ಏಕಾಗ್ರತೆಯ ಬೆನ್ನೇರಿ ಗೆಲುವಿನ ನಗೆ ಬೀರಿ

ಅಯ್ಯೋ! ನನ್ನ ಎಲ್ಲ ಕೆಲಸಗಳು ಅರ್ಧಂಬರ್ಧ. ಯಾವುದೂ ಪೂರ್ಣ ಮಾಡೋಕೆ ಆಗುತ್ತಿಲ್ಲ ಏಕಾಗ್ರತೆ ಇಲ್ಲದೇ ನನಗೆ ಅಡಚಣೆ ಆಗ್ತಿದೆ.ಇದನ್ನು ಸಾಧಿಸೋದು ಹೇಗೆ ತಿಳಿಯುತ್ತಿಲ್ಲ? ಎನ್ನುವುದು ಇತ್ತೀಚಿನ ಅನೇಕ ವಿದ್ಯಾರ್ಥಿಗಳ ಮತ್ತು ದಾವಂತದ ಬದುಕಿನಲ್ಲಿ ಕಾಲು ಹಾಕುತ್ತಿರುವ ಬಹುತೇಕ ಜನರ ದೊಡ್ಡ ದೂರು. ಏಕಾಗ್ರತೆಯಿಲ್ಲದೇ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಹೀಗಾಗಿ ಎಲ್ಲದರಲ್ಲೂ ವೈಫಲ್ಯತೆಯ ನೋವು ಕಾಡುತ್ತದೆ. ಒತ್ತಡದ ಕೂಪದಲ್ಲಿ ಬಿದ್ದವರೆಲ್ಲ ಸುಲಭವಾಗಿ ಏಕಾಗ್ರತೆಯನ್ನು ಕಳೆದುಕೊಂಡು ನರಳುತ್ತಾರೆ. ಯಾವುದೇ ಒಂದು ನಿರ್ದಿüಷ್ಟ ಕೆಲಸದಲ್ಲಿ ತೀಕ್ಷ÷್ಣ ದೃಷ್ಟಿ ಹರಿಸಿ ಮುಂದುವರೆಯಬೇಕೆAದರೆ ಬೇಡವಾದ ನೂರಾರು ಆಲೋಚನೆಗಳು ಹರಿದಾಡಿ ಮನಸ್ಸನ್ನು ಎಲ್ಲೆಲ್ಲೋ ಕರೆದುಕೊಂಡು ಹೋಗಿ ಬಿಡುತ್ತವೆ. ನೆಪೋಲಿಯನ್ ಹೇಳಿದಂತೆ ಏಕಾಗ್ರತೆಯಿಂದ ಯಾವನು ಪ್ರಯತ್ನಿಸುವುದಿಲ್ಲವೋ, ಅವನು ಎಂದೂ ಯಶಸ್ಸು ಗಳಿಸಲಾರನು. ಇದು ಸರ್ವಕಾಲಿಕ ಸತ್ಯ. ಏಕಾಗ್ರತೆ ಸಾಧಿಸುವುದೆಂದರೆ ತನ್ನ ಕೆಲಸದಲ್ಲಿ ತನಗೆ ತಾನೇ ಸಹಾಯ ಮಾಡಿಕೊಳ್ಳುವುದು. ತನಗೆ ತಾನು ಸಹಾಯ ಮಾಡಿಕೊಳ್ಳದೆ ಯವುದೇ ವ್ಯಕ್ತಿ ಪ್ರಾಮಾಣಿಕವಾಗಿ ಇತರರಿಗೆ ಸಹಾಯ ಮಾಡಲು ಪ್ರಯತ್ನಿಸಲು ಸಾಧ್ಯವಿಲ್ಲ. ಎಂಬುದು ಈ ಜೀವನದ ಅತ್ಯಂತ ಸುಂದರ ಪರಿಹಾರಗಳಲ್ಲಿ ಒಂದು.
ಏಕಾಗ್ರತೆ ಎಂದರೆ.. . . ?
ದೈನಂದಿನ ಗಜಿಬಿಜಿ ಕೆಲಸಗಳು ನಮ್ಮ ಗಮನವನ್ನು ಅತಿ ಸುಲಭವಾಗಿ ಸೆಳೆಯುತ್ತಿರುವಾಗ ನಮ್ಮ ಆದ್ಯತೆಗಳತ್ತ ಗಮನ ಹರಿಸುವಂತೆ ಮಾಡುವುದೇ ಏಕಾಗ್ರತೆ. ಯಾವುದಾದರೂ ಒಂದು ಗುರಿಗೆ ಸಂಪೂರ್ಣ ದೃಷ್ಟಿ ನೆಡುವುದೇ ಏಕಾಗ್ರತೆ. .
ಏಕಾಗ್ರತೆ ಸಾಧಿಸಲು ಈ ಸೂತ್ರಗಳನ್ನು ಅನುಸರಿಸಿ.
ಒಂದು ಸಮಯಕ್ಕೆ ಒಂದೇ ಕೆಲಸ
ಗುರಿಯ ಸಾಧನೆಗೆ ಮಾಡಲೇಬೇಕಾದ ಕೆಲಸಗಳು ಸಾಕಷ್ಟಿವೆ ಅವುಗಳಲ್ಲಿ ಯಾವುದನ್ನು ಮೊದಲು ಮಾಡುವುದು ಎಂಬ ಗೊಂದಲ ಇದ್ದೇ ಇರುತ್ತದೆ. ಹೀಗಾಗಿ ಆದ್ಯತೆಯ ಪ್ರಕಾರ ಕೆಲಸದ ಪಟ್ಟಿ ಮಾಡಿ ಮಹತ್ವದ ಕೆಲಸ ಅನಿವಾರ್ಯ ಕೆಲಸ ಪಟ್ಟಿಗಳನ್ನು ಮಾಡಿ ಅದರಲ್ಲಿ ನಿರ್ಧಿಷ್ಟ ಕೆಲಸವನ್ನು ಕೈಗೆತ್ತಿಕೊಳ್ಳಿ. ಎತ್ತಿಕೊಂಡಿರುವ ಕೆಲಸದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿ. ಹೀಗೆ ತದೇಕ ಚಿತ್ತದಿಂದ ತಲ್ಲೀನರಾಗಿ ಮಾಡಿದ ಕೆಲಸದ ಫಲಿತಾಂಶ ಅತ್ಯದ್ಭುತವಾಗಿರುತ್ತದೆ ಎಂದು ಬೇರೆ ಹೇಳಬೇಕಿಲ್ಲ. ಅತ್ತುತ್ತಮ ಗುಣಮಟ್ಟದ ಕಾರ್ಯ ಬೇರೆಯವರು ನಿಮ್ಮೆಡೆ ಹುಬ್ಬೇರಿಸುವಂತೆ ಮಾಡುವುದರಲ್ಲಿ ಸಂಶಯವಿಲ್ಲ.

