“ನಲಿಯೋಣ ಬನ್ನಿ
ಸಾತುಗೌಡ ಬಡಗೇರಿ
ನಲಿವಾ ಎಲ್ಲರೂ ಸರಸದಿ ಬೆರೆತು
ವಿರಸವ ಮರೆತು ಒಂದಾಗಿ.
ಈ ಧರೆ ಸ್ವರ್ಗದಿ ಹಾಡಿ ಕುಣಿಯುವಾ
ಐಕ್ಯದಿ ನಲಿದು ಚೆಂದಾಗಿ.
ದ್ವೇಷ,ಅಸೂಯೆ, ಸೇಡಿನ ಬೆಂಕಿ
ಮನುಜನ ನೆಮ್ಮದಿ ಕೆಡಿಸುವದು.
ಅಶಾಂತಿ ಮನದಲಿ ನೆಲೆಸಿ ದೇಹವ
ರೋಗದ ಭಾದೆಗೆ ತಳ್ಳುವುದು.
ಏತಕೆ ಸುಮ್ಮನೆ ಚಿಂತೆಯ ಬಾಳು
ಮರೆತು ಬಾಳುವ ಚಿಂತೆಯನು.
ಈ ಇಳೆ ಸೊಬಗು ಸವಿದು ಉಳಿಸುತ
ಸ್ವಾಗತ ಮಾಡುವ ನಾಳೆಯನು.
ವೈರಿಯ ಸ್ನೇಹದ ಮಾತಿನ ಒಳಗಡೆ
ಅಡಗಿದೆ ಬೇರೆಯ ಮಸಲತ್ತು.
ಎಚ್ಚರ ನಡೆಯ ಇಡಲು ನಮಗೆ
ಬಾರದು ಕೇಡು ಯಾವತ್ತೂ.
ಬನ್ನಿ!ಗೆಳೆಯರೇ ಸಂತಸದಿ ತೇಲುವಾ
ಪ್ರತಿಕ್ಷಣ ಹರುಷದ ಹೊಳೆಯಲ್ಲಿ.
ಒಂದೇ ಕುಟುಂಬದ ಸದಸ್ಯರಾಗಿ
ನಲಿವಾ ಭಾರತಮಾತೆ ಮಡಿಲಲ್ಲಿ.
*****