ಕಾವ್ಯಯಾನ

ಕಾವ್ಯಯಾನ

ಸೀರೆಯ ಸಹವಾಸ ತ್ರಿವೇಣಿ ಜಿ.ಹೆಚ್ ಸೀರೆಯ ಸಹ ವಾಸ. ಸೆರಗು ನಿರಿಗೆಗಳ ಸಮೀಕರಿಸಿ ಉಬ್ಬಿದೆದೆ ಕಂಡೂ ಕಾಣಿಸದಂತೆ ಮಣಿಸಿ ನಡುವೆ ‌”ನಡು”ವಿನ ಆಕಾರವ ಅಂದಗಾಣಿಸಿದರೂ ಜಗ್ಗುವ ಬೊಜ್ಜು. ಒಂದೊಂದು ಸೀರೆ ಉಟ್ಟಾಗಲೂ ಮತ್ತೆಷ್ಟೋ ನೆನಪುಗಳ ಕದ ಬಡಿದು ಅಳಿಸಲಾಗದವನ್ನಲ್ಲೇ ಮುಚ್ಚಿಟ್ಟು… ಕಣ್ಣ ಕನಸುಗಳನ್ನೂ ಬೆಚ್ಚಗಿಟ್ಟು… ಜರಿ ಅಂಚಿನ ಸೀರೆ, ಅಲ್ಲಲ್ಲಿ ಸಣ್ಣ ಹೂಬಳ್ಳಿಯಂಚು, ನವಿರು ಭಾವ ಒಲವ ಮೆಲುಕು. ಚಿತ್ತಾಕರ್ಷಕ ಚಿತ್ತಾರ. ಉಟ್ಟು ತೊಟ್ಟು ಸಂಭ್ರಮಿಸಿದ ಆ ಘಳಿಗೆ. ಅಷ್ಟೊಂದು ಸುಲಭವಲ್ಲ ಸೆರಗ ತುದಿಯಲ್ಲಿ ಕನಸು ಕಟ್ಟಿಕೊಂಡೇ […]

ಪುಸ್ತಕ ವಿಮರ್ಶೆ

ವಲಸೆ, ಸಂಘರ್ಷ ಮತ್ತು ಸಮನ್ವಯ ಪುಸ್ತಕ ವಿಮರ್ಶೆ ಪುಸ್ತಕದ ಹೆಸರು: ವಲಸೆ ಸಂಘರ್ಷ ಸಮನ್ವಯ ಲೇಖಕರು: ಪುರುಷೋತ್ತಮ ಬಿಳಿಮಲೆ ಪ್ರಕಟನ ವರ್ಷ: 2019 ಬೆಲೆ: 400 ರೂಪಾಯಿ  ಪ್ರಕಾಶಕರು: ಅಕೃತಿ ಆಶಯ ಪಬ್ಲಿಕೇಶನ್ ಮಂಗಳೂರು ಲೋಕೇಶ ಕುಂಚಡ್ಕ ಡಾ. ಪುರುಷೋತ್ತಮ ಬಿಳಿಮಲೆಯವರ 400 ಪುಟಗಳ ಈ ಕೃತಿಗೆ 1985ರಲ್ಲಿ ಮಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ. ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಪ್ರಸ್ತುತ ಸಂಶೋಧನ ಕೃತಿಯು ಇದೀಗ ಪ್ರಕಟವಾಗಿದೆ. ಒಮ್ಮೆ ಬರೆದಾದ ಸಂಶೋಧನ ಪ್ರಬಂಧವನ್ನು ಪರಿಷ್ಕರಣೆ ಮಾಡುವುದು ಸುಲಭದ ಕೆಲಸವಲ್ಲ, ಇನ್ನೊಂದು ಪ್ರಬಂಧವನ್ನು ಬರೆದ ಹಾಗೆ […]

