ಮಗುವಾದ ನೆಲ
ಬಿದಲೋಟಿ ರಂಗನಾಥ್
ಬಿತ್ತಿದ ಬೀಜ ಮೊಳಕೆ ಒಡೆದು ನಗುವಾಗ
ಸಿರಿಯು ಮಡಿಲು ತುಂಬಿತು
ಮಗುವಾದ ನೆಲ
ಮಮತೆಯ ಕರುಳ ಹೂ ಬಿಟ್ಟಿತು
ಎದೆಯೊಳಗಿನ ತಲ್ಲಣ ಕಣ್ಣು ಚಾಚಿ ನೋಡುತ್ತಿರಲು
ಖುಷಿಯ ಸಮುದ್ರ ನಕ್ಕು
ನಕ್ಷತ್ರಗಳು ಅಂಗೈಯೊಳಗೆ ಆಡಿದವು
ಮೊಳಕೆಯ ಕುಡಿ ಸಾಗುತಿರಲು
ಮಳೆಯ ಸ್ಪರ್ಶಕೆ ಕಳೆಗಟ್ಟಿ
ಮೆದು ನೆಲದ ಭಾವ ಕಲ್ಲುಗಳೊಂದಿಗೆ ಮಾತಾಡಿತು
ಬೆವರ ಹನಿಯು ಬಿದ್ದು
ಬಿತ್ತು ಹುತ್ತ ನೆಲ ಬಸಿರಾಗುವುದೆಂದರೇ
ಹೊಳೆ ಸೀಳಿನಲಿ ಬೊಗಸೆ ನೀರು ಕುಡಿದ ಸಂತಸ
ಮೈಯೊಳಗೆ ಚಂದ್ರ ನಡೆದ ಗುರುತು
***********
Fantastic..
ಧ
ಧನ್ಯವಾದಗಳು ಜೀ