ಧ್ಯಾನ
ಬೆಂಕಿಯಿAದ ಕಬ್ಬಿಣ ಮೃದುವಾಗುವಂತೆ ಧ್ಯಾನದಿಂದ ಏಕಾಗ್ರತೆ ಹದಕ್ಕೆ ಬರುತ್ತದೆ. ಮನುಷ್ಯನಿಗೆ ಉಸಿರಾಡಲು ಹೇಗೆ ಆಮ್ಲಜನಕವೋ ಹಾಗೆ ಗುರಿಯ ಸಾಧನೆಗೆ ಏಕಾಗ್ರತೆ ಅವಶ್ಯಕ. ಪ್ರತಿದಿನ ಧ್ಯಾನದಲ್ಲಿ ತೊಡಗಿಸಿಕೊಳ್ಳುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎನ್ನುವುದು ಈಗಾಗಲೇ ಸಂಶೋಧನೆಗಳಿAದ ಸಾಬೀತಾದ ಸಂಗತಿ. ಕ್ಷಣ ಕ್ಷಣಕ್ಕೂ ಹೊಯ್ದಾಡುವ ಮನಸ್ಸನ್ನು ಒಂದೆಡೆ ಹಿಡಿದಿಡಲು ಧ್ಯಾನ ಸಹಕಾರಿ. ದ್ಯಾನ ನಮ್ಮ ಧಾರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಎಂಥ ಚಂಚಲ ಸ್ವಭಾವದವರಾದರೂ ಸರಿ ಜಾಗರೂಕರಾಗಿ ಮೈ ಕೊಡವಿಕೊಂಡು ನಿಲ್ಲುವಂತೆ ಮಾಡಲು ಧ್ಯಾನ ಸಹಾಯಕ ಬದುಕು ಒಂದು ಸುಂದರ ಗೆಲುವುಗಳ ಮುತ್ತಿನ ಹಾರ. ವಿವಿಧ ಬಣ್ಣಗಳ ಮುತ್ತಿನ ಹಾರ ಪಡೆಯಬೇಕೆಂದು ಬಯಸುವುದಾದರೆ ಧ್ಯಾನ ಅವಶ್ಯಕ.


