ಕಾವ್ಯಯಾನ
ನೆನೆವರಾರು ನಿನ್ನ ಮಧು ವಸ್ತ್ರದ್ ಮುಂಬಯಿ ಓ ಅಂಬಿಗಾ..ಬೇಗ ಬೇಗನೆ ಮುನ್ನೆಡೆಸು ದೋಣಿಯ.. ತೀರದಾಚೆಯ ಹಳ್ಳಿ ಹೊಲದಲಿ ಕಾಯುತಿಹನು ನನ್ನಿನಿಯ.. ಅಂಬಿಗಣ್ಣಾ ಶಾಲೆಯ ಸಮಯ ಆಯ್ತು ನಡೆ ಬೇಗ.. ಎಲವೋ ಅಂಬಿಗ ದಡದಾಚೆಯ ಜನರ ಓಟುಬೇಕು ನಡೆ ಈಗ.. ತಮ್ಮ ತಮ್ಮದೇ ಲೋಕದಲಿ ವಿಹರಿಸುತಿಹರು ಎಲ್ಲರು.. ಹೊಳೆಯ ದಾಟಿದ ನಂತರ ಬಡ ಅಂಬಿಗನ ನೆನೆವರಾರು.. ಬಿಸಿಲು ಮಳೆ ಗುಡುಗುಸಿಡಿಲು ಕತ್ತಲಾದರೆ ಸುತ್ತಲು.. ಈಜುಬಾರದವರಿಗೆಲ್ಲ ಆಧಾರ ನೀನೆ ಗುರಿ ಮುಟ್ಟಲು.. ಶಾಂತಚಿತ್ತದಿ ಹೊಣೆಯ ಹೊತ್ತಿದೆ ನಿನ್ನಯ ಬಾಗಿದ ಹೆಗಲು.. […]
ಕಾವ್ಯಯಾನ
ಪ್ರೀತಿ ಸಾಗರದಲಿ ಅವ್ಯಕ್ತ ಕಂಡೆನಾ ಸಿರಿಯ ಅಯ್ಸಿರಿಯ ಮಾಲೆ , ಮುದುಡಿದ ಮನದ ಅಂಗಳ ಅರಳುತಲಿ… ಹಚ್ಚಹಸಿರ ಹಾಸಿಗೆಯ ಮೇಲೆ , ಹೊಸದಾಗಿ ಹಾಸಿದ ಬಿಳಿ ಮೋಡಗಳ ಸಾಲೆ. ಅಲ್ಲೊಂದು ಇಲ್ಲೊಂದು ನಿಂತಿರುವ ತಲೆಗಳು, ಕಣ್ಣಾಮುಚ್ಚಾಲೆ ಆಡುತ್ತಾ ನಲಿವ ಕಿರಣಗಳು. ||೧|| ಕೈ ಚಾಚಿ ,ಆಲಂಗಿಸಿ ಕರೆಯುತಲಿ, ಹೇಳಿತೇನೋ ಪಿಸು ಮಾತುಗಳಲಿ, ಎಲ್ಲೆಲ್ಲೂ ನಾನಿರುವೆ ಹಂಚುತ ಸವಿಗಳ, ಪ್ರೀತಿ, ನೆಮ್ಮದಿ, ಸುಖಸಂತೋಷಗಳ. ||೨|| ನನ್ನಲ್ಲಿ ನೀನಿರಲು, ನಿನ್ನಲ್ಲಿ ನಾನಿರಲು ಮಿಡಿಯುವ ಕಂಗಳು, ಮನದಾಳದ ಮಾತುಗಳು, ಪೃಕ್ರತಿಯ ಪ್ರಕೃತಿ […]
ಅನುವಾದ ಸಂಗಾತಿ
ಚೇಳು ಕಡಿದ ರಾತ್ರಿ ಇಂಗ್ಲೀಷ್ ಮೂಲ:ನಿಸ್ಸಿಮ್ ಏಜೇಕಿಲ್ ಕನ್ನಡಕ್ಕೆ: ಕಮಲಾಕರ ಕಡವೆ ನೆನಪಾಗುತ್ತದೆ ನನಗೆ ಒಂದು ಚೇಳುನನ್ನ ಅಮ್ಮನ ಕಡಿದ ರಾತ್ರಿ. ಹತ್ತು ತಾಸುಗಳಕಾಲ ಜಡಿದ ಸುರಿಮಳೆ ಆ ಚೇಳನ್ನುಅಕ್ಕಿ ಮೂಟೆಯಡಿ ಓಡಿಸಿತ್ತು.