ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹುಳುಕ ಹೂರಣದ ಹೋಳಿಗೆ ತೋರಣ ‘ರಾಯಕೊಂಡ’ ಕರಣಂ ಪವನ ಪ್ರಸಾದರ ಬಹುನಿರೀಕ್ಷಿತ ಕಾದಂಬರಿ. ಕಾನ್ಕೇವ್ ಪ್ರಕಾಶನ ಇದನ್ನು ಪ್ರಕಟಿಸಿದೆ. ನನ್ನಿ, ಗ್ರಸ್ತ, ಕರ್ಮ ಕಾದಂಬರಿಗಳನ್ನು, ಕರಣಂ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದವರು. ಅವರೇ ಹೇಳಿಕೊಂಡಂತೆ ಇದು ಡಾರ್ಕ್ ಹ್ಯೂಮರ್ ಪ್ರಕಾರಕ್ಕೆ ಸೇರುವ ಕಾದಂಬರಿ. ಈ ವಿಭಾಗವು ಸಾಮಾನ್ಯವಾಗಿ ನಿಷೇಧವೆಂದು ಭಾವಿಲ್ಪಡುವ ವಿಷಯದ ಬೆಳಕನ್ನು ಚೆಲ್ಲುತ್ತದೆ. ವಿಶೇಷವಾಗಿ ಗಂಭೀರ ಅಥವಾ ವಿಷಾದದಿಂದ ಕೂಡಿದ ವಿಷಯಗಳನ್ನು ಕಪ್ಪು ಹಾಸ್ಯದ ಮಾದರಿಯಲ್ಲಿ ಚರ್ಚಿಸುತ್ತದೆ. ಎಂ. ವ್ಯಾಸರ ಕಪ್ಪು ದರ್ಶನದ ಕಥೆಗಳೇ ಬೇರೆ, […]

ಹೀಗೊಂದು ವಿರಹ ಗೀತೆ

ಕವಿತೆ ಹೀಗೊಂದು ವಿರಹ ಗೀತೆ ಒತ್ತಿ ಉಕ್ಕುವ ಮನಕೆ ತಂಪೆರೆವ ಬಿಸುಪಿಲ್ಲಎಲ್ಲಿಂದ ಬರಬೇಕು, ನಾನು ಬಡವಿ…..ಬಿಸುಪಿಲ್ಲದಾ ಭಯಕೆ ತೆರೆಯದಾತನ ತೋಳುಅದನರಿತ ಮೇಲೂ.. ಆತ ಬಡವ… ಹರೆಯದಲಿ ಹೀಗಿರಲಿಲ್ಲ, ಚೆನ್ನಿತ್ತು ಚೆಲುವಿತ್ತುಒಲವಿತ್ತು ನಾ -ನೀನು ಬೇಧವಿರದೇನಿನ್ನೊಳಗೆ ನಾನು, ನನ್ನೊಳಗೆ ನೀನೆಂಬುವುದುಮುದವಿತ್ತು ಸಂಗೀತ ಲೋಪವಿರದೇ ಈಗ ನಿಶ್ಶಬ್ದದಲಿ ಈಟಿಯಂತೆಯೆ ಇರಿವನಿನ ಮೌನ ಸಹಿಸುವುದು ಕಷ್ಟ ಎನಗೆಇಷ್ಟ ಇರದಿದ್ದರೂ ನನ ಮಾತು ಜೋರಾಗಿಗುಡುಗು ಸಿಡಿಲುಗಳಂತೆ ಶಬ್ದ ಕೊನೆಗೆ ಕೊಟ್ಟರೆ ಕಳೆದುಬಿಡುವಂತೆಂಬ ನಿನ ಪ್ರೀತಿಇಟ್ಟರೆ ಹಳಸಿಬಿಡುವಂತೆ ನಾನೂಇಟಿಗೆ ಗಾರೆಯ ಹಾಕಿ ಕಟ್ಟುವುದೆ ಗೋಡೆಯನುಈಚೆ […]

ಕವಿಗಿನ್ನೇನು ಬೇಕು?

