ಕಬ್ಬಿಗರ ಅಬ್ಬಿ -9
ಕಬ್ಬಿಗರ ಅಬ್ಬಿ -8 ಬಂಧ ಮತ್ತು ಸ್ವಾತಂತ್ರ್ಯದ ನಡುವೆ ಹದ ಹುಡುಕುತ್ತಾ. ಶ್ರೀ ಹರಿ ಕೋಟಾದ ರಾಕೆಟ್ ಉಡ್ಡಯನ ಕೇಂದ್ರವದು. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಗಣಕಯಂತ್ರದ ಪರದೆಯೇ ಕಣ್ಣಾಗಿ ಕುಳಿತಿದ್ದಾರೆ. ಮಹಿಳಾ ವಿಜ್ಞಾನಿಯ ಇಂಪಾದ ಮತ್ತು ಅಷ್ಟೇ ಸಾಂದ್ರವಾದ ದನಿಯಿಂದ ನಿಧಾನವಾಗಿ ಮತ್ತು ಖಚಿತವಾಗಿ…ಹತ್ತು..ಒಂಭತ್ತು…ಎಂಟು.. ಹೌದು. ಅದು ಕೌಂಟ್ ಡೌನ್! ಉಪಗ್ರಹದ ಭಾರ ಹೊತ್ತ ರಾಕೆಟ್ ಸಾಕಮ್ಮನ ಮಡಿಲಿಂದ ಎದೆಯುಬ್ಬಿಸಿ ಹಾರಬೇಕು.ಒಂದು….ಸೊನ್ನೆ!!.ಅದೋ ಅದೋ..ಅಧೋಮುಖದಿಂದ ಬೆಂಕಿ ಹೊಗೆ ಚಿಮ್ಮಿತು, ರಾಕೆಟ್ಟು ಜಿಗಿಯಿತು ಅನಂತಕ್ಕೆ. ವ್ಯೋಮಗಮನಕ್ಕೆ ಮೊದಲ ಜಿಗಿತ.ಸಾಕೇ?. […]
ರೇಖಾಭಟ್ ಕಾವ್ಯಗುಚ್ಛ
ರೇಖಾಭಟ್ ಕಾವ್ಯಗುಚ್ಛ ಮರುಹುಟ್ಟು ಇಳಿಯಬೇಕು ನೆನಪಿನಾಳಕೆಮುದಗೊಳ್ಳಬೇಕುಎದುರಿಗೆ ಹಾಸಿ ಹರವಿಕೊಂಡುಚೆನ್ನ ನೆನಪುಗಳಆಯಸ್ಸು ಹೆಚ್ಚಿಸಬೇಕುಮೆತ್ತಗಾದ ಹಪ್ಪಳ ಸಂಡಿಗೆಗಳುಬಿಸಿಲಿಗೆ ಮೈಯೊಡ್ಡಿಗರಿಗರಿಯಾಗಿ ಡಬ್ಬಿ ಸೇರುವಂತೆನೆನಪುಗಳು ಸದಾ ಬೆಚ್ಚಗಿರಬೇಕು ಒತ್ತಿ ತಡೆ ಹಿಡಿದ ನೋವಿಗೂಆಗಾಗ ಬಿಕ್ಕಲುರಂಗ ಸಜ್ಜಿಕೆ ಬೇಕುತುಂಬಿಕೊಂಡ ಮಂಜು ನಂಜುಪೂರ್ತಿ ಹೊರಹೋಗಬೇಕು ಬಾಚಿ ಕರೆಯಬೇಕುನೆನಪೆಂಬ ನೆಂಟನನ್ನುನಿನ್ನೆಯ ನಂಟಿನ ಗಂಟುಗಳಬಿಡಿಸುತ್ತ ಹರಟಬೇಕುಅಂಟಿಯೂ ಅಂಟದಿರುವನೆನಪಿಗೆ ಮೀಸಲಾದಸಾಕ್ಷ್ಯಗಳಹೊರಗೆಳೆದು ಹೊದೆಯಬೇಕು ಇರಬೇಕು ನಿನ್ನೆಗಳಿಗೂನೆನಪುಗಳೆಂಬ ಮರುಹುಟ್ಟುಆಗಾಗ ಹಾಯುತಿರಲಿಇಲ್ಲಸಲ್ಲದ ನೆಪವಿಟ್ಟು.. ಅರ್ಥವಾಗದಿದ್ದರೆ ಹೇಳಿ ಅವನು ನನ್ನ ಕಂಗಳಲ್ಲಿಹೊಳೆಯುತ್ತಾನೆಹೊಳೆಯೂ ಆಗುತ್ತಾನೆಇಷ್ಟು ಸಾಕಲ್ಲವೇ ನಿಮಗೆಅವನು ನನಗೇನೆಂದು ತಿಳಿಯಲು ಅವನ ನಗುವ ಕಂಡು ನಾನುಪೂರ್ತಿ ಖಾಲಿಯಾಗುತ್ತೇನೆಆ […]
ಅನುವಾದ ಸಂಗಾತಿ
ಅವ್ವ ಕನ್ನಡ ಮೂಲ: ಎ.ಜಿ.ರತ್ನಾ ಕಾಳೇಗೌಡ ಇಂಗ್ಲೀಷಿಗೆ: ರತ್ನಾ ನಾಗರಾಜ್ ಏನೆಲ್ಲ ಅಡಗಿದೆಅವ್ವ ನಿನ್ನೆದೆಯೊಳಗೆನಿನ್ನ ತೊಡೆಯ ಮೇಲೆ ತಲೆಯಿಟ್ಟು ಮಲಗಿ ರಾಗಿತಲೆಯೊಳಗೆ ಬೆರಳುಗಳಿಂದತಡಕಿ ತಡಕ ಹೇನು ಹೆಕ್ಕಿಸಾಹಿಸುತ್ತಿದ್ದೆಆಗ ಅದೇನೋ ಅಕ್ಷರ ವಲ್ಲದಸ್ವರ ನಿನ್ನ ಬಾಯಿಂದಎಷ್ಟೋ ಸಾರಿ ಅರ್ಥಕ್ಕಾಗಿಹುಡುಕಿ ಸೋತಿದ್ದೇನೆಸಿಗಲಿಲ್ಲ ನೀನು ಹೇಳುತ್ತಿದ್ದಸಂಗತಿಗಳೆಲ್ಲನೆನಪಿನಲ್ಲಿದ್ದಿದ್ದರೆಒಂದೊಂದು ಮಹಾಗ್ರಂಥವಾಗುತ್ತಿದ್ದವು ಇಂದು ವಾರಗಿತ್ತಿಯರ ಕಾಟಗಂಡನ ಕಾಟ ಸಾಲದು ಎಂದು ಅತ್ತೆ ಮಾವನ ಕಾಟಎಲ್ಲವನ್ನು ಹೇಗೆ ಸಹಿಸಿಕೊಂಡೆ ಅವ್ವನಿನ್ನ ಒಂದೊಂದು ಕಣ್ಣೀರಕಥೆಯನ್ನು ಹೇಳುವಾಗನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ ಸಾರಿಗೆ ಉಪ್ಪು ಜಾಸ್ತಿ ಆಗಿದೆಯಾಕೆಂದುಕೊಳ್ಳಿಯಿಂದಲೇಮುಂಗೈಗೆ ಬೇರೆ ಹಾಕಿದ್ದಳುಅತ್ತೆಸುಟ್ಟ […]
ಕೆಲವರು ಹಾಗೆ
ಕವಿತೆ ರೇಷ್ಮಾ ಕಂದಕೂರ. ಕೆಲವರು ಹಾಗೆಕೆಲಸ ಸಾಧಿಸುವ ತನಕ ಒಡನಾಡಿಗಳುನಂತರ ಸರಿದುಹೋಗುವ ನರನಾಡಿಗಳು ಕೆಲವರು ಹಾಗೆಗೆಲ್ಲುವ ಕುದುರೆಯಿಂದ ಓಡುತಸಲಾಮು ಮಾಡಿ ಬೇಳೆ ಬೇಯಿಸಿಕೊಳ್ಳುವರು ಕೆಲವರು ಹಾಗೆಮೋಹದ ಬಲೆಯ ಬೀಸಿಕಬಳಿಕೆಯ ನಂತರ ತಿರುಗಿನೋಡದವರು ಕೆಲವರು ಹಾಗೆಮುಂದೊಂದು