ವಿಷ ಕಾರಿ ಅದು – ಅಂಧಕಾರ ತುಂಬಿದಕೋಣೆಯಲ್ಲಿ ಫಕ್ಕನೆ ಕುಣಿದ ಕುಟಿಲ ಬಾಲ –ಮತ್ತೆ ಮಳೆಯಲ್ಲಿ ಮರೆಯಾಯಿತು. ನೊಣಗಳ ಹಿಂಡಿನಂತೆ ಬಂದರು ರೈತರುಮಣಮಣಿಸುತ್ತ ನೂರು ಸಲ ದೇವರ ನಾಮಕೇಡು ಕಳೆಯಲಿ ಎಂದು ಕೇಳಿಕೊಳ್ಳುತ್ತ. ಮೊಂಬತ್ತಿ, ಲಾಟೀನುಗಳ ಹಿಡಿದುಮಣ್ಣ ಗೋಡೆಗಳ ಮೇಲೆದೈತ್ಯ ಜೇಡನಂತ ನೆರಳುಗಳ ಮೂಡಿಸುತ್ತಅವರು […]
ನಿನ್ನ ಮೌನಕೆ ಮಾತ…
ನಿನ್ನ ಮೌನಕೆ ಮಾತ….…… ಜಯಕವಿ ಡಾ.ಜಯಪ್ಪ ಹೊನ್ನಾಳಿ ನಿನ್ನ ಮೌನಕೆ ಮಾತ ತೊಡಿಸಬಲ್ಲೆನು ನಾನು ನೀ ಹೇಳದಿರೆ ಮುಗುಳು ತುಟಿಯ ತೆರೆದು..! ಹೂಗನಸುಗಳ ಬರೆದು ನಿನ್ನ ಕಣ್ಣಲೆ ಒರೆದು ಚೈತ್ರ ಚಿಗಿದಿದೆ ತಾನು; ಚಿಗರೆ ನೆರೆದು..! ಕಡಿದ ಬುಡದಲೆ ನೆನಪು ಹೊಂಬಾಳೆಯಾಗುತಿವೆ ಕತ್ತರಿಸಿದೆಡೆಯೆ; ತತ್ತರಿಸುತೆದ್ದು..! ವಿಧಿಯು ಮರೆತಿದೆ ಜಿದ್ದು ನೋವು ಸೇರಿದೆ ಗುದ್ದು ಆನಂದ ಬಾಷ್ಪಕಿದೆ ಬೆರಗ ಮುದ್ದು..! ಹೊಸ ಹಾದಿ ಹಾರೈಸಿ ಹೊಸ ಬೆಳಕು ಕೋರೈಸಿ ಹೊಸ ಜೀವ ಭಾವದಲಿ ಯುಗಳ ವಾಣಿ..! ಬೀಸಿದೆಲರಲೆ ಯಾನ […]
ಜಾತಿ ಬೇಡ
ನಿರ್ಮಲಾ ಆರ್. ಜಾತಿ ಬೇಡ” ಮಡಿ ಮಡಿ ಅಂತ ಮೂರು ಮಾರು ಸರಿಯುವಿರಲ್ಲ ಮೈಲಿಗೆಯಲ್ಲೆ ಬಂತು ಈ ಜೀವ ಎನ್ನುವುದ ಮರೆತಿರಲ್ಲ ಜಾತಿ ಬೇಡ,ಜಾತಿ ಬೇಡ ಎಂದು ಬೊಬ್ಬೆ ಹೊಡೆಯುವಿರಲ್ಲ ಜಾತಿ ಬೇಡ ಎಂದ ಮಹಾತ್ಮರನ್ನೆ ಜಾತಿಗೆ ಸೇರಿಸಿ ಮೆರೆಸುತಿರುವಿರಲ್ಲ ಪವಿತ್ರವಾದ ಜ್ಞಾನ ದೇಗುಲಗಳಲ್ಲಿ ಜಾತಿ ರಾಜಕೀಯ ಮೀಲಾಯಿಸುವಿರಲ್ಲ ಜಾತಿ ಕಾರ್ಯಗಳಿಗೆ ಮುಗ್ದ ಮನಸುಗಳ ಬಳಸಿ ಜಾತಿಯ ವಿಷಬೀಜ ಬಿತ್ತುತಿರುವಿರಲ್ಲ. ಜಾತಿ ಬೇಡ ಜಾತಿ ಬೇಡ ಎಂದು ಜಾತಿ ಗಣನೆ ಮಾಡಿಸಿ ಧರ್ಮದ ಹೆಸರಲಿ ವೋಟ್ ಬ್ಯಾಂಕಿನ […]
ಅಲೆಮಾರಿ ಬದುಕು