ಕವಿತೆ ಕವಿಗಿನ್ನೇನು ಬೇಕು? ಮಾಲತಿ ಶಶಿಧರ್ ಕವಿತೆಯೊಳಗೊಂದು ಭಾವಬೆರೆತು ಹಾಲಿನಲ್ಲಿ ಲೀನವಾದಜೇನಿನಂತೆ ಸವಿಯಾಗಿರಲುಕವಿಗಿನ್ನೇನು ಬೇಕು? ಭಾವ ಭಾಷೆಗಳ ಮಿಲನಪ್ರಸವವಾಗಲು ಕವಿತೆಮಡಿಲಲ್ಲಿ ಕಣ್ದೆರೆಡುನಗುವ ಹಾಲುಗಲ್ಲದಕೂಸಿನಂತೆಕವಿಗಿನ್ನೇನು ಬೇಕು? ಮನ ಭಾವಗಳ ಬಂಧವದುಅರಿವಿನೊಳಗಿಟ್ಟ ಗಂಧದ ಕೊರಡುಸುಗಂಧ ಎಲ್ಲೆಡೆ ಹಬ್ಬಿಮುದವ ಹಂಚುತಿರಲುಕವಿಗಿನ್ನೇನು ಬೇಕು? ಎದೆಯೊಳಗಿನ ತದ್ಭವಗಳೆಲ್ಲಾಹೆಣೆದುಕೊಂಡು ತತ್ಸಮಗಳಪಂಕ್ತಿಗಳಾಗಿ ಅರಳಿದರೆಮೊಗ್ಗೊಂದು ಬಿರಿದು ಮುಗುಳುನಗುವಂತೆಕವಿಗಿನ್ನೇನು ಬೇಕು?? ಕವಿತೆ ಲೋಕದ ಕನ್ನಡಿಎಡಬಲಗಳಾಚೆ ಚಂದ ತೋರುವಪದ ಲಾಸ್ಯ ಮೃದು ಹಾಸ್ಯಜೀವ ಭಾವಗಳ ಜಲದೋಟನಿಲದೆ ಓಡುತ ಲೋಕವ ಶುದ್ಧಿಮಾಡಲುಕವಿಗಿನ್ನೇನು ಬೇಕು??ಕವಿತೆ ಇದ್ದರೆ ಸಾಕು… ***********************

ಹೆಣ್ಣೊಡಲಾಳದ ನೋವಿನ ದನಿಗಳು ಅಂಕಣ ಬರಹ ಊರ ಒಳಗಣ ಬಯಲುಲೇಖಕಿ-ವಿನಯಾಪ್ರಕಾಶಕರು- ಛಂದ ಪುಸ್ತಕಬೆಲೆ-೪೦/-              ನಮ್ಮ ಮನೆಯಿಂದ ಒಂದುವರೆ ಕಿ.ಮಿ ಹೋದರೆ ಗಂಗಾವಳಿ ನದಿ ಸಮುದ್ರಕ್ಕೆ ಸೇರುವ ಸ್ಥಳ ಬರುತ್ತದೆ. ಅಲ್ಲಿಯೇ ಸ್ವಲ್ಪ ಹಿಂದೆ ಗಂಗಾವಳಿ ನದಿಯನ್ನು ದಾಟಿಸುವ ಸ್ಥಳವಿದೆ. ಮೊದಲೆಲ್ಲ ದೋಣಿಯಲ್ಲಿ ದಾಟಿಸುತ್ತಿದ್ದರು. ಈಗ ದೊಡ್ಡದೊಂದು ಬಾರ್ಜು ಬಂದಿದೆ. ಮಕ್ಕಳಿಗೆ ಒಂದು ಚಂದದ ಅನುಭವವಾಗಲೆಂದು ಕೆಲವೊಮ್ಮೆ ಅಲ್ಲಿಂದ ಬಾರ್ಜಿನಲ್ಲಿ ದಾಟಿ ಸಮೀಪದ ಮಾಸ್ಕೇರಿ ಎಂಬ ಊರಿಗೆ ಹೋಗಿ ಬರುವುದೂ […]

