ರುಬಾಯಿಗಳು
ರುಬಾಯಿಗಳು ಪ.ನಾ.ಹಳ್ಳಿ.ಹರೀಶ್ ಕುಮಾರ್ ೧. ಮಂಕುತಿಮ್ಮನಾಗು ಕೂಡಿಡುವುದು ಬಿಡು ಜಿಪುಣನೆಂಬ ಹೆಸರು ತಪ್ಪೀತು.ಓದಿ ಜ್ಞಾನಿಯಾಗು, ಅಜ್ಞಾನಿಯೆಂಬ ಹಣೆಪಟ್ಟಿ ತಪ್ಪೀತು.ಎಲ್ಲರೊಡನೆ ಒಂದಾಗಿ ಡಿವಿಜಿಯ ಮಂಕುತಿಮ್ಮನಾಗು,ರೌರವ ನರಕ ಲೋಕದ ದರ್ಶನವಾದರೂ ತಪ್ಪೀತು. ೨.ಕರ್ಮ ಹುಲಿಯ ಹೊಟ್ಟೆಯೊಳಗುಟ್ಟಿ ಹುಲಿಯಾದೆವುಹಸುವಿನೊಟ್ಟೆಯೊಳಗುಟ್ಟಿ ಹಸುವಾದೆವುಮನುಷ್ಯನ ಹೊಟ್ಟೆಯೊಳಗುಟ್ಟಿದಾ ಕರ್ಮಕ್ಕೆ,ಹಿಂದೂ ಕ್ರೈಸ್ತ ಜೈನ ಮುಸಲ್ಮಾನರೆಂದಾದೆವು **************************
ಕೆಂಡದ ಕೋಡಿ
ಕೆಂಡದ ಕೋಡಿ ವಿಶಾಲಾ ಆರಾಧ್ಯ ಬೆಳದಿಂಗಳಿನ ರಂಗೋಲಿಯಲೂಚಿತ್ತದಲಿ ನೆತ್ತರಿನ ಚಿತ್ರಗಳು ಮೂಡಿಕತ್ತಲ ಗರ್ಭಕ್ಕಿಳಿದು ಬಸಿರಾಗುತ್ತವೆಸೂಜಿಯ ಮೊನೆಯಲ್ಲಿ ಹುಟ್ಟಿದಮತ್ಸರದ ಕನಸುಗಳುದ್ವೇಷದ ಕೋರೆಹಲ್ಲಿನೊಡನೆಕತ್ತಿಯ ಝಳಪಿನ ತಾಳದಲಿನರ್ತಿಸಲು ಹವಣಿಸುತ್ತವೆ!! ಪಕ್ಷಗಳ ದಾಟಿ ಮಾಸದಮಾಸಗಳಲಿ ಇಣುಕಿ ಕಣ್ಣಲ್ಲೇಕೆಂಡದ ಕೊಂಡ ನಿಗಿನಿಗಿಸಿಮಿನುಗಿ ಮನದ ರಸವನುಕೊತಕೊತನೆ ಕುದಿಸಿ ನಾನುನೀನಿನಮೇಲು ಕೀಳಿನ ಧರ್ಮಾಧರ್ಮದತುಪ್ಪವ ಸುರಿಸಿ ಅಗ್ನಿಗೊಂಡವಮತ್ತೆ ಬಾನ ಕೊನೆವರೆಗೂ ಉರಿಸಿಧಗಧಗಿಸುವ ಹುಚ್ಚು ಕೋಡಿಹರಿಯುತ್ತದೆ!! ಏರಿಯ ದಾಟಿದ ಮತ್ಸರದ ಝರಿಕೊರಳ ಸೀಳೆ ಕಿರುದನಿಗೂಎಡೆಗೊಡದೆ ನೆತ್ತರು ಹರಿದಾಡುತ್ತದೆಆ ನೆತ್ತರಲೇ ಕಾರ್ಕೋಟ ಬೀಜಗಳುಮೊಳಕೆಯೊಡೆಯುತ್ತವೆ ಮತ್ತೆ ಮತ್ತೆ