ನೆಪ ಬೇಡ
ನಾನೂ ಏಕಾಗ್ರತೆಯಿಂದ ಚೆನ್ನಾಗಿ ಕೆಲಸ ನಿರ್ವಹಿಸಬೇಕು, ಅಧ್ಯಯನ ನಡೆಸಬೇಕು ಅಂತಿದ್ದೇನೆ ಆದರೆ ನನ್ನ ಮನೆಯ ವಾತಾವರಣ ಸರಿ ಇಲ್ಲ. ಗದ್ದಲಮಯ ಪ್ರದೇಶದಲ್ಲಿ ಚಿತ್ತವನ್ನು ಒಂದೆಡೆ ಕೇಂದ್ರೀಕರಿಸುವುದು ಕಷ್ಟವಾಗುತ್ತಿದೆ. ಎಂಬ ನೂರಾರು ನೆಪಗಳನ್ನು ಹೇಳದಿರಿ. ಕಷ್ಟಪಟ್ಟವನಿಗೆ ಸುಖ ಏನೆನ್ನುವುದು ತಿಳಿಯುತ್ತದೆ.ಮೊದಲು ಐದಾರು ನಿಮಿಷ ಮನಸ್ಸನ್ನು ಕೇಂದ್ರೀಕರಿಸುವುದು ಕಷ್ಟವೆನಿಸುತ್ತದೆ. ಮುಂದಿನ ಐದು ನಿಮಿಷ ಮನಸ್ಸನ್ನು ಸ್ವಾಧೀನದಲ್ಲಿರಿಸಿ ಗುರಿಯತ್ತ ನೆಟ್ಟರೆ ಸಾಕು. ಏಕಾಗ್ರತೆ ತಾನೇ ತಾನಾಗಿ ಹೊಂದಿಕೊಳ್ಳುತ್ತದೆ. ಏಕಾಗ್ರತೆಯ ಬಲದಿಂದ ಮಹಾನ್ ಕಾರ್ಯಗಳು ಸಂಭವಿಸಿವೆ. ಜೀವನದಲ್ಲಿ ನೀವು ಈಗ ಹೆಮ್ಮೆಯಿಂದ ಹೇಳಿಕೊಳ್ಳುವ ಅನೇಕ ಮಹತ್ಕಾರ್ಯಗಳು ಏಕಾಗ್ರತೆಯಿಂದಲೇ ಸಾಧಿಸಲ್ಪಟ್ಟಿವೆ ಸಂಕೀರ್ಣಮಯ ಜೀವನವನ್ನು ಸರಳಗೊಳಿಸಿ, ಶ್ರೇಷ್ಠ ಕೆಲಸಗಳಿಗೆ ಏಕಾಗ್ರತೆ ಮುನ್ನುಡಿಯಾಗುತ್ತದೆ.

