ಶವ ಬಾರದಿರಲಿ ಮನೆ ತನಕ

ಶವ ಬಾರದಿರಲಿ ಮನೆ ತನಕ

ಕವಿತೆ ಶವ ಬಾರದಿರಲಿ ಮನೆ ತನಕ ಎ. ಎಸ್. ಮಕಾನದಾರ ನಿನ್ನ ಮನೆಯ ಅಂಗಳ ತನಕವೂನನ್ನ ಶವದ ಡೋಲಿ ಬಾರದಿರಲಿ ಹೂವಿನ ಚದ್ದರಿನ ತುಂಬಾ ಗುಲಾಬಿ ಅಂಟಿಸಿತರಾವರಿ ಜರದ ರೀಲು ಸುತ್ತಿ ಮೇಲಷ್ಟು ಇತ್ತರ್ ಸುರಿಯದಿರಲಿ ಆತ್ಮ ಸಾಕ್ಷಿ ನ್ಯಾಯಾಲಯಕೆಶರಣಾಗಿದ್ದೇನೆ. ಶಿಕ್ಷೆಗೆ ಗುರಿಯಾಗಿದ್ದೇನೆ ಅವಳಿಗೆ ಪ್ರೀತಿಸಿದ್ದು ನನ್ನ ತಪ್ಪಾದರೆನನ್ನನ್ನೂ ಪ್ರೀತಿಸಿದ ಅವಳ ತುರುಬು ತುಂಬಾ ಹೂ ಆರಡಿ ಜಾಗೆ ಮೂರು ಹಿಡಿ ಮಣ್ಣಿಗಾಗಿಕಾಲುಗೆರೆ ಸವೆದಿವೆ ಮೊಣಕಾಲು ಚಿಪ್ಪು ಒಡೆದಿದೆವಚನ ಭ್ರಷ್ಟನಲ್ಲ. ದೇಶ ಭ್ರಷ್ಟನೂ ಅಲ್ಲದಅವಳ ನಲ್ಲನಿಗೆ ಪುಟ […]

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ ಹೃದಯ ಕಣ್ಣೀರು ಕೊನೆ:ಹೃದಯವು ನಿಂತಿತುದುಃಖದ ಭಾರ. ಮನಸ್ಸು ಮನಸೇ ಜೋಕೆಕದ್ದಾರು ಆತ್ಮವನುಪ್ರೀತಿ ಹೆಸರು. ಅಮ್ಮ ತೊಗಲು ಬೊಂಬೆ :ಜೀವ ಕೊಟ್ಟ ದೇವತೆಅಮ್ಮನು ತಾನೇ. ಲಜ್ಜೆ ಸಂಜೆ ಕಡಲುಬಾನು ಭೂಮಿ ಮಿಲನಲಜ್ಜೆಯ ಕೆಂಪು. ಮೌನ ಮಾತು ಮೌನಕ್ಕೆಸೋತು ಶರಣಾಯಿತುಕಣ್ಣ ಭಾಷೆಲಿ. ಶಿಲೆ ಶಿಲೆಗೂ ಪ್ರೀತಿಸುರಿಯೋ ಸೋನೆಯಲಿಕರಗೋ ಮನ ಜಾತ್ರೆ ಮಾಯೆಯ ಜಾತ್ರೆಯಾರು ಯಾವ ಪಾಲಿಗೆಸಿಕ್ಕಿದ್ದೇ ಸಿರಿ. ಬಾಳು ಬಾಳ ಹಾದಿಲಿಮುಳ್ಳು ಕೂಡಾ ಹೂವಂತೆತೃಪ್ತಿ ಮನಕೆ. ಹೂವು ಮುಳ್ಳಿನ ಭಾಸಹೂಗಳು ಚುಚ್ಚಿದಾಗಪ್ರೀತಿಯೇ ಹೀಗೆ. ಕವಿ ಕವಿ […]

