂತೆ. ಆಳಿದ ರಾಜ, ಕಟ್ಟಿದ ಕೋಟೆ,ಜಾರಿಯಾದ ನಿಯಮ,ತ್ಯಾಗದ ಬದುಕು,ಮಾಡಿದ […]
ಶಿಶುಗೀತೆ
ತಲ ಷಟ್ಪದಿಯಲ್ಲಿ ಶಿಶುಗೀತೆ ತೇಜಾವತಿ ಹೆಚ್. ಡಿ ಗೊಲ್ಲನೊಬ್ಬತೋಟದೊಳಗೆಕುರಿಯ ಮಂದೆ ಹಾಕಿದ |ಭಾರ ಹೊರಲುಕತ್ತೆ ಹಿಂಡುಎತ್ತು ಕುದುರೆ ಸಾಕಿದ || ಬೇಟೆಗೆಂದುನಾಯಿ ತಂದುಚತುರ ಸುಂಕು ಕಲಿಸಿದ |ಎಲ್ಲ ಸೇರಿಕೂಡಿ ಬಾಳ್ವಪ್ರೇಮವನ್ನು ಬೆಳೆಸಿದ || ನಿತ್ಯ ತಾನುಬೇಗ ಎದ್ದುಕುರಿಯ ಕಾಯತೊಡಗಿದ|ಸಂಜೆಯೊಳಗೆಮರಳಿ ಬಂದುತನ್ನ ಗೂಡ ಸೇರಿದ || ಒಂದು ಇರುಳುಹೊಂಚು ಹಾಕಿತೋಳವೊಂದು ಬಂದಿತು|ರೊಪ್ಪದೊಳಗೆಇದ್ದ ಕುರಿಯಮರಿಯ ನೋಡಿ ನಲಿಯಿತು|| ಇಂದು ಎನಗೆಹೊಟ್ಟೆ ತುಂಬಾರುಚಿಯ ಬೇಟೆ ಎನ್ನುತ|ಓಡಿ ಬಂದುಮರಿಯ ಮೇಲೆಹಲ್ಲು ನೆಟ್ಟು ಎರಗಲು|| ನಿದ್ರಿಸಿದ್ದನಾಯಿ ತಾನುಒಂದೇ ಸಮನೆ ಬೊಗಳಲು|ಕತ್ತೆ ಕೂಡಎದ್ದು ನಿಂತುಕಾಲು ಕೊಡವಿ […]
ಕಾವ್ಯ ಕನ್ನಿಕೆ
ಸರಿತಾ ಮಧು ನನ್ನೊಳು ಕಾವ್ಯವೋ?ಕಾವ್ಯದೊಳಗೆ ನಾನೋ?ಅಭಿಮಾನದ ಆಲಿಂಗನವೋ?ಪದಪುಂಜಗಳ ಆರಾಧನೆಯೋ?ಶೃಂಗಾರದ ವರ್ಣನೆಯೋ?ಮನವ ಕಾಡುವ ಭಾವನೆಯೋ?ಅರಿಯದೇ ನನ್ನೊಳು ಬೆರೆತಕವಿ ಹೃದಯವೋ? ಮನದೊಳಡಗಿದ ಕಾವ್ಯಕನ್ನಿಕೆಯೋನಿನಗಾರಿದ್ದಾರು ಹೋಲಿಕೆ? ರತಿಸೌಂದರ್ಯ ಹೆಚ್ಚಿಸುವ ಲಾಲಿತ್ಯಸಹೃದಯ ಓದುಗನ ಮೆಚ್ಚಿಸುವ ಪಾಂಡಿತ್ಯಕರ್ಣಾನಂದ ನೀಡುವ ಸುಂದರ ಸಾಹಿತ್ಯನಿನಗಾರಿದ್ದಾರು ಹೋಲಿಕೆ? ಯತಿ, ಪ್ರಾಸ, ಅಲಂಕಾರಗಳನುತೊಟ್ಟಿರುವ ಆಭರಣ ಪ್ರಿಯೆನಿನಗಾರಿದ್ದಾರು ಹೋಲಿಕೆ? ಹರಿವ ಝರಿಯಂತೆ ನಿರಂತರಪ್ರವಹಿಸುವೆ ಪ್ರತಿ ಮನ್ವಂತರಕವಿ ಹೃದಯಗಳ ವಿರಾಜಿತೆನಿನಗಾರಿದ್ದಾರು ಹೋಲಿಕೆ? *********
ಪತ್ರ ಬರೆಯಬೇಕಿದೆ ಮಳೆಗೆ
ಪ್ರಜ್ಞಾ ಮತ್ತಿಹಳ್ಳಿ ಯಾರಿಗೂ ಹೇಳದೇ ಊರು ಬಿಟ್ಟಿದೆ ಮಳೆಹುಡುಕಿ ಕಂಗೆಟ್ಟ ಆಷಾಢ ಭುಸುಗುಡುತಿದೆಗಾಳಿಯ ಗಂಟಲಲಿ ವಿರಹದ ಶಹನಾಯಿಹಲಿವುಳಿದ ಮೋಡಕ್ಕೆ ಬಿಕ್ಕಲಾರದ ಬಾಯಿ ಎಲ್ಲಿ ಅಡಗಿದೆಯೊ ಮಳೆರಾಯಾಮುಖಗವಸಿನ ಜಗಕೆ ಹೆದರಿದೆಯಾಕಾಡು-ಕಣಿವೆ ಹೊಲ-ತೋಟಕ್ಕೆಹಸಿರುಗವಸು ತೊಡಿಸಲಾರೆಯಾಮುಟ್ಟುವುದನ್ನೇ ಬಿಟ್ಟು ಒಳಗೋಡಿಮುಚ್ಚಿದ ಕದದ ಹಿಂದೆ ಗುಟ್ಟಾಗಿದ್ದೇವೆ ಬಾಲ್ಯದಂಗಳದ ಸಿಹಿ ಒಗರಿನ ಗೇರು ಬೇಣಗೆಲ್ಲು ಗೆಲ್ಲಿಗೂ ತೂಗುವ ಹಣ್ಣು ಹಳದಿ ಕೆಂಪುಹೋದಷ್ಟೂ ಮುಗಿಯದ ತಂಪು ಕಾಲ್ದಾರಿಮುಗಿದದ್ದು ತಿಳಿವ ಮೊದಲೇ ಕವಲೊಡೆದ ಉರಿ ಶಂಕೆಯ ರಾವಣ ಕಾವಲಿದ್ದಾನೆಅಳುವೇ ನಿಲ್ಲುವುದಿಲ್ಲ ಸೀತೆಗೆ ಕದವಿಕ್ಕಿದ ರಾಮನರಮನೆಗೆ ವೈರಾಣು ಭೀತಿಮನದ ಗೆಲ್ಲು […]
ಪ್ರೇಮವೇ ಒಂದು ಧರ್ಮ.
ಪ್ರೇಮ ಅನ್ನುವುದು ಧರ್ಮವನ್ನು ನೋಡಿ ಹುಟ್ಟುವುದಿಲ್ಲ, ಹಾಗೆಯೇ ಪ್ರೇಮ ಸ್ಬತ: ಒಂದು ಧರ್ಮವಾಗಿದೆ. ಜನ ಇದನ್ನು ಅರ್ಥಮಾಡಿಕೊಳ್ಳಬೇಕು–