ಮೂಕವಾಯಿತು ರೇಖಾ ವಿ.ಕಂಪ್ಲಿ ಮೂಕವಾಯಿತು ಮೂಕವಾಯಿತು ಕೋಗಿಲೆ ವಸಂತನಾಗಮನವಿರದೆ ತನ್ನ ಗಾನವ ಮರೆತು ನಿನ್ನದೇ ಚಿಂತೆ ಯೊಳಗೆ…….. ಮೂಕವಾಯಿತು ವೀಣೆ ಮೀಟದ ಬೆರಳುಗಳಿರದೆ ತನ್ನ ರಾಗವ ಮರೆತು ನಿನ್ನ ಬೆರೆಯಲರಿಯದೆ…….. ಮೂಕವಾಯಿತು ಓಲೆಯೊಂದು ರವಾನಿಸುವ ಹಂಸವಿರದೆ ತನ್ನ ಪದವ ಮರೆತು ನಿನ್ನ ಅರಿಯಲಾರದೆ……. ಮೂಕವಾಯಿತು ಕನಸೊಂದು ನನಸಾಗದ ಮನಸ್ಸಿರದೆ ತನ್ನ ಊಹೆ ಮರೆತು ನಿನ್ನ ಮರೆಯಲಾರದೆ…. ಮೂಕವಾಯಿತು ಕವಿತೆ ಬರೆಯುವ ಕವಿಯೊರ್ವನಿರದೆ ತನ್ನ ಯಾನವ ಮರೆತು ನಿನ್ನ ಮನವರಿಯದೆ….. ********
Read More
ಈ ಚಳಿಗೆ ದಯೆಯಿಲ್ಲ. ದಾಕ್ಷಾಯಿಣಿ ವಿ ಹುಡೇದ ಈ ಚಳಿಗೆ ದಯೆಯಿಲ್ಲ… ಈ ಚಳಿಗೆ ದಯೆಯಿಲ್ಲ ;ಬೀಸಿ ತಂಗಾಳಿಮಂಜನು ಉದುರಿಸಿಪಕ್ಕೆಲುಬುಗಳಲಿ ನಡುಕ ಹುಟ್ಟಿಸಿಹೊಕ್ಕಳ ನಡು ಮಧ್ಯದಿಂದ ನಿನ್ನ ನೆನಪಿಗೆ ಆಹ್ವಾನ ನೀಡಿದೆ. ಈ ಚಳಿಗೆ ದಯೆಯಿಲ್ಲ ;ನಿನ್ನ ಬಿಸಿಯಪ್ಪುಗೆಯಬಿಸುಪಿಗೆ ಸವಾಲೊಡ್ಡಿಸೆಣಸಾಡಿ ಸೋತದ್ದಕ್ಕೀಗಸೇಡು ತೀರಿಸಿಕೊಳ್ಳುತ್ತಿದೆ,ಒಂಟಿ ಹೆಣ್ಣ ಕಣ್ಣ ಕಾಡಿದೆಅಪ್ಪಿ ನನ್ನನೇ ಬೇಡಿದೆ. ಈ ಚಳಿಗೆ ದಯೆಯಿಲ್ಲ ;ನೀನಿಲ್ಲದ ಈ ಘಳಿಗೆಗಳಲ್ಲಿಇದನ್ನೆಲ್ಲ ಎದುರಿಸುವವಿಫಲ ಯತ್ನ ನಡೆದೇ ಇದೆ ;ವ್ಹಿಸ್ಕಿ, ರಮ್ಮು, ಟಕೀಲಾಗಳ ಜೊತೆ ನಿನ್ನ ಬೆರೆಸಿ ಕುಡಿದು ಸೋತಿದ್ದೇನೆ. ಈ […]
Read More
ಚೆ ಗುವೆರಾನ ಮುಖ ಇದ್ದ ಮನುಷ್ಯ ಮೂಲ:ವಾಷಿಂಗ್ಟನ್ ಕುಕುರ್ಟೋ ಕನ್ನಡಕ್ಕೆ:ಕಮಲಾಕರ ಕಡವೆ ಚೆ ಗುವೆರಾನ ಮುಖ ಇದ್ದ ಮನುಷ್ಯ ಅವನು ಚೆ ಯ ಟ್ಯಾಟೂವ ತನ್ನ ತೋಳುಗಳ ಮೇಲೆ ಹೊಂದಿದ್ದಆ ಕಾಲದಲ್ಲಿ ಯಾರೂ ಟ್ಯಾಟೂ ಹಾಕಿ ಕೊಳ್ಳುತ್ತಿರಲಿಲ್ಲಆ ಕಾಲದಲ್ಲಿ ಯಾರಿಗೂ ಚೆ ಗೊತ್ತೂ ಇರಲಿಲ್ಲಹಾಗಿದ್ದಾಗ ಅವನು ಟ್ಯಾಟೂ ಹಾಕಿಸಿ ಕೊಂಡಿದ್ದ “ಯಾಕಪ್ಪಾ ಹಾಗೆ ಟ್ಯಾಟೂ ಹಾಕಿಸ್ ಕೊಂಡಿದ್ದಿ”ನನ್ನ ಅಜ್ಜಿ ಕೇಳಿದಳು, “ಒಳ್ಳೇ ಜೈಲಿಂದ್ ಹೊರ ಬಂದೋರುಹಾಕಿಸ್ಕೊತಾರಲ್ಲ ಹಾಂಗೆ”.“ಅಮ್ಮ, ಇನ್ನೇನು ನಮ್ ಲೈಫು ಅಂದ್ರೆ,ದೊಡ್ಡದೊಂದು ಜೈಲು ಅಲ್ದಿದ್ರೆ?”ಚೆ ಇನ್ನೂ […]
Read More
ಇನ್ನೂ ಬರಲಿಲ್ಲ ಕೃಷ್ಣಮೂರ್ತಿ ಕುಲಕರ್ಣಿ ಇನ್ನು ಬರಲಿಲ್ಲ…. ಬರ್ತಿನಂತ ಹೇಳಿದ ಗೌಡ ಇನ್ನೂ ಬರಲಿಲ್ಲ.! ಬಸ್ಸಿನ ಗದ್ದಲ, ಟ್ರಾಫಿಕ್ ಕಿರಿಕಿರಿ ಎನೊಂದು ತಿಳಿಲಿಲ್ಲ !! ಮಿಶ್ರಾ ಫೇಡ, ಬಿಗ್ ಬ್ರೇಡ್ ತರ್ತಿನಿ ಅಂದಾವ! ರಾತ್ರಿ ಊಟಕ ಪಂಜೂರ್ಲಿಗೆ ಹೋಗೋಣಾಂತ ಮೇಜೇಜ್ ಹಾಕಿದವ! ಬಟರ್ ನಾನ್ ಕಾಜೂ ಸ್ಪೇಶಲ್ ತಿನ್ನೋಣ ಅಂದಾವ! ಮಸಾಲಿ ಪಾಪಡ್ ಗೋಬಿ, ಗಡಬಡ ಐಗೆ ಕಾದೈತೆ ಜೀವ! ಕುಡ್ತಾ ಜುಬ್ಬಾ ಕೊಡಸ್ತಿನಂತ ಹೇಳಿ ಹೋದಾವ!! ಶೋಚ್ ನ್ಯಾಗ ತರಬೇಕಂತ ಬಯಸೇದ ಜೀವ!! ಬರ್ತಾನಂತ ಕಾದು […]
Read More
ಬಾನಾಡಿಗಳೇ ಕೇಳಿ ಸಂಜಯ್ ಮಹಾಜನ ಬಾನಾಡಿಗಳೇ ಕೇಳಿ ಈ ವಿಶಾಲ ನೀಲಿ ಆಗಸ ನಿಮ್ಮದು ಈ ತಂಗಾಳಿಯ ಸ್ಪರ್ಶ ನಿಮ್ಮದು ಈ ಶಾಂತ ಸಮುದ್ರ ನಿಮ್ಮದು ಈ ಹಸಿರು ಹೊದಿಕೆ ನಿಮ್ಮದು ಈ ಹೂವ ಕಂಪು ನಿಮ್ಮದು ಈ ಹಣ್ಣ ಸಿಹಿ ನಿಮ್ಮದು ಈ ಸಿರಿಧಾನ್ಯ ನಿಮ್ಮದು ಈ ಪ್ರಕೃತಿಯ ಸರ್ವ ಸ್ವಭಗು ನಿಮ್ಮದು ಆದೆರೆ..? ಇದನ್ನೆಲ್ಲ ನಿಮ್ಮಿಂದ ಕಸಿದುಕೊಳ್ಳುವ ಸ್ವಾರ್ತ, ಕ್ರೋಧ, ಕಷ್ಠಾಗ್ನಿಯ ಮನಸ್ಸುಳ್ಳ ಮಾನವ ನಿನ್ನವನಲ್ಲಾ *********
Read More