ಇಲ್ಲಗಳ ನಡುವಿನ ಅಲೆಮಾರಿ ಬದುಕು ಕೆ.ಶಿವು ಲಕ್ಕಣ್ಣವರ ಸ್ವಾತಂತ್ರ ಭಾರತದಲ್ಲಿ ಇಲ್ಲಗಳ ನಡುವೆಯೇ ಅಲೆಮಾರಿ ಬದುಕು ಬದುಕುತ್ತಿರುವ ಬಸವಳಿದ ಜನ..! ವಾಸಿಸಲು ಮನೆ ಇಲ್ಲ, ವಿದ್ಯುತ್ ಇಲ್ಲ, ಕುಡಿಯಲು ನೀರಿಲ್ಲ, ಓಡಾಡಲು ರಸ್ತೆ ಇಲ್ಲ, ಇತರೆ ಸರ್ಕಾರದ ಸೌಲಭ್ಯಗಳು ಇಲ್ಲವೇ ಇಲ್ಲ. ಹೀಗೆ ಇಲ್ಲಗಳ ನಡುವೆಯೇ ಅಲೆಮಾರಿ ಕುಟುಂಬಗಳು ಬದುಕು ಸಾಗಿಸುತ್ತಿವೆ… ಊರಿನ ಹೊರ ವಲಯದಲ್ಲಿ ಬದುಕು ಸಾಗಿಸುವ ನೂರಾರು ಅಲೆಮಾರಿ ಕುಟುಂಬಗಳು ಸೇರಿದಂತೆ ಇತರೆ ಕುಟುಂಬಗಳು ವಾಸಿಸುತ್ತವೆ. ಊರೂರು ಅಲೆಯುವ ಈ ಕುಟುಂಬಗಳು ಅಲೆಮಾರಿ ಜೀವನ […]
ಕನ್ನಡಿಗೊಂದು ಕನ್ನಡಿ
ಡಾ.ಗೋವಿಂದ ಹೆಗಡೆ ಕನ್ನಡಿಗೊಂದು ಕನ್ನಡಿ ಕನ್ನಡಿಯೆದುರು ನಿಂತೆ ಬುದ್ದಿ ಕಲಿಸಲೆಂದೇ ಬಿಂಬಕ್ಕೆ- ಹೊಡೆದೆ ಈಗ ಕೆನ್ನೆಯೂದಿದೆ ! •• ಕೋಪದಲ್ಲಿ ಹೋಗಿ ನಿಂತೆ ಕನ್ನಡಿಯೆದುರು ಉರಿದೆ, ಕೂಗಾಡಿದೆ. ಸರಿ- ಬಿಂಬಕ್ಕೆ ಕೋಪ ಬಂದರೆ ಏನು ಮಾಡುತ್ತದೆ ಹೇಗೆ ಇದಿರು ನಿಲ್ಲುತ್ತದೆ ?! **********
ಸಮಾಜಾರ್ಥಿಕ ಘಟಕಗಳು
ಪ್ರಗತಿಗಾಗಿ ಸ್ವಯಂ ಸ್ವಾವಲಂಬಿ ಸಮಾಜಾರ್ಥಿಕ ಘಟಕಗಳು ಗಣೇಶಭಟ್ ಶಿರಸಿ ಭಾರತದ ಆರ್ಥಿಕ ಸ್ಥಿತಿ ಆತಂಕಕಾರಿಯಾಗಿದೆಯೆಂಬುದನ್ನು ಸರ್ಕಾರ ಮತ್ತು ಅದರ ಹಿಂಬಾಲಕರು ಒಪ್ಪಲು ಸಿದ್ಧರಿಲ್ಲ.ಆದರೆ, ಕುಸಿಯುತ್ತಿರುವ ಉದ್ಯೋಗಾವಕಾಶಗಳು, ಕ್ಷೀಣಿಸುತ್ತಿರುವ ಖರೀದಿ ಶಕ್ತಿ, ಜನರನ್ನುಕಾಡುತ್ತಿರುವ ಅಭದ್ರತಾಭಾವ,ಏರುತ್ತಿರುವ ಬೆಲೆಗಳು, ಎಗ್ಗಿಲ್ಲದೇ ನಡೆಯುತ್ತಿರುವ ಬ್ಯಾಂಕ್ ವಂಚನೆಗಳು, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗಳಿಂದ ದೇಶ ಬಾಧಿತವಾಗಿರುವುದನ್ನು ದೇಶ, ವಿದೇಶಗಳ ಸಾಮಾಜಿಕ-ಆರ್ಥಿಕ ತಜ್ಞರು ಗಮನಿಸುತ್ತಿದ್ದಾರೆ.ರಾಜಕಾರಣಿಗಳ ಪೊಳ್ಳು ಭರವಸೆಗಳನ್ನೇ ನಂಬಿರುವ ದೇಶದ ನಾಗರಿಕರು ಸಮಸ್ಯೆಗಳ ಪರಿಹಾರದ ನಿರೀಕ್ಷೆಯಲ್ಲಿ ದಿನದೂಡುತ್ತಿದ್ದಾರೆ. ಇಂದಿನ ಸಮಸ್ಯೆಗಳಿಗೆ ರಾಜಕೀಯ ಪಕ್ಷಗಳ ಬಳಿ ಯಾವುದೇ ಪರಿಹಾರವಿಲ್ಲ. […]
ಕಾವ್ಯಯಾನ
ಇನ್ನೇನು ಬೇಕಿದೆ. ಪ್ರಮಿಳಾ ಎಸ್.ಪಿ. ಇನ್ನೇನು ಬೇಕಿದೆ. ಒಡೆದ ಹಿಮ್ಮಡಿಯೂರಿ ನಿಂತು ಎನ್ನ ಹೆಗಲಮೇಲಿರಿಸಿ ತಾನು ಕಾಣದ ಪರಪಂಚವ ನನಗೆ ತೋರಿಸಿದವ ನನ್ನಪ್ಪ. ಕುದಿಯುವ ಸಾರಿನೊಂದಿಗೆ ಕುಳಿತ ಹೆಂಡತಿಯನು ತಣ್ಣೀರಿನೊಂದಿಗಾಡುವ ಮಕ್ಕಳನು ಮುದ್ದಾಡಿ ಬೆಳೆಸಿದ್ದ ನನ್ನಪ್ಪ. ಮಕ್ಕಳನು ಓದಿಸಲೇಬೇಕೆಂದು ಹಠಹಿಡಿದವಳು ….ನಾವು ಓದಿಕೊಂಡದ್ದು ಏನೆಂದು ತಿಳಿಯದವಳು ನನ್ನವ್ವ. ಕವಿತೆ ಬರೆಯಲು ಬಾರದವಳು ಮಕ್ಕಳ ಬದುಕನ್ನೇ ಸುಂದರ ಕವಿತೆಯಾಗಿಸಲು ಭಾವವಾದವಳು ನನ್ನವ್ವ. ಹೀಗೆಲ್ಲಾ ಹೊಗಳಿ ಬರೆದ ನನ್ನ ಪ್ರಾಸವಿರದ ಕವಿತೆಗಳು ಬೇಕಿಲ್ಲಾ ಈಗ ಅವರಿಗೆ…! ಪಿಂಚಣಿ ಬಂದಿತೆ ಮಧುಮೇಹ […]
ನನಗೆ ಹೀಗನಿಸುತ್ತದೆ
ಕವಿತೆ ನನಗಿಷ್ಟ ಚಂದ್ರಪ್ರಭ ನನಗೆ ಹೀಗನಿಸುತ್ತದೆ…. ಕವಿತೆ ಬಗೆಗಿನ ಎಲ್ಲ ಆರಾಧನಾ ಭಾವಗಳಾಚೆ ಕವಿತೆ ಪುಸ್ತಕಗಳು ಅವಗಣನೆಗೆ ಒಳಗಾಗುವ ಸತ್ಯ ಬಹುಶಃ ಒಂದು ಕಾಲದ್ದಾಗಿಲ್ಲದಿರಬಹುದು. ಕವಿತೆ ಮೂಲತಃ ಒಂದು ಸಶಕ್ತ ಅಭಿವ್ಯಕ್ತಿ ಮಾಧ್ಯಮ. ಅದರ ಹರಿವಿನಗುಂಟ ಸಾಗುವಾಗ ಕೇಳಿಸುವ ಮೊರೆತವೂ ವಿಭಿನ್ನ. ಕವಿತೆ ನನಗೇಕೆ ಇಷ್ಟ ಎಂದೆನ್ನಿಸಿದ ಕ್ಷಣ ನನಗೆ ಹೀಗೆಲ್ಲ ತೋರಿತು… ಬಿಡುಗಡೆ ಗಾಗಿನ ಮನುಷ್ಯನ ಪ್ರಯತ್ನ ನಿರಂತರದ್ದು. ಒಂದಿಲ್ಲೊಂದು ಸಂಗತಿಯಿಂದ ಬಿಡುಗಡೆ ಹೊಂದುತ್ತ ಆಯುಷ್ಯವೇ ಕಳೆದು ಹೋಗುವುದು. ಯಾವುದರಿಂದ ಬಿಡುಗಡೆ, ಯಾರಿಂದ ಬಿಡುಗಡೆ, ಉಳಿದದ್ದು […]