ಬದ್ಧತೆ ಬೆಳೆಸಿಕೊಳ್ಳಿ
ನಮ್ಮ ಮೆದುಳು ಅದ್ಭುತ ಕಾರ್ಖಾನೆಯಿದ್ದಂತಿದೆ. ಒಂದು ಕೆಲಸ ಮಾಡುವಾಗಲೇ ಬೇರೆಲ್ಲ ಕೆಲಸಗಳ ಬಗೆಗೂ ಯೋಚಿಸಬಲ್ಲುದು ತರಕಾರಿ ಹೆಚ್ಚುತ್ತಿರುವ ತಾಯಿ ಹಾಲು ಉಕ್ಕದಂತೆ ನೋಡುತ್ತಾಳೆ. ಹೊರಗೆ ಯಾರೋ ಯಾವುದೇ ವಸ್ತು ಎಲ್ಲಿದೆ ಎಂದು ಕೇಳಿದರೂ ಸರಿಯಾಗಿ ಉತ್ತರಿಸುತ್ತಾಳೆ.ಮೆದುಳಿನ ಕಾರ್ಯದ ಬಗೆಗೆ ಅಚ್ಚರಿಯೆನಿಸುತ್ತದಲ್ಲವೇ? ಇಷ್ಟೆಲ್ಲ ಶಕ್ತಿ ಹೊಂದಿದ ಮೆದುಳಿಗೆ ಒಂದೇ ಕೆಲಸ ಕೊಟ್ಟರೆ ಇನ್ನೂ ಅಚ್ಚುಕಟ್ಟುತನದಿಂದ ಮಾಡಬಲ್ಲದು. ಸೂರ್ಯನ ಕಿರಣಗಳು ಕಾಗದವೊಮದನ್ನು ಸುಡಬಲ್ಲವು. ಆಶ್ಚರ್ಯವೇ! ಸೂರ್ಯನ ಕಿರಣಗಳನ್ನು ಒಂದೆಡೆ ಭೂತಗನ್ನಡಿಯಲ್ಲಿ ಕೇಂದ್ರೀಕರಿಸಿದಾಗ ಮಾತ್ರ ಸಾಧ್ಯ. ಚದುರಿದ ಕಿರಣಗಳಿಂದ ಅಸಾಧ್ಯ. ಮೆದುಳಿನ ಒಟ್ಟು ಶಕ್ತಿಯನ್ನುೆÆಂದು ಸಮಯದಲ್ಲಿ ಒಂದೇ ಕೆಲಸಕ್ಕೆ ಉಪಯೋಗಿಸುವ ಬದ್ಧತೆ ಬೆಳೆಸಿಕೊಳ್ಳಿ.


