ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೆಂಡದ ಕೋಡಿ

Fireball, Ring Of Fire, Fire, Burn

ವಿಶಾಲಾ ಆರಾಧ್ಯ

ಬೆಳದಿಂಗಳಿನ ರಂಗೋಲಿಯಲೂ
ಚಿತ್ತದಲಿ ನೆತ್ತರಿನ ಚಿತ್ರಗಳು ಮೂಡಿ
ಕತ್ತಲ ಗರ್ಭಕ್ಕಿಳಿದು ಬಸಿರಾಗುತ್ತವೆ
ಸೂಜಿಯ ಮೊನೆಯಲ್ಲಿ ಹುಟ್ಟಿದ
ಮತ್ಸರದ ಕನಸುಗಳು
ದ್ವೇಷದ ಕೋರೆಹಲ್ಲಿನೊಡನೆ
ಕತ್ತಿಯ ಝಳಪಿನ ತಾಳದಲಿ
ನರ್ತಿಸಲು ಹವಣಿಸುತ್ತವೆ!!

ಪಕ್ಷಗಳ ದಾಟಿ ಮಾಸದ
ಮಾಸಗಳಲಿ ಇಣುಕಿ ಕಣ್ಣಲ್ಲೇ
ಕೆಂಡದ ಕೊಂಡ ನಿಗಿನಿಗಿಸಿ
ಮಿನುಗಿ ಮನದ ರಸವನು
ಕೊತಕೊತನೆ ಕುದಿಸಿ ನಾನುನೀನಿನ
ಮೇಲು ಕೀಳಿನ ಧರ್ಮಾಧರ್ಮದ
ತುಪ್ಪವ ಸುರಿಸಿ ಅಗ್ನಿಗೊಂಡವ
ಮತ್ತೆ ಬಾನ ಕೊನೆವರೆಗೂ ಉರಿಸಿ
ಧಗಧಗಿಸುವ ಹುಚ್ಚು ಕೋಡಿಹರಿಯುತ್ತದೆ!!

ಏರಿಯ ದಾಟಿದ ಮತ್ಸರದ ಝರಿ
ಕೊರಳ ಸೀಳೆ ಕಿರುದನಿಗೂ
ಎಡೆಗೊಡದೆ ನೆತ್ತರು ಹರಿದಾಡುತ್ತದೆ
ಆ ನೆತ್ತರಲೇ ಕಾರ್ಕೋಟ ಬೀಜಗಳು
ಮೊಳಕೆಯೊಡೆಯುತ್ತವೆ ಮತ್ತೆ ಮತ್ತೆ

About The Author

1 thought on “ಕೆಂಡದ ಕೋಡಿ”

Leave a Reply

You cannot copy content of this page

Scroll to Top