ಜುಗ್ಗ ರಾಮಣ್ಣ ಕು.ಸ.ಮಧುಸೂದನ ಜುಗ್ಗ ರಾಮಣ್ಣ ಊರಲ್ಲಿ ಎಲ್ಲರೂ ರಾಮಣ್ಣನನ್ನು ಕರೆಯುತ್ತಿದ್ದುದು ಜುಗ್ಗ ರಾಮಣ್ಣ ಅಂತಲೆ. ಅವನ ಮನೆ ಇದ್ದ ಬೀದಿಯ ಉಳಿದ ಮನೆಗಳವರು ತಮ್ಮ ನೆಂಟರಿಗಾಗಲಿ, ಪರಿಚಯದವರಿಗಾಗಲಿ ಮನೆಯ ವಿಳಾಸ ಕೊಡಬೇಕಾದರೆ ಬಸ್ ಸ್ಟ್ಯಾಂಡಿನಿಂದ ದಾವಣಗೆರೆ ರಸ್ತೆಯ ಕಡೆ ನಾಲ್ಕು ಹೆಜ್ಜೆ ಬಂದು ಜುಗ್ಗ ರಾಮಣ್ಣನ ಬೀದಿ ಎಲ್ಲಿ ಬರುತ್ತೆ ಅಂತ ಯಾರನ್ನೇ ಕೇಳಿದರೂ ಸಾಕು ನಾವಿರುವ ಬೀದಿ ತೋರಿಸ್ತಾರೆ ಅಂತ. ಅಷ್ಟರಮಟ್ಟಿಗೆ ಆ ಊರಿನವರು ಆ ಹೆಸರಿಗೆ ಹೊಂದಿಕೊಂಡು ಬಿಟ್ಟಿದ್ದರು. ಇದು ರಾಮಣ್ಣನ ಮನೆಯವರಿಗಷ್ಟೆ […]
Read More
ರೆಕ್ಕೆ ಬಿಚ್ಚಲು ಪ್ಯಾರಿಸುತ ಎಲ್ಲಿ ನೀನಿಲ್ಲವೋ… ಎಲ್ಲಿ ನೀನಿಲ್ಲವೋ ಅಲ್ಲಿ ನಾನೂ ಇಲ್ಲ ಅದು ನಿಲಯವಾಗಿದ್ದರು, ಆಲಯದಂತಿದ್ದರೂ, ಇದ್ದರೂ ಅದು ಶರೀರವಷ್ಟೇ..! ಮನಸು ನಿನ್ನ ಬೆನ್ನು ಬಿದ್ದಿದೆ ಆ ಕರಿನೆರಳಿನಂತೆ, ಮಾರುದ್ದ ಜಡೆಗೆ ಮುಡಿದ ಮಲ್ಲಿಗೆಯಂತೆ, ಹಿಂದೆ ಅಲೆಯುವ ಸೀರೆಸೆರಗಿನ ಗಾಳಿಯಂತೆ, ಗಾಳಿಯಲ್ಲಿ ಬರುವ ಹೂಡಿದೂಳಿನಂತೆ ಯಾವಾಗಲೂ ನೀ ನನ್ನಲ್ಲೇ ಇರುವೆ ಸದಾ ನೀರಿನಲಿರುವ ಮೀನಿನಂತೆ ನೀ ಪ್ರೇತವೆಂದರು,ಭೂತವೆಂದರು…! ನಾನಂತೂ ನಿನ್ನ ಬೆನ್ನು ಬಿಡೇನು ನಿನ್ನೊಮ್ಮೆ ತಿರುಗಿ ನೋಡುವಂತಿದ್ದರೆ ನಾ ಯಾವಾಗಲೂ ನಿನ್ನ ಕಣ್ಣ ಮುಂದೆ ಕಾಯ […]
Read More
ಕವಿತೆ ವಿಜಯಶ್ರೀ ಹಾಲಾಡಿ ಚಿತ್ರ ಬಿಡಿಸುವ ಮರಚಳಿಗೆ ನರಳಿ ಇಬ್ಬನಿಅಡರಿ ಹಿಮಗಾಳಿಶೀತ ಹಿಡಿದುಕೊಂಡಿದೆ ಗಳಿತ ಎಲೆಯೊಂದುಹಳದಿ ಉಸಿರಿನ ಕೂಡೆಮಣ್ಣಿಗೆ ಸೋಕಿ ನಿಡಿದುನಿರಾಳ ಅಪ್ಪಿಕೊಂಡಿದೆ ಧೂಳ ಹೆಜ್ಜೆಗಳಲ್ಲಿಪಾದವೂರಿದ ಬೀಜಮುಗಿಲೂರಿನ ಕನಸರಂಗುಗಳ ಕವಿದುಕೊಂಡಿದೆ ಮೈಮುರಿದು ಆಕಳಿಸುವನಿಗೂಢ ಇರುಳು ಮಾತ್ರಬಿಟ್ಟ ಕಣ್ಣು ಬಿಟ್ಟಹಾಗೆಗೂಬೆದನಿಗೆ ಆಲಾಪಿಸಿದೆ. *******
Read More
ಅಮ್ಮನ ಅಡುಗೆ ಅಮೆರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ಅಜ್ಜಿಯನ್ನು ನಾನು ಅಮ್ಮ ಅಂತ ಕರೆಯುತ್ತಿದ್ದುದು. ನನ್ನ ಬಾಲ್ಯದ ಮುಕ್ಕಾಲು ಪಾಲಿಗಿಂತಲೂ ಹೆಚ್ಚು ಅಮ್ಮನ ಜೊತೆಯಲ್ಲೇ ಕಳೆದಿದ್ದರಿಂದ ನೆನಪುಗಳ ರಾಶಿಯೇ ಇದೆ. ಹಾಗಾಗಿ ನಾನು ನಿಧಾನವಾಗಿ ಸಂದರ್ಭಗಳನ್ನೆಲ್ಲ ಪೋಣಿಸುತ್ತಾ ಒಂದೊಂದೇ ಬರಹ ಬರೆಯುತ್ತಿರುತ್ತೇನೆ. ಮುಂದೆ ಎಲ್ಲವನ್ನೂ ಕ್ರೋಢೀಕರಿಸುವುದೂ ಆಗುತ್ತದೆ. ಒಂದಂತೂ ನಿಜ ಇದುವರೆಗಿನ ನನ್ನ ಬದುಕಿನ ಎಂತಹದ್ದೇ ಮುಖ್ಯ ಸಂದರ್ಭವಾದರೂ ಅಲ್ಲಿ ಅಮೂರ್ತವಾಗಿ ಅಮ್ಮ ಇದ್ದೇ ಇರುತ್ತಾರೆ. ನನಗಿನ್ನೂ ನೆನಪಿದೆ. ನನಗೆ ಬುದ್ಧಿ ತಿಳಿಯುವಾದಾಗಿಂದಲೂ, ಅಮ್ಮ ನಿತ್ಯವೂ ಕೋಳಿ […]
Read More
ಗಾಂಧಿ ನಕ್ಕರು ಅಶ್ವಥ್ ಗಾಂಧಿ ನಕ್ಕರು ಗಾಂಧಿತಾತ ರಾಷ್ಟ್ರಪಿತ ತನ್ನೊಳಗೇ ತಾನು ದೈವಭಕ್ತ ಸಂಪತ್ತಿನುತ್ತುಂಗ ಎಂಜಿ ರಸ್ತೆ ಗಾಂಧಿಗೆಂದು ಮೀಸಲಂತೆ ಬೀದಿ ಬದಿಯ ಬಡವನ ಪಾಲು ಚಿತ್ರಮಂದಿರದ ಕೊನೆಯ ಸಾಲು ಕಣ್ಣರಳಿಸಿ ಕತ್ತನೆತ್ತಿ ತುಣುಕು ತುಣುಕೇ ದೃಶ್ಯವುಂಡು ಬೆರಗಾಗುವ ಬೆಪ್ಪನ ಕಂಡು ಗಾಂಧಿ, ಸುಮ್ಮನೆ ನಕ್ಕುಬಿಟ್ಟರು ಹೊಸ ಕಾಲದ ಅಭ್ಯುದಯಕೆ ಒಂದು ಸಂಜೆ ಕಾರ್ಯಕ್ರಮಕೆ ಸೆಲ್ಫಿ ತೆಗೆದುಕೊಳ್ಳಲೊಂದು ಪೊರಕೆ ತಂದು, ಕ್ಯಾಮರ ಬಂದು ಸಾವಧಾನ ಕೊಂಡುತಂದು ಗಾಂಧಿಯನ್ನು ಬಳಸಿಕೊಂಡು ನೀರು ಸಿಂಪಡಿಸಿಕೊಂಡು ಹುಸಿಬೆವರು ಬರಿಸಿಕೊಂಡು ಸಮಾಧಾನ ಭಂಗಿಯಲ್ಲಿ […]
Read More
ಜಾತ್ರೆ ಅಂಜನಾ ಹೆಗಡೆ ಬಯಲಿಗಿಳಿದ ದೇವರೆದುರು ತಲೆಬಾಗಿ ನಿಂತರೆ ಮೆದುಳಿಂದ ಮೃದುವಾಗಿ ಎದೆಗಿಳಿದ ಜಯಜಯ ಶಂಕರಿ ಜಯ ಜಗದೀಶ್ವರಿ…. ತಂಪಾದ ಹಾಡು ತಲೆಗೆ ಮೆತ್ತಿದ ಬಣ್ಣಕ್ಕೂ ಎದೆಗಿಳಿದ ಮೆದುಳಿಗೂ ಸಂಪರ್ಕವೇ ಇಲ್ಲದಂತೆ ದೇವರೇ ಮೈಮೇಲೆ ಬಂದಂತೆ ಮನಬಂದಂತೆ ಒದರುವ ಮೈಕಿನಲ್ಲಿ ಧೂಮ್ ಮಚಾಲೇ ಧೂಮ್… ತಲೆ ಕುಣಿಸುತ್ತ ನಿಂತ ತೊಟ್ಟಿಲ ಸಾಲು ತಿರುಗಿಸುವವನನ್ನು ಕಂಡವರಿಲ್ಲ ಹತ್ತಾರು ಸುತ್ತು ಸುತ್ತಿ ಒಮ್ಮೆ ಮೇಲಕ್ಕೆ ಇನ್ನೊಮ್ಮೆ ನೆಲಕ್ಕೆ…. ಪ್ರಪಂಚ ತೋರಿಸಿದ್ದೇ ಸುಳ್ಳೆನ್ನುವಂತೆ ನಿಂತುಹೋದ ತೊಟ್ಟಿಲಿಂದ ಇಳಿದ ಪೋರ ಹುಡುಕಿದ್ದು ಅಪ್ಪನ […]
Read More
ನಮ್ಮೂರ ಜಾತ್ರೆಲಿ.. ಜ್ಯೋತಿ ಡಿ.ಬೊಮ್ಮಾ. ನಮ್ಮೂರ ಜಾತ್ರೆಲಿ.. ಬಹಳ ದಿನಗಳಿಂದ ನನ್ನೂರ ಜಾತ್ರೆಗೆ ಬರಲು ಅಪ್ಪ,ಅಮ್ಮ,ಗೆಳೆಯರೆಲ್ಲ ಒತ್ತಾಯಿಸುತ್ತಲೆ ಇದ್ದರು.ಸದಾ ಜನಜಂಗುಳಿಯಿಂದ ದೂರ ಇರಬಯಸುವ ನನಗೆ ಜಾತ್ರೆ ,ಸಮ್ಮೆಳನಗಳು ದಿಗುಲುಹುಟ್ಟಿಸುತ್ತವೆ.ಚಿಕ್ಕಂದಿನ ಜಾತ್ರೆಯ ನೆನಪು ಮುಸುಕಾಗಿತ್ತು.ಮತ್ತೆ ಎಲ್ಲರನ್ನೂ ಭೆಟಿಯಾಗುವ ಸೆಳೆತದಿಂದ ಜಾತ್ರೆಯ ನೆಪದಿಂದ ಊರಿಗೆ ಹೋದೆ.ಊರಿನಲ್ಲಿ ಎಲ್ಲರ ಮನೆಗಳಲ್ಲೂ ಸಂಬಂಧಿಕರು.ದೂರ ದೂರದ ಊರುಗಳಿಂದ ಜಾತ್ರೆಯ ನೆಪದಿಂದ ಬಂದವರು. ಜಾತ್ರೆಯಂತಹ ಊರ ಹಬ್ಬಗಳು ಮತ್ತೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವದರ ಹಿಂದಿನ ಕಾರಣಗಳು ಹುಡುಕಿದರೆ,ಮುಖ್ಯವಾಗಿ , ಪರಸ್ಪರರ ಭೇಟಿ.ಮತ್ತು ಊರಿನಲ್ಲಿನ ಸೌಹಾರ್ದಯುತ ವಾತಾವರಣ […]
Read More