ಕಾಡುವ ಕನಸುಗಳು

ಕವಿತೆ ಕಾಡುವ ಕನಸುಗಳು ರಶ್ಮಿ ಹೆಗಡೆ ಒಮ್ಮೊಮ್ಮೆ ಕಾಡುವ ರಂಗುರಂಗಾದ ಕನಸುಗಳುಬಣ್ಣದಲ್ಲಿ ಮಿಂದ ಮುಸ್ಸಂಜೆಯ ರವಿಯಂತೆಕಣ್ಣಿಗೆ ಇನ್ನೇನು ಚಂದ ಎನ್ನುವಷ್ಟರಲ್ಲಿಮುಳುಗಿ ಮಂಗಮಾಯವಾಗುವುದೇಕೆ? ಯಾರಿಂದಲೋ ಬಾಡಿಗೆ ತಂದ ಭಾವನೆಗಳಲ್ಲಅವೆಲ್ಲವೂ ನನ್ನ ನೆನಪಿನ ಗರ್ಭದಲ್ಲಿಯೇ ಅಡಗಿಬೆಚ್ಚಗೆ ಕುಳಿತು ಸಮಯ ಮೀರಿದ ಮೇಲೆಎದೆಯ ಗೂಡಿನಿಂದ ಹೊರಬಂದವುಗಳೇ! ರೆಕ್ಕೆ ಬಿಚ್ಚಿ ಸ್ವಚ್ಛಂದವಾಗಿ ಹಾರಬೇಕಾದಆ ನೆನಪಿನ ಪಕ್ಷಿಗಳು ಇಂದು ಮತ್ತೆಮನದ ಪಂಜರದಲ್ಲೇ ಬಂಧಿಯಾಗಿವೆಅದಕ್ಕೆ ಸ್ವಾತಂತ್ರ್ಯ ಸಿಗಬೇಕಾದ್ದು ನನ್ನಿಂದಲೇ! ಶಿಥಿಲಗೊಂಡ ಭಾವಸೇತುವೆಯಲ್ಲಿಇಂದು ಹರೆಯವೂ ಇಲ್ಲ,ಹುಮ್ಮಸ್ಸೂ ಇಲ್ಲಎಂದೋ ಆಗಾಗ ನೆನಪ ಮಳೆ ಸುರಿದಾಗಎದೆಯಡಿಗೆ ನೀರು ಉಕ್ಕಿ ಹರಿವುದನು […]

ಈ ಸಂಜೆ ಗಾಯಗೊಂಡಿದೆ

ವಾರದ ಕವಿತೆ ಈ ಸಂಜೆ ಗಾಯಗೊಂಡಿದೆ ನಾಗರಾಜ ಹರಪನಹಳ್ಳಿ ಈ ಸಂಜೆ ದುಃಖಗೊಂಡಿದೆಆಕಾಶದ ಕೆನ್ನೆ ಮೇಲಿನ‌ ಕಣ್ಣೀರು ಸಾಗರವಾಗಿದೆ ಸಂಜೆ ದುಃಖದ ಜೊತೆ ಗಾಯಗೊಂಡಿದೆಅಲೆಯ ದುಃಖದ ಕೆನ್ನೀರು ದಂಡೆಗೆ ಸಿಡಿದಿವೆ ಕಣ್ಣೀರನುಂಡ ದಂಡೆ ಹಸಿಯಾಗಿದೆನಿನ್ನ ಭಾವಚಿತ್ರ ಕಡಲಹಾಯಿ ದೋಣಿಯಲ್ಲಿ ‌ಮೂಡಿ ಬಂದಿದೆ ಈ ಸಂಜೆ ಯಾಕೋ ಏನೋ ಕಳೆದು ಕೊಂಡಿದೆ , ಮೌನ ಸಾಗರದ ನಡುವಿನ ದ್ವೀಪ ತಬ್ಬಿದೆ ಕಡಲು ಪಶ್ಚಿಮಕ್ಕೆ ದೀಪ ಮಿಣಕುತ್ತಿದೆಅವು ನಿನ್ನ ಕಣ್ಣುಗಳೇ ಆಗಿವೆ ಸಂಜೆಯ ದುಃಖ ಅಳಿದುಅದರೊಡಲಿಗೆ ಆದ ಗಾಯ ಮಾಯುವ […]

ಮಾಜಿ ಪ್ರದಾನಿಯವರ ಅನುವಾದಿತ ಕಥೆ

ಅನುವಾದಿತ ಕಥೆ ಗೊಲ್ಲರ ರಾಮವ್ವ (ಭಾಗ- ಎರಡು) ಮಾಜೀ ಪ್ರಧಾನ ಮಂತ್ರಿ ಶ್ರೀ ಪಿ.ವಿ. ನರಸಿಂಹರಾವ್ ಅವರ ಕಥೆಯ ಕನ್ನಡಾನುವಾದ                                                                 ಭಾಗ – ೨ “ಅದೆಲ್ಲ ಬಿಡವ್ವಾ ! ಅದೊಂದು ಕಥೆ. ಸ್ವಲ್ಪ ಹೊತ್ತು ನನ್ನನ್ನ ಇಲ್ಲಿ ಅಡಗಿಸಿಡು. ಮತ್ತೆ ನಾನು ಹೊರಟುಹೋಗ್ತೀನಿ” ಅಂತ ಅತಿ ಕಷ್ಟದಲ್ಲಿ ನುಡಿದನಾತ. “ಆ! ಹೋಗ್ತಾನಂತೆ ಹೋಗ್ತಾನೆ.. ! ಒಂದೇ ಸಲ ಸ್ವರ್ಗಕ್ಕೆ ಹೋಗ್ತೀಯಾ …! ಒಳ್ಳೆ ಬುದ್ಧಿವಂತನೇ ನೀನು… ಹೋಗು..! ಹು ! ಹೋಗ್ತಾನಂತೆ ಎಲ್ಲಿಗೋ !” ಹೊಸಬ […]

ಆಕಾಶಕ್ಕೆ ಹಲವು ಬಣ್ಣಗಳು

ಪುಸ್ತಕ ಸಂಗಾತಿ ಆಕಾಶಕ್ಕೆ ಹಲವು ಬಣ್ಣಗಳು ಗಜಲ್ ಪ್ರೇಮಿಗಳ ಭಾವಬಾಂದಳದಿ ಮಾಸದ ಬಣ್ಣಗಳ ಮೂಡಿಸಿದ ಕೃತಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಹೆಸರು ಮಾಡಿರುವ ಶಹಾಪುರದ ಹಿರಿಯ ಲೇಖಕರಾದ  ಶ್ರೀ. ಸಿದ್ಧರಾಮ ಹೊನ್ಕಲ್ ಅವರು ಮೈಸೂರಿಗರಿಗೆ ಪರಿಚಿತರೇನೂ ಅಲ್ಲ. ಮೈಸೂರಿನಲ್ಲೇ ಹುಟ್ಟಿ, ಬೆಳೆದು ಕಳೆದ ಹದಿನೇಳು ವರ್ಷಗಳಿಂದ ಸಂಘಟನೆ ಹಾಗೂ ಕವನ ರಚನೆಯಲ್ಲಿ ತೊಡಗಿಸಿಕೊಂಡಿದ್ದ ನನಗೆ ಹೊನ್ಕಲ್ ಅವರ ಪರಿಚಯವಾದುದು ಗಜಲ್ ಗಳಿಗೆಂದೇ ಮೀಸಲಾದ  ಗುಂಪೊಂದರಲ್ಲಿ. ಕಳೆದ ಒಂದೂವರೆ ವರ್ಷಗಳಿಂದ ಗಜಲ್ ಗುರುಗಳಾದ ಡಾ. ಗೋವಿಂದ ಹೆಗ್ಡೆಯವರ […]

ಹೊಸ ಬಾಳಿಗೆ

ಕವಿತೆ ಹೊಸ ಬಾಳಿಗೆ ಶ್ವೇತಾ ಎಂ.ಯು.ಮಂಡ್ಯ ಹಳತು ಕಳೆದುಹೊಸ ವರ್ಷ ಮರಳಿಎಲ್ಲಿಂದಲೋ ಬಂದುಮತ್ತೆಲಿಗೋ ಸಾಗೋಈ ಬದುಕ ಹಾದಿಯಲಿಹೊಸ ಭರವಸೆಯ ಚಿಗುರಿಸಲಿ ರಾಗಯೋಗ ಪ್ರೇಮಸೌಂದರ್ಯಮೇಳೈಸಿ ಭೂರಮೆಯ ಸಿಂಗಾರಗೊಳಿಸಿರೆಂಬೆಕೊಂಬೆಗಳು ತೂಗಿ ಬಾಗಿನರುಗಂಪು ತಣ್ಣನೆಯ ಗಾಳಿ ಸೂಸಿಆನಂದವನೆ ಹಂಚಿವೆ ಈ ಹರುಷವು ಹೀಗೆ ಉಳಿಯಲಿಖಂಡ ಖಂಡಗಳ ದಾಟಿಅರೆಗೋಡೆ ಮಹಾಗೋಡೆಅರೆತಡಿಕೆ ಮಹಾಮನೆಗಳೊಳಗಿನರೋಗಗ್ರಸ್ತ ಮನಸುಗಳಲಿಸೊರಗದ ಸಂಜೀವಿನಿಯಾಗಲಿ ಮೈಮುದುಡಿ ಚಳಿಯೊಳಗೆಬಿಟ್ಟುಬಿಡದೆ ಕಾಡುವ ಶಾಪಗ್ರಸ್ತ ದಾರಿದ್ರಕ್ಕೆ ಬಲಿಯಾದ ಜೀವಗಳಿಗೆಬೇಡುವ ಕೈಗಳಿಗೆ ನೀಡುವಶಕ್ತಿಯ ನೀ ಇಂದಾದರುಹೊತ್ತು ತಾ ಹೊಸ ವರುಷವೇ ಬದುಕನ್ನೇ ಹಿಂಡಿದ ಕಾಣದ ಮುಖವುಕಾಣದೆ ಹೋಗಲಿ ಹಾಗೆಯೇಈ […]

