ಸುವಿಧಾ ಹಡಿನಬಾಳ ಅವರ ಕವಿತೆ-ಓದಿನ ಸುಖ
ಹೊಸ ಪುಸ್ತಕ ಕೈಗೆ ಸಿಕ್ಕೊಡನೆ
ಪುಟ ತಿರುಗಿಸಿ ಪರಿಮಳ ಆಘ್ರಾಣಿಸಿ
ಕೈಯಲ್ಲಿ ಹಿಡಿದು ಕಣ್ಣು ಹುಗಿದು
ಓದುವ ಆ ಸುಖ ಪರಮ ಸುಖ!
‘ಹಲ್ಲು ,ಮತ್ತು ನಾಲಿಗೆಯ ಸಂದೇಶ’ ಲೇಖನ-ಮಾಧುರಿ ದೇಶಪಾಂಡೆ
ನಾಲಿಗೆ ಸ್ವಲ್ಪ ಹೆಚ್ಚು ಮೊನಚಾದಾಗ ಹೊರಟ ಅನವಶ್ಯಕ ಮಾತುಗಳು ಕಲಹ ಹಿಂಸೆಗೆ ಗುರಿಯಾಗಿ ಏಟು ತಿನ್ನುವ ಪ್ರಸಂಗ ಬಂದರೆ ಹಲ್ಲುಗಳು ಉದುರುತ್ತವೆ ಆದರೆ ನಾಲಿಗೆ ಶಾಶ್ವತವಾಗಿರುವುದಾಗಿದೆ. ಆದ್ದರಿಂದ ಸಭ್ಯ ಹಾಗೂ ಮೃದು ಸ್ವಭಾವವು ನಮಗೆ ಧೀರ್ಘಕಾಲಿಕ ಗುರುತನ್ನು ಗೌರವವನ್ನು ಕೊಡುತ್ತದೆ.
ಡಾ.ಡೋ.ನಾ.ವೆಂಕಟೇಶ ಕವಿತೆ-ಲವ್ ಆಲ್ ಲವ್
ಅವನೇ ರೆಫರೀ ಅವನೇ ಅಂಪೈರ್
ವೀಕ್ಷಕರು ನಾವು ಬರೆ ಲೈನ್ ಮನ್ ಗಳು!
ಅವನಿಗೆ ವರದಿ ಒಪ್ಪಿಸುವವರು
ಪ್ರಮೋದ ಜೋಶಿ ಕವಿತೆ-ಕನಸು
ಹಾರಿದರೂ ಕನಸಿನಾಕಾಶದೊಳಗೆ
ಹಿರಿದಾದ ಕೈಯೆಂದೂ ಗಗನ ಮುಟ್ಟಿಲ್ಲಾ
ಡಾ ಮೀನಾಕ್ಷಿ ಪಾಟೀಲರ ಕವಿತೆ-ಬಣ್ಣದ ಪಂಜರ
ಸಹನೆ ಕರುಣೆ ತಾಳ್ಮೆ
ಸುಶೀಲ ಮಮತೆ ಸನ್ನಡತೆ
ವಿಶೇಷಣಗಳ ಸಿಂಗಾರ
ಚಿನ್ನದ ಬಲೆಗೊಂದು ಚಿತ್ತಾರ ಮೂಡಿಸಿ
ಬಣ್ಣದ ಪಂಜರದಲ್ಲಿ ಬಂಧಿಸಿದರು
ಸುಳ್ಳನ್ನೇ ಸತ್ಯವೆಂದು ನಂಬಿಸಿ
ಶೀಲದ ಪರಿಕಲ್ಪನೆಯಲಿ
ಉದಾತ್ತ ಗುಣಗಳ ಆರೋಪಿಸಿ