ಕರೋನಾ ಮತ್ತು ಭಯ ಜ್ಯೋತಿ ಡಿ.ಬೊಮ್ಮಾ ಭಯ ಬೇಡ ಎಚ್ಚರಿಕೆ ಇರಲಿ ಎಂದು ಹೇಳುತ್ತಲೆ ಈಗ ಪ್ರತಿಯೊಬ್ಬರ ಮನದಲ್ಲೂ ಕರೋನಾ ಬಗ್ಗೆ ಭಯ ಮನೆಮಾಡಿದೆ. ಮೇಲೆ ಇದೊಂದು ಸಾಮಾನ್ಯ ಕಾಯಿಲೆ ಎಂದುಕೊಂಡರೂ ಒಳಗೋಳಗೆ ಆತಂಕ ಪಡದವರಿಲ್ಲ.ರೋಗಕ್ಕಿಂತಲೂ ಅದರ ಸುತ್ತಲೂ ಇರುವ ಕ್ಲಿಷ್ಟಕರ ಕಾನೂನುಗಳು ಭಯವನ್ನು ಹೆಚ್ಚಿಸುತ್ತಿವೆ. ಸದ್ಯ ಕರೋನಾ ದಿಂದಾಗುವ ಸಾವಿನ ಪ್ರಮಾಣದಲ್ಲಿ ವಯಸ್ಸಾದವರೆ ಹೆಚ್ಚು. ಅವರಿಗೆ ಮತ್ತೆ ಬೇರೆ ಆರೋಗ್ಯ ಸಮಸ್ಯಗಳು ಇರಬಹುದು.ಬಹಳಷ್ಟು ಸಾವು ಆಸ್ಪತ್ರೆಯಲ್ಲಿ ಅಡ್ಮೀಟ್ ಆದ ಮೇಲೆ ಸಂಭವಿಸುತ್ತಿವೆ. ಅಡ್ಮಿಟ್ ಆದ ಮೇಲೆ […]
ಸಹಜ ನಡಿಗೆಯ ರುದ್ರ ನರ್ತನದ ಭಾವಗಳಂತೆ ಕುಮಾರ್ ಹೊನ್ನೇನಹಳ್ಳಿ ಪದ್ಯಗಳು . ಕುಮಾರ್ ಹೊನ್ನೇನಹಳ್ಳಿ ವೃತ್ತಿಯಿಂದ ಶಿಕ್ಷಕ ಮತ್ತು ಶಿಕ್ಷಕರ ತರಬೇತುದಾರ ಅಂದರೆ ರಿಸೋರ್ಸ್ ಪರ್ಸನ್. ಅವರ ವೃತ್ತಿಯ ಕಾರಣ ಅಂದರೆ ಸಂಪನ್ಮೂಲ ವ್ಯಕ್ತಿಯಾಗಿರುವ ಕಾರಣ ಜಗತ್ತಿನ ಸಮಸ್ತ ಆಗು ಹೋಗುಗಳ ಅರಿವು ಮತ್ತು ಅಂಥ ಸಂಗತಿಗಳು ಒಟ್ಟೂ ಸಮಾಜದ ಮೇಲೆ ಬೀರುವ ಪರಿಣಾಮಗಳನ್ನೂ ಪ್ರಮಾಣಗಳನ್ನೂ ಆನುಷಂಗಿಕವಾಗಿ ಅವರು ಪ್ರಸ್ತಾಪಿಸದೇ ಅನ್ಯ ಮಾರ್ಗಗಳು ಇರುವುದಿಲ್ಲ. ಹಾಗಾಗಿಯೇ ಏನೋ ಇವರ ಕವಿತೆಗಳಲ್ಲಿ ಐತಿಹಾಸಿಕ ವ್ಯಕ್ತಿಗಳೂ ವರ್ತಮಾನದ ಸಂಗತಿಗಳೂ ಆಗೀಗ […]
ಏಕಾಗ್ರತೆಯ ಬೆನ್ನೇರಿ ಗೆಲುವಿನ ನಗೆ ಬೀರಿ ಅಯ್ಯೋ! ನನ್ನ ಎಲ್ಲ ಕೆಲಸಗಳು ಅರ್ಧಂಬರ್ಧ. ಯಾವುದೂ ಪೂರ್ಣ ಮಾಡೋಕೆ ಆಗುತ್ತಿಲ್ಲ ಏಕಾಗ್ರತೆ ಇಲ್ಲದೇ ನನಗೆ ಅಡಚಣೆ ಆಗ್ತಿದೆ.