ಅಂಕಣ ಬರಹ ಕಳೆದುಕೊಂಡದ್ದು ಸಮಯವಾದರೆ ಹುಡುಕಲೂ ಆಗದು        (ಟೈಂ ಬ್ಯಾಂಕ್ ಅಕೌಂಟ್ ಮೆಂಟೇನನ್ಸ್- ಹೀಗೆ ಮಾಡಿ ನೋಡಿ )           ಟೈಂ ನೋಡೋಕೂ ಟೈಂ ಇಲ್ಲ. ಎಲ್ಲಾ ಟೈಮಿನೊಳಗೂ ಮೈ ತುಂಬ ಕೆಲಸ. ಎಲ್ಲಿ ಕುಂತರೂ ಕೆಲಸ ಕೈ ಮಾಡಿ  ಕರಿತಾವ..ಮೈ ಕೆರೆದುಕೊಳ್ಳಲೂ ಪುರುಸೊತ್ತಿಲ್ಲದಂಗ ಕೆಲಸ ಮಾಡಿದರೂ ಕೆಲಸ ಮುಗಿತಿಲ್ಲ. ಆದರೂ ಮಾಡಿದ ಕೆಲಸ ಒಂದೂ  ನೆಟ್ಟಗಾಗ್ತಿಲ್ಲ ಎನ್ನುವದು ಅನೇಕರ ಗೊಣಗಾಟ. ಇಂಥ ಟೈಮಿನೊಳಗ ಕನಸು ಬೇರೆ ಕಾಡ್ತಾವ. ಕನಸು ಕಾಣಬೇಕೋ ನೆಟ್ಟಗಾಗುವಂಗ ಕೆಲಸ ಮಾಡೂ […]

ಅಂಕಣ ಬರಹ ಸಾಹಿತ್ಯಿಕ ರಾಜಕಾರಣ ಸಮಾಜಕ್ಕೆ ಅತೀ ಹೆಚ್ಚು ಅಪಾಯಕಾರಿ ಕೆ.ಬಿ.ವೀರಲಿಂಗನಗೌಡ್ರ ಪರಿಚಯ ಬಾಗಲಕೋಟ ಜಿಲ್ಲೆ, ಬಾದಾಮಿ ತಾಲೂಕಿನ ನಂದಿಕೇಶ್ವರ ಸ್ವಗ್ರಾಮ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(ಶಿರ್ಸಿ) ಪಟ್ಟಣದಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವೆ. ಪ್ರಕಟಿತ ಕೃತಿಗಳು ‘ಅರಿವಿನ ಹರಿಗೋಲು’ (ಕವನ ಸಂಕಲನ), ‘ಅವಳು ಮಳೆಯಾಗಲಿ’ (ಕಥಾ ಸಂಕಲನ), ಘಟಸರ್ಪ (ಸಾಮಾಜಿಕ ನಾಟಕ), ‘ಸಾವಿನಧ್ಯಾನ’ (ಲೇಖನಗಳ ಸಂಕಲನ), ‘ಮೌನ’ (ಸಂಪಾದಿತ) ಸಂದರ್ಶನ ಪ್ರಶ್ನೆ  :ನೀವು ಚಿತ್ರ ಮತ್ತು ಕವಿತೆಗಳನ್ನು ಏಕೆ ಬರೆಯುತ್ತಿರಿ? ಉತ್ತರ           :ನನ್ನೊಳಗೆ ನುಸುಳುವ […]

ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ

ಲೇಖನ ಮಕ್ಕಳಿಗೂ ಒಂದು ವ್ಯಕ್ತಿತ್ವವಿದೆ ಡಾ. ಸಹನಾ ಪ್ರಸಾದ್ ಇಂದಿನ ಜೀವನ ಬಹಳ ಸ್ಪರ್ಧಾತ್ಮಕವಾದುದು.ನಮ್ಮ ಯುವ ಜನಾಂಗವನ್ನು ನೋಡಿದಾಗ ಕೆಲವೊಮ್ಮೆ “ ಅಯ್ಯೋ ಪಾಪ” ಎನ್ನಿಸುವುದುಂಟು.ಎಷ್ಟು ಓದಿದರೂ ಸಾಲದು, ಎಷ್ಟು ಕಷ್ಟಪಟ್ಟರೂ, ಎಷ್ಟು ಅಂಕೆಗಳು ತೆಗೆದರೂ ಸಾಕಾಗುವುದಿಲ್ಲ. ಯಾವಾಗಲೂ ಒತ್ತಡದ ಬದುಕು. ಚಿಕ್ಕ ತರಗತಿಗಳಿಂದಲೇ ಶುರು.ತರಹ ತರಹದ ಕ್ಲಾಸುಗಳು, ಮನೆ ಪಾಠಗಳು, ಒಂದು ತರಗತಿಯಿಂದ ಇನ್ನೊಂದಕ್ಕೆ ಯಾವಾಗಲೂ ಓಟ. ನರ್ಸರಿಗೆ ಸೇರುವ ಮೊದಲೇ “ಕೋಚಿಂಗ್”. ವಿಧ ವಿಧವಾದ ಬಣ್ಣಗಳು,ಆಕೃತಿಗಳು, ಪದ್ಯಗಳನ್ನು ಕಂಠ ಪಾಠ ಮಾಡಬೇಕು. ತಾಯಿ ಪ್ರೀತಿಯಿಂದ […]

ಒಂದು ಸುಖದ ಹಾಡು.

ಕವಿತೆ ಒಂದು ಸುಖದ ಹಾಡು. ನಂದಿನಿ ಹೆದ್ದುರ್ಗ ಪ್ರತಿ ಭೇಟಿಗೂ ಅವನುಳಿಸಿಹೋಗುತ್ತಿದ್ದ ಒಂದಾದರೂಕೊರತೆಯ ಕಾವಿನಲಿಬೇಯುತ್ತಾ ಬದುಕಿಕೊಳುವಸುಖದಅಭ್ಯಾಸವಾದವಳು ನಾನು. ಮರೆತೇ ಬಿಟ್ಟ ಈ ಬಾರಿಯಾಕೋ.ತೃಪ್ತ ಎದೆಯಲ್ಲಿ ಚಿಮ್ಮುವವೆತಪ್ತ ಹಾಡುಗಳು.?ಬೇಸರಕೆ ಆಕಳಿಕೆ. ಕತ್ತಿನೆತ್ತರದಲಿ ಅವನಿತ್ತಮುತ್ತುಗಳಅದೋ..ಆ ಮರದಡಿ ಹರಡಿಬಿಟ್ಟೆ..ಅವನ ಹಂಗಿರದೆಹಲವು ನಿಮಿಷಹಾಯೆನಿಸಿತು. ಹೊರಗೆ ಸಣ್ಣಗೆ ಸೋನೆ.ಅವನಿರದ ಎದೆಯೊಳಗೆಮತ್ತವನದೇ ಕಾಮನೆ. ಮೊಳಕೆಯೊಡೆಯುತಿದೆಬಿಸುಟ ಮುತ್ತೊಂದು.ಎರಡೆಲೆಯೆದ್ದು ಕಣ್ಣ ಪಿಳುಕಿಸಿದಒಡನೆಚಿಗುರು ಚಿವುಟಿ ಬಿಸುಟಲುಠರಾವು ಮಾಡಿರುವೆ. ಪಾತಾಳಕಿಳಿಯುತಿದೆ ಬೇರು.ಅವರಿವರಿಗೆ ಅಲ್ಲೊಂದು ಸಸಿಇರುವ ಕುರುಹೂ ಇರದೆ.ಎತ್ತರಕ್ಕಿಂತಲೂ ಆಳದಹುಚ್ಚಿನವಳು ನಾನು. ಅವನ ಸಣ್ಣಗೆ ನೋಯಿಸುತ್ತಒಳಗೊಳಗೆ ನಗುವಾಗೆಲ್ಲಾಕಿರುಬೆರಳನೆರಳೊಂದು ನವುರಾಗಿ ಕೊರಳತಾಕಿ ಹೋಗುತ್ತದೆ.ನಾನೀಗ ಸುಖವಾಗಿರುವೆ..****************************

