ಎಂಜಿನಿಯರ್ಸ್ ಆಗಿ ನಾವೇನು ಮಾಡಬಹುದು?
ಲೇಖನ ಎಂಜಿನಿಯರ್ಸ್ ಆಗಿ ನಾವೇನು ಮಾಡಬಹುದು? ಸುಶ್ಮಿತಾ ಐತಾಳ್ ಎಂಜಿನಿಯರ್ಸ್ ಡೇ ಆದ ಇಂದು ಎಲ್ಲೆಲ್ಲೂ ನಮಗೆ ಆದರ್ಶ ಪ್ರಾಯರಾಗಿರುವ ಮಹಾನ್ ವ್ಯಕ್ತಿ ವಿಶ್ವೇಶ್ವರಯ್ಯನವರ ಭಾವಚಿತ್ರಗಳು ರಾರಾಜಿಸುತ್ತಿರುವುದು ಕಾಣುತ್ತಿವೆ. ಅವರು ಎಷ್ಟು ಬುದ್ಧಿವಂತರಾಗಿದ್ದರು, ಎಷ್ಟು ಪರಿಶ್ರಮಿಗಳೂ ಪ್ರಾಮಾಣಿಕ ಕೆಲಸಗಾರರೂ ಶಿಸ್ತಿನ ಸಿಪಾಯಿಯೂ ಆಗಿದ್ದರು ಮುಂತಾಗಿ ಅವರ ಗುಣ ಗಾನ ಮಾಡುವುದು ಕೇಳುತ್ತಿದೆ. ಆದರೆ ಇಷ್ಟು ಮಾಡಿದರೆ ಮುಗಿಯಿತೇ? ವಿಶ್ವೇಶ್ವರಯ್ಯ ಅವರ ಹುಟ್ಟಿದ ದಿನವನ್ನು ಎಂಜಿನಿಯರ್ಸ್ ಡೇ ಎಂದು ನಾವು ಯಾಕೆ ಆಚರಿಸುತ್ತೇವೆ? ಈ […]
ಇರುವೆ ಗೂಡಿನ ಬಾಯಿ ತೆರೆದ ನೆಲದ ಮಾತು
ಪುಸ್ತಕಪರಿಚಯ “ಥಟ್ ಅಂತ ಬರೆದು ಕೊಡುವ ರಸೀತಿಯಲ್ಲ ಕವಿತೆ” ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು ಕೊಡಮಾಡುವ ಪ್ರೊ.ಡಿ.ಸಿ.ಅನಂತಸ್ವಾಮಿ ಸಾಹಿತ್ಯ ದತ್ತಿ 2019 ಪುರಸ್ಕಾರಕ್ಕೆ ಭಾಜನವಾಗಿರುವುದು “ಥಟ್ ಅಂತ ಬರೆದು ಕೊಡುವ ರಸೀತಿಯಲ್ಲ ಕವಿತೆ” ಇದೇ ಪುಸ್ತಕಕ್ಕೆ ಬಾಗಲಕೋಟರ ಜಿಲ್ಲೆಯ ಸಮೀರವಾಡಿ ಸಾಹಿತ್ಯ ದತ್ತಿ ಪ್ರಶಸ್ತಿ ಬಂದಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಕಾಜಾಣ ಪುಸ್ತಕವು 2019ರಲ್ಲಿ ಪ್ರಕಟಿಸಿರುವ ಈ ಕವನ ಸಂಕಲನದಲ್ಲಿ ಮೂವತ್ತಾರು ಕವಿತೆಗಳಿವೆ. ಈ ಸಂಕಲನದ ಮೂಲಕ ಕಾವ್ಯ ಪ್ರಪಂಚಕ್ಕೆ ಪರಿಚಯಗೊಂಡಿರುವ ಸುಮಿತ್ ಮೇತ್ರಿ ಹಲಸಂಗಿಯ ಅಪರೂಪದ […]
ವಿಶ್ವ ಅಭಿಯಂತರರ ದಿನಾಚರಣೆ.
