ಕವಿತೆ
ಸ್ನೇಹ
ನೂತನ ದೋಶೆಟ್ಟಿ
ಶುಭ್ರ ಬೆಳಗಿನಲ್ಲಿ
ನೀಲಿ ಆಕಾಶ
ಬಾನ ತುಂಬೆಲ್ಲ
ನಗುಮೊಗದ ಬಿಳಿ ಮೋಡ
ಕವಿ ಕಲ್ಪನೆಯ
ಗರಿ ಬಿಚ್ಚುವ ಹೊತ್ತು
ಹೂ ದಳಗಳ ತುದಿ
ಎಲೆಯಂಚಿನ ಬದಿ
ಮಣಿ ಮಾಲೆ ಸೃಷ್ಟಿ
ನೇಸರನಿಟ್ಟ ರಂಗೋಲಿ
ಕಾಮನಬಿಲ್ಲಿನ
ಕಾವ್ಯ ರಂಗಿನ ಮುನ್ನುಡಿ
ಹೊತ್ತೇರಿ ಸುಡು ಬಿಸಿಲು
ನೆತ್ತಿಯ ಸೂರ್ಯನೇ
ಕಳಕಳಿಸಿ ನೀಡಿದ
ತಂಪು ನೆರಳು
ನಸು ನಾಚಿ ಮುತ್ತಿಕ್ಕಿ
ಇಳೆಯ ಬೀಳ್ಕೊಟ್ಟು
ದೂರ ಸರಿವ
ನೋವ ಮರೆಯಲು
ಚಂದ್ರಗೆ ಅಹವಾಲು
ರಾತ್ರಿ ಕಳೆದು
ಅರುಣೋದಯ
ಕಲ್ಪನೆಯ
ಹರಿವ ತೊರೆಯ
ಸಲಲ ನಿನದ
ರವರವ
ಇದು ಸ್ನೇಹ
ಬಾನು, ಭೂಮಿ
ನೀರು , ನೆಲ
ಚಂದ್ರಮನ ಬಿಳುನೊರೆ
ಕಲಿಯಬೇಕು
ಇದರಿಂದ
ಸ್ನೇಹದ ಗುಟ್ಟು
ಸಮರಸದ ನಂಟಲ್ಲದೆ
ಬದುಕಲೇನು ಉಂಟು?
***********************
ಹೌದು.ಸ್ನೇಹದ ಗುಟ್ಟು ಸಮರಸ ನಂಟು.. ಸುಂದರ ಕವಿತೆ