ಶತಮಾನದ ಕವಿ ಯೇಟ್ಸ್

ಅಂಕಣ ಬರಹ

ಶತಮಾನದ ಕವಿ ಯೇಟ್ಸ್

ಅನುವಾದ :ಡಾ. ಯು.ಆರ್.ಅನಂತಮೂರ್ತಿ
ಪ್ರ : ಅಭಿನವ ಪ್ರಕಾಶನ
ಪ್ರಕಟಣೆಯ ವರ್ಷ : ೨೦೦೮
ಬೆಲೆ : ರೂ.೭೫
಻ಪುಟಗಳು : ೧೨೮

ಜಗತ್ಪ್ರಸಿದ್ಧ ಇಂಗ್ಲಿಷ್ ಕವಿ ಡಬ್ಲಿಯೂ.ಬಿ.ಯೇಟ್ಸ್ನ ಮಹ ತ್ವದ ೧೭ ಕವನಗಳ ಅನುವಾದ ಈ ಸಂಕಲನದಲ್ಲಿದೆ.  ಜೊತೆಗೆ ಕವಿ-ಕಾವ್ಯ ಪರಿಚಯ,ಪ್ರವೇಶಿಕೆ ಮತ್ತು ವಿಶ್ಲೇಷ ಣೆಗಳೂ ಇವೆ. ಕಾವ್ಯ ರಚನೆಯ ಹಿಂದಿನ ಶ್ರಮ ಮತ್ತು  ಗಂಡು-ಹೆಣ್ಣು ಪರಸ್ಪರ ತಮ್ಮೊಳಗೆ ಹುಟ್ಟಿಕೊಳ್ಳುವ ಪ್ರೀತಿ ಯನ್ನು ತೆರೆದು ಹೇಳಿಕೊಳ್ಳಲು ಪಡುವ ಒದ್ದಾಟಗಳ ಕುರಿ ತು ‘ಆದಮ್ಮಿನ ಶಾಪ’ ಹೇಳಿದರೆ,ಮುಂದಿನ ಕವನ. ‘ಓ  ಬಹುಕಾಲ ಪ್ರೀತಿಸಬೇಡ’ ಪ್ರೀತಿಯ ಬಗೆಗೇ ಇದೆ.  ‘ಈಸ್ಟರ್ ೧೯೧೬’ ಐರ್ಲ್ಯಾಂಡಿನ ಸ್ವಾತಂತ್ರ್ಯ ಹೋರಾಟದ ಲ್ಲಿ  ಅಸುನೀಗಿದ ಹುತಾತ್ಮರ ಕುರಿತು ಸಾಂದರ್ಭಿಕವಾಗಿ ಬರೆದ ಕವನವಾದರೂ ಯೇಟ್ಸನ ರಾಜಕೀಯ ಚಿಂತನೆ, ಕಲಾತ್ಮಕ ದೃಷ್ಟಿಕೋನ,ಮತ್ತು ವೈಯಕ್ತಿಕ ಭಾವನಾತ್ಮಕ ಬೆಸುಗೆಗಳ ಸುಂದರ ಬೆಸುಗೆ ಇಲ್ಲಿದೆ.

ಬದುಕಿನ ಅಗ್ನಿ ದಿವ್ಯ ದಲ್ಲಿ ಸುಟ್ಟು ಪುಟಗೊಳ್ಳುವ ಕವಿಯ ಆಸೆಯನ್ನು ‘ಬೈಝಾಂಟಿಯಮ್ಮಿಗೆ ಯಾನ’ ವ್ಯಕ್ತ ಪಡಿಸು ತ್ತದೆ.ಕವಿಯ ದೃಷ್ಟಿಯಲ್ಲಿ ದೇಹವೆಂದರೆ ಮದದಿಂದ ಕೊ ಬ್ಬುವ,ಆದರೆ ಮುದಿತನದಲ್ಲಿ ಬೆದರುಗೊಂಬೆಯಂತೆ ಸು ಕ್ಕಿ ಸೊರಗುವ ಪಶು.ಇಲ್ಲಿ ಕವಿ ಜೈವಿಕವಾದ ಹಾಡುವ ಶಕ್ತಿ ಎಂದೆಂದಿಗೂ ಸೊರಗದೆ ಉಳಿಯುವ ಬಂಗಾರದ ಪಕ್ಷಿ ಯಾಗಲು ಪ್ರಯತ್ನಿಸುತ್ತಾನೆ.