ಕಾವ್ಯಯಾನ

ಗಾಳಿಯ ಉತ್ಸವ ಪ್ರೇಮಶೇಖರ ಗಕ್ಕನೆ ಹಾರಿ ಗಬಕ್ಕನೆ ಹಿಡಿದು ನುಂಗೇಬಿಟ್ಟಿತು ನಮ್ಮೂರ ಕೆರೆಯ ಮೀನೊಂದನು ಸಾವಿರ ಸಾವಿರ ಮೈಲು ದೂರದ ಸೈಬೀರಿಯಾ ದಿಂದ ಹಾರಿ ಬಂದು ಬೆಳ್ಳಂಬೆಳಿಗ್ಗೆ ಕೆರೆ ಏರಿ ಮೇಲಿನ ಅರಳೀಮರದ ಕೊಂಬೆಯೇರಿ ಕೂತ ಸ್ವಾಲೋ ಹಕ್ಕಿಯೊಂದು. ಇಂದು ನವೆಂಬರ್ ಒಂದು. ತುರ್ತಾಗಿ ಹೋಗ ಬೇಕಿದೆ ನಾನೀಗ ರಾಜ್ಯೋತ್ಸವದಾಚರಣೆಗೆ, ನನಗಾಗಿ ಕಾದು ನಿಂತಿದೆ ಕಾರ್ಯಕರ್ತನ ಬೈಕು, ಕೂಗಿ ಕರೆಯುತ್ತಲೂ ಇದೆ ಮೈಕು. ಭದ್ರವಾಗಿದೆ ನನ್ನ ಜೇಬಿನಲಿ ಭಾಷಣದ ಹಾಳೆ, ಸಿಕ್ಕಿನಿಂತಿದೆ ನನ್ನ ಗಂಟಲಲಿ ಸ್ವಾಲೋ ನುಂಗಿದ […]

ಕಾವ್ಯಯಾನ

ಕ್ಷಮಿಸದಿರಿ ಸಂಕಟಗಳನ್ನು ಕವಿತೆ ಮಾಡುವುದು ಕ್ರೂರ ಅನ್ನಿಸಿ ಎಷ್ಟೋ ಸಲ ಸುಮ್ಮನಾಗುತ್ತೇನೆ.. ಇದು ಕವಿತೆಯಲ್ಲ; ಒಡಲ ಉರಿ. ವಿಜಯಶ್ರಿ ಹಾಲಾಡಿ ಆಸ್ಟ್ರೇಲಿಯಾದ ಕಾಳ್ಗಿಚ್ಚಿಗೆಬೆಂದ ನರಳಿದ ನೊಂದಅಳಿಲುಗಳೇ ಮೊಲಗಳೇಜಿಂಕೆಗಳೇ ನವಿಲುಗಳೇಹುಲಿ ಚಿರತೆ ಹಾವುಗಳೇಕ್ರಿಮಿ ಕೀಟ ಜೀವಾದಿಗಳೇಮರ ಗಿಡ ಪಕ್ಷಿಗಳೇಕೆಲಸಕ್ಕೆ ಬಾರದ’ ಕವಿತೆ’ಹಿಡಿದು ನಿಮ್ಮೆದುರುಮಂಡಿಯೂರಿದ್ದೇನೆಕ್ಷಮಿಸದಿರಿ ನನ್ನನ್ನುಮತ್ತುಇಡೀ ಮನುಕುಲವನ್ನು ಹಸಿರು ಹೂವು ಚಿಗುರೆಂದುಈ ನೆಲವನ್ನು ವರ್ಣಿಸುತ್ತಲೇಕಡಿದು ಕೊಚ್ಚಿ ಮುಕ್ಕಿಸರ್ವನಾಶ ಮಾಡಿದ್ದೇವೆಇಷ್ಟಾದರೂಹನಿ ಕಣ್ಣೀರಿಗೂ ಬರಬಂದಿದೆನಮ್ಮ ನಮ್ಮ ಲೋಕಗಳುಮಹಲುಗಳನ್ನು ನಾವಿನ್ನೂಇಳಿದಿಲ್ಲ ಇಳಿಯುವುದೂ ಇಲ್ಲಕ್ಷಮಿಸಲೇಬೇಡಿ ಕೊನೆಗೊಂದು ಅರಿಕೆಪ್ರಾಣಿಪಕ್ಷಿಗಳೇಮತ್ತೊಂದು ಜನ್ಮವಿದ್ದರೆ ನನಗೆದಯಮಾಡಿ ನಿಮ್ಮ ಸಂಕುಲಕ್ಕೆಕರೆದುಕೊಳ್ಳಿ- ಇಲ್ಲವೆಂದಾದರೆನಿಮ್ಮ ಪಾದ […]