ಹೃದಯಂಗಮ

ಕವಿತೆ ಹೃದಯಂಗಮ ಸ್ಮಿತಾ ಭಟ್ ನೀನಿರುವುದೇ ಬಡಿದುಕೊಳ್ಳಲುಅನ್ನುವಾಗಲೆಲ್ಲಒಮ್ಮೆ ಸ್ತಬ್ಧವಾಗಿಬಿಡುಎನ್ನುವ ಪಿಸುಮಾತೊಂದ ಹೇಳಬೇಕೆನಿಸುತ್ತದೆ! ‘ಹೃದಯದ ಮಾತು ಕೇಳಬೇಡಬುದ್ಧಿಯ ಮಾತು ಕೇಳು’ಎನ್ನುವ ಫಿಲಾಸಫಿಗಳಎದೆಗಾತುಕೊಳ್ಳುವ ಕಿವಿಗಳಿಗೆ ಇಯರ್ ಪೋನ್ ಜೋತು ಬಿದ್ದುಲಬ್ ಡಬ್ಒಂಟಿಬಡಿತ! ಅಡಿಯಿಂದ ಮುಡಿಯವರೆಗೂಪಾರುಪತ್ಯದ ಅಧಿಕಾರ ಹೊತ್ತರೂನಿರಂತರ ಚಲನೆಯಲ್ಲಿ ನಿಲ್ಲುವ ಅಧಿಕಾರವಿಲ್ಲ! ಚೂರೇ ಚೂರು ದಣಿವಿಗೆ ಕೊಸರಿಕೊಂಡರೂಭುಗಿಲೇಳುವ ಭಯದ ಹನಿ. ಇರ್ರಿ, ಹೃದಯ ಬಡಿತ ಶುರುವಾಗಲಿ ಈಗೇನೂ ಹೇಳುವದಿಲ್ಲ –ಎದೆಯ ಮೇಲೆ ಕೈ ಇಟ್ಟು ಸ್ಕ್ಯಾನಿಂಗ್ ಕೋಣೆಯಿಂದ ಹೊರ ಬರುವ ಜೀವಮನದೊಳಗಿನ ಪ್ರತೀ ಭಾವಕ್ಕೂ ಸ್ಪಂದಿಸಿ –ಲಬ್ ಡಬ್ ಮತ್ತಷ್ಟು […]