ಇದನ್ನು ಸಾಧಿಸೋದು ಹೇಗೆ ತಿಳಿಯುತ್ತಿಲ್ಲ? ಎನ್ನುವುದು ಇತ್ತೀಚಿನ ಅನೇಕ ವಿದ್ಯಾರ್ಥಿಗಳ ಮತ್ತು ದಾವಂತದ ಬದುಕಿನಲ್ಲಿ ಕಾಲು ಹಾಕುತ್ತಿರುವ ಬಹುತೇಕ ಜನರ ದೊಡ್ಡ ದೂರು. ಏಕಾಗ್ರತೆಯಿಲ್ಲದೇ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಹೀಗಾಗಿ ಎಲ್ಲದರಲ್ಲೂ ವೈಫಲ್ಯತೆಯ ನೋವು ಕಾಡುತ್ತದೆ. ಒತ್ತಡದ ಕೂಪದಲ್ಲಿ ಬಿದ್ದವರೆಲ್ಲ ಸುಲಭವಾಗಿ ಏಕಾಗ್ರತೆಯನ್ನು ಕಳೆದುಕೊಂಡು ನರಳುತ್ತಾರೆ. ಯಾವುದೇ ಒಂದು ನಿರ್ದಿüಷ್ಟ […]
ಹೇ ರಾಮ್
ಕವಿತೆ ಹೇ ರಾಮ್ ನೂತನ ದೋಶೆಟ್ಟಿ ಸುತ್ತ ಕ್ಲಿಕ್ಕಿಸುವ ಕ್ಯಾಮರಾ ಕಣ್ಣುಗಳುಚಿತ್ರಪಟದಲ್ಲಿ ಸೆರೆಯಾದದ್ದೇನೋ ಹೌದು ಇದು ಯಾರ ಸಮಾಧಿ?ಪ್ರಶ್ನೆಗೆ ಅಪ್ಪನ ಮೆದು ಉತ್ತರಪೋಸು ಕೊಡುವವರ ಪಕ್ಕದಲ್ಲಿಹಿಡಿಯಾದ ನಾನು ಘೋಡ್ಸೆಯನು ಬಣ್ಣಿಸುವವರ ಮಾತುಎದೆ ಹಿಂಡಲಿಲ್ಲಇತಿಹಾಸ ಹೇಳಿತ್ತು ನಿನ್ನೆಗೆ ಮರುಗಬೇಡ ಗುಂಡಿಗೆ ಎದೆಯೊಡ್ಡಿದವಗೆಕಾವಲು ಬಂದೂಕುಗಳುವಿಪರ್ಯಾಸಕ್ಕೂ ಮಿತಿ ಇರಬೇಕು ತತ್ವಗಳೋ ಹೊದಿಕೆ ಹೊದ್ದ ಪುಸ್ತಕಗಳುಬಾಕ್ಸ್ ಆಫೀಸಿನಲ್ಲಿ ಗಾಂಧೀಗಿರಿಯ ಲೂಟಿಖಾದಿಯ ಫ್ಯಾಷನ್ ಮೇಳಸ್ವದೇಶಿ ಬೇಲಿಗೆ ವಿದೇಶಿ ಗೂಟನಾನೊಬ್ಬನೇ ‘ ನಗ್ನ ಫಕೀರ’ **********************************************************