ದಿನಚರಿ ಬರೆಯಿರಿ
ನೀವು ಏನಾಗಬೇಕೆಂಬುದನ್ನು ಬೇರೆಯವರು ನಿರ್ಧರಿಸುವದಕ್ಕಿಂತ ನೀವೇ ನಿರ್ಧರಿಸಿಕೊಳ್ಳಿ.ದಿನಚರಿ ಬರೆಯುವುದನ್ನು ರೂಢಿಸಿಕೊಂಡರೆ ನಿಮ್ಮ ಆಸಕ್ತಿ ಒಲವು ಅಭಿರುಚಿಗಳು ನಿಮಗೇ ಗೊತ್ತಾಗುತ್ತವೆ. ಆಸಕ್ತಿಯಿದ್ದಲ್ಲಿ ಮನಸ್ಸನ್ನು ಹಿಡಿದಿಡುವುದು ಅವಶ್ಯವಿಲ್ಲ.ಮನಸ್ಸು ತಾನೇ ಆಸಕ್ತಿಯಿಂದ ತೊಡಗಿಕೊಂಡು ಬಿಡುತ್ತದೆ. ಇದರಿಂದ ಏಕಾಗ್ರತೆ ಸುಲಭ ಸಾಧ್ಯವಾಗುವುದು. ಮಾಡುವ ಕೆಲಸವನ್ನು ವಿಭಿನ್ನ ರೀತಿಯಲ್ಲಿ ಮಾಡಬಹುದೇ? ಎಂಬ ಸೃಜನಶೀಲತೆನ್ನು ಅಳವಡಿಸಿಕೊಳ್ಳಲು ದಿನಚರಿ ಉಪಯುಕ್ತ.
ಟನಲ್ ವಿಷನ್ ಬಳಸಿ
ಎರಡೂ ಅಂಗೈಗಳಿAದ ಕಣ್ಣುಗಳನ್ನು ಮುಚ್ಚಿಕೊಳ್ಳಿ. ನಂತರ ಅಂಗೈಗಳನ್ನು ಕಣ್ಣುಗಳ ಮೇಲಿಂದ ತೆಗೆಯುತ್ತ ಮುಚ್ಚುತ್ತ ಬ್ಲಿಂರ‍್ಸ್ (ಮಿಣುಕು) ತರ ಉಪಯೋಗಿಸಿ.ನಂತರ ನಿಮ್ಮ ದೃಷ್ಟಿಯನ್ನು ನಿಮ್ಮ ಮುಂದಿರುವ ಗುರಿಯತ್ತ ಹೊರಳಿಸಿ. ಕ್ರಮೇಣವಾಗಿ ಮೆದುಳು ಪೂರ್ತಿ ಏಕಾಗ್ರತೆಯನ್ನು ಪಡೆಯುತ್ತದೆ. ನಿಮ್ಮ ಗುರಿಯತ್ತ ದೃಷ್ಟಿ ಕೇಂದ್ರೀಕರಿಸುವ ಈ ಟನಲ್ ವಿಷನ್ ಪ್ರಕ್ರಿಯೆಯನ್ನು ಬಳಸಿ. ತಾಜಾ ಹಣ್ಣು ಸಮತೋಲಿತ ಆಹಾರ ಸೇವಿಸಿ
ಆದರ್ಶ ಕಣ್ಮುಂದಿರಲಿ
ಬರೀ ಅಧ್ಯಯನ ಮತ್ತು ಕೆಲಸ ಎಂದು ಸಮಯ ಕಳೆದರೆ ನೆಚ್ಚಿನ ಆಟ ಆಡುವುದು ಯಾವಾಗ? ಎಂದು ಯೋಚಿಸದಿರಿ. ಆಡುವಾಗ ಮನಸ್ಸು ಆಟದಲ್ಲಿರಲಿ ಅಧ್ಯಯನದಲ್ಲಿರುವಾಗ ಪುಸ್ತಕದಲ್ಲಿರಲಿ.ಆಡುವಾಗ ಅಭ್ಯಾಸದ ಕುರಿತು ಚಿಂತಿಸಿ ಕಿರಕಿರಿಗೊಳಗಾಗದಿರಿ. ಒಂದೇ ಮಾತಿನಲ್ಲಿ ಸ್ಪಷ್ಟಗೊಳಿಸಬೇಕೆಂದರೆ ಟಿವಿ ನೊಡಿ ಕಪಿ ಛೇಷ್ಟೆ ಮಾಡಿ. ಕಂಪ್ಯೂಟರ್ ಗೇಮ್ ಆಡಿ ಇಷ್ಟವಾದ ಸಂಗೀತ ಆಲಿಸಿ ಕುಣಿಯಿರಿ. ಇವು ನಿಮ್ಮನ್ನು ಪುನಃಶ್ಚೇತನಗೊಳಿಸುತ್ತವೆ. ಆದರೆ ಏನೋ ಮಾಡುವಾಗ ಏನೋ ಯೋಚಿಸುತ್ತ ನಿತ್ರಾಣಗೊಳ್ಳದಿರಿ.. ನೀವು ಎಲ್ಲಿದ್ದಿರೋ ಅಲ್ಲಿಯೇ ನಿಮ್ಮ ಮನಸ್ಸು ಇರಲಿ.