ಪದಗಳೇ ಹೀಗೆ ಜಿ.ಲೋಕೇಶ್ ಪದಗಳೇ ಹೀಗೆ ಪದಗಳೇ ಹೀಗೆ ಅಲೆಸುತ್ತವೆ ಇಂದು ಬಾ ನಾಳೆ ಬಾ ಎಂದು ಕವಿತೆಗಳನ್ನು ಕಟ್ಟಲು ಎರವಲು ಪಡೆಯಲು ಹೋಗಬೇಕಾಗಿದೆ ನಮ್ಮೂರ ಶೆಟ್ಟಿ ಬಳಿಗೆ ನನ್ನವ್ವ ಸಾಲ ಪಡೆಯಲು ಹೋಗುವಂತೆ ಬಡ್ಡಿ ಬೇಕಾದಷ್ಟು ನೀಡುತ್ತೇನೆಂದರೂ ಏನೋ ಅನುಮಾನ ಪದಗಳಿಲ್ಲಿ ಸಿಗಲೊಲ್ಲವು ಸರಿ ಕಾಯುತ್ತಿದ್ದೇನೆ ಬಾಗಿಲು ತೆರೆಯುವ ಮುನ್ನವೇ ಸರದಿಯಲ್ಲಿ ನಿಂತು ಇವತ್ತು ನಾನೇ ಮೊದಲು!! ********
Read More
ಬೆಳಕಿನ ಬೀಜಗಳು.. ಚಂದ್ರಪ್ರಭ ಬೆಳಕಿನ ಬೀಜಗಳು.. ಪುರುಷನೆಂದರು ಪ್ರಕೃತಿಯೆಂದರು ನಾವು ತಲೆದೂಗಿದೆವು ಗಂಡೆಂದರು ಹೆಣ್ಣೆಂದರು ನಾವು ತಲೆದೂಗಿದೆವು ಅವನೆಂದರು ಅವಳೆಂದರು ನಾವು ತಲೆದೂಗಿದೆವು ತುದಿಯೆಂದರು ಮೊದಲೆಂದರು ನಾವು ತಲೆದೂಗಿದೆವು ಅಖಿಲವೆಂದರು ಅಣುವೆಂದರು ನಾವು ತಲೆದೂಗಿದೆವು ಅನಾದಿಯಿಂದ ಇದು ನಡೆದೇ ಇದೆಯಲ್ಲ ಹೊಸತೇನಿದೆ ಇದರಲ್ಲಿ!! ನಾವು ಒಡಲು ತುಂಬಿ ಹೆತ್ತು ಹೊರುತ್ತ ಬಂದಿದ್ದೇವೆ ಅಟ್ಟು ಬೇಯಿಸಿ ಹಸಿವ ನೀಗುತ್ತೇವೆ ಚಳಿ ಗಾಳಿ ಮಳೆ ಬಿಸಿಲಿಗೆ ತತ್ತರಿಸುವಾಗ ಜೀವವನು ವಾತ್ಸಲ್ಯದ ಸೆರಗಲ್ಲಿ ಕಾಪಿಡುತ್ತೇವೆ ಸೂರುಗಳಿಗೆ ಜೀವ ತುಂಬಿ ಲವಲವಿಕೆಯ ಮನೆಯಾಗಿಸುತ್ತೇವೆ […]
Read More
ಗಝಲ್ ಡಾ.ಗೋವಿಂದ ಹೆಗಡೆ ಗಜ಼ಲ್ ನಿನ್ನ ಕಣ್ಣಲ್ಲಿ ಕಂಡ ನೆರಳುಗಳ ಬರೆಯಲಾರೆ ಕೆನ್ನೆಯಲಿ ಮಡುವಾದ ಬಣ್ಣಗಳ ಬರೆಯಲಾರೆ ಕಡಲೇಕೆ ಕುದಿಕುದಿದು ಮರಳಿದೆ ಹೀಗೆ ಎದೆಯಾಳದ ಉಮ್ಮಳಗಳ ಬರೆಯಲಾರೆ ನಿನ್ನನ್ನು ಒಮ್ಮೆ ಸೋಕಲು ಎಂಥ ತಪನೆಯಿತ್ತು ಚಾಚಿ ಚಾಚಿ ಮರಗಟ್ಟಿದ ಬೆರಳುಗಳ ಬರೆಯಲಾರೆ ತೋಳಲ್ಲಿ ತಲೆಯಿಟ್ಟಾಗ ಎದ್ದ ಕಂಪನವೆಷ್ಟು ಬದುಕಿನ ಬದುಕಾದ ಚಣಗಳ ಬರೆಯಲಾರೆ ಬರಿಯ ಮಾತುಗಳಿಗೆ ದಕ್ಕಿದ್ದು ಏನು ‘ಜಂಗಮ’ ನುಡಿಯುಂಬರದಲ್ಲೆ ನಿಂತ ಭಾವಗಳ ಬರೆಯಲಾರೆ **********
Read More| Powered by WordPress | Theme by TheBootstrapThemes