ಮನುಷ್ಯತ್ವ, ನಂಬಿಕೆಗಳ ಜಾಗವನ್ನು ಇಂದು ಹಣ ಆಳುತ್ತಿದೆ’ ಎಂ.ಟಿ.ನಾಯ್ಕ ಶಿಕ್ಷಕ, ಕವಿ ಎಂ.ಟಿ.ನಾಯ್ಕ ಕುಮಟಾ ತಾಲ್ಲೂಕಿನ ಹೆಗಡೆ. ಹೈಸ್ಕೂಲ್ ಹಂತದಿಂದಲೇ ಬರವಣಿಗೆ ಪ್ರಾರಂಭಿಸಿದವರು. ತಾಲ್ಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯ ವಾಚನ, ಆಕಾಶವಾಣಿ ಧಾರವಾಡ ಮತ್ತು ಕಾರವಾರ ಕೇಂದ್ರಗಳಲ್ಲಿ ಸುಮಾರು ಐದು ಬಾರಿ ಕಾವ್ಯವಾಚನ ಮಾಡಿದ್ದಾರೆ. ಕ್ರೈಸ್ಟ್ ಕಾಲೇಜು ಬೆಂಗಳೂರು , ಜೆ ಎಸ್. ಎಸ್ ಕಾಲೇಜು ಧಾರವಾಡ ಗಳಲ್ಲಿ ನಡೆದ ಬೇಂದ್ರೆ ಸ್ಮೃತಿ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಬಂದಿವೆ. ಬೆಂಗಳೂರಿನ ಸಾಂಸ್ಕೃತಿಕ ಪತ್ರಿಕೆ ` ಸಂಚಯ […]
ಗಝಲ್
ಗಝಲ್ ಎ. ಹೇಮಗಂಗಾ ಬೆರಳುಗಳು ಯಾಂತ್ರಿಕವಾಗಿ ಹೂ ಕಟ್ಟುತ್ತಿವೆ ಮನಸೆಲ್ಲೋ ಕಳೆದುಹೋಗಿದೆಕಂಗಳು ಬರುವಿಕೆಯನ್ನೇ ನಿರೀಕ್ಷಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ಪ್ರೀತಿ, ಪ್ರೇಮದಲ್ಲಿನ ಸುಖವೇನೆಂದು ತೋರಿಸಿಕೊಟ್ಟವನು ನೀನುಸವಿನೆನಪಲಿ ಅಧರಗಳು ಬಿರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ನಿನಗಾಗೇ ಮಿಡಿಯುವ ಹೃದಯದಲಿ ನೂರೆಂಟು ತವಕ, ತಲ್ಲಣಗಳುಧಮನಿಗಳು ನಿನ್ನ ಹೆಸರನ್ನೇ ಜಪಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ಕಣ್ರೆಪ್ಪೆಯೊಳು ಅವಿತಿಹ ಕನಸು ನನಸಾಗಲು ಕಾಯುವ ಕಾಯಕವಿದುಕಾಲದ ಘಳಿಗೆಗಳು ತಮ್ಮಂತೆ ಸರಿಯುತ್ತಿವೆ ಮನಸೆಲ್ಲೋ ಕಳೆದುಹೋಗಿದೆ ವರ್ಷಗಳು ಉರುಳಿದರೇನು ಹೇಮ ಳ ಒಲವಿಗೆಂದೂ ಮುಪ್ಪು ಬಾರದುತನುವಿನ ಕಣಕಣಗಳೂ ಹಂಬಲಿಸುತ್ತಿವೆ ಮನಸೆಲ್ಲೋ ಕಳೆದುಹೋಗಿದೆ […]
ಎದೆ ಮಾತು
