ಕಾವ್ಯಯಾನ
ಗಝಲ್ ಎ ಎಸ್. ಮಕಾನದಾರ ತಲೆ ಬಾಗಿಲಿಗೆ ಕೈಹಚ್ಚಿ ಕಾಯುತಿರುವೆ ಪ್ಯಾರಿಭಾವರಸ ನೊರೆಹಾಲ ತುಂಬುತಿರುವೆ ಪ್ಯಾರಿ ಅಚ್ಚೇರು ಬಂಗಾರದಲಿ ಅಚ್ಚು ಒತ್ತುತ್ತಿರುವೆಸ್ನೇಹ ಅಚ್ಚುಮೆಚ್ಚೆಂದು ಸಾರುತಿರುವೆ ಪ್ಯಾರಿ ಹಾಯಿದೋಣಿಗೆ ನಾವಿಕನಾಗಿ ಸಾಗುತಿರುವೆಚೂರಾದ ಹೃದಯ ತೋರಣ ಕಟ್ಟಿರುವೆ ಪ್ಯಾರಿ ನದಿಗಳ ಜಾಡಿನೊಳಗೆ ಚಹರೆ ಕಾಣುತಿರುವೆವಿಶ್ವಪ್ರೇಮ ಬಾವುಟ ಹಾರಿಸುತ್ತಿರುವೆ ಪ್ಯಾರಿ ಅಂತರಂಗ ಜ್ಯೋತಿಗೆ ಧೋಖಾ ಮಾಡದಿರುಸಾಹೇಬ್ ಮಸ್ತಕಕ್ಕೆ ಇಳಿದು ಬರುವೆ ಪ್ಯಾರಿ **********
ಕಾವ್ಯಯಾನ
ಮಗುವಾದ ನೆಲ ಬಿದಲೋಟಿ ರಂಗನಾಥ್ ಬಿತ್ತಿದ ಬೀಜ ಮೊಳಕೆ ಒಡೆದು ನಗುವಾಗಸಿರಿಯು ಮಡಿಲು ತುಂಬಿತುಮಗುವಾದ ನೆಲಮಮತೆಯ ಕರುಳ ಹೂ ಬಿಟ್ಟಿತು ಎದೆಯೊಳಗಿನ ತಲ್ಲಣ ಕಣ್ಣು ಚಾಚಿ ನೋಡುತ್ತಿರಲುಖುಷಿಯ ಸಮುದ್ರ ನಕ್ಕುನಕ್ಷತ್ರಗಳು ಅಂಗೈಯೊಳಗೆ ಆಡಿದವು ಮೊಳಕೆಯ ಕುಡಿ ಸಾಗುತಿರಲುಮಳೆಯ ಸ್ಪರ್ಶಕೆ ಕಳೆಗಟ್ಟಿಮೆದು ನೆಲದ ಭಾವ ಕಲ್ಲುಗಳೊಂದಿಗೆ ಮಾತಾಡಿತು ಬೆವರ ಹನಿಯು ಬಿದ್ದುಬಿತ್ತು ಹುತ್ತ ನೆಲ ಬಸಿರಾಗುವುದೆಂದರೇಹೊಳೆ ಸೀಳಿನಲಿ ಬೊಗಸೆ ನೀರು ಕುಡಿದ ಸಂತಸಮೈಯೊಳಗೆ ಚಂದ್ರ ನಡೆದ ಗುರುತು ***********
ಅನುವಾದ ಸಂಗಾತಿ