ಅಂಕಣ ಬರಹ ಹೂವು ಹೊರಳುವ ಹಾದಿ ಬಾಲ್ಕನಿ ಎಂದಾಗಲೆಲ್ಲ ನನಗೆ ಹೂವಿನ ಕುಂಡಗಳು ನೆನಪಾಗುತ್ತವೆ. ಪುಟ್ಟಪುಟ್ಟ ಕುಂಡಗಳ ಕೆಂಪು ಗುಲಾಬಿ, ಗುಲಾಬಿ ಬಣ್ಣದ ನುಣುಪಾದ ಕುಂಡಗಳಲ್ಲರಳಿದ ದುಂಡು ಮಲ್ಲಿಗೆ, ದುಂಡನೆಯ ಕುಂಡದಲ್ಲೊಂದು ಹಸುಗೂಸಿನಂಥ ಮೊಳಕೆ, ಮೊಳಕೆಯೊಂದು ಮೊಗ್ಗಾಗುವ ಪ್ರಕ್ರಿಯೆ ಹೀಗೆ ಹೂಗಳ ದೊಡ್ಡದೊಂದು ಪ್ರಪಂಚವೇ ಪುಟ್ಟ ಬಾಲ್ಕನಿಯಲ್ಲಿ ಎದುರಾಗುತ್ತದೆ. ಅರಳಿಯೂ ಅರಳದಂತಿರುವ ಕೆಂಪು ದಾಸವಾಳ ಬೆಳಗನ್ನು ಸ್ವಾಗತಿಸಿದರೆ, ಮುಳುಗುವ ಸೂರ್ಯನನ್ನು ಮಲ್ಲಿಗೆಯ ಪರಿಮಳ ಬೀಳ್ಕೊಡುತ್ತದೆ; ಮಧ್ಯರಾತ್ರಿಯಲ್ಲಿ ಅರಳಿದ ಬ್ರಹ್ಮಕಮಲಗಳೆಲ್ಲ ಚಂದಿರನಿಗೆ ಜೊತೆಯಾಗುತ್ತವೆ. ಸಮಯ ಸಿಕ್ಕಾಗ ಹೂಬಿಡುವ ನಾಗದಾಳಿ, […]

ಸ್ವಾತಂತ್ರ್ರ್ಯೋತ್ಸವ ಆಚರಿಸುವ ಹೊತ್ತಿನಲ್ಲಿ.

ಲೇಖನ ಸ್ವಾತಂತ್ರ್ರ್ಯೋತ್ಸವ ಆಚರಿಸುವ ಹೊತ್ತಿನಲ್ಲಿ. ಸುನೀತಾ ಕುಶಾಲನಗರ ಶಾಲೆ ಸೇರಿದಾಗಿನಿಂದ ಈವರೆಗೂ ಪ್ರತಿವರ್ಷ ಆಗಸ್ಟ್ ಬಂತೆಂದರೆ ಅದೇನೋ ಸಂಭ್ರಮ.ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಸ್ವಾತಂತ್ರೋತ್ಸವದ ಸಡಗರ ಅದು ಹಾಗೆಯೇ ಉಳಿಯಲು  ಮತ್ತು ಬೆಳೆಸಲು ಶಿಕ್ಷಕ ವೃತ್ತಿಯಲ್ಲಿರುವುದರಿಂದ ಮತ್ತಷ್ಟು ಉತ್ಸಾಹಿಯಾಗಿ ನಿರ್ವಹಿಸುವ ಅವಕಾಶ. ವಿದ್ಯಾರ್ಥಿಗಳಾಗಿದ್ದಾಗ  ದೇಶಭಕ್ತಿ ಮೈಗೂಡಿಸುವ ಭಾಷಣದ  ಬಾಯಿಪಾಠ,ದೇಶಭಕ್ತಿ ಗೀತೆ ಹಾಡಿ ನಲಿದು  ಶಿಕ್ಷಕರು ಕೊಡುವ ಮಿಠಾಯಿ ಚೀಪುತ್ತಾ ಕೇಕೆ ಹಾಕಿ  ಆ ದಿನ ಸವಿದ ಖುಷಿಯನ್ನು ಮೆಲುಕಿಸುತ್ತಾ ಮನೆಗೆ ತೆರಳುತಿದ್ದ ನೆನಪು ಮೊನ್ನೆ ಮೊನ್ನೆಯೆಂಬಂತೆ.  ಸ್ವತಃ  ಶಿಕ್ಷಕಿಯಾಗಿರುವುದರಿಂದ […]