ಅನುವಾದ ಸಂಗಾತಿ

ಜಾನ್ ಆಶ್ಬರಿ ಅಮೇರಿಕಾ ಕವಿ ಕನ್ನಡಕ್ಕೆ: ಕಮಲಾಕರ ಕಡವೆ “ಒಳ ಬರುವ ಮಳೆ” ಅಟ್ಟದಲ್ಲಿ ಹಸನು ಉದ್ದಿಟ್ಟ ಬ್ಲಾಕ್ ಬೋರ್ಡು. ತಾರೆಗಳ ಬೆಳಕನ್ನು ಈಗ ಗಟ್ಟಿಯಾಗಿಸಿದೆ ಗಾಳಿ. ಯಾರಿಗಾದರೂ ಕಾಣಸಿಗುತ್ತೆ. ಯಾರಿಗಾದರೂ ಗೊತ್ತಾಗುತ್ತೆ. ಈ ಮಹಾನ್ ಗ್ರಹದ ಮೇಲೆಲ್ಲಾದರೂ ಸತ್ಯವ ಕಂಡುಕೊಂಡರೆ – ಒಂದು ತುಂಡು, ಬಿಸಿಲಲ್ಲಿ ಒಣಗಿಸಿದ್ದು – ತನ್ನದೇ ಅಪಖ್ಯಾತಿ ಮತ್ತು ದೈನ್ಯತೆಯಲ್ಲಿ ಅದು ಹುಲ್ಲು ಕಡ್ಡಿಯ ಆಧಾರದಲ್ಲಿ ಇರುತ್ತೆ. ಯಾರೂ ಉದ್ದಾರವಾಗಲಾರರು, ಆದರೂ ಪರಿಸ್ಥಿತಿ ಇನ್ನೂ ಎಷ್ಟು ಹದಗೆಡಲು ಸಾಧ್ಯ? ಮುಂದುವರಿಯಲಿ ಆಟ, […]

ಕುಮಾರವ್ಯಾಸ ಜಯಂತಿ

ಕನ್ನಡ ಸಾಹಿತ್ಯದ ದಿಗ್ಗಜ ಕುಮಾರವ್ಯಾಸ..! ಕೆ.ಶಿವು ಲಕ್ಕಣ್ಣವರ ದಿನಾಂಕ ೯ ಕುಮಾರವ್ಯಾಸನ ಜಯಂತಿ. ಆ ನಿಮಿತ್ತವಾಗಿ ಕುಮಾರವ್ಯಾಸ ಕುರಿತು ಈ ಲೇಖನ… ಕುಮಾರವ್ಯಾಸ (ಕ್ರಿ.ಶ. ೧೩೫೦-೧೪೦೦) ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಾಯಣಪ್ಪ. “ಗದುಗಿನ ನಾರಾಯಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ […]

ಅನುವಾದ ಸಂಗಾತಿ

ಗುಂಟರ್ ಗ್ರಾಸ್ -ಜರ್ಮನ್ ಲೇಖಕ ಕನ್ನಡಕ್ಕೆ: ಕಮಲಾಕರ ಕಡವೆ ಪ್ರೀತಿ” ಇಷ್ಟು ಮಾತ್ರ:ಹಣಹೀನ ವ್ಯವಹಾರ.ಯಾವಾಗಲೂ ತೀರಾ ಕಮ್ಮಿಯಾಗುವ ಹಾಸಿಗೆ.ತೆಳು ತೆಳು ಸಂಬಂಧ. ಕ್ಷಿತಿಜದಾಚೆ ಹುಡುಕುವುದುಬಿದ್ದ ತರಗೆಲೆಗಳನ್ನು ಬೂಟಿನಿಂದ ಗುಡಿಸುವುದುಮತ್ತು ಮನಸಿನಲ್ಲಿಯೇ ನಗ್ನ ಪಾದಗಳನ್ನು ಹೊಸಕಿ ಕೊಳ್ಳುವುದು.ಕನ್ನಡಿ, ಸ್ನಾನಕ್ಕೆ ಷವರು ಇರುವ ಕೋಣೆಯಲ್ಲಿ,ಚಂದಿರನ ಕಡೆ ಮುಖ ಮಾಡಿದ ಬಾನೆಟ್ಟಿನ ಬಾಡಿಗೆ ಕಾರಿನಲ್ಲಿ,ಹೃದಯ ಕೊಟ್ಟು, ಹರಿದು ಹಾಕುವುದು;ಅಮಾಯಕತೆ ನಿಂತುತನ್ನ ಉಪಾಯಗಳ ಸುಡುವಲ್ಲೆಲ್ಲಕಳ್ಳದನಿಯ ಶಬ್ದ ಬೇರೆಯೇ ಆಗಿಧ್ವನಿಸುತ್ತದೆ, ಮತ್ತು ಪ್ರತಿ ಸಲವೂ ಹೊಸತಾಗಿ. ಇಂದು, ಇನ್ನೂ ತೆರೆದಿಲ್ಲದ ಬಾಕ್ಸ ಆಫೀಸಿನ ಎದುರುಕೈಯಲ್ಲಿ […]

