ಕಾವ್ಯಯಾನ

ಕಾವ್ಯಯಾನ

ಅವನಾಗದಿರಲಿ. ಪ್ರಮೀಳಾ. ಎಸ್.ಪಿ.ಜಯಾನಂದ. ಸದ್ದು ನಿಲ್ಲಿಸಿದ್ದ ನಾಯಿಮತ್ತೇಕೆ ಸದ್ದು ಮಾಡುತ್ತಿದೆ…?ಇಷ್ಟು ದಿನ ಮೌನವಾಗಿದ್ದ ಶುನಕ…ಇಂದೇಕೆ ಸದ್ದು..?? ಅದೊ..ಅವನು ಬಂದಿರುವನೆ..ಚಪ್ಪರದ ಸಂಭ್ರಮ..ವಾಲಗದ ಸದ್ದು ಕೇಳಿಸಿತೆ ಅವನಿಗೆ ಹೂಹುಂ…ಇಲ್ಲ,ಇಲ್ಲ.. ಆ ಹೊತ್ತುಸದ್ದು ಮಾಡದೇ ಎದ್ದು ಹೋದನಲ್ಲ… ಆ ರಾಜ..ಜಗದ ಉದ್ದಾರ ಕ್ಕೆಂದು ನಂಬಿತು ಜಗತ್ತು ಆದರವಳ ಮಗ…ಏನೆಂದು ದುಃಖಿಸಿದನೋ ಇವನುಮಗ್ಗಲು ಬದಲಿಸುವುದರೊಳಗೆ ಎದ್ದು ಹೋಗಿದ್ದು ಯಾಕೆಂದು ತಿಳಿಯಬಲ್ಲದೆ ನನ್ನ ಹಸುಗೂಸು..?? ಗಟ್ಟಿಯಾಗದಿದ್ದರೂ ಮನಸ್ಸುಕಲ್ಲಾದ ದೇಹದುಡಿಯಿತುಮಗಳ ಸಾಕುವುದು ಸುಲಭದ ಮಾತೇನು.. ಅದು ಬರೆಯಲಾಗದ ಕವಿತೆ,ಹಾಡಲು ಬರದ ಹಾಡು.. ಅಳುವ ಕೂಸಿಗೆ ಹಾಲುಣಿಸಿಕಂಬನಿ […]

ಅನುವಾದ ಸಂಗಾತಿ

ಗ್ರಂಥಾಲಯದಲ್ಲಿ ಮೂಲ ಮಲಯಾಲಂ:ರವೀಂದ್ರನ್ ಪಾಡಿ ಕನ್ನಡಕ್ಕೆ:ಚೇತನಾ ಕುಂಬ್ಳೆ ಗ್ರಂಥಾಲಯದಲ್ಲಿ ಎಲ್ಲವೂಬಂಧನಕ್ಕೊಳಗಾಗಿವೆ.ಕಪಾಟಿನ ತುಂಬಪುಸ್ತಕಗಳು ಎಷ್ಟೊಂದು ಬದುಕುಗಳುಎಷ್ಟೊಂದು ಕಾಲ,ಎಷ್ಟೊಂದು ಜ್ಞಾನಗಳುಪೆಟ್ಟಿಗೆಯೊಳಗೆ ಅದರಲ್ಲಿ ಕೆಲವುಮಮ್ಮಿಗಳ ಹಾಗೆನಿತ್ಯ ವಿಶ್ರಾಂತಿ ಪಡೆಯುತ್ತಿವೆಗಾಜಿನ ಮನೆಯೊಳಗೆ ಒಂದಿಷ್ಟು ಉಸಿರುಮತ್ತೊಂದಿಷ್ಟು ಬೆಳಕುಹಂಬಲಿಸಿತುಅವುಗಳನ್ನು ತಲುಪಲು ಒಂದು ಪ್ರಪಂಚವೇ ಅಲ್ಲವೇಎಲ್ಲ ಕೃತಿಗಳೂನಾನಂದುಕೊಂಡೆಮನದೊಳಗೆ ತೆರೆದಿಡಬೇಕು ನಿತ್ಯವೂಗ್ರಂಥಾಲಯಗಳ ಬಾಗಿಲುಗಳನ್ನುಜೊತೆಗೆ ಕಪಾಟುಗಳಬಾಗಿಲುಗಳನ್ನೂ ಹಾಳೆಗಳನ್ನೊಮ್ಮೆ ತಿರುವಿ ಹಾಕಿಗಂಧವನ್ನು ಆಘ್ರಾಣಿಸಬೇಕುಪುನಃ ಸ್ಥಾನ ಬದಲಿಸಿಇಡಬೇಕಿದೆ ಅವುಗಳನ್ನೂ ತಲುಪಿ ಬಿಡಲಿವರ್ತಮಾನದ ವಿಚಾರಗಳುಹೊಸ ಬೆಳಕು,ಹೊಸ ಗಾಳಿ ***********