ನಡೆಯಲಿಹಿಂದೆ ಧೂರ್ತರಾಗಿ ಗುದ್ದುಕೊಡುವರು ಕೆಲವರು ಹಾಗೆನಿಷ್ಟಾವಂತರಂತೆ ನಟಿಸಿಒಳಗೊಳಗೆ ಕೊರೆಯುವ ಕೀಟದಂತವರು ಕೆಲವರು ಹಾಗೆಸತ್ಯ ಗೊತ್ತಿದ್ದರುಸುಳ್ಳಿನ ಬಿಡಾರ ಹೂಡುವರು ಕೆಲವರು ಹಾಗೆನೇಮ ನಿತ್ಯ ಮಾಡುತಕಳ್ಳನೋಟ ಬೀರುವರು ಕೆಲವರು ಹಾಗೆಜೊತೆಗಾರರಂತೆ ಮುಖವಾಡದಿಗುಪ್ತಚರರಂತೆ ಸಂಚನು ಹೂಡುವರು ಕೆಲವರು ಹಾಗೆಗೊತ್ತಿದ್ದರು ಅವರು ನಮ್ಮವರುಎಂಬ ಭ್ರಮೆಯಲಿ ಸಹಿಸಿಕೊಳ್ಳುವರು. *****
ನಮ್ಮ ಮಕ್ಕಳು ಮಕ್ಕಳಲ್ಲ
ಸರಿತಾ ಮಧು ಮಕ್ಕಳಿಗಾಗಿ ಹಂಬಲ ಎಲ್ಲರದು. ಅಂದಿನಿಂದ ಇಂದಿನವರೆಗೂ ಮಕ್ಕಳು ಮನೆಯ ನಂದಾದೀಪ. ಮಕ್ಕಳಿರಲವ್ವ ಮನೆತುಂಬ ಎನ್ನುವ ಕಾಲ ಸರಿದು ಆರತಿಗೊಬ್ಬಳು ಕೀರ್ತಿ ಗೊಬ್ಬ , ತದನಂತರ ನಾವಿಬ್ಬರು ನಮಗೊಂದು ಮಗು ಅನ್ನುವ ಕಾಲಘಟ್ಟದಲ್ಲಿದ್ದೇವೆ. ಇದೆಲ್ಲವೂ ಸರಿಯಷ್ಟೇ ಆಧುನಿಕತೆಯ ಬೆನ್ನನೇರಿದ ಈಗಿನವರು ಮಗುವಿನ್ನೂ ಗರ್ಭದಲ್ಲಿರುವಾಗಲೇ ವಿದ್ಯಾಭ್ಯಾಸದ ವಿಚಾರಕ್ಕೆ ತಲೆಬಿಸಿ ಮಾಡಿಕೊಳ್ಳುತ್ತಾರೆ.ಮೊದಲೆಲ್ಲಾ ಹೀಗಿರುತ್ತಿತ್ತೇ? ಅವಿಭಕ್ತ ಕುಟುಂಬಗಳಲ್ಲಿ ಅನೌಪಚಾರಿಕವಾಗಿ ಪ್ರಾಥಮಿಕ ಶಿಕ್ಷಣ ಆರಂಭವಾಗುತ್ತಿತ್ತು.ಐದುವರ್ಷಗಳು ಪೂರ್ಣ ತುಂಬುವವರೆಗೂ ಬಾಲ್ಯಾವಸ್ಥೆಯ ಎಲ್ಲಾ ಸುಖಗಳನ್ನು ಸಂಪೂರ್ಣ ಬಾಚಿಕೊಳ್ಳುತ್ತಿದ್ದೆವು. ಮನೆಯ ಅಜ್ಜ ಅಜ್ಜಿ, ದೊಡ್ಡಪ್ಪ ದೊಡ್ಡಮ್ಮ, […]
ವಸುಂಧರಾ ಕಾವ್ಯಗುಚ್ಛ