ಲೇಖನ ವಿಶ್ವ ಅಭಿಯಂತರರ ದಿನಾಚರಣೆ. ಜಯಶ್ರೀ.ಭ.ಭಂಡಾರಿ. ಮೋಕ್ಷಗುಂಡ ವಿಶ್ವೇಶರಯ್ಯನವರ ಜನ್ಮದಿನವನ್ನು ಇಂಜನೀಯರ್ಸ ಡೇಯಾಗಿ ಆಚರಿಸಲಾಗುತ್ತದೆ. ಇಂದು (ಸಪ್ಟಂಬರ 15) ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾದ ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ನದಿನ. ಇದನ್ನು ಭಾರತದಲ್ಲಿ ಇಂಜನೀಯರ್ಸ ಡೇ ಯನ್ನಾಗಿ ಆಚರಿಸಲಾಗುತ್ತಿದೆ.ಇಂಜನೀಯರಿಂಗ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಪಾರ ಸೇವೆಯ ನೆನಪಿಗಾಗಿ ಅವರ ಜನ್ಮ ದಿನವನ್ನು ‘ಇಂಜನೀಯರ ದಿನ’ವನ್ನಾಗಿ ಆಚರಿಸಲಾಗುತ್ತದೆ.ಭಾರತ ಜನನಿಯ ತನುಜಾತೆ ಕರ್ನಾಟಕಕ್ಕೆ ವಿಶ್ವೇಶ್ವರಯ್ಯನವರು ದೊಡ್ಡ ಕೊಡುಗೆ.ಸಪ್ಟಂಬರ 15 1860 ರಂದು ಜನಸಿದ ಇವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಮುಂಬೈ ರಾಜ್ಯದ […]
ವಿಭ್ರಮ
ಕಥೆ ವಿಭ್ರಮ ಮಧುರಾ ಕರ್ಣಮ್ “ಚರಿ, ಇಪ್ಪ ಎನ್ನ ಪಣ್ಣಣು?” ಎಂದು ದುಗುಡ ತುಂಬಿದ ಮುಖದಿಂದ ಕೇಳಿದಳು ಆಂಡಾಳು. “ಏನ್ಮಾಡೋದು? ಇದ್ದುದನ್ನು ಇದ್ದ ಹಾಗೇ ಪ್ರಾಮಾಣಿಕವಾಗಿ ನಿಜ ಹೇಳಿಬಿಡೋದು. ನಮ್ಮ ಮನಸ್ಸಿಗಾದ್ರೂ ನೆಮ್ಮದಿ ಇರುತ್ತೆ. ಎಷ್ಟು ದಿನಾಂತ ಸುಳ್ಳು ಪಳ್ಳು ಹೇಳಿ ಮುಚ್ಚಿಟ್ಕೊಳ್ಳೋಕಾಗುತ್ತೆ?” ಎಂದರು ವರದರಾಜ ಐಯ್ಯಂಗರ‍್ರು. “ಗುರುವಾಯೂರಪ್ಪಾ, ನಾನು ನಿಮ್ಮನ್ ಕೇಳ್ತಿದೀನಲ್ಲ, ನನಗೆ ಬುದ್ಧಿ ಇಲ್ಲ.” ಎಂದು ಕೂಗುತ್ತ ಒಳಗೋಡಿದಳು ಆಂಡಾಳು. ಅವಳಿಗೆ ಸಮಸ್ಯೆ ಎಲ್ಲರಿಗೂ ಗೊತ್ತಾಗುವದು ಬೇಡವಾಗಿತ್ತು. ಹಾವೂ ಸಾಯದಂತೆ ಕೋಲೂ ಮುರಿಯದಂತೆ ಮಧ್ಯದ […]
ಅಂದುಕೊಳ್ಳುತ್ತಾಳೆ