ಸೇಡಿನ ಫಲ ಮೂಲ: ವಿಲಿಯಂ ಬ್ಲೇಕ್(ಇಂಗ್ಲೀಷ್) ಕನ್ನಡಕ್ಕೆ: ವಿ.ಗಣೇಶ್ ನನ್ನ ಗೆಳೆಯನ ಮೇಲೆ ಬಂದ ಮುನಿಸಿಗೆ ನಾನು ತಾಳ್ಮೆಯಿಂದಲೆ ಅಂದೆ, ‘ಸುಮ್ಮನಿರು’ ಎಂದು ಮಾಯವಾಗಿಯೆ ಹೋಯ್ತು ಕೋಪವಂದು. ನನ್ನ ವೈರಿಯ ಮೇಲೆ ಬಂದ ಮುನಿಸಿಗೆ ನಾನು ಕೋಪದಿಂದಲೆ ನುಡಿದೆ, ‘ಚೆಂಡಾಡು’ ಎಂದು ಮನದೊಳಗೆ ಬೆಳೆಯಿತದು ನನಗರಿವಿಲ್ಲದೆಲೆ ಹಗೆತನದ ಬೀಜವದು ಮೊಳಕೆಯೊಡೆಯುತ್ತ ಸಸಿಯಾಗಿ ಬೆಳೆದು ಮರವಾಗಿ ನಿಂತಿತ್ತು ಭಯವೆಂಬ ಕಣ್ಣೀರ, ನಗುವೆಂಬ ಎಳೆ ಬಿಸಿಲ ನೀಡುತ್ತ […]
ಅನುವಾದ ಸಂಗಾತಿ
ಕೊಡಬಲ್ಲಿರಾ ಯಾರಾದರೂ ನನಗೆ ನನ್ನ ಸ೦ಪೂರ್ಣ ಅಸ್ತಿತ್ವವನ್ನ? ಮೂಲ: ನೋಷಿ ಗಿಲ್ಲಾನಿ(ಉರ್ದು) ಕೊಡಬಲ್ಲಿರಾ ಯಾರಾದರೂ ನನಗೆ ನನ್ನ ಸ೦ಪೂರ್ಣ ಅಸ್ತಿತ್ವವನ್ನನನ್ನ ತೋಳುಗಳನ್ನ, ನನ್ನ ಕಣ್ಣುಗಳನ್ನ, ನನ್ನ ಮುಖವನ್ನ? ನಾನೊ೦ದು ನದಿ, ಹರಿದು ಬೆರೆಯುತ್ತಿದ್ದೇನೆ ಮತ್ತದೇ ಕಡಲೊಳಗೆ.ಯಾರಾದರೂ ಹರಿಸ ಬಲ್ಲಿರಾ ನನ್ನನ್ನು ಮರುಭೂಮಿಯಲ್ಲಿ? ಸಾಗುತ್ತಿದೆ ಬದುಕು, ಆದರೆ ನನ್ನ ಬಾಲ್ಯ, ನನ್ನ ಮಿಣುಕು ಹುಳು,ನನ್ನ ಗೊ೦ಬೆ ಗಳನಲ್ಲದೇ ಮತ್ತೇನನ್ನೂ ಬೇಡಲಾರೆ ಈ ಬದುಕಿ೦ದ! ಈ ಹೊಸ ಋತು ಯಾಕೋ ಒಗ್ಗುತ್ತಿಲ್ಲ ನನಗೆ.ನನ್ನನ್ನು ಕರೆದೊಯ್ಯಿರಿ ಹಿ೦ದಕ್ಕೆ ನಗರದ ಹಲವು ಮುಖಗಳಲ್ಲಿ […]
ಇತರೆ
ಮರುಕ ಹುಟ್ಟುತ್ತದೆ ವಿದ್ಯಾ ಶ್ರೀ ಎಸ್ ಅಡೂರ್ ಕೆಲವು ಸಮಯದ ಹಿಂದೆ ನಾನು ಪಟ್ಟಣದಲ್ಲಿರುವ ನನ್ನ ಗೆಳತಿಯ ಮನೆಗೆ ಹೋಗಿದ್ದೆ. ಬಾಲ್ಯದ ಗೆಳತಿ.