ವಸುಂಧರಾ ಕದಲೂರು ಕಾವ್ಯಗುಚ್ಛ ಮುಖ್ಯ- ಅಮುಖ್ಯ ಮೇಲುಕೀಳಾಟದ ಯಾವತ್ತೂಯುದ್ಧ ಬೇಕಿಲ್ಲ. ಈ ಹೊತ್ತಿನ ತುತ್ತು;ಎಂದಿಗೆ ಒಲೆ ಹೊತ್ತಿ ಅನ್ನವೋಗಂಜಿಯೋ ಬೆಂದರಾಗುತ್ತಿತ್ತು, ಈಸತ್ಯದ ಬಾಬತ್ತೇ ನಮಗೆ ಮುಖ್ಯ. ಚದುರಂಗದಾಟ ಎಂದೆಣಿಸಿ, ದಾಳಉದುರಿಸಿ, ಗಾಳ ಹಾಕಿ -ದಾಳಿಮಾಡಿ, ಕೋಟೆಗೋಡೆಗಳನು ಕಟ್ಟುತ್ತಾಕೆಡವುತ್ತಾ, ಸಿಂಹಾಸನಾರೋಹಣ,ಪದಾಘಾತ- ಅಧಃಪತನ ಯಾರಿಗಾದರೇನು?ನಮಗೆ ಅಮುಖ್ಯ. ಯುದ್ಧವೆಂದರೆ ಕಂದನ ತೊಟ್ಟಿಲಮೇಲೆ ತೂಗುಬಿದ್ದ ಘಟಸರ್ಪ; ಕಕ್ಕಿದರೂಕುಕ್ಕಿದರೂ ಆಪತ್ತೇ. ಬದುಕು ಕಸಿದಂತೆ,ಆಸೆ ಕುಸಿದಂತೆ ಮಾಡುವೀ ಅಜೀವನ್ಮುಖಿಯುದ್ಧ ನಮಗೆ ಅಮುಖ್ಯ. ಹೂವಿನೊಡಲ ಮಕರಂದಕೆ ಎರವಾಗುವದುಂಬಿಯಾಡುವ ಯುದ್ಧ; ಮಳೆಮೋಡದತಡೆಗೆ ಬೆಟ್ಟ ಸಾಲು ಹೂಡುವ ಹುಸಿ ಯುದ್ಧ,ಹಸಿದ […]
ನಾಗರೇಖಾ ಕಾವ್ಯಗುಚ್ಚ
ನಾಗರೇಖಾ ಗಾಂವಕರ್ ಕಾವ್ಯಗುಚ್ಚ ಅಸ್ವಸ್ಥ ಮಂಚದ ಮೇಲೆ ಬೆಳದಿಂಗಳ ರಾತ್ರಿಯಲ್ಲಿಕೊಳ್ಳಿ ದೆವ್ವವೊಂದುಮನೆಯ ಮೂಲೆಯೊಳಗೆ ನುಸುಳಿಬಂದಂತೆತಬ್ಬಿದ ಜಾಡ್ಯ.ಆಸ್ಪತ್ರೆಯ ಮಂಚದ ಮೇಲೆಸೂರು ನೋಡುತ್ತಾ ಬೆದರಿ ಮಲಗಿದಾಗ,ಮೊಣಕೈಗೆ ದಪ್ಪ ಬೆಲ್ಟೊಂದನ್ನುಸುತ್ತಿ, ನರ ಹುಡುಕಲು ಬೆರಳಿಂದಮೊಟಕುವ ದಪ್ಪ ಕನ್ನಡಕದ ನರ್ಸಮ್ಮತತ್ತರಿಸಿ ಬಿದ್ದ ರಕ್ತನಾಳಗಳು ಜಪ್ಪಯ್ಯ ಎನ್ನದೇಅಂಟಿಕೊಂಡು ಸೀರಿಂಜಿಗೂರಕ್ತ ನೀಡಲು ಒಲ್ಲೆ,ಎನ್ನುವಾಗಲೇಕಂಬನಿಯ ತುಟಿಯಲ್ಲಿನುಡಿಯುವ ಕಣ್ಣುಗಳುಒಸರಿದ ರಕ್ತದ ಅಂಟಿದ ಕಲೆಗಳು ಆಯಾಸದ ಬೆನ್ನೇರಿ ಬಂದಗಕ್ಕನೇ ಕಕ್ಕಬೇಕೆನ್ನುವ ಇರಾದೆತರಗುಡುತ್ತಿದ್ದ ದೇಹವನ್ನುಸಂಭಾಳಿಸಲಾಗದೇ ಇರುವಾಗಲೇಮುಲುಗುಡುವ ದೇಹಗಳು ಖಾನೆ ಖಾನೆಗಳಲ್ಲಿಬೇನೆ ತಿನ್ನುವ ವೇದನೆಯ ನರಳಾಟನೋವು ತಿಳಿಯದಂತೆ ಬರಲಿನಿರಾಳ ಸಾವು. ಸಾವೆಂದರೆ ಸಂಭ್ರಮದ […]