ಕವಿತೆ ಅಂದುಕೊಳ್ಳುತ್ತಾಳೆ ಪ್ರೇಮಾ ಟಿ.ಎಂ.ಆರ್. ಏನೆಲ್ಲ ಮಾಡಬೇಕೆಂದುಕೊಳ್ಳುತ್ತಾಳೆ ಅವಳು ನಗಿಸಬೇಕು ನಗಬೇಕುನೋವುಗಳಿಗೆಲ್ಲ ಸಾಂತ್ವನವಾಗಬೇಕುಕಲ್ಲೆದೆಗಳ ಮೇಲೆ ನಿತ್ಯನೀರೆರೆದು ಮೆತ್ಗಾಗಿಸಿ ನಾದಬೇಕು ತನ್ನೊಳಗಿನ ಕೊರತೆಗಳನ್ನೆಲ್ಲಪಟ್ಟಿಮಾಡಿ ಒಪ್ಪಿಕೊಂಡುಬಿಡಬೇಕೆಂದುಕೊಳ್ಳುತ್ತಾಳೆನೀರವ ಇರುಳಲ್ಲಿ ತಾರೆಗಳಎಣಿಸುತ್ತ ಹೊಳೆದಂಡೆಮರದಡಿಗೆ ಕೂತಲ್ಲೇ ಅಡ್ಡಾಗಿನಿದ್ದೆಹೋಗಬೇಕು ಕಪ್ಪು ಕಲ್ಲರೆಮೇಲೆ ಬೆಳ್ನೊರೆಯಕಡಲಾಗೋ ಮಳೆಹನಿಯಜೊತೆಗೊಮ್ಮೆ ಜಾರಬೇಕುಹಿಂದೆಹಿಂದಕೆ ಹಿಂತಿರುಗುವಂತಿದ್ದರೆಕುಂಟಾಬಿಲ್ಲೆ ಕಣ್ಣಾಕಟ್ಟೆಮತ್ತೊಮ್ಮೆ ಆಡಬೇಕುಬಿಸಿಲುಕೋಲುಗಳೆಲ್ಲ ಸಾರ್ಕೆಹೊರೆಮಾಡಿ ಹೊರಬೇಕುಮರದಡಿಯ ನೆರಳುಗಳಬರಗಿ ಬುತ್ತಿಯ ಕಟ್ಟಿತಲೆಮೇಲೆ ಹೊತ್ತು ಬಿಸಿಲಡಿಯಜೀವಗಳಿಗೆ ಹೊದೆಸಬೇಕುಅದೆಷ್ಟು ಸಾಲಗಳಿವೆ ತೀರುವದಕ್ಕೆಬಿಡಿಸಿಕೊಳ್ಳಬೇಕಿತ್ತುಗೋಜಲುಗಳ ಗಂಟುಗಳಅಂದುಕೊಳ್ಳುತ್ತಾಳೆಸದ್ದಿಲ್ಲದೇ ನಿದ್ದೆಹೋದ ಹಾದಿಯಮೇಲೆ ಒಬ್ಬಂಟಿಯಾಗಿ ನಡೆಯುತ್ತಲೇಇರಬೇಕು ಯಾರೂಅತಿಕ್ರಮಿಸದ ಗ್ರಹವೊಂದಕ್ಕೆಒಮ್ಮೆ ಗುಳೆಹೋಗಬೇಕು ತನ್ನಉಸಿರನ್ನೊಮ್ಮೆ ತಾನೇ ಕೇಳಿಸಿಕೊಳ್ಳಬೇಕುಅಂದುಕೊಳ್ಳುತ್ತಾಳೆ ***************************
ಶತಮಾನದ ಕವಿ ಯೇಟ್ಸ್
ಅಂಕಣ ಬರಹ ಶತಮಾನದ ಕವಿ ಯೇಟ್ಸ್ ಅನುವಾದ :ಡಾ. ಯು.ಆರ್.ಅನಂತಮೂರ್ತಿಪ್ರ : ಅಭಿನವ ಪ್ರಕಾಶನಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೭೫ಪುಟಗಳು : ೧೨೮ ಜಗತ್ಪ್ರಸಿದ್ಧ ಇಂಗ್ಲಿಷ್ ಕವಿ ಡಬ್ಲಿಯೂ.ಬಿ.