ಕಥಾಗುಚ್ಛ

ಒಂದೇ ಮನಸ್ಸಿನಿಂದ ಹರೀಶ್ ಬೇದ್ರೆ ಕೈಮುಗಿದು ಕೇಳ್ತಿನಿ, ದಯವಿಟ್ಟು ಇದೊಂದು ವಿಚಾರದಲ್ಲಿ ನನ್ನ ಇಷ್ಟದಂತೆ ನಡೆಯಲು ಬಿಡು. ಚಿಕ್ಕ ಹುಡುಗಿ ಇರುವಾಗಿನಿಂದ ಈಗಿನವರೆಗೂ ನೀನು ಹೇಳಿದ್ದನ್ನೇ ಕೇಳಿರುವೆ. ಇದು ನನ್ನ ಭವಿಷ್ಯದ ಪ್ರಶ್ನೆ.  ನೀನು ಏನೇನೋ ಹೇಳಿ ನನ್ನ ಇಷ್ಟದ ವಿರುದ್ಧ ನಡೆದುಕೊಳ್ಳುವಂತೆ ಮಾಡಬೇಡ… ಆಯ್ತು, ನಾನು ಇಲ್ಲಿಯವರೆಗೆ ಏನೇ ಹೇಳಿದ್ದರೂ ಅದು ನಿನ್ನ ಒಳ್ಳೆಯದಕ್ಕಾಗಿ ತಾನೇ…?ಹೌದು, ಅದಕ್ಕೆ ನಾನು ನಿನ್ನ ಮಾತು ಕೇಳಿದೆ. ಆದರೆ ಇದೊಂದು ವಿಚಾರಕ್ಕೆ ನನ್ನ ಇಷ್ಟದಂತೆ ಬಿಡು. ಅದು ಹೇಗೆ ಸಾಧ್ಯ , ಹೊರಗೆ […]

ಕಾವ್ಯಯಾನ

ಓ ಸಖಿ! ನಿರ್ಮಲಾ ಆರ್. ಹೊಲದಾಗಿನ ಹಸಿರು ಎಷ್ಟು ಚೆಂದ ಓ ಸಖಿ ಪುರ್ರೆಂದು ಹಾರುವ ಹಕ್ಕಿ ತಿನ್ನುತ್ತಿತ್ತು ಮೆಕ್ಕೆ ತೆನೆಯ ಕುಕ್ಕಿ ಕುಕ್ಕಿ ಒಂದು ಬದಿ ಕರಿ ಎಳ್ಳಿನ ರಾಶಿ ಬಣ್ಣದ ಹೂಗಳು ನಲಿಯುತ್ತಿದ್ದವು ಕಂಪ ಸೂಸಿ ಬದುವಿನ ಹೂ ಬಳ್ಳಿ ಸ್ವಾಗತ ಮಾಡುತಿತ್ತು ತನ್ನ ತಾ ಹಾಸಿ ಪ್ರಕೃತಿಯ ಬಣ್ಣಿಸಲು ಪದಗಳಿಲ್ಲ ಸಖಿ ತಂಗಾಳಿಯು ಹಾದು ಹೋಗುತ್ತಿತ್ತು ನಮ್ಮ ಸೋಕಿ ರಾಶೀಯಲ್ಲಿನ ಎಳ್ಳು ತಿನ್ನುತ್ತಿದ್ದೆವು ಮುಕ್ಕಿ ಮುಕ್ಕಿ ಸಂಜೆಗೆ ವಿದಾಯ ಹೇಳಲು ಮೂಡುತ್ತಿತ್ತು ಆಗಸದಲಿ […]

ಕಾವ್ಯಯಾನ

ಅಪ್ಪ ಅಂದರೆ ಆಕಾಶ ದೇವಿ ಬಳಗಾನೂರ ಅಪ್ಪ ಅಂದರೆ ಆಕಾಶ ಅಪ್ಪ ಅಂದ್ರೆ ಅಗೋಚರ ಪ್ರೀತಿಯ ಕಡಲು ನನ್ನಮ್ಮನಂತ ಕರುಣೆಯ ಮಡಿಲು ಮಗಳ ಸಾಧನೆಯು ಪ್ರಜ್ವಲಿಸಲು ಕಾರಣವಾದ ತಿಳಿಮುಗಿಲು ಮಗಳಿಗಾಗಿ ದಣಿದನದೆಷ್ಟೋ ಹಗಲು ಅವಳಿಗಾಗಿಯೇ ಕಾಯ್ದಿರಿಸಿದನು ತನ್ನ ಇರುಳು ಅಪ್ಪ ಅಂದ್ರೆ ಮಗಳ ಪಾಲಿನ ನಾಯಕ ಅವಳ ಬದುಕ ದೋಣಿಯ ನಿಜ ನಾವಿಕ ಮಗಳ ಮುಗ್ದ ನಗುವಿಗಾಗಿ ಕಾದ ಅಮಾಯಕ ಅವಳ ಬದುಕ ರೂಪಣೆಯ ನಿಜ ಮಾಲಿಕ ಅಪ್ಪ ಅಂದ್ರೆ ಮಗಳಿಗಾಗಿಯೇ ಬದುಕೋ ಜೀವ ಅವಳ ಖುಷಿಯಲ್ಲೆ […]

Back To Top