ಕಾವ್ಯಯಾನ

ಅಮ್ಮನಿಗೀಗ ೬೬ ನಾಗರಾಜ ಮಸೂತಿ ದುಡಿಯುವ ದೇಹಕ್ಕೆ ವಾಕಿಂಗ್ ಅನಗತ್ಯ ಎಂದವಳುಮೆಲ್ಲ ಹೆಜ್ಜೆ ಇರಿಸುತ್ತಿದ್ದಾಳೆ ಆರು ಹೆರಿಗೆಗೆ ನಲುಗದವಳುಮಂಡೆ ನೋವಿಗೆ ಕುಸಿದಿದ್ದಾಳೆ ಬಿಸಿ ರೊಟ್ಟಿ ಉಣಬಡಿಸಿದವಳುಊಟಕ್ಕೆ ಮೆತ್ತನೆ ರೊಟ್ಟಿಯನ್ನು ಕೇಳಲು ಮುಜುಗರಕ್ಕೊಳಗಾಗುತ್ತಾಳೆ ಮೈಲು ದಾರಿ ಸವೆಸಿ ಬಿಸಿಯೂಟ ಬಡಿಸಿದಅವಳ ಪ್ರತಿ ಹೆಜ್ಜೆನನ್ನೆದೆಗೆ ಭಾರ ಅನಿಸುತ್ತಿವೆ ತಿಂಡಿ ತಿನಿಸು, ಧಿರಿಸು ತಂದಿಡುವಎನಗೆ ಆರೋಗ್ಯ ಮರುಕಳಿಸಲಾಗುತ್ತಿಲ್ಲಅವಳಿಗೀಗ ಅರವತ್ತಾರರ ಹರೆಯ ಅಮ್ಮನಿಗೆ ವಯಸ್ಸಾಗ್ತಿದೆಅದೇ ಬೇಸರವಾಗ್ತಿದೆ… **************

ಕಾವ್ಯಯಾನ

ಕಿಟಕಿ ದೀಪ್ತಿ ಭದ್ರಾವತಿ ನೀನು ನನ್ನಿಂದ ದೂರ ಸರಿದಿದ್ದೀಯೆಆದರೂ ಮೋಡದಅಂಚುಗಳಲಿನಾನು ನಿನ್ನನ್ನು ಕಾಣುತ್ತೇನೆ ಮುಸ್ಸಂಜೆ ಕೆಂಬಣ್ಣದಲಿ ನೆನಪ ಅಲೆಗಳುಓಕುಳಿಯಾಡುವಾಗಲೆಲ್ಲನಿನ್ನ ಮುಂಗುರುಳು ನನ್ನಕಣ್ಣಿನಲಿಇಣುಕಿದಂತೆ ಭಾಸವಾಗುತ್ತದೆ ವ್ಯಾಖ್ಯಾನಿಸುತ್ತೇನೆನಾನು ನಿನ್ನನ್ನು ಮರೆತಿದ್ದೇನೆ ಎಂತಲೇ..ಆದರೆಬಿಟ್ಟು ಹೋದ ಹೆಜ್ಜೆ ಗುರುತುಗಳಹಾದಿ ಮಳೆಗಾಲದಲಿ ಮಿದುವಾಗಿಬೇಸಿಗೆಯಲಿ ಒರಟಾಗಿಬೆರಳಿಗಂಟುವಾಗಅರ್ಧ ಬರೆದಿಟ್ಟ ಕವಿತೆಯೊಂದುಎದೆಯಲ್ಲಿ ಗೂಡುಕಟ್ಟುತ್ತದೆ ಮತ್ತೆ ಇನ್ನೆಂದು ನಿನ್ನ ಭೇಟಿಯಾಗುವುದಿಲ್ಲಎಂದೆ ನಂಬುತ್ತೇನೆ.ಮುಚ್ಚಿ ಎದ್ದು ಹೋದ ಕಿಟಕಿಯಲಿಬೆಳಕ ಗೀರೊಂದು ತಡತಡಕಿ ಬರುವಾಗನಿನ್ನ ಕಣ್ಣ ಮಿಂಚುಇರುಳ ಸರಳುಗಳತೂರಿ ನನ್ನೆಡೆಗೆ ಬಂದಂತೆ ಅನ್ನಿಸುತ್ತದೆ ಮತ್ತೆ ಮತ್ತೆ ನಿನ್ನ ನೆನಪುಗಳಬೇಕೆಂದೆ ದೂರ ಅಟ್ಟುತ್ತೇನೆಅವು ಜಾತ್ರೆಯಲಿ ಕೈ […]