ಸಹಜ ಪ್ರೇಮ

ಕವಿತೆ ಸಹಜ ಪ್ರೇಮ ದೇವರಾಜ್ ಹುಣಸಿಕಟ್ಟಿ. ಅವಳದು ನನ್ನದು ಅಮರಪ್ರೇಮ ಅಲ್ಲವೇ ಅಲ್ಲ..ಕಾರಣ ಅವಳಿಗಾಗಿ ನಾನುಗೋರಿ ಕಟ್ಟಲಿಲ್ಲ..ವಿಷ ಉಣಿಸಲಿಲ್ಲ ಉಣ್ಣಲಿಲ್ಲ..ಇನ್ನು ಗೋಡೆ ಕಟ್ಟುವಬಾದಶಾಗಳು ಇರಲೇ ಇಲ್ಲಾ… ತಿಂಗಳಿಗೊಮ್ಮೆ ಅವಳಹೆಜ್ಜೆಗಳು ಭಾರವಾಗುತ್ತವೆ..ಆಗೆಲ್ಲ ಮನೆಯ ತುಂಬಾನನ್ನದೇ ಕಾರುಬಾರು..ಉಪ್ಪು ಹುಳಿ ಹೆಚ್ಚು ಕಡಿಮೆಆಗಿರುವ ಅನ್ನ ಸಾಂಬಾರು…ನನ್ನಂತಲ್ಲ ಅವಳು ಉಂಡು ಬಿಡುತ್ತಾಳೆತುಟಿಪಿಟಕ್ ಅನ್ನದೇ ಬಿಡದೇ ಚೂರು… ಮುನಿಸು ಬರುತ್ತೆ ಆಗಾಗ ಸಂತೆಯಲ್ಲಿಜೊತೆಯಾದ ಅಪರಿಚಿತ ಗೆಳೆಯನಂತೆಕಾರಣ ತುಸು ಹೊತ್ತಾಗಿ ರಾತ್ರಿ ಬಾರಿಂದ ಮರಳಿದ್ದು..ತುಸು ನಶೆ ಹೆಚ್ಚಾಗಿ ಪೆಚ್ಚುಪೆಚ್ಚಾಗಿ ಮಾತನಾಡಿದ್ದು..ತುಸು ಸಿಗರೇಟಿನ ಹೋಗೆಹೆಚ್ಚಾಗಿ ಉಸಿರಿದ್ದು….ಇದು ಹೆಚ್ಚೊತ್ತು […]