ಡಾ.ಪ್ರೇಮಲತ ಬಿ. ಕಾವ್ಯ ಗುಚ್ಚ
ಡಾ.ಪ್ರೇಮಲತ ಬಿ. ಕಾವ್ಯ ಗುಚ್ಚ ನೆನಪುಗಳೇ…… ಬೆಳ್ಳಂಬೆಳಗು ನಸುನಕ್ಕುಮತ್ತೆ ಬಂದಿಹೆನೆಂಬ ಹೊತ್ತಲ್ಲಿಹೊಸ್ತಿಲಲಿ ನಿಂತು ಕಣ್ಣಾಲೆ ತುಂಬಿವರ್ತಮಾನವ ಕದಡದಿರಿಅಂಗಳದ ತುಂಬೆಲ್ಲ ಹಕ್ಕಿಗಳ ಚಿಲಿಪಿಲಿನೋವು ನಲಿವುಗಳ ಚಿತ್ತಾರದ ರಂಗೋಲಿಹಾಲುಕ್ಕಿ ಹರಿದ ಬದುಕಿನಲಿಒಂದೊಂದೇ ಪಾರಿಜಾತಗಳು ಜಾರಿ ಉದುರಿಭೂತದ ನೆರಳುಗಳಿಗೆ ಇಂದುಹೊಸರೆಕ್ಕೆ ಕಟ್ಟಿಅಗಲಿಕೆಯ ನೋವು, ವಿರಹದ ಕಾವುತುಂಬಿಹ ಬೆಂಗಾಡಿನಮಾಯೆ ಮರುಳಿಗೆ ಹೊತ್ತೊಯ್ಯದಿರಿಬರಗಾಲದ ಬಿರು ಬಿಸಿಲಿಗೆನಿಡುಸುಯ್ದ ಈ ಇಹಕ್ಕೆಮರಳಿ ಅರಳುವ ಬಯಕೆನೀರು ಹುಯ್ಯುವವರಿಲ್ಲಒಂಟಿ ಮರಕ್ಕೆಸಂಜೆ ಗಾಳಿಯ ಹಿತಆಳಕ್ಕೆ ಇರಿದ ಕೆಂಪಿನಲಿಮನಸ್ಸರಳಿ ಹಿತವಾಗಿ ನರಳುತ್ತದೆಅವನೆದೆ ಕಾವಿನಲಿ ಕರಗುತ್ತದೆಸೆಟೆದ ನರನಾಡಿಗಳು ಅದುರಿಹಗುರಾಗಿ ಬಿಡುತ್ತವೆಕೂಡಿ ಕಳೆದುಹೋಗುವ ತವಕದಲಿಕಣ್ಣೆವೆ ಭಾರವಾಗುವ […]
ಅರ್ಪಣಾ ಮೂರ್ತಿ ಕಾವ್ಯಗುಚ್ಛ
ಅರ್ಪಣಾ ಮೂರ್ತಿ ಕಾವ್ಯಗುಚ್ಛ ಕವಿತೆ-ಒಂದು ಸದ್ದುಗದ್ದಲದಬೀದಿಯ ಬದಿಯಬೇಲಿಯ ಹೂಅರಳುವ ಸದ್ದಿಗೆಕಿವಿಯಾಗುವಉತ್ಸುಕತೆ,ಹೂ ಬಾಡಿದಷ್ಟೂಚಿಗುರುತಿದೆ, ಹರಿವನದಿಗಳೆಲ್ಲದರ ಗಮ್ಯಸಾಗರವೇ ಆಗಬೇಕಿಲ್ಲ,ಸಮುದ್ರ ಸೇರುವಮೊದಲೇಭುವಿಯೊಳಗೆ ಇಂಗಿದಅದೆಷ್ಟೋ ನದಿಗಳಆರ್ದ್ರತೆಯ ಗುರುತುಗಳುಕಾಲ್ಮೆತ್ತಿವೆ, ಮೈಸುತ್ತಿದ ನೂಲುತೆರಣಿಯ ಹುಳವನುಂಗಲೇಬೇಕಿಲ್ಲ,ರೇಷಿಮೆಯರೆಕ್ಕೆಯಂಟಿಸಿಕೊಂಡಚಿಟ್ಟೆಹೂವಿನ ತೆಕ್ಕೆಯಲಿನಾಚಿದ ಬಣ್ಣಹೂದಳದ ಮೈಗಂಟಿದೆ, ಕತ್ತಲಿಗಂಟಿದಕನಸುಗಳೆಲ್ಲಕಣ್ಣೊಳಗುಳಿಯುವುದಿಲ್ಲ,ಕನಸು ನುಂಗಿದಅದೆಷ್ಟೋ ಹಗಲುಗಳುನನಸಿಗೆ ಮುಖ ಮಾಡಿನಿಂತಿವೆ…. ಕವಿತೆ-ಎರಡು ನದಿ ತುಂಬಿ ಹರಿದರೆಬಯಲಿಗೆ ನೆಲೆಯೆಲ್ಲಿ,ಬತ್ತಬೇಕುಬರಿದಾಗಬೇಕುಬಯಲಾಗಬೇಕು,ಬರದ ಬದುಕಿನ ಒಳಗೂಇಳಿಯಬೇಕು, ಧರೆ ಕಾದು ಕರಗದೆಮಳೆಯ ಸೊಗಸೆಲ್ಲಿ,ಕಾಯಬೇಕುಕಾದು ಕರಗಬೇಕು,ಮುಗಿಲೇರಿ ಹನಿಕಟ್ಟಿಹನಿಯಬೇಕುಇಳೆ ತಣಿಯಬೇಕು, ಇರುಳು ಕವಿಯದೆಹುಣ್ಣಿಮೆಗೆ ಹೊಳಪೆಲ್ಲಿ,ಕಪ್ಪು ಕತ್ತಲ ನೆಪವುಕಣ್ಣ ಕಟ್ಟಬೇಕು,ರೆಪ್ಪೆ ಮುಟ್ಟಬೇಕುಕನಸು ಹುಟ್ಟಬೇಕು… ಕವಿತೆ-ಮೂರು ಉಸಿರುಗಟ್ಟಿದಮರುಭೂಮಿಯಲಿಬಿರುಗಾಳಿಯಹುಡುಕುವಬರಡುಮರಳ ಹಾಸುಚಿಲುಮೆ ನೀರನುಗುಟುಕಿಸಿಉಸಿರ ಹಿಡಿದುತಂಪು ಗಾಳಿಯಕಾಯುವುದೂಒಲವೇ, […]
ಲಕ್ಷ್ಮಿ ಪಾಟೀಲ್ ಕಾವ್ಯಗುಚ್ಛ
ಲಕ್ಷ್ಮಿ ಪಾಟೀಲ್ ಕಾವ್ಯಗುಚ್ಛ ಹನಿ ಹನಿ ಟ್ರ್ಯಾಪ್ — ಮೆಸೇಜು ವಾಟ್ಸಾಪು ಫೇಸ್ಬುಕ್ಕುಮುಂತೆಲ್ಲ ಮಾಧ್ಯಮಗಳ ತಿಪ್ಪಿಗುಂಡಿಗೆಸೆಯಲುಮೋಹಕ ಪಲ್ಲಕ್ಕಿಯೊಳಗೆ ಶೃಂಗಾರಗೊಳಿಸಿದ ಹೆಣ ಬೀಳಿಸಲು ಗುಟು ಗುಟು ಸುರೆ ಕುಡಿಸಿಪೋಸ್ಟ್ ಮಾರ್ಟಮ್ಮನಕುಟುಕು ಕಾರ್ಯಾಚರಣೆ ನಡೆಸಿಹನಿ ಟ್ರ್ಯಾಪ್ ಹಾಸಿ ಮಲಗಿಸಿದ್ದಾರೆ ನಿದ್ದೆ ಎಚ್ಚರ ಅಳು ನಗು ಮಾತಿನ ಸರಸ ವಿರಸ ಕಲ್ಪನೆಗಳ ವಿಹಾರ ವಿಕಾರ ಎಲ್ಲ ಮಾತ್ರೆಗಳ ಡಬ್ಬ ಹತ್ತಿರವೇ ಇಟ್ಟು ಹನಿಟ್ರ್ಯಾಪ್ದಿಂಬಿಗೊರಗಿಸಿ ಮಲಗಿಸಿದ್ದಾರೆಮಾತ್ರೆಗಳ ಮೂಸಿನೋಡಿದರಷ್ಟೇ ಸಾಕಿಲ್ಲಿಸತ್ತ ನರನಾಡಿಗಳ ಸುತ್ತ ಉಳಿದಿರುವಜೀವವೊಂದು ಅನಾಥವಾಗಿಸಲು ನರಿಜಪದ ಭಂಟರಲ್ಲಿ ಸುಳಿದು ಸುತ್ತಿಹತ್ತಿರ ಬಂದು ಸಂದಿ […]