ನಾನು ಮದುವೆಯಾಗಿ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಶಿಫ್ಟ್ ಆಗಿದ್ದರೆ, ಆಕೆಯೋ ನನ್ನೊಂದಿಗೆ ಹಳ್ಳಿಯಲ್ಲಿ ನನ್ನೆಲ್ಲ ತುಂಟತನಗಳಿಗೆ ಜತೆಯಾಗಿದ್ದವಳು, ಮದುವೆಯಾಗಿ ಮಹಾನಗರವನ್ನು ಸೇರಿ “ಸಿಟಿವಂತ“ಳಾಗಿದ್ದಳು. ಅನೇಕ ವರ್ಷಗಳಿಂದ ಭೇಟಿಯಾಗಿರದಿದ್ದ ನನಗೆ ಮಜಬೂತು ಖಾತರ್ದಾರಿಯ ಪ್ಲಾನ್ಮಾಡಿಕೊಂಡಿದ್ದಳು.ಆತ್ಮೀಯತೆಯಿಂದ ನನ್ನನ್ನು ಬರಮಾಡಿಕೊಂಡು ಮಾತಿನಲ್ಲಿ ಮೈಮರೆತಿದ್ದವಳು ಅಚಾನಕ್ಕಾಗಿ ನಾಲಿಗೆ ಕಚ್ಚಿಕೊಂಡು ತನ್ನ ಏಳೆಂಟು ವರ್ಶದ ಮಗಳನ್ನು ಬಳಿಗೆ ಕರೆದು ಕಿವಿಯಲ್ಲಿ […]
ಕಾವ್ಯಯಾನ
ಗಝಲ್ ಮಾಲತಿ ಹೆಗಡೆ ನೂರು ಆಸೆ ನೂರು ಕನಸ ಹತ್ತಿಕ್ಕುತ ನಡೆದೆಯೇಕೆ?ಕೋಪತಾಪದಲ್ಲಿ ಬಳಲಿ ಬಿಕ್ಕುತ್ತ ನಡೆದೆಯೇಕೆ? ಹೆತ್ತ ಕೂಸಿನ ವಾತ್ಸಲ್ಯವ ಕಳಚಿ ನಿರ್ಮೋಹ ಮೆರೆದೆಉತ್ತರ ಕೊಡದ ಮೌನ ಕಕ್ಕುತ್ತ ನಡೆದೆಯೇಕೆ? ಸಿಕ್ಕ ಬದುಕ ಕಟ್ಟಲರಿಯದೇ ಸಿಕ್ಕು ಸಿಕ್ಕಾಗಿಸಿ ಸೊರಗಿದೆನಕಾರಾತ್ಮಕ ವಿಚಾರದಲ್ಲೇ ಸೊಕ್ಕುತ್ತ ನಡೆದೆಯೇಕೆ? ಹುಟ್ಟಿದವರಿಗೆಲ್ಲ ಒಂದು ದಿನ ಬರುವುದು ಸಾವು ನಿಶ್ಚಿತಅರೆ ಆಯುಷ್ಯದಲ್ಲೇ ಸೋಲು ಮುಕ್ಕುತ್ತ ನಡೆದೆಯೇಕೆ? ಮುದ್ದುಕಂದನಿಗೆ ಅಮ್ಮನಾಗಿ ಹೆಮ್ಮೆಯ ದೇವತೆಯಾಗಿದ್ದೆನಕ್ಷತ್ರವಾಗುವ ಹುಚ್ಚಿನಲಿ ನೋಯುತ್ತ ನಡೆದೆಯೇಕೆ? ************
ಕಾವ್ಯಯಾನ
ಕೌದಿ ಸ್ಮಿತಾ ರಾಘವೇಂದ್ರ ಮಂಚದ ಅಂಚಿನ ಮೂಲೆಯಲ್ಲೋನಾಗಂದಿಗೆಯ ಹಾಸಿನಲ್ಲೋತುಕ್ಕು ಹಿಡಿದ ಟ್ರಂಕಿನೊಳಗೋ ಭದ್ರವಾಗಿಯೇ ಇರುವ ಗಂಟು. ಆಗಾಗ ಸುಮ್ಮನೇ ಎಳೆದು ತಂದುಗಂಟಿಗೆ ಕೈ ಹಚ್ಚಿದಾಗೆಲ್ಲತರಾತುರಿಯ ಕೆಲಸವೊಂದು ಹಾಜರುಸಮಯ ಹೊಂದಿಸಿಕೊಂಡುಬಿಚ್ಚಿಕೊಳ್ಳುತ್ತವೆ ರಾಶಿ ರಾಶಿ ನೆನಪುಹರಿದಿಲ್ಲ,ಹುಕ್ಕು ಕಿತ್ತಿಲ್ಲ,ಮಾಸಿದ್ದೂ ಇಲ್ಲಮುದ್ದೆಯಾದ ಗೆರೆಗಳ ತುಂಬಆಪ್ಯಾಯ ಕಂಪುಮತ್ತೆ ಹೆಗಲೇರುವ ಒನಪು ಸಂಜೆ ಹೊತ್ತಿಗೆ ಸಾಕೆನ್ನಿಸುತ್ತದೆಇಳಿಸಂಜೆಯ ಬದುಕಿನಂತೆ.ಬಿಡಿಸಿಕೊಳ್ಳಲಾಗದ ನಂಟಿನಂತೆ ಬಣ್ಣ ಬಣ್ಣದ ಅರಿವೆಗಳ ಅರಿಯಬೇಕುಇನ್ನೂಬದುಕು ಸವೆದ ಪುಟಗಳ ಮಸುಕು ಅಕ್ಷರಗಳಂತೆತೊಟ್ಟು ಸಂಭ್ರಮಿಸಿದ ಹಲವು ಭಾವಬಿಡಲಾಗದು ಬಳಸಲಾಗದುಆದರೂ ಇರಬೇಕು ಜೊತೆಯಾಗಿಮುದುಡಿದ ಕನಸುಗಳು. ಹೊಸ ಭಾವ ತುಂಬುವ ಹುರುಪಿನಲಿಯಾವುದೋ […]
ಪುಸ್ತಕ ಸಂಗಾತಿ
ದೃಷ್ಟಾಂತದ ಮೂಲಕ ನೀತಿಯ ಬೋಧನೆ. ಸೋಮೇಶ್ವರ ಶತಕ ಕೃತಿ : ಸೋಮೇಶ್ವರ ಶತಕಪುಲಿಗೆರೆ ಸೋಮನಾಥ.ಕನ್ನಡ ಸಾಹಿತ್ಯ ಪರಿಷತ್ತು.ಚಾಮರಾಜಪೇಟೆ.ಬೆಂ.ಮರು ಮುದ್ರಣ:೨೦೨೦.ಬೆಲೆ :೬೦. ಪುಸ್ತಕ ಪರಿಚಯ: ಕೃತಿ: *ಸೋಮೇಶ್ವರ ಶತಕಪುಲಿಗೆರೆಯಸೋಮನಾಥ ನಾವೆಲ್ಲಾ ಶಾಲೆಯಲ್ಲಿ ಕಲಿಯುವಾಗ ಕನ್ನಡ ಪಠ್ಯಪುಸ್ತಕದಲ್ಲಿ ‘ ಹರಹರಾ ಶ್ರೀಚೆನ್ನ ಸೋಮೇಶ್ವರ ‘ ಎಂದು ಕೊನೆಗೆ,ಮತ್ತೆ ಮತ್ತೆ ರಾಗವಾಗಿ ಹಾಡುವ ಪದ್ಯಗಳನ್ನು ಓದಿಯೇ ಇದ್ದೇವೆ.ಈಗಲೂ ಒಂದರಿಂದ ಹನ್ನೆರಡನೆ ತರಗತಿಯ ವರೆಗಿನ ಕನ್ನಡ ಪಠ್ಯದಲ್ಲಿ, ಎರಡು ಮೂರು ಪಠ್ಯಗಳಲ್ಲಾದರೂ ಈ ಬಗೆಯ ಪದ್ಯಗಳಿವೆ.ಇವು ಪುಲಿಗೆರೆ ಸೋಮೇಶ್ವರನ ಶತಕದಿಂದ ಆರಸಿ ಇಡುತ್ತಿದ್ದ […]