 ‘ಜೀವ-ಆತ್ಮರ ನಡುವೆ ಸಂವಾದ’ ಎಂಬ ಕವನವೂ ದೇಹ ಮತ್ತು ಆತ್ಮಗಳ ನಡುವಣ ದ್ವಂದ್ವ-ತಾಕಲಾಟಗಳ ಕುರಿತು ಚರ್ಚಿಸುತ್ತದೆ. ಇಲ್ಲಿ ದೇಹಕ್ಕೆ ಎದುರಾಗಿ ನಿಲ್ಲುವ ಆತ್ಮದ ಮಾತು ತಾತ್ವಿಕವಾದದ್ದು.ಆದರೆ ಕೊನೆಯಲ್ಲಿ ಕವಿ ಜೀವ ಪರವಾಗಿ ಮಾತನಾಡುತ್ತಾನೆ.ಎಲ್ಲ ಸಂಕೋಚಗಳನ್ನು ಗಾ ಳಿಗೆ ಚೆಲ್ಲಿ ಮುಕ್ತನಾದ ಜೀವಿಯಷ್ಟೇ ಶುಭ್ರನಾಗುತ್ತಾನೆ.  ವೃದ್ಧಾಪ್ಯದಲ್ಲಿ ವೈರಾಗ್ಯದತ್ತ ವಾಲಿದ್ದ ಯೇಟ್ಸ್ ಕೊನೆಗಾಲ ದಲ್ಲಿ  ಕಾಮವನ್ನು ಹತ್ತಿಕ್ಕಲಾಗದೆ ಬರೆದ ‘ಹುಚ್ಚು ಕವನ’ ಗಳಲ್ಲಿ ಒಂದಾದ ‘ಮರುಳಿ ಜೇನ್ ಪಾದ್ರಿಗೆ’ ಕಾಮವನ್ನು ಮುಕ್ತವಾಗಿ ಅನುಭವಿಸಿದ  ಓರ್ವ ವೇಶ್ಯೆ ಕಾಮವನ್ನು ಬಲವಂತವಾಗಿ ಹತ್ತಿಕ್ಕಿಕೊಂಡು ಬದುಕಿದ ಒಬ್ಬ ಬಿಷಪ್ಪನಿ ಗೆ ಹಾಕುವ ಸವಾಲುಗಳ ಮೂಲಕ ಕವಿ ಕಂಡುಕೊಂಡ ಸತ್ಯಗಳನ್ನು ಬಯಲು ಮಾಡುತ್ತದೆ. ಹೀಗೆ ದೇಶ-ಕಾಲಗಳ ಪರಿಮಿತಿಗಳನ್ನು ಮೀರಿ ಮಹತ್ವ ಪಡೆದ ಕವನಗಳನ್ನು ಈ ಸಂಕಲನ ಸೇರಿಸಿಕೊಂಡಿದೆ.

ಇವು ಅನುವಾದ ಅನ್ನುವುದಕ್ಕಿಂತಲೂ ಯೇಟ್ಸನ ಮೂಲ ಕವನಗಳ ಸ್ಫೂರ್ತಿ ಪಡೆದು ಬರೆದ ಸ್ವತಂತ್ರ ಕವನಗಳಂತಿ ವೆ.ಹಲವು ಪದಗಳು,ಪದಪುಂಜಗಳು,ಕೆಲವೊಮ್ಮೆ ಪೂ ರ್ತಿ ಸಾಲುಗಳೇ ತಮ್ಮ ಸ್ವರೂಪದಲ್ಲಿ ಮೂಲಕ್ಕಿಂತ ಭಿನ್ನ ವಾಗಿ ನಿಲ್ಲುವುದು ಸ್ಪಷ್ಟವಾಗಿ ಕಾಣುತ್ತದೆ. ‘ಆಫ್ಟರ್ ಲಾಂ ಗ್ ಸೈಲೆನ್ಸ್’, ‘ಅ ಡಯಲಾಗ್ ಆಫ್ ದ ಸೆಲ್ಫ್ ಅಂಡ್ ಸೋಲ್’ ‘ದ ಚಾಯಿಸ್’ ಮೊದಲಾದ ಕವನಗಳಲ್ಲಿ ಇದಕ್ಕೆ ನಿದರ್ಶನಗಳನ್ನು ಕಾಣಬಹುದು.

**************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Leave a Reply

Back To Top