ಗಝಲ್
ಎ ಎಸ್. ಮಕಾನದಾರ
ತಲೆ ಬಾಗಿಲಿಗೆ ಕೈಹಚ್ಚಿ ಕಾಯುತಿರುವೆ ಪ್ಯಾರಿ
ಭಾವರಸ ನೊರೆಹಾಲ ತುಂಬುತಿರುವೆ ಪ್ಯಾರಿ
ಅಚ್ಚೇರು ಬಂಗಾರದಲಿ ಅಚ್ಚು ಒತ್ತುತ್ತಿರುವೆ
ಸ್ನೇಹ ಅಚ್ಚುಮೆಚ್ಚೆಂದು ಸಾರುತಿರುವೆ ಪ್ಯಾರಿ
ಹಾಯಿದೋಣಿಗೆ ನಾವಿಕನಾಗಿ ಸಾಗುತಿರುವೆ
ಚೂರಾದ ಹೃದಯ ತೋರಣ ಕಟ್ಟಿರುವೆ ಪ್ಯಾರಿ
ನದಿಗಳ ಜಾಡಿನೊಳಗೆ ಚಹರೆ ಕಾಣುತಿರುವೆ
ವಿಶ್ವಪ್ರೇಮ ಬಾವುಟ ಹಾರಿಸುತ್ತಿರುವೆ ಪ್ಯಾರಿ
ಅಂತರಂಗ ಜ್ಯೋತಿಗೆ ಧೋಖಾ ಮಾಡದಿರು
ಸಾಹೇಬ್ ಮಸ್ತಕಕ್ಕೆ ಇಳಿದು ಬರುವೆ ಪ್ಯಾರಿ
**********
spuer dir gajal