ಯೇಟ್ಸ್ನ ಮಹ ತ್ವದ ೧೭ ಕವನಗಳ ಅನುವಾದ ಈ ಸಂಕಲನದಲ್ಲಿದೆ. ಜೊತೆಗೆ ಕವಿ-ಕಾವ್ಯ ಪರಿಚಯ,ಪ್ರವೇಶಿಕೆ ಮತ್ತು ವಿಶ್ಲೇಷ ಣೆಗಳೂ ಇವೆ. ಕಾವ್ಯ ರಚನೆಯ ಹಿಂದಿನ ಶ್ರಮ ಮತ್ತು ಗಂಡು-ಹೆಣ್ಣು ಪರಸ್ಪರ ತಮ್ಮೊಳಗೆ ಹುಟ್ಟಿಕೊಳ್ಳುವ ಪ್ರೀತಿ ಯನ್ನು ತೆರೆದು ಹೇಳಿಕೊಳ್ಳಲು ಪಡುವ ಒದ್ದಾಟಗಳ ಕುರಿ ತು ‘ಆದಮ್ಮಿನ ಶಾಪ’ […]
ಅಬಾಬಿ ಕಾವ್ಯ
ಕವಿತೆ ಅಬಾಬಿ ಕಾವ್ಯ ಹುಳಿಯಾರ್ ಷಬ್ಬೀರ್ 01 ತಸ್ಬಿ ಮುಟ್ಟಿದ ಕೈಹಳೆಯ ಕೋವಿಯನಳಿಕೆಯಲ್ಲಿನ ಗೂಡು ಬಿಚ್ಚಿತುಷಬ್ಬೀರ್…!ಆತ್ಮ ರಕ್ಷಣೆಗಾಗಿ. 02 ಸಾಮರಸ್ಯದ ಹೆಸರೇಳಿರಾಮ ರಹೀಮರನ್ನುದ್ವೇಷಿಗಳಾಗಿಸಿರುವರುಷಬ್ಬೀರ್…!ಖಾದಿ ಖಾವಿಯ ಮುಖವಾಡ. 03 ಜಾನಿಮಾಜ಼್ ನ ಮೇಲೆಜಾನ್ ಇಟ್ಟು ನಮಾಜ಼್ಆವಾಹಿಸಿಕೊಂಡವರುಷಬ್ಬೀರ್…!ಭಗವಂತನಿಗೆ ಶರಣಾದವರು. 04 ಪುಡಿಗಾಸಿನಲ್ಲೇಇಡೀ ಬದುಕ ಬಿಡಿ ಬಿಡಿಯಾಗಿಅಂದೇ ದರ್ಬಾರ್ ಮಾಡುವರುಷಬ್ಬೀರ್…!ನನ್ನ ಜನ ನನ್ನವರು. 05 ಯಾ..! ಅಲ್ಲಾ…ಎಲ್ಲಾ ಯೋಜನೆಗಳಂತೆನನ್ನ ಕನಸುಗಳಿಗೂಷಬ್ಬೀರ್…!ಸಬ್ಸಿಡಿ ಕೊಡಿಸುವೆಯಾ..? *************************
ಕವಿತೆ ಕಮಲೆ ಮಾಂತೇಶ ಬಂಜೇನಹಳ್ಳಿ ಕೆರೆಯ ಏರಿ ಮೇಲೆನಿನ್ನ ಕನಸುಗಳ ಬೆನ್ನೇರಿಕುಳಿತ ನಾ… ಅಲ್ಲೇ ಸನಿಹತಣ್ಣಗೆ ಸುಳಿದೋಗುವಾಗಕಾಣಲಿಲ್ಲವೇ? ಕೆರೆ ದಿಣ್ಣೇಲಿ ಆಜಾನುಬಾಹುಆಲದ ಬಿಳಲು, ನಾ ಜೀಕುವಜೋಕಾಲಿ, ನೀನೇ ಹರಿದದ್ದು..ತಿಳಿದೂ ಬೇಸರಿಸದೆಮರೆತುಬಿಟ್ಟಿರುವೆ… ರವಿ ಪಡುವಣಕ್ಕಿಳಿದ,ಕಣ್ಣುಗಳೋ ಮಬ್ಬಾಗುತಿವೆ..ನನ್ನವೇ ಕನಸುಗಳಪುಕ್ಕಟೆ ಬಿಕರಿಗಿಟ್ಟಿದ್ದೇನೆ..ಚೌಕಾಸಿಯಿನ್ನೇಕೆ?!..ನೀಡಿಬಿಡುವೆ ನಿನಗೆ,ಕಾಣಬಾರದೇ?.. ಇಳಿ ಹೊನ್ನ ಸಂಜೇಲಿ,ನಿರ್ಜನ ನೀರವ ಮೌನದಿ,ನಿರೀಕ್ಷೆಯ ಕಂಗಳಲಿ,ಸುತ್ತಲೂ ಹುಡುಕುತಲೇ..ನೆನಪುಗಳ ಅಡಕುತಿರುವೆ,ಬರಬಾರದೇ?.. ಕೆರೆಯೊಳಗೆದ್ದು ತಾಕಿಯೂ..ಅಂಟದ ತೇವ ಬಿಂದುಗಳ್ಹೊತ್ತಪಂಕಜೆಯ ಪತ್ರಗಳಂತೆ,ನನ್ನ ಕನಸುಗಳಕೊಳ್ಳಲೊಪ್ಪದ, ಅಪ್ಪದಓ ಕಮಲೇ..ಒಮ್ಮೆ ಒಪ್ಪು ಬಾರೆ… **********************
