ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇನ್ನೂ ಬರಲಿಲ್ಲ

Image result for photos of paintings black and white

ಕೃಷ್ಣಮೂರ್ತಿ ಕುಲಕರ್ಣಿ

ಇನ್ನು ಬರಲಿಲ್ಲ….
ಬರ್ತಿನಂತ ಹೇಳಿದ ಗೌಡ
ಇನ್ನೂ ಬರಲಿಲ್ಲ.!
ಬಸ್ಸಿನ ಗದ್ದಲ, ಟ್ರಾಫಿಕ್ ಕಿರಿಕಿರಿ
ಎನೊಂದು ತಿಳಿಲಿಲ್ಲ !!
ಮಿಶ್ರಾ ಫೇಡ, ಬಿಗ್ ಬ್ರೇಡ್
ತರ್ತಿನಿ ಅಂದಾವ!
ರಾತ್ರಿ ಊಟಕ ಪಂಜೂರ್ಲಿಗೆ
ಹೋಗೋಣಾಂತ ಮೇಜೇಜ್
ಹಾಕಿದವ!
ಬಟರ್ ನಾನ್ ಕಾಜೂ ಸ್ಪೇಶಲ್
ತಿನ್ನೋಣ ಅಂದಾವ!
ಮಸಾಲಿ ಪಾಪಡ್ ಗೋಬಿ,
ಗಡಬಡ ಐಗೆ ಕಾದೈತೆ ಜೀವ!
ಕುಡ್ತಾ ಜುಬ್ಬಾ ಕೊಡಸ್ತಿನಂತ
ಹೇಳಿ ಹೋದಾವ!!
ಶೋಚ್ ನ್ಯಾಗ ತರಬೇಕಂತ
ಬಯಸೇದ ಜೀವ!!
ಬರ್ತಾನಂತ ಕಾದು ಕಾದು
ಸುಸ್ತಾತ ಜೀವ!
ಎಲ್ಲಿದ್ದಾನಂತ ತಿಳಿಬೇಕಂದ್ರ
ನೆಟ್ ವರ್ಕ ಇಲ್ಲವ್ವ!!

ಇವತ್ತು ಬಾರದಿದ್ರೂ ನಾಳೆ ಬರ್ಲಿ
ಸುಖವಾಗಿರಲಿ ಜೀವ!
ತಿನಿಸು ಬಟ್ಟೆ ಮುಖ್ಯವಲ್ಲ
ಉಳಿಲೆವ್ವ ನನ್ನ ಗೌಡನ ಜೀವ!!

**********************

About The Author

Leave a Reply

You cannot copy content of this page

Scroll to Top