ಕಾವ್ಯಯಾನ

ಆಪ್ತ ಗೆಳೆಯನ ಸಾವು ವೆಂಕಟೇಶ್ ಚಾಗಿ ಅವನು ನನ್ನೊಂದಿಗೆ ಪ್ರತಿದಿನವೂಶಾಲೆಗೆ ಬರುತ್ತಿದ್ದನನ್ನ ಆಟ ಪಾಠ ಕೀಟಲೆಗಳಿಗೆಅವನು ಸಾಕ್ಷಿಯಾಗಿದ್ದಪಾಪ, ಅವನು ಮೂಗನನ್ನೊಂದಿಗೆ ಮಾತನಾಡದಿದ್ದರೂಭಾವನೆಗಳನ್ನುಅರ್ಥಮಾಡಿಕೊಳ್ಳುವಆತ್ಮಬಾಂಧವನನ್ನಿಂದ ಬಯಸುವುದುನನ್ನ ತುಳಿತವಷ್ಟೇಪ್ರತಿದಿನವೂ ತುಳಿತಕ್ಕೊಳಗಾದರೂಅವನು ಬದುಕಿದ್ದು ನನಗಾಗಿಯೇಅವನ ಕಾಲುಗಳಿಗೆನೋವುಗಳು ಚುಚ್ಚಿದಾಗಅವನೇ ಉಸಿರೇ ಹೋಗುತ್ತಿತ್ತುಆಗಾಗ ಉಸಿರು ನೀಡಿದಾಗಮತ್ತೆ ಬದುಕುತ್ತಿದ್ದಪ್ರತಿದಿನದ ನನ್ನ ಸೇವೆಗಾಗಿ;ನನ್ನ ಭಾರವನ್ನೆಲ್ಲ ಅವನುನಿರಾಕರಿಸದೇ ಹೊರುತ್ತಿದ್ದಮತ್ತೆ ನನ್ನ ಭಾರವನ್ನೂ ಸಹ.ಅವನೊಂದಿಗೆ ನಾನು ಹಂಚಿಕೊಂಡಮಾತುಗಳು ಸಾವಿರಾರುನೀಡಿದ ಮುತ್ತುಗಳೂ ಸಾವಿರಾರುತಾನು ಕಷ್ಟಗಳ ಅಪ್ಪಿದರೂಕ್ಷಣಕ್ಷಣವೂ ನೋವನ್ನುಂಡರೂನನ್ನ ಗಾಳಿಯಲ್ಲಿ ತೇಲಿಸುತ್ತಿದ್ದನಾನೇ ಮಾಡಿದ ಗಾಳಿಪಟದಂತೆ.ಅವನುಂಡ ಬಿಸಿಲುಆ ರೈತನಿಗೂ ದಕ್ಕಿಲ್ಲಮಳೆಯ ಹನಿಗಳ ಸುಖವನ್ನುಪ್ರತಿಭಾರಿಯೂಅನುಭವಿಸುವವನು ಅವನೇಚಂದ್ರ ರಜೆ […]

ಕಾವ್ಯಯಾನ

ಬೋಧಿ ಭಾವ ರೇಮಾಸಂ ಕರವ ಕೊಡವಿ ಕುಳಿತ ಮನಕೆಹಸಿರು ಹಾಸುವ ತವಕದಲಿಮುಗಿಲಿಗೆ ನೋಟವ ಚೆಲ್ಲಿಕೆಚ್ಚನು ತೋರಿದಿ ನೀನಲ್ಲಿ // ಬೊಗಸೆ ಬೆಳಕು ಹಿಡಿದುಕಲ್ಲ ಮುಳ್ಳ ಬೇಲಿಯ ಹಾರಿಭರವಸೆಯ ಬಂಡೆ ಹೊದ್ದುಸಂದಿನಲಿ ಬಿತ್ತು ಬೀಜ ಹಾರಿ// ವಜ್ರದೇಹಿ ಕಲ್ಲೆದೆಯ ಸೀಳಿಮೆದು ಮೇಣವಾಗಿಸಿ ಅರಳಿಪ್ರಯತ್ನಿಸಿದೆ ಮರಳಿ ಮರಳಿನೋಡುವಂತಾದೆಲ್ಲ ಹೊರಳಿ// ಬುದ್ಧನ ಬೋಧಿ ಭಾವವಾಗಿತಪವ ಗೈಯುತ ಮರೆಯಲಿಸರಿದಾರಿ ದೋರಿದೆ ಸರೀಕರಿಗೆಗೆಲುವಿದೆ ಛಲದ ಬಲದಲಿ// ***********