ಕ್ಷಮಿಸಲಾಗದು

ಕ್ಷಮಿಸಲಾಗದು ಸುಧಾ ಹಡಿನಬಾಳ ಹೇ ನಿಷ್ಕರುಣಿ ನಿರ್ಗುಣಿಕರುಣೆಯಿಲ್ಲದ ನಿರ್ದಯಿ ಸಿಂಹಿಣಿಸಾವು ಬರಲೆಂದುದಿನವೂ ಹಂಬಲಿಸುವವರಮೇಲಿಲ್ಲ ನಿನ್ನ ಕರುಣಇನ್ನೂ ಬಾಳಿ ಬದುಕಬೇಕಾದಮುಗ್ಧ ಜೀವಗಳ ಸಂಚು ಹಾಕಿಪ್ರಾಣ ಹೀರಿ ಹೊತ್ತೊಯ್ಯುವನಿನ್ನ ಭಯಾನಕ ಪರಿಸಹಿಸಲಾಗದು ನಿನ್ನ ಕ್ಷಮಿಸಲಾಗದುಯಾಕೆ ನಿನಗೆ ಯಾರ ಯಾರಮೇಲೊ ಕಾಕ ದೃಷ್ಟಿ..?ಒಂದು ಸಣ್ಣ ಸುಳಿವೂನೀಡದೆ ಕಸಿದುಕೊಳ್ಳುವೆಯಲ್ಲಮೊಲೆಯನುಂಬ ಕಂದಮ್ಮಗಳ ತಾಯ್ಗಳಇನ್ನೂ ಬಾಳಿ ಬದುಕಿಎಲ್ಲರಿಗೂ ಬೇಕಾದವರಜೀವಕ್ಕೆ ಜೀವವಾಗಿ ಅರಿತುಬೆರೆತ ಸತಿ ಪತಿಗಳಲ್ಲೊಬ್ಬರಇಳಿ ವಯದಲ್ಲಿ ಊರುಗೋಲಿನಂತೆಆಸರೆಯಾಗಿ ನಿಂತವರಪಾಪ ಪುಣ್ಯ ಎಲ್ಲ ಕಂತೆಪಾಪಿಗಳಿಗಲ್ಲಿ ನಿಶ್ಚಿಂತೆಮುಗ್ಧ ಮಾನವಂತರಿಲ್ಲಿನಿನ್ನ ತೋಳ ತೆಕ್ಕೆಯಲ್ಲಿನಿನಗಿಲ್ಲ ಯಾರ ಮೇಲೂದಯೆ, ಪ್ರೀತಿ, ಕರುಣನಿನ್ನ ಹೆಸರೆ […]

ಥಾಂಕ್ಸ್ ಎಂದರೆ ಸಾಕೇ

ಲೇಖನ ಥಾಂಕ್ಸ್ ಎಂದರೆ ಸಾಕೇ ಶಾಂತಿವಾಸು ನನಗೆ ನಮ್ಮಪ್ಪ (ನಾವು ನಮ್ಮಪ್ಪನನ್ನು ಅಣ್ಣ ಅಂತಾನೇ ಕರೀತಿದ್ದಿದ್ದು) ಏನು ಅಂತ ಅರ್ಥವಾಗಿದ್ದು, ನಾನು ಮದುವೆ ಆದ ಮೇಲೇನೆ. ನನ್ನ ಮದುವೆಯಾದ ನಂತರ ಮೊದಲ ಸಲ ಅತ್ತೆ ಮನೆಗೆ ಹೊರಡಿಸಲು ಕೆಲವರು ಹಾಗೂ ಕರೆದುಕೊಂಡು ಹೋಗಲು ಬಂದ ನೆಂಟರು ಮನೆ ತುಂಬಾ ತುಂಬಿರುವಾಗ, ನಮ್ಮಪ್ಪ ಬಚ್ಚಲುಮನೆಯ ಒಳಗೆ ಸೇರಿಕೊಂಡು ಚಿಲಕ ಜಡಿದು ಕಿರಿಚಿ ಕಿರಿಚಿ ಅತ್ತಿದ್ದನ್ನು ಕಂಡು ಎಲ್ಲರಿಗೂ ಪರಮಾಶ್ಚರ್ಯ. ನಮ್ಮಪ್ಪನ ಹೃದಯದಲ್ಲಿಯೂ ಪ್ರೀತಿ ಎಂಬ ಒರತೆ ಜಿನುಗುತ್ತದೆ ಎಂದು […]

