ಕಾವ್ಯಯಾನ

ನೆನಪುಗಳಲ್ಲಿ ಅವಳು

Woman, Man, Pair, Keep, Trust, Passion

ಲಕ್ಷ್ಮೀ ಪಾಟೀಲ್

ಅವಳ ಏಕಾಂತ ತೆರೆಯುತ್ತದೆ ನಿತ್ಯ ಕೈ ಮುಟ್ಟಿ
ಕೂದಲು ಹಿಡಿದರೆ ಎದುರು ಮರದ ಕೆಳಗೆ
ಸಂಧ್ಯಾ ರಾಗದ ಸಂಜೆ ಅದೇ ಮರ ಕೈ ಮಾಡಿ ಕರೆಯುತ್ತದೆ ಕೂದಲ ಸಿಕ್ಕು ಬಿಡಿಸಿಕೊಳ್ಳಲು
ನೀಟಾಗಿ ನೆನಪುಗಳ ತಲೆ ಬಾಚಲು
ಏಕಾಂತಕ್ಕೆ ಜೊತೆ ಹುಡುಕಿ ಧ್ಯಾನಿಸಲು ಸಂಧ್ಯಾರಾಗದೆ ದುರು ತಾನು ಮತ್ತೊಂದು ಕವಿತೆಯಾಗಲು !
ಬರೆಯದ ಭಾವ ಗಳೆಲ್ಲ ಸಿಕ್ಕುಗಳಂತೆ ಮುತ್ತುವವು ಧ್ಯಾನಸ್ಥಳಾಗುವಳಾಗ ಕವಿತೆಯ ಸುತ್ತ !
ಎಷ್ಟೊಂದು ಕವಿತೆ ಬದುಕಿದೆನಲ್ಲ ಬರೆಯಲು ಬಂದಿದ್ದರೆ
ಪೈಪೋಟಿಯಲ್ಲಿ ಕವಿತೆ ಗೆಲ್ಲಿಸಬಹುದಿತ್ತು
ಈ ಹೇನು ಹರಿದಾಡಿಸಿಕೊಳ್ಳುವ ಹಿಂಸೆಗೆ
ಮುಕ್ತಿ ಸಿಗಬಹುದಿತ್ತು ಎಂದುಕೊಳ್ಳುವಳು
ಈ ಕವಿತೆಗಳಿಗೆಲ್ಲ ಆಕ್ರಮಿಸುವ ಚಟ
ಏನೆಲ್ಲಾ ಕಿತ್ತು ಖಜಾನೆ ಖಾಲಿ ಮಾಡಿ ಹೋಗುತ್ತವೆ
ಅಕಾಲ ವ್ರದ್ಧಾಪ್ಯಕ್ಕೆ ದೂಕಿ ಯವ್ವನ ಕೊಲೆ ಮಾಡಿದ ಕೈದಿಯಾಗುತ್ತವೆ ದಂಡ ತೆತ್ತು ಪಡೆಯುವ ತೀರ್ಪಿ ನಂತೆ
ಭಯ ಕಟ್ಟುತ್ತವೆ ಈ ಒಳ ಮುಖದ ಮಂಕತ್ವಕ್ಕೆ
ಆ ನೆರಳು ನೀಡುವ ಮರ ನಿತ್ಯಜ್ಞಾನೋದಯ
ಮಾಡಿಸುವ ಬೋದಿ ವ್ರಕ್ಷದಂತೆ ಆಕಾಶಕ್ಕೆ ದಿಟ್ಟಿಸಿದರೆ
ವ್ಯಥೆ ಗೊಂದುಷರಾ ಬರೆದ ನೀಲಮೇಘ ಶಾಮ ನಂತೆ
ತಾನೀಗ ಕಾವ್ಯಕ್ಕೆ ಜೀವ ತುಂಬಲು ನಡೆಯುವಳು
ದಿಟ್ಟ ಬದುಕಿನ ಪಾಠ ಹೀಗೆ ನಿತ್ಯ ಪಡೆಯುವಳು ಕೃಷ್ನೆ
ಅವಳು ಉರಿಯಕುಂಡದಿಂದ ಎದ್ದವಳು
ಉರಿಯನುಂಗಿ ಉಳಿಯುವುದು ತಿಳಿದವಳು
ಉರಿಯಬದುಕಿನ ಕಲೆ ಯಾದವಳು
ನೆನಪುಗಳಲ್ಲಿ ನೆಲೆಯಾದವಳು ನಮ್ಮಲ್ಲೂ ಹೀಗೆ ಕೃಷ್ನೆ

*************

Leave a Reply

Back To Top