ಸ್ವಾತಂತ್ರೋತ್ಸವದ ವಿಶೇಷ

ಸಂವಿಧಾನ ಮತ್ತು ಮಹಿಳೆ. ನೂತನ ದೋಶೆಟ್ಟಿ  1)  ಅವಳು 23ರ ಹುಡುಗಿ. ಆಗಲೇ ಮದುವೆಯಾಗಿ ಎರಡು ಮಕ್ಕಳು. ಅಂದು ಮನೆಕೆಲಸಕ್ಕೆ ಬಂದಾಗ ಬಹಳ ಸಪ್ಪಗಿದ್ದಳು. ಬಾಯಿಯ ಹತ್ತಿರ ರಕ್ತ ಕರೆಗಟ್ಟಿತ್ತು.ಏನೆಂದು ಕೇಳುವುದು? ಇದೇನು ಹೊಸದಲ್ಲ. ಅವಳ ಕುಡುಕ ಗಂಡ ಹೊಡೆಯುತ್ತಾನೆ. ತನ್ನ ಕುಡಿತದ ದುಡ್ಡಿಗೆ ಅವಳನ್ನೇ ಪೀಡಿಸುತ್ತಾನೆ. ಪುಟ್ಟ ಇಬ್ಬರು ಮಕ್ಕಳ ಜೊತೆ ನಾಲ್ವರ ಸಂಸಾರದ ಹೊಣೆ ಅವಳ ಮೇಲಿದೆ. ವಾರದಲ್ಲಿ ಎರಡು ದಿನ ಗಂಡನಿಂದ  ಹೊಡೆಸಿಕೊಂಡು ಬರುತ್ತಿದ್ದವಳು ಈಗ ದಿನವೂ ಬಡಿಸಿಕೊಳ್ಳುತ್ತಿದ್ದಾಳೆ.  ಅವಳ ನೋವು ನೋಡಲಾಗದೆ,  […]

ಗಾಳಿ ಪಟ

ಕವಿತೆ ಗಾಳಿ ಪಟ ರೇಷ್ಮಾ ಕಂದಕೂರ. ಕೆಲವೊಮ್ಮೆ ಏರುಇನ್ನೊಮ್ಮೆ ಇಳಿತಹರಿಯ ಬಿಡದಿರುಸಮತೋಲನದ ಬಾಲಂಗೋಚಿ ಗಾಳಿ ಬಂದ ಕಡೆ ಮುಖ ಮಾಡಿಘಾಸಿಗೊಳಿಸುವೆ ಮನವಅತ್ತಿಂದಿತ್ತ ಸುಳಿಯುತಬಾನ ಚಿತ್ತಾರದಿ ತೇಲುತಿದೆ ಬಾನಂಚಿಗೆ ಸಾಗುವ ಕನಸಿಗೆಬಣ್ಣ ಹಚ್ಚುತ ಸಾಗಿದೆಮಕ್ಕಳ ಮನ ತಣಿಸುತಕುಣಿದಿದೆ ಎಲ್ಲ ಮರೆತು ತಾಗದಿರಲಿ ಕುಗ್ಗುವ ಮಾತುಸಿಗದಿರಲಿ ಆಡಿಕೊಳ್ಳುವವರಿಗೆಮೇಲೇರುವ ಧಾವಂತಕೆನೂರೆಂಟು ವಿಘ್ನಸಾವರಿಸಿ ಮೇಲೇರುತಲಿರು ಬೇಕಾ ಬಿಟ್ಟಿತನ ಬೇಡಸಾಕೆಂದು ಕುರದೇಗುರಿಯ ಸಾಕಾರಕೇಗುರುತರ ಜವಾಬ್ದಾರಿಯಲಿ ಏರಿದವ ಕೆಳಗಿಳಿಯಲೇ ಬೇಕುಸೂರೆ ಮಾಡಿದವ ಸೆರೆಯಾಗುವಎಲ್ಲವನು ಸುಸ್ಥಿತಿಯಲಿ ನೋಡುಬಾಳ ಬೆಳಗುವೆ ನಿರಾತಂಕದಿ. **************************************

