ಅನುವಾದ ಸಂಗಾತಿ

Burning Firewoods

ಜಾನ್ ಆಶ್ಬರಿ

ಅಮೇರಿಕಾ ಕವಿ

Image may contain: 1 person, sitting

ಕನ್ನಡಕ್ಕೆ: ಕಮಲಾಕರ ಕಡವೆ

“ಒಳ ಬರುವ ಮಳೆ”

ಅಟ್ಟದಲ್ಲಿ ಹಸನು ಉದ್ದಿಟ್ಟ ಬ್ಲಾಕ್ ಬೋರ್ಡು.
ತಾರೆಗಳ ಬೆಳಕನ್ನು ಈಗ ಗಟ್ಟಿಯಾಗಿಸಿದೆ ಗಾಳಿ.
ಯಾರಿಗಾದರೂ ಕಾಣಸಿಗುತ್ತೆ. ಯಾರಿಗಾದರೂ ಗೊತ್ತಾಗುತ್ತೆ.
ಈ ಮಹಾನ್ ಗ್ರಹದ ಮೇಲೆಲ್ಲಾದರೂ ಸತ್ಯವ ಕಂಡುಕೊಂಡರೆ –
ಒಂದು ತುಂಡು, ಬಿಸಿಲಲ್ಲಿ ಒಣಗಿಸಿದ್ದು –
ತನ್ನದೇ ಅಪಖ್ಯಾತಿ ಮತ್ತು ದೈನ್ಯತೆಯಲ್ಲಿ ಅದು ಹುಲ್ಲು ಕಡ್ಡಿಯ ಆಧಾರದಲ್ಲಿ ಇರುತ್ತೆ.
ಯಾರೂ ಉದ್ದಾರವಾಗಲಾರರು, ಆದರೂ ಪರಿಸ್ಥಿತಿ ಇನ್ನೂ ಎಷ್ಟು ಹದಗೆಡಲು ಸಾಧ್ಯ?
ಮುಂದುವರಿಯಲಿ ಆಟ, ಆಡುತ್ತಾ ಪಡೆದು ಪ್ರಾವೀಣ್ಯತೆ
ಈ ಅಶಾಂತಿಯೊಳಗೆ ಕಾಲಿಡಲು.
ಕಾಣಲಾರೆಯೇ ನೀನು, ಇಷ್ಟೇ ಮಾಡಲಾದೀತು ನಮಗೆ.
ಅಷ್ಟರಲ್ಲಿಯೇ, ಕಿಚ್ಚು ಹೊತ್ತಿ ಕೊಂಡಿದೆ, ಮೆದೆಗೆ ಬೆಂಕಿ ಬಿದ್ದಂತೆ.
ಗಡಿಯಾರದ ಮುಳ್ಳನ್ನು ಹೊಂದಿಸಿ ಆಗಿದೆ
ಅದು ಮಾತ್ರ ಅನಿಷ್ಟ ಸೂಚಿಸಿದೆ.
ಬಾಳ್ವೆಯ ಸೌಜನ್ಯ ಅದರೊಂದಿಗೆ ಸಂಚು ಹೂಡಿದೆ.
ಇಲ್ಲಿಯೇ ಇನ್ನೀಗ ನಮ್ಮ ಮನೆಯೂ.
ಎಲ್ಲಿಂದ ಎಂದು ಸೂಚಿಸಲು, ಜನರಿಗೂ ಕೇಳಲು ಒಂದು ಜಾಗ.

*******

Rain Moving In”


The blackboard is erased in the attic
And the wind turns up the light of the stars,
Sinewy now. Someone will find out, someone will know.
And if somewhere on this great planet
The truth is discovered, a patch of it, dried, glazed by the sun,
It will just hang on, in its own infamy, humility. No one
Will be better for it, but things can’t get any worse.
Just keep playing, mastering as you do the step
Into disorder this one meant. Don’t you see
It’s all we can do? Meanwhile, great fires
Arise, as of haystacks aflame. The dial has been set
And that’s ominous, but all your graciousness in living
Conspires with it, now that this is our home:
A place to be from, and have people ask about.

Leave a Reply

Back To Top