ಅಕ್ಷರದ ಬಂಡಾಯ ತಲ್ಲಣಗಳಿಗೆ ಪ್ರತಿಕ್ರಿಯೆ ಬೇಕಾದ ಅನಿವಾರ್ಯತೆಯಲ್ಲಿ ಬರೆಯಲು ಮನಸ್ಸು ಮಾಡಿದೆ’ ಡಾ.ರಾಮಕೃಷ್ಣ ಗುಂದಿ ಡಾ.ರಾಮಕೃಷ್ಣ ಗುಂದಿ ಕನ್ನಡದ ಅತ್ಯಂತ ಪ್ರಭಾವಶಾಲಿ ಕತೆಗಾರರಲ್ಲಿ ಒಬ್ಬರು. ಅವಾರಿ ಅವರ ಪ್ರಸಿದ್ಧ ಕತೆ. ಅವರ ಮೊದಲ ಕಥಾ ಸಂಕಲನ ಅವಾರಿ ಹೆಸರಲ್ಲೇ ಪ್ರಕಟವಾಯಿತು. ಕಡಲ ಬೆಳಕಿನ ದಾರಿಯಲ್ಲಿ, ಸೀತೆದಂಡೆ ಹೂವೆ ಅವರ ಕಥಾ ಸಂಕನಲಗಳು. ಪ್ರಾಂಜಲ ಅವರು ವಿವಿಧ ಲೇಖಕರಿಗೆ ಬರೆದ ಮುನ್ನುಡಿಗಳ ಸಂಗ್ರಹ. ಆಗೇರರ ಬದುಕು ಮತ್ತು ಸಂಸ್ಕೃತಿ ಕುರಿತು ಅವರು ಸಂಶೋಧನಾ ಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ […]
ಕಾವ್ಯಯಾನ
ನೆನಪುಗಳಲ್ಲಿ ಅವಳು ಲಕ್ಷ್ಮೀ ಪಾಟೀಲ್ ಅವಳ ಏಕಾಂತ ತೆರೆಯುತ್ತದೆ ನಿತ್ಯ ಕೈ ಮುಟ್ಟಿಕೂದಲು ಹಿಡಿದರೆ ಎದುರು ಮರದ ಕೆಳಗೆಸಂಧ್ಯಾ ರಾಗದ ಸಂಜೆ ಅದೇ ಮರ ಕೈ ಮಾಡಿ ಕರೆಯುತ್ತದೆ ಕೂದಲ ಸಿಕ್ಕು ಬಿಡಿಸಿಕೊಳ್ಳಲುನೀಟಾಗಿ ನೆನಪುಗಳ ತಲೆ ಬಾಚಲುಏಕಾಂತಕ್ಕೆ ಜೊತೆ ಹುಡುಕಿ ಧ್ಯಾನಿಸಲು ಸಂಧ್ಯಾರಾಗದೆ ದುರು ತಾನು ಮತ್ತೊಂದು ಕವಿತೆಯಾಗಲು !ಬರೆಯದ ಭಾವ ಗಳೆಲ್ಲ ಸಿಕ್ಕುಗಳಂತೆ ಮುತ್ತುವವು ಧ್ಯಾನಸ್ಥಳಾಗುವಳಾಗ ಕವಿತೆಯ ಸುತ್ತ !ಎಷ್ಟೊಂದು ಕವಿತೆ ಬದುಕಿದೆನಲ್ಲ ಬರೆಯಲು ಬಂದಿದ್ದರೆಪೈಪೋಟಿಯಲ್ಲಿ ಕವಿತೆ ಗೆಲ್ಲಿಸಬಹುದಿತ್ತುಈ ಹೇನು ಹರಿದಾಡಿಸಿಕೊಳ್ಳುವ ಹಿಂಸೆಗೆಮುಕ್ತಿ ಸಿಗಬಹುದಿತ್ತು ಎಂದುಕೊಳ್ಳುವಳುಈ […]