ಆಡು ಭಾಷೆಯ ವೈಶಿಷ್ಟ್ಯತೆ
ಪ್ರಬಂಧ ಆಡು ಭಾಷೆಯ ವೈಶಿಷ್ಟ್ಯತೆ ಬಾಲಾಜಿ ಕುಂಬಾರ ನಮ್ಮ ಉತ್ತರ ಕರ್ನಾಟಕದ ಭಾಷೆಗೂ ದಕ್ಷಿಣ ಕನ್ನಡದ ಮಾತುಗಾರಿಕೆಗೂ ತುಂಬಾ ವ್ಯತ್ಯಾಸ ಕಾಣುತ್ತೇವೆ. ಉತ್ತರ ಕರ್ನಾಟಕದ ಮಂದಿ ಹೇಳಿ ಕೇಳಿ ತುಂಬಾ ಸೀದಾ ಸಾದಾ, ಭಾಳ ಮುಗ್ದ ಸ್ವಭಾವದ ಗಟ್ಟಿ ಜನ, ಬಿಳಿ ಜೋಳ ರೊಟ್ಟಿ , ಫುಂಡೆ ಪಲ್ಯ ಜೊತೆಗೆ ಉಳಾಗಡ್ಡೆ ಖಾರಾ, ಹಸಿ ಖಾರಾ ತಿಂದರೂ ‘ಇನ್ನೂ ಸ್ವಲ್ಪ ಸಪ್ಪಗೆ ಆಗ್ಯಾದ್ ಪಲ್ಯ’ ಎನ್ನುವ ಜವಾರಿ ಜನ, ಎಲ್ಲಿ ಹೋದರೂ ಏನಾದರೂ ಹೊಸತನ ಕಾಣುವುದು, ಹೊಸ […]
ಕನ್ನಡ ಸಾಹಿತ್ಯ ಪರಿಷತ್ತು ನಡೆದ ಬಂದ ದಾರಿ..!
ಕನ್ನಡ ಸಾಹಿತ್ಯ ಪರಿಷತ್ತು ನಡೆದ ಬಂದ ದಾರಿ..! ಈಗ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಬೇಕಿದೆ. ಪ್ರಸ್ತವಾಗಿ ಮ.ನು.ಬಳೆಗಾರರ ಅವಧಿ ಮುಗಿದಿದೆ. ಅದಕ್ಕಾಗಿ ಈಗಾಗಲೇ ತಯ್ಯಾರಿಯೂ ನಡೆದಿದೆ. ಹಾಗಾದರೆ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯನ್ನು ಅವಲೇಕಿಸೋಣ..! ಬ್ರಿಟಿಷ್ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದ್ದ ಮದ್ರಾಸ್, ಮುಂಬೈ ಪ್ರಾಂತ್ಯಗಳಲ್ಲಿ ದ್ವೀಪಗಳಂತೆ ಸೊಂಡೂರು, ಸವಣೂರು, ರಾಮದುರ್ಗ ಮುಂತಾದ ಹಿರಿಯ, ಕಿರಿಯ ಸಂಸ್ಥಾನಗಳು ಇದ್ದವು. ಕನ್ನಡ ಜನ ಭಿನ್ನ ಭಿನ್ನ ಆಡಳಿತ ಘಟಕಗಳ ಹಿಡಿತದಲ್ಲಿದ್ದರೂ ಅವರು ಆಡುತ್ತಿದ್ದ […]