ಕವಿತೆ ಎದೆ ಮಾತು ನೀ.ಶ್ರೀಶೈಲ ಹುಲ್ಲೂರು ಕಣ್ಣ ಕೊಳದಲದೋನಮ್ಮೊಲವ ಬಾತುಅವುಗಳೇ ಹೇಳುತಿವೆನನ್ನೆದೆಯ ಮಾತು ಬಾನ ಸಾಗರದಲ್ಲಿನೀ ಹೊಳೆವ ತಾರೆಬೆಳದಿಂಗಳಮಲಿನಲಿನಿರುಕಿಸುವೆ ಬಾರೆ ಸೊಂಪಾದ ತಣ್ಣೆಳಲುನಿನ್ನ ಎದೆ ಬನದಿಬಿರುಬಿಸಿಲು ಅಲ್ಲಿರಲಿವಿರಹ ಕಾನನದಿ ಮಿರುಗುವಾ ಚಂದ್ರನನಗೆಯಾಟ ನೋಡುಮೋಡಗಳ ಹಿಗ್ಗಿನಲಿನಮ್ಮೊಲವ ಹಾಡು ನದಿ ದಡದಿ ಸೊಗಸುನವಿಲ ನಲಿದಾಟಹಕ್ಕಿಗಳ ಕಲರವವುಅದು ರಮ್ಯ ನೋಟ ಒಂಟಿ ಪಯಣ ಸಾಕಿನ್ನುಜೊತೆಯಾಗಿ ಇರುವವರುಷದಿ ಕಂದನ ಕೇಕೆಮಡಿಲಲ್ಲೆ ತರುವ **************************************
ಮಧುವಣಗಿತ್ತಿ
ಕವಿತೆ ಮಧುವಣಗಿತ್ತಿ ಎಚ್ ಕೆ ನಟರಾಜ ಆಕೆಗೆ ದಿನವೂಸಿಂಗರೀಸುವುದೇ ಕೆಲಸಅಕ್ಷರಗಳಿಗೆ ಉಡುಗೆ ತೊಡಿಸಿಅಲಂಕರಿಸಿ ಬಿಳಿ ಹಾಳೆಯ ಮೇಲೇ ಚಿತ್ತಾರಬಿಡಿಸಿ ಶಾಯಿಯ ರಂಗೋಲಿಸೂರ್ಯ ಚಂದ್ರನ ಹೂ ಮಾಲೆ ಮಾಡಿ..ನಕ್ಷತ್ರಗಳನ್ನು ಕೆನ್ನೆ ರಂಗಾಗಿಸಿಭಾವನೆಗಳಿಗೆ ಬಣ್ಣದುಡುಗೆ ತೊಡಿಸಿಕಾಮವನ್ನು.. ಕಾಮವಿಲ್ಲದ ಹೃದಯಭತ್ತಳಿಕೆಯ ಬಾಣವಾಗಿಸಿಪದಪುಂಜದರಮನೆಗೆ ಲಗ್ಗೆಹೀಗೆ ಈ ಮಧುವಣಗಿತ್ತಿ.. ಅಲ್ಲಿಂದ ಇಲ್ಲಿಇಲ್ಲಿಂದ ಅಲ್ಲಿ ಶಭ್ಧಗಳ ನರ್ತನ. ಆಡಂಭರದಾಟಕೂ ಅಂಕುಶ ತೊಡಿಸಿಪ್ರೇಮನಿವೇದನೆ.ಕನಸುಗಳ ಬಗೆದು ಅಲ್ಲೊಂದಷ್ಟು ಹೆಕ್ಕಿಮನದಾಳದಿ ಕುಕ್ಕಿ…. ದುಃಖದಲ್ಲಿ ಬಿಕ್ಕಿ..ನಗುವಿನಾಳದಲಿ ಒಲವ ಬಿತ್ತಿ.. ನಾಚಿನೀರಾದ ರಂಗಿನೋಕುಳಿಯಲಿ..ಮತ್ತೊಂದಷ್ಟು ಪದಗಳ ಮಾಲೆಕಟ್ಟಿ..ಜೋಡಿಸಿ.. ಕಾಡಿಸೀ.. ಕೂಡಿಸಿ.. ತೊಡಿಸಿಅಂತೂ.. ಒಂದು ಅಂತಿಮ […]