ಕಾವ್ಯಯಾನ

“ನಲಿಯೋಣ ಬನ್ನಿ ಸಾತುಗೌಡ ಬಡಗೇರಿ ನಲಿವಾ ಎಲ್ಲರೂ ಸರಸದಿ ಬೆರೆತುವಿರಸವ ಮರೆತು ಒಂದಾಗಿ.ಈ ಧರೆ ಸ್ವರ್ಗದಿ ಹಾಡಿ ಕುಣಿಯುವಾಐಕ್ಯದಿ ನಲಿದು ಚೆಂದಾಗಿ. ದ್ವೇಷ,ಅಸೂಯೆ, ಸೇಡಿನ ಬೆಂಕಿಮನುಜನ ನೆಮ್ಮದಿ ಕೆಡಿಸುವದು.ಅಶಾಂತಿ ಮನದಲಿ ನೆಲೆಸಿ ದೇಹವರೋಗದ ಭಾದೆಗೆ ತಳ್ಳುವುದು. ಏತಕೆ ಸುಮ್ಮನೆ ಚಿಂತೆಯ ಬಾಳುಮರೆತು ಬಾಳುವ ಚಿಂತೆಯನು.ಈ ಇಳೆ ಸೊಬಗು ಸವಿದು ಉಳಿಸುತಸ್ವಾಗತ ಮಾಡುವ ನಾಳೆಯನು. ವೈರಿಯ ಸ್ನೇಹದ ಮಾತಿನ ಒಳಗಡೆಅಡಗಿದೆ ಬೇರೆಯ ಮಸಲತ್ತು.ಎಚ್ಚರ ನಡೆಯ ಇಡಲು ನಮಗೆಬಾರದು ಕೇಡು ಯಾವತ್ತೂ. ಬನ್ನಿ!ಗೆಳೆಯರೇ ಸಂತಸದಿ ತೇಲುವಾಪ್ರತಿಕ್ಷಣ ಹರುಷದ ಹೊಳೆಯಲ್ಲಿ.ಒಂದೇ ಕುಟುಂಬದ […]

ಲಹರಿ

ನೆನಪುಗಳೇ ಮಧುರ. ಶೀಲಾ ಭಂಡಾರ್ಕರ್ ನೆನಪುಗಳೇ ವಿಚಿತ್ರ. ಒಂದಕ್ಕೊಂದು ಸಂಬಂಧ ಕೂಡಿಸಿ ಎಲ್ಲಿಂದೆಲ್ಲಿಗೋ ಎಳಕೊಂಡು ಹೋಗುವ ಪರಿಯಂತೂ ಅದ್ಭುತ. ನಮ್ಮ ಚಿಕ್ಕಪ್ಪ ಮತ್ತು ಚಿಕ್ಕಮ್ಮ ವಾರಾಂತ್ಯದಲ್ಲಿ ನಮ್ಮನೆಗೆ ಬರುವುದಿತ್ತು. ನಾವು ಚಿಕ್ಕವರಿದ್ದಾಗ ಶನಿವಾರವನ್ನು ಬಹಳ ಕಾತರದಿಂದ ಕಾಯುತಿದ್ದೆವು.ಚಿಕ್ಕಮ್ಮ ಭಾನುವಾರದ ತಿಂಡಿ, ಇಡ್ಲಿ ಅಥವಾ ಖೊಟ್ಟೆಯ ಹಿಟ್ಟನ್ನು ರುಬ್ಬುವ ಕಲ್ಲಿನಲ್ಲಿ ರುಬ್ಬಿ ಕೊಡುತಿದ್ದರು. ಆ ಉದ್ದಿನ ಹಿಟ್ಟು ರುಬ್ಬುತ್ತಾ ಅವರು ನಮಗೆ ಚಂದ ಚಂದದ ರೋಮಾಂಚಕಾರಿ ಕಥೆಗಳನ್ನು ಸೃಷ್ಠಿ ಮಾಡಿ ಹೇಳುವುದಿತ್ತು. ನಮಗದುವೇ ದೊಡ್ಡ ಫ್ಯಾಂಟಸಿಯಾಗಿತ್ತು.ಈಗಲೂ ಚಿಕ್ಕಮ್ಮನ ನೆನಪಾದ […]