ಸ್ನೇಹ

ಕವಿತೆ ಸ್ನೇಹ ನೂತನ ದೋಶೆಟ್ಟಿ ಶುಭ್ರ ಬೆಳಗಿನಲ್ಲಿನೀಲಿ ಆಕಾಶಬಾನ ತುಂಬೆಲ್ಲನಗುಮೊಗದ ಬಿಳಿ ಮೋಡ ಕವಿ ಕಲ್ಪನೆಯಗರಿ ಬಿಚ್ಚುವ ಹೊತ್ತುಹೂ ದಳಗಳ ತುದಿಎಲೆಯಂಚಿನ ಬದಿಮಣಿ ಮಾಲೆ ಸೃಷ್ಟಿ ನೇಸರನಿಟ್ಟ ರಂಗೋಲಿಕಾಮನಬಿಲ್ಲಿನಕಾವ್ಯ ರಂಗಿನ ಮುನ್ನುಡಿ ಹೊತ್ತೇರಿ ಸುಡು ಬಿಸಿಲುನೆತ್ತಿಯ ಸೂರ್ಯನೇಕಳಕಳಿಸಿ ನೀಡಿದತಂಪು ನೆರಳು ನಸು ನಾಚಿ ಮುತ್ತಿಕ್ಕಿಇಳೆಯ ಬೀಳ್ಕೊಟ್ಟುದೂರ ಸರಿವನೋವ ಮರೆಯಲುಚಂದ್ರಗೆ ಅಹವಾಲು ರಾತ್ರಿ ಕಳೆದುಅರುಣೋದಯಕಲ್ಪನೆಯಹರಿವ ತೊರೆಯಸಲಲ ನಿನದರವರವ ಇದು ಸ್ನೇಹಬಾನು, ಭೂಮಿನೀರು , ನೆಲಚಂದ್ರಮನ ಬಿಳುನೊರೆ ಕಲಿಯಬೇಕುಇದರಿಂದಸ್ನೇಹದ ಗುಟ್ಟುಸಮರಸದ ನಂಟಲ್ಲದೆಬದುಕಲೇನು ಉಂಟು? ***********************

ಉರಿಯುತ್ತಿದ್ದೇನೆ…. ಅಯ್ಯೋ!

ಕವಿತೆ ಉರಿಯುತ್ತಿದ್ದೇನೆ…. ಅಯ್ಯೋ! ಕಾತ್ಯಾಯಿನಿ ಕುಂಜಿಬೆಟ್ಟು ಸಾವಿನ ಕೆಂಡದ ಮೇಲೆಓಡುತ್ತಲೇ ಇರುವ ಲಾಕ್ಷಾದೇಹ…ಲೆಪ್ಪದ ಗೊಂಬೆ ನಾನುನಿಂತರೆ ಕರಗುತ್ತದೆ ಕೋಮಲ ಅರಗು ಮೈ…ಆತ್ಮ ಹಾರಿ ಇನ್ನೊಂದು ಮೈಯನ್ನುಪಡೆದು ಹೊಸದಾಗಿ ಹುಟ್ಟುತ್ತೇನೆಮರಳಿ ಮರಳಿ ನಾನು ನನ್ನ ಆತ್ಮ ನನ್ನದೆಂದುಕೊಂಡಿದ್ದೆಆದರೆ…ಇದು ನನ್ನದಲ್ಲವೇ ಅಲ್ಲ!ತಲೆ ತಲಾಂತರದಿಂದ ದೇಹದಿಂದ ದೇಹ ದೇಹದಿಂದ ದೇಹದೇಹ ದೇಹ ದೇಹಗಳನ್ನು ದಾಟಿಈಗ ಈ ದೇಹದೊಳಗೆಸೇರಿಕೊಂಡಿದೆಹಾಗಾದರೆ ನಾನು ಯಾರು?ಈ ದೇಹವೇ? ಆ….. ಆತ್ಮವೇ? ದೇಹದಿಂದ ದೇಹಕ್ಕೆ ಹಾರುವ ಅತೃಪ್ತ ಹೆಂಗಸಿನಂತೆಅಥವಾ ಗಂಡಸಿನಂತೆಹಾದರಗಿತ್ತಿ ಅಥವಾ ಹಾದರಗಿತ್ತವಲ್ಲವೇ ದೇವರೇಈ ಆತ್ಮಗಳು?ಹೊಸ ಅಂಗಿ ಹೊಸ […]

Back To Top