ಅಪ್ಪಣ್ಣನಿಗೊಂದು ಮನವಿ

ಕವಿತೆ ಅಪ್ಪಣ್ಣನಿಗೊಂದು ಮನವಿ ಎ.ಎಸ್.ಮಕಾನದಾರ ಅಪ್ಪಣ್ಣಎಷ್ಟೊಂದು ಕತ್ತಿಗಳುಸೇರಿಕೊಂಡಿವೆ ನಿನ್ನ ಹಸಬಿಯೊಳುಆ ಕತ್ತಿಗಳೇ ಮಾಡಿದ ಕ್ಷೌರಹೇಗೆ ಸೂಚಿಸಿ ಬಿಡುತ್ತವೆ. ಆ ಚಾಂದ ದಾಡಿ ಮುಸ್ಲಿಮನದೆಂದುಆ ಜುಟ್ಟು ಬ್ರಾಹ್ಮಣನನದೆಂದುಆ ಕೆಳದಾಡಿ ಸಿಖ್ಖನದೆಂದುಆ ಫ್ರೆಂಚ್ ದಾಡಿ ಕ್ರಿಶ್ಚಿಯನನದೆಂದು ಮೀಸೆ ಬಿಟ್ಟರೊಂದು ಜಾತಿಕೇಶ ಬಿಟ್ಟರೊಂದು ಜಾತಿಮುಡಿ ಕಟ್ಟಿ ದಾಡಿ ಬಿಟ್ಟರೊಂದು ಜಾತಿಎಲ್ಲವನು ಬೋಳಿಸಿಟ್ಟುಹೊಸದೊಂದು ವ್ಯವಸ್ಥೆನಿರ್ಮಿಸಬಾರದಿತ್ತೇ ಅಪ್ಪಣ್ಣ ನೀನುಅಣ್ಣ ಅಕ್ಕ ಅಲ್ಲಮರೊಂದಿಗೆಅನುಭವ ಮಂಟಪದ ಚುಕ್ಕಾಣಿಯಾಗಿದ್ದಿ ಯಾಕಣ್ಣ ಈ ವ್ಯವಸ್ಥೆಗೆಕಡಿವಾಣ ಹಾಕದೆ ಸುಮ್ಮನಾದೆಗಂಡಲ್ಲದೆ-ಹೆಣ್ಣಲ್ಲದೆ ಒಳಗಿರುವಆತ್ಮಕ್ಕೆ ಅನುಭವ ಮಂಟಪದಲಿಅಂತರಂಗ ಶುದ್ಧಿ ಮಾಡಿದ ನೀನೇಬಹಿರಂಗ ಶುದ್ಧಿಗಾಗಿಮಾಡಿದ ಈ ಕ್ಷೌರದಿಂದಅದ್ಹೇಗೆ […]

ಗಾಂಧಾರಿ ಸಂತಾನ

ಕವಿತೆ ಗಾಂಧಾರಿ ಸಂತಾನ ಕಾತ್ಯಾಯಿನಿ ಕುಂಜಿಬೆಟ್ಟು ಆ ಸೂಯ೯ ಹೆರುತ್ತಾನೆನೀಲಿ ನೀಲಿ ಮೋಡ ಪರದೆಗಳಹೆರಿಗೆ ಮನೆಯಲ್ಲಿನೀಳ ನೀಳ ಬೆಳಕು ಶಿಶುಗಳಕಣ್ಣುಗಳಿಗೆ ಕತ್ತಲ ಪಟ್ಟಿ ಕಟ್ಟಿಕೊಂಡುಈ ಗಾಂಧಾರಿಯ ಹಾಗೆ!ಹೊತ್ತದ್ದು ಹೆತ್ತು ವೀರಶತಜನನಿಹೆತ್ತದ್ದು ಸತ್ತು ದುಃಖಶತಜನನಿ!ಬಸಿರ ಹೊಸೆಹೊಸೆದು ಅತ್ತರೂಈಗ ವೇದವ್ಯಾಸನಿಲ್ಲ ಮಡಕೆಯಿಲ್ಲಮಹಾಭಾರತ ಮುಗಿದು ಹೋಗಿದೆಕುರುಕ್ಷೇತ್ರದಲ್ಲಿ ಸಾಲು ಗಭಾ೯ಪಾತ! ಆ ಸೂಯ೯ನದ್ದೋ ಅಕ್ಷಯ ಗಭ೯ !ಪ್ರಸವಬೇನೆಯೇ ಇಲ್ಲದೆ ಹೆರುತ್ತಾನೆತನ್ನ ಬೇನೆಯನ್ನೆಲ್ಲ ಭೂಮಿಯಹೆಂಗಸರ ಗಭ೯ಗಳಿಗೆ ಹಂಚಿಬಿಟ್ಟಿದ್ದಾನೆಹೆರುಹೆರುತ್ತಲೇ ಕಳೆದುಕೊಳ್ಳುತ್ತ ಬಿಕ್ಕಿಬಿಕ್ಕಿ ಕಿರಣಗಳನ್ನು ಹೆತ್ತು ಒಂದು ನಿರಾಳ ಸೊನ್ನೆಯಾಗಿಮುಳುಗುತ್ತಾನೆಇರುಳಿಡೀ ಕಡಲಿಗೆ ಪ್ರಸವ ಬೇನೆಅದರ ಕೊನೆಯ ಬಿಕ್ಕೊಂದು […]

Back To Top