ಮೂರನೆ ಆಯಾಮ

ಕೈರಳಿಯ ದೇವನಾಡಿನಲ್ಲಿ ರಂಗಪಯಣ ಪುಸ್ತಕದ ಹೆಸರು- ರಂಗ ಕೈರಳಿಲೇಖಕರು- ಶ್ರೀ ಕಿರಣ ಭಟ್ಬೆಲೆ- ೧೫೦/- ಪುಸ್ತಕದ ಹೆಸರು- ರಂಗ ಕೈರಳಿಲೇಖಕರು- ಶ್ರೀ ಕಿರಣ ಭಟ್ಬೆಲೆ- ೧೫೦/- ಕೂಸೆ ಅಡ್ರೆಸ್ ಹೇಳು… ಕಿರಣ ಭಟ್ಟರ ಫೋನ್.ಶ್ರೀದೇವಿ ಕೆರೆಮನೆ, ಹಬ್ಬುವಾಡ, ಕಾರವಾರ ಬರೆದುಹಾಕು ಸಾಕು. ಬರ್‍ತು.ಅಷ್ಟೇ ಸಾಕೇನೆ? ಕೆ.ಎಚ್.ಬಿ ಹಾಕದು ಬ್ಯಾಡ್ದಾ? ರೋಡ್ ನಂಬರ ಹೇಳ್ಬಿಡೆ…ನಿಂಗೆ ಬೇಕರೆ ಕೆ.ಎಚ್.ಬಿ. ಡಿ-೬ ರಸ್ತೆ ಎಲ್ಲ ಹಾಕು. ಹಾಕದಿದ್ರು ಬರ್‍ತು. ಚಿಂತೆ ಮಾಡಡ… ನಾನು ನಗುತ್ತ ಹೇಳಿದೆ.ವರ್ಲ್ಡ್ ಫೇಮಸ್ಸು ಮಾರಾಯ್ತಿ ನೀನು… ನಕ್ಕಿದ್ದರು.ಎಂತಕ್ಕೋ… […]

ಸಂಪ್ರೋಕ್ಷಣ

ಕನಸಿನ ಚಾದರ ಬರಹ-02 ಬಣ್ಣಗಳಂತೆಯೇ ಕನಸುಗಳದ್ದೂ ಒಂದು ಮೋಹಕ ಲೋಕ. ಕನಸು ಕಾಣದ ಅಥವಾ ಕನಸುಗಳೇ ಬೀಳದ ಮನುಷ್ಯರಿಲ್ಲ. ಕನಸು ಬೀಳುವುದು ವಿಜ್ಞಾನ ಅಥವಾ ವೈದ್ಯಕೀಯಕ್ಕೆ ಸಂಬಂಧಪಟ್ಟ ಸಂಗತಿಯಾದರೆ, ಕನಸು ಕಾಣುವುದೊಂದು ಮನಸ್ಥಿತಿ ಅಥವಾ ಭಾವನೆಗಳಿಗೆ ಸಂಬಂಧಪಟ್ಟಿದ್ದು. ರಾತ್ರಿ ಬಿದ್ದ ಕನಸೊಂದು ಬೆಳಿಗ್ಗೆ ಎದ್ದೇಳುವಷ್ಟರಲ್ಲಿ ಮರೆತುಹೋಗುವುದುಂಟು; ಬಾಲ್ಯದ ಅವೆಷ್ಟೋ ಕನಸುಗಳು ಯೌವನಾವಸ್ಥೆಯಲ್ಲಿ ಅಥವಾ ಯೌವನದ ಅವೆಷ್ಟೋ ಕನಸುಗಳು ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ಮರೆಯಾಗುವುದುಂಟು. ಆದರೆ ಈ ಕನಸಿನ ಪ್ರಕ್ರಿಯೆ ಮಾತ್ರ ನಿರಂತರ. ಕಾಲೇಜಿನ ದಿನಗಳಲ್ಲಿ ಕುಡಿಮೀಸೆಯಂಚಿನಲ್ಲಿ ಸೊಗಸಾಗಿ […]

Back To Top