ಪರಮೋಚ್ಚ ಬದುಕು ಇದೆಂದು
ಬುರುಡೆ ಬಿಟ್ಟವರು
ಉಸಿರು ಗಟ್ಟುವ ಸಂಯೋಗದಿ
ಮೌನವೇ ಒಪ್ಪಿಗೆ
ಎಂದು ಭ್ರಮಿಸಿ
ಭಾವನೆಗಳ ಮೇಲೆ ಸವಾರಿ ಮಾಡಿ
ಮಖಾಡ ತೊಡಿಸಿದವರು
ಗಟ್ಟಿಮನಸ್ಸಿನ ದಿಟ್ಟ ನಿರ್ಧಾರವ
ಸಡಿಲಗೊಳಿಸಲು ಬಗೆ ಬಗೆಯ ತಂತ್ರ
ಆಸೆ ಆಮಿಷದ ಮೆರವಣಿಗೆ
ಒಣ ಸಿದ್ದಾಂತಗಳ ಮನಸ್ಸಿಗೆ ಲೇಪಿಸಿ
ಮಸುಕಾಗಿಸುವರು
ಹಣೆಗೆ ತಿಲಕವಿಟ್ಟವರನ್ನು
ಚಿತೆಗೇರಿಸುವ ಹೃದಯಹೀನರು
ಯುದ್ಧಗೆದ್ದವನಿಗೆ
ಸೋಲುಂಡವನ
ಮಡದಿಯ ಮೇಲೆ ಮೋಹ
ಸಾಕಿನ್ನು ದುರಾಚಾರ ದುರಾಕ್ರಮಣ
ನಿರಾಕರಿಸಬೇಕಿದೆ ಬಿರುದು ಬಾವಲಿಗಳ
ಧಿಕ್ಕರಿಸಬೇಕಿದೆ
ವಂದಿ ಮಾಗಧರ
ಬಹುಪರಾಕುಗಳ
ನಿಲ್ಲಬೇಕಿದೆ ಅಪಚಾರ
ಎಷ್ಟಂತ ಅವಿತುಕೊಂಡಿರುವುದು
ಗೋಡೆಗಳ ಮಧ್ಯೆ
ಇಣುಕಿಣುಕಿ ದಿನ ದೂಡುವುದು
ಕತ್ತಲೆಯ ಕೂಪದಲಿ
ನಲುಗಿ ಹೋಗಿರುವರು ಕಣ್ಣಳತೆಯಲಿ
ಮಥುರ ಇರೋಮ ಶರ್ಮಿಳ
ಭನವಾರಿ ಮತ್ಯಾರೋ …..
ಅಳಿಸಬೇಕಿದೆ ನೋವುಂಡವರ ಕಥೆಗಳ
ಬರೆಯಬೇಕಿದೆ ಗೌರವ ಆದರಗಳ ಹೊಸ ಪರ್ವವನ್ನ
ಆದರಿಸಬೇಕು ಅಸ್ತಿತ್ವ ನೆಲೆಯೂರಲು
ನೆರವಾದ ಊರುಗೋಲನ್ನ
ಕಣ್ಣೊರೆಸುವ ಕೈಗಳನ್ನ
ಸಾಂತ್ವಾನ ನುಡಿದ ಮಾತುಗಳನ್ನು
ಗಾಯ ಸವರಿದ ಬೆರಳುಗಳನ್ನು
ದಟ್ಟ ಕಾಡುಗಳ ಮಧ್ಯೆ
ಕಿರಣ ಸೋಂಕಿಸಲು ಸೆಣಸಾಡುವ
ಸೂರ್ಯನಂತೆ
ಭರವಸೆಯ ಬೆಳಕೊಂದು
ಮೂಡಿತು ಮುಂದೆ…,..