ತೆನೆ ರಾಮಾಂಜಿನಯ್ಯ ವಿ. ತೆನೆ ಅಪ್ಪ ಸಣ್ಣರೈತ. ಗಿಳಿ,ಅಳಿಲು,ಕಾಗೆಗಳ ಹಾವಳಿ ಸದಾ ಇದ್ದೇ ಇರುತ್ತಿತ್ತು; ಇದ್ದ ಒಂದೂವರೆ ಎಕರೆಯಲ್ಲಿ ಬೆಳೆಯುತ್ತಿದ್ದ ಜೋಳಕ್ಕೆ! ‘ಬೇಳೆಕಾಳುಗಳ ರಾಣಿ’ ಇವಳು! ಉದ್ದ ಜಡೆಯ ನಾರಿ, ಹಾಲುಕ್ಕಿಸುವ ಶೋಡಷಿ, ‘ಟಸೆಲ್ ಕೂದಲುಳ್ಳ ಗಂಡು’ ಇವಳು! ಅರೆ, ಇವಳೇನು ಜೀನ್ಸ್ ಗಳ ವ್ಯತ್ಯಾಸದಂತ ಮಂಗಳಮುಖಿಯಲ್ಲ. ಗಿಳಿ ಪ್ರಿಯೆ! ನಮ್ಮೂರಿನ ಮಲ್ಲಮ್ಮಾ, ಮುನೆಮ್ಮಾ ಹುಲ್ಲಿಗಂತ ಬಂದು ತೆನೆ ಮುರಿದು ರವಿಕೆಯೊಳಗೆ ಅಡಗಿಸಿದಾಗ, ಎದೆ ಮುಂದೆ ಉಬ್ಬುತ್ತಿತ್ತು ಆಗ ಅಲ್ಲಿ ‘ಟಸೆಲ್’ ಉದುರುತ್ತಿತ್ತು! ಕೆಲವೊಮ್ಮೆ ತೆನೆ ಬೆತ್ತಲಾಗಿ […]
Read More
ಗಝಲ್ ದಾಕ್ಷಾಯಣಿ ವೀ ಹುಡೇದ. ಗಜಲ್ ಕರಗಿ ನೀರಾದ ನೆನಪುಗಳಲಿ ಚಂದ್ರನ ಹುಡುಕುವುದನು ನಿಲ್ಲಿಸು ಸಖಿನಿರ್ಜೀವ ದಿಂಬಿನೊಡನೆ ಮಾತಾಡಿ ನೋವ ಕಳೆಯುವುದನು ನಿಲ್ಲಿಸು ಸಖಿ ಜಗಕೆ ತಿಳಿದೀತೆಂದು ಕದವಿಕ್ಕಿ ಸದ್ದಿಲ್ಲದೇ ಅತ್ತ ಘಳಿಗೆಗಳ ಲೆಕ್ಕವಿಟ್ಟಿಲ್ಲ ಯಾರೂಕುದಿವ ಮನಸಿಗೆ ಕದ್ದು ಅಳುವ ರೂಢಿಯನು ನಿಲ್ಲಿಸು ಸಖಿ ಅತ್ತು ಹಗುರಾಗು,ಬಚ್ಚಿಟ್ಟ ಸತ್ಯಗಳು ಬೆತ್ತಲಾಗಲಿಅವನ ವಂಚನೆಗಳಿಗೆ ಪರದೆ ಹಾಕುವುದನು ನಿಲ್ಲಿಸು ಸಖಿ ಸಖನ ಲೋಕದಲಿ ಜಾಗ ಹುಡುಕುವ ಪ್ರಯತ್ನ ಮೂರ್ಖತನದ್ದುರಮಿಸಲಿ ಎಂದು ಬೆನ್ನು ಬಿದ್ದು ಕಾಡುವುದನು ನಿಲ್ಲಿಸು ಸಖಿ. ಸಖನ ಕಣ್ಣುಗಳಲ್ಲಿ […]
Read More
ಜುಲೈನ ಗಸಗಸೆಯ ಹೂಗಳು ಮೂಲ: ಸಿಲ್ವಯಾ ಪ್ಲಾತ್(ಅಮೇರಿಕಾ ಕವಿ) ಕನ್ನಡಕ್ಕೆ ಕಮಲಾಕರ ಕಡವೆ ಜುಲೈನ ಗಸಗಸೆಯ ಹೂಗಳು ಪುಟ್ಟ ಗಸಗಸೆಯ ಹೂವೇ, ಪುಟ್ಟ ನರಕದ ಜ್ವಾಲೆಯೇನೀನು ಏನೂ ಹಾನಿ ಮಾಡೆಯೇನು? ನೀ ಕಂಪಿಸುವಿ, ನಿನ್ನ ಮುಟ್ಟಲಾರೆ ನಾನುಜ್ವಾಲೆಗಳ ನಡುವೆ ಕೈ ಇಡುವೆ ನಾನು. ಏನೂ ಸುಡುತ್ತಿಲ್ಲ ನಿನ್ನ ನೋಡುವುದರಲ್ಲೇ ನಿತ್ರಾಣನಾದೆ ನಾನುಹಾಗೆ ಕಂಪಿಸುತ್ತ, ಸುಕ್ಕುಗಟ್ಟಿ, ಕಡು ಕೆಂಪಾಗಿ, ಬಾಯೊಳಗಿನ ಚರ್ಮದಂತೆ ಬಾಯಿಯೊ ಅಷ್ಟೇ ರಕ್ತರಂಜಿತರಕ್ತಮಯ ಲಂಗದಂತೆ! ಮುಟ್ಟಲಾರೆ ಆ ಹೊಗೆಯ ನಾನುಎಲ್ಲಿ ನಿನ್ನ ಮಾದಕತೆ, ನಿನ್ನ ವಾಕರಿಕೆ […]
Read More
ಸುಡುಗಾಡು ರಾಜು ದರಗಾದವರ ಸುಡುಗಾಡು ನೀನೆಷ್ಟು ಸಹೃದಯಿ, ಭೇದಭಾವವಿಲ್ಲದ ನಿನ್ನಲ್ಲಿ ಅದೆಂತಹ ತಿಳಿಮೌನ. ಮೇಲುಕೀಳು ಕಾಣದ ನಿನ್ನಲ್ಲಿ ಹೋಲಿಕೆಗೆ ಸಿಗದ ಐಕ್ಯತೆ. ದೊಡ್ಡವ ಚಿಕ್ಕವ ಅನ್ನೋ ತಾರತಮ್ಯವಿಲ್ಲದ, ಎಲ್ಲರನ್ನು ಸಮಾನಭಾವದಿಂದ ಸ್ವಾಗತಿಸುವ ನಿನ್ನದು ಅದೆಂತಹ ಧರ್ಮ…! ವೀರರನ್ನು ,ಹೇಡಿಗಳನ್ನು ಪುಣ್ಯವಂತರನ್ನು,ಪಾಪಿಗಳನ್ನು ಬೇರ್ಪಡಿಸುವ ಬುದ್ಧಿಯೆಂತು ಇಲ್ಲ. ಹೆಣ್ಣು,ಗಂಡು ಒಂದೇ ಎಂದು ಸಮಾನಕಾಣೋ ಹೃದಯವಂತಿಕೆ ನಿನ್ನಲ್ಲಿ ಬಿಟ್ಟು ಮತ್ತ್ಯಾರಲ್ಲಿ ಬರಲು ಸಾಧ್ಯ ಹೇಳು…? ಓ ಸ್ಮಶಾನವೇ…ನಿನಗೆ ನೀನೇ ಆದರ್ಶ…! ********
Read More
ನಾಯಿ ಬೇಕಾ ನಾಯಿ! ತಾರಾ ಸತ್ಯನಾರಾಯಣ ನಾಯಿ ಬೇಕಾ ನಾಯಿ! ನನ್ನ ನಾಲ್ಕು ವರ್ಷದ ಮಗಳು ಸೋನುಗೆ ನಾಯಿ ಕಂಡರೆ ತುಂಬಾ ಇಷ್ಟ.ಎಲ್ಲೇ ಹೋಗ್ತಾ ಇದ್ದರೂ……… ಬೀದಿ ನಲ್ಲಿ ಯಾವ ನಾಯಿ ನೋಡಿದರೂ……. .ನೋಡುತ್ತಾ ನಿಂತುಬಿಡುತ್ತಿದ್ದಳು.ಆ ಸ್ಥಳದಲ್ಲೇ ನಂಗೂ ನಾಯಿಮರಿಬೇಕು ತಂದುಕೊಡು ಅಂತ ಹಠ ಮಾಡುತ್ತಿದ್ದಳು. ಇವಳ ಜೊತೆ ನನ್ನ ಹೆಂಡತಿ ಬೇರೆ, “ನೋಡಿ ಮಗು ನಾಯಿಮರಿ ಬೇಕು ಅಂತ ಎಷ್ಟು ಹಠ ಮಾಡುತ್ತಾಳೆ ಅವಳ ಜೊತೆಗೆ ಒಂದು ನಾಯಿಮರಿ ಇದ್ದರೆ ಅವಳ ಪಾಡಿಗೆ ಅವಳು ಆಟ […]
Read More| Powered by WordPress | Theme by TheBootstrapThemes