ಹೊಸ ಶಿಕ್ಷಣ ನೀತಿ

ಚರ್ಚೆ ಕಠಿಣ ಕಾಯಿದೆ ಅತ್ಯಗತ್ಯ ಡಿ.ಎಸ್.ರಾಮಸ್ವಾಮಿ ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆಯನ್ನು ಅಷ್ಟು ಸುಲಭದಲ್ಲಿ ಬದಲಿಸುವುದು ಅಸಾಧ್ಯದ ಕೆಲಸ. ಮೂಲತಃ ವರ್ಣವ್ಯವಸ್ಥೆಯೇ ಪುರಾತನ ಭಾರತೀಯ ಸಮಾಜದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸೇತುವಾಗಿತ್ತು. ಬ್ರಿಟಿಷರ ಅಪಭ್ರಂಶ ಅರ್ಥಾಂತರವೇ ಇವತ್ತಿನ ಜಾತಿ ಪದ್ಧತಿಯಾಗಿ ಬದಲಾಗಿ ಶ್ರೇಣೀಕೃತ ಸಮಾಜವನ್ನು ಜಾತಿ ಮೂಲಕ ಕಾಣಹೊರಟದ್ದೇ ಸದ್ಯದ ದುರಂತ. ಪುರಾತನ ಶಿಕ್ಷಣ ಗುರುಕುಲಗಳಲ್ಲಿ ಆಯಾ ವರ್ಣದ ಕಸುಬು ಮತ್ತು ಜೀವನ ನಿರ್ವಹಣೆಯ ಗುರಿಯಾಗಿ ರೂಪುಗೊಳ್ಳುತ್ತಿತ್ತು. ಪರಸ್ಪರ ಅವಲಂಬನೆ ಇದ್ದ ಕಾಲದಲ್ಲಿ ಪರಸ್ಪರ ಗೌರವ […]

ರಾಹತ್ ಇಂದೋರಿ

ಅನುವಾದಿತ ಕವಿತೆ ಮೂಲ: ರಾಹತ್ಇಂದೋರಿ ಕನ್ನಡಕ್ಕೆ:ರುಕ್ಮಿಣಿ ನಾಗಣ್ಣವರ ಕಂಗಳಲ್ಲಿ ನೀರು ತುಟಿಗಳಲ್ಲಿ ಕಿಡಿಯನ್ನು ಇರಿಸಿಬದುಕ ಮಾಡಬೇಕೆಂದರೆ ಯೋಜನೆಗಳು ಹಲವು ಇರಿಸಿ ಕಲ್ಲುಮುಳ್ಳುಗಳದೇ ದಾರಿಯಲಿ ಗುರಿ ಏನೂ ದೊಡ್ಡದಲ್ಲಕೂಗಿ ಕರೆಯುತಿದೆ ದಾರಿ ಪಯಣ ಜಾರಿ ಇರಿಸಿ ಒಂದೇ ನದಿಗೆ ಎರಡು ದಡಗಳು ಸ್ನೇಹಿತರೆಬದುಕಿನೊಂದಿಗೆ ಸ್ನೇಹ ಸಾವಿನೊಂದಿಗೆ ಸಖ್ಯ ಇರಿಸಿ ಬಂದು ಹೋಗುವ ಕ್ಷಣಗಳು ಉಸುರುತಿವೆ ಕಿವಿಯಲ್ಲಿಏನೋ ಘಟಿಸುವುದಿದೆ ಎಲ್ಲ ತಯಾರಿ ಇರಿಸಿ ಜರೂರಿ ಇದೆ ಕಣ್ಣುಗಳಲಿ ಕಲ್ಪನೆ ಇರಿಸುವುದುನಿದ್ದೆ ಇರಿಸದಿದ್ದರೂ ಕನಸೊಂದಿಗೆ ಗೆಳೆತನ ಇರಿಸಿ ಬೀಸುವ ಗಾಳಿ ಹೊತ್ತಯ್ಯದಿರಲಿ […]

Back To Top