ಮಾಡುವ ಕೆಲಸ ಬಿಟ್ಟು ಮನಸ್ಸು ಬೇರೆಲ್ಲೂ ಕದಲದಿರಲಿ. ಏಕಾಗ್ರತೆಯಿಂದಲೇ ಇಡಿ ಜಗತ್ತು ಫಲವತ್ತತೆಯನ್ನು ಪಡೆದಿದೆ ಎನ್ನುವುದು ನೆನಪಿರಲಿ. ಏಕಾಗ್ರತೆಗೆ ಅತ್ಯುತ್ತಮ ಉದಾಹರಣೆಯೆಂದರೆ ಸ್ವಾಮಿ ವಿವೇಕಾನಂದರು. ದೊಡ್ಡ ದೊಡ್ಡ ಗ್ರಂಥಗಳಲ್ಲಿ ಇಷ್ಟನೇ ಪುಟದಲ್ಲಿ ಹೀಗೇ ಹೇಳಲಾಗಿದೆ ಎಂದು ಹೇಳುವಷ್ಟು ಏಕಾಗ್ರಚಿತ್ತರಾಗಿ ಅಧ್ಯಯನ ನಡೆಸುತ್ತಿದ್ದರು. ಅಂಥ ಆದರ್ಶ ಸಾಧಕರು ಕಣ್ಮುಂದಿರಲಿ.
ಪ್ರಯತ್ನಿಸಿ -ಸಾಧಿಸಿ
ಕೆಲಸದ ಒತ್ತಡದಲ್ಲಿ ಕೆಲಸಗಳ ತರಾತುರಿಯಲ್ಲಿ ನಾನೇನು ಮಾಡುತ್ತಿದ್ದೇನೆ ಎಂಬುದರ ಪರಿವೆ ಇರಬೇಕಾದುದು ಅನಿವಾರ್ಯ. ಗುರಿಯೆಡೆಗೆ ಗುರಿಯಿಟ್ಟು ಅತ್ಯುನ್ನತ ಸಾಮರ್ಥ್ಯಕ್ಕೆ ಏರಲು ಏಕಾಗ್ರತೆ ಬೇಕೇ ಬೇಕು. ಅಸಾಧಾರಣವಾದುದನ್ನು ಸಾಧಿಸಲು ಸಾಧಾರಣ ಗುಣಮಟ್ಟದ ಏಕಾಗ್ರತೆ ಸಾಕಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಏಕಾಗ್ರತೆ ಸಾಧಿಸಿದಷ್ಟು ದೊರೆಯುತ್ತದೆ.ನಿಮ್ಮ ಬದುಕನ್ನು ವಿಶೇಷ ಮತ್ತು ಮರೆಯಲಾಗದ್ದನ್ನಾಗಿ ಮಾಡಲು ಏಕಾಗ್ರತೆಯ ಹೆಜ್ಜೆಯು ಕಾಲಾಂತರದಲ್ಲಿ ದೊಡ್ಡ ಪರಿಣಾಮ ಬೀರಬಲ್ಲದು. ಏಕಾಗ್ರತೆ ಇಲ್ಲ ಎಂಬ ಬಲಹೀನತೆಯನ್ನು ಅತಿಕ್ರಮಿಸಲು ಪ್ರಯತ್ನಿಸಿ. ಬರೀ ಗುರಿ ಇಟ್ಟರೆ ಸಾಲದು ಹೊಡೆಯಲೂ ಬೇಕು. ಏಕಾಗ್ರತೆಯ ಬೆನ್ನೇರಿ ಗೆಲುವಿನ ನಗೆ ಬೀರಿ

ಏಕಾಗ್ರತೆಯನ್ನು ಸಾಧಿಸಿದರೆ ಗೆಲುವು ಕಟ್ಟಿಟ್ಟ ಬುತ್ತಿ. ಸಾಧನೆಯ ಮೈಲಿಗಲ್ಲು ಸ್ಥಾಪಿಸಲು ಸಾಧ್ಯವಾಗುವುದು.

****************************

ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

One thought on “

Leave a Reply

Back To Top