ಡಾ ಮೀನಾಕ್ಷಿ ಪಾಟೀಲ
‘ನಮ್ಮನ್ನು ನಾವು ಗಟ್ಟಿಗೊಳಿಸಿ ಕೊಳ್ಳೋಣ’ ಹನಿಬಿಂದು ಲೇಖನ
ನಾವು ಅವರ ಜೊತೆ ಇದ್ದರೆ ನಿಜ ಖುಷಿ ಸಿಗುವುದೇ ಎಂದು ಅಳೆದು, ಸುರಿದು, ತೂಗಿ ನೋಡಬೇಕು. ಕೆಲವೊಮ್ಮೆ ಅಲ್ಲೂ ತಪ್ಪುತ್ತೇವೆ. ಏಕೆಂದರೆ ಭವಿಷ್ಯ ಅರಿತವ ಆ ದೇವರು ಮಾತ್ರ. ನಮ್ಮ ಪುಣ್ಯ ಹಾಗೂ ಕರ್ಮ ಫಲಗಳು ಚೆನ್ನಾಗಿ ಇರಬೇಕು ಅಲ್ಲವೇ? ಅದಾಗಲೇ ಉತ್ತಮ ಮನಗಳು ನಮ್ಮ ಜೊತೆಗೆ ಇರಲು ಸಾಧ್ಯ.
ಹನಿಬಿಂದು
ಡಾ.ಜಿ.ಪಿ.ಕುಸುಮಾ ಮುಂಬಯಿ ಕವಿತೆ-ಕತ್ತರಿಸಿ ಬಿಟ್ಟ ಬಳ್ಳಿ
ಯಾಕೆ ಮುಂದಾಗುತ್ತಿಲ್ಲ ಗೆಳೆಯ
ಕಡಲ ಮಧ್ಯೆ ಬದುಕಬೇಕೆನ್ನುವ
ಆಸೆಯೊಂದು ಯಾಕೆ
ಬಲಿಯುತ್ತಿದೆ
ಡಾ.ಜಿ.ಪಿ.ಕುಸುಮಾ
‘ಸಂಚಾರಿ ನಿಯಮ ಪಾಲನೆ ಮತ್ತು ಸಾರ್ವಜನಿಕರ ಜವಾಬ್ದಾರಿ’ ವೀಣಾ ಹೇಮಂತ್ ಗೌಡ ಪಾಟೀಲ್
ಸರ್ಕಾರದ, ಪೊಲೀಸ್ ಇಲಾಖೆಯ ಪಾಲಿಗೆ ನಾವು ಒಂದು ಸಂಖ್ಯೆ ಆದರೆ ನಮ್ಮ ಕುಟುಂಬದ ಪಾಲಿಗೆ ನಾವು ಸರ್ವಸ್ವ. ರಸ್ತೆ ಗುಂಡಿಗಳ ಮೇಲೆ, ಅವೈಜ್ಞಾನಿಕ ರಸ್ತೆ ತಡೆಗಳ ಮೇಲೆ ತಪ್ಪನ್ನು ಹೊರಿಸುವ ನಾವುಗಳು ಸಂಚಾರಿ ನಿಯಮಗಳ ಪಾಲನೆ ಮಾಡುತ್ತೇವೆಯೇ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ ಎಂದು ಹೇಳಬಹುದು.
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಉಸಿರುಸಿರಲಿ ಒಲವ ಸರಿಗಮನ ನುಡಿಸಿ ಹದಮಾಡಿದೆ
ಕರಗಿದ ಕನಸನೆಲ್ಲ ಕೆದಕಿ ಚಿಗುರಿಸಿ ಹಸಿರಾಗಿಸಿದವನು ನೀನು
‘ಹೆಣ್ಣು ಅಂದರೆ ಶಕ್ತಿ’ ಲೇಖನ-ಸುಲೋಚನಾ ಮಾಲಿಪಾಟೀಲ’
ಈಗ ಸಮಾಜದಲ್ಲಿ ಸರ್ಕಾರ ಹೆಣ್ಣುಮಕ್ಕಳಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿ, ತಲೆ ಎತ್ತಿ ಬದುಕುವಂತೆ ಮಾಡಿದ್ದಾರೆ. ಅದರಲ್ಲಿ ಸಧ್ಯದ ಆಧುನಿಕ ಯುಗದಲ್ಲಿ ಹೆಣ್ಣನ್ನು ಮಿರಿಸುವವರು ಯಾರು ಇಲ್ಲ.
ಸುಲೋಚನಾ ಮಾಲಿಪಾಟೀಲ’.