ಪ್ರೇಮದ ಕಾವ್ಯವ ಬರೆಯಲು ಕುಳಿತ
ನೋಡಲವ ಸಾಕ್ಷಾತ್ ಮದನಸುತ
ಅವನ ಧ್ಯಾನದಲೇ ಇದ್ದಳೀ ವನಿತ
ಒಪ್ಪದೇ ಕಾಡುತ್ತಿದ್ದಳು ಸತಾಯಿಸುತ

ಬಯಕೆ ಕಂಗಳ ಚೆಲುವೆ
ಪ್ರಿಯತಮನ ಶಿಲಾಬಾಲಿಕೆ
ಸರಿಸಾಟಿ ಇಲ್ಲ ಜೇನಿನ ಅಧರಕೆ
ಅವನ ಸಿಹಿ ಮುತ್ತಿನ ಕಾಣಿಕೆ

ಅವನ ನೋಟದ ಬಾಣಕೆ ನಾಚುತ
ಕಣ್ಣು ಮುಚ್ಚಿದಳು ಅವನ ಆರಾಧಿಸುತ
ತನ್ನನು ತಾನು ಪ್ರಿಯತಮಗೆ ಅರ್ಪಿಸುತ
ಪ್ರಿಯತಮನ ಹೃದಯದಲಿ ನೆಲೆಸುತ


One thought on “

Leave a Reply

Back To Top