ಪ್ರೀತಿಯು ಅಂಕುರ ವಾಗಲು
ಮನವದು ಪಿಸು ಮಾತಾಡಿತು||
ಮೆಲ್ಲನೆ ಸವಿ ಮಾತೊಂದು
ಅಧರದಿ ಅದರುತ ಜಾರಿತು||
ಕೂಡಿಟ್ಟ ಮಾತು
ಕಣ್ಗಳೆ ಹೇಳುವಾಗ
ನನ್ನತ್ತ ನೀ ದಿಟ್ಟಿಸಿ
ಒಂದಾಗಬೇಕಿತ್ತು.
ನೀ ಹೆಜ್ಜೆಇಟ್ಟಲ್ಲೆಲ್ಲಾ ನಾ
ಹೂವಾಗಿದ್ದರೆ ಸಾಕು
ಕಡಲ ಅಲೆಯಂತೆ
ಅಪ್ಪಳಿಸಿ ಅಂತರಂಗದಲಿ
ಸುಖದ ಬುಗ್ಗೆಯ ಉಕ್ಕಿಸುವ ಪ್ರೀತಿ
ಇಟ್ಟಿಗೆಯ ಬಟ್ಟಿಯಲಿ ಬೇಯಬೇಕೆ?
ಪ್ರೀತಿ ಹುಟ್ಟಿದ ಮ್ಯಾಲ
ಜಾತಿಯೆಂಬ ಹೊಲಸು
ಬೆನ್ನಟ್ಟಿದೆ ಗೆಳತಿ
ತೀರ ಮುಟ್ಟಿ ಮತ್ತೆ ಹಿಂತಿರುಗುವ
ಕಡಲ ಹನಿಗೆ
ಎಂದೂ ತಳಮಳವಿಲ್ಲ!
ಆಕೆಯ ಕೈಯಲ್ಲಿ ಆತನ ಕೆಂಪು
ಗುಲಾಬಿಯು ನನ್ನ ನೋಡಿ ನಗುತಿತ್ತು.
ಒಡೆದ ಗಾಜಿನ ಚೂರಿನಂತೆ ಕ್ಷಣದೊಳಗೆ
ಬೆಂದ ಒಡಲು ನೊಂದ ಮಡಿಲು
ಕಡಲಾದರು ಮುತ್ತೆ ಇಲ್ಲ
ಬಯಕೆ ಕಂಗಳ ಚೆಲುವೆ
ಪ್ರಿಯತಮನ ಶಿಲಾಬಾಲಿಕೆ
ಸರಿಸಾಟಿ ಇಲ್ಲ ಜೇನಿನ ಅಧರಕೆ
ಹೂವಿನೊಳು ಗಂಧದ ಹಾಗೆ
ಗೆಜ್ಜೆಯೊಳು ನಾದದ ಹಾಗೆ
ಎಲ್ಲೆಲ್ಲೂ ಎಲ್ಲರಲೂ ನೀನೆ ನೀನೆ!