ಕಾವ್ಯಯಾನ

ಕಾವ್ಯಯಾನ

ಬಡವರ ಆಕರ ರಾಹು ಅಲಂದಾರ ಓ ಬಡವರ ಆಕಾರ ದೀನ ದಲಿತರ ಸಾಹುಕಾರ ಜಗಜ್ಯೋತಿ ಅಂಬೇಡ್ಕರ್ ಹಾಕುವೆ ನಿಮಗೆ ನಮಸ್ಕಾರ ಬಡವರ ಉತ್ತರಕ್ಕಾಗಿ ದುಡಿದೆ ದೀನ ದಲಿತರ ಹಿತಕ್ಕಾಗಿ ನಡೆದೆ ಸಮಾನತೆಯನ್ನೇ ನುಡಿದೆ ಜನತೆಯ ಏಳಿಗೆಗಾಗಿ ಮಡಿದೆ ರಚಿಸಿದೆ ನೀ ಸಂವಿಧಾನ ಆಯಿತು ಸರ್ವರಿಗೂ ಅನುದಾನ ಕನಸಿಟ್ಟೆ ನೀ ಎಲ್ಲರಲ್ಲೂ ಸಮಾನ ನಮಗೆಲ್ಲಾ ನೀ ಆಶಾಕಿರಣ ಉಳಿದೆ ಎಲ್ಲರ ಮನದಲ್ಲಿ ಸಮಾನತೆಯನ್ನೋ ಬೆಳಕು ಚೆಲ್ಲಿ ನೆನಪಿಸುವರು ಜನತೆ ಬಾಳಲ್ಲಿ ಹುಟ್ಟಿ ಬಾ ಇನ್ನೊಮ್ಮೆ ಜಗದಲ್ಲಿ **********

ಪ್ರಸ್ತುತ

ಡಾ.ಬಿ.ಆರ್.ಅಂಬೇಡ್ಕರ್..! ಎಲ್ಲಾ ಜನಾಂಗೀಯ ನಾಯಕ ಮತ್ತು ಸರ್ವರ ಅದರಲ್ಲೂ ದಲಿತರ ಏಳಿಗೆಗಾಗಿ ದುಡಿದ ಡಾ.ಬಿ.ಆರ್.ಅಂಬೇಡ್ಕರ್..! ಏಪ್ರಿಲ್ 14 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ. ಆ ನಿಮಿತ್ತವಾಗಿ ಈ ಪುಟ್ಟ ಲೇಖನ… ಅಂದು ಆ ಬಾಲಕ ಅಸ್ಪೃಶ್ಯತೆ, ಬಡತನವನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಇವತ್ತು ಈ ಅಖಂಡ ಭಾರತದಲ್ಲಿ ಮರೆಯಲಾರದ ಚೇತನವೊಂದು ಸೃಷ್ಟಿಯಾಗುತ್ತಿರಲಿಲ್ಲವೇನೋ? ಆ ಬಾಲಕ ಯಾರೆಂದು ಕ್ಷಣಮಾತ್ರದಲ್ಲಿ ಊಹಿಸಬಹುದು. ಅದೇ ಡಾ. ಬಿ.ಆರ್. ಅಂಬೇಡ್ಕರ್. ಈ ಹೆಸರು ಹೇಳುತ್ತಿದ್ದಂತೆಯೇ ಮೈ ರೋಮಾಂಚನಗೊಳ್ಳುತ್ತದೆ… ಭೀಮರಾವ್ ರಾಮ್‍ಜಿ ಅಂಬೇಡ್ಕರ್ […]

ಪುಸ್ತಕ

ಅಸಹಾಯಕ ಆತ್ಮಗಳು ಸಣ್ಣ ಕಥೆಗಳು ವೇಶ್ಯಾವಾಟಿಕೆಯ ನರಕದ ಬದುಕಿಗೆ ಯಾವ ಹೆಣ್ಣು ಮಗಳೂ ಸ್ವಇಚ್ಚೆಯಿಂದ ಅಡಿಯಿಡುವುದಿಲ್ಲ. ಬದುಕಿನ ಹಲವು ಅನಿವಾರ್ಯ ಘಟನೆಗಳು ಮತ್ತು ಅವರುಗಳ ಬದುಕಿನಲ್ಲಿ ಬರುವ ಅನಿರೀಕ್ಷಿತ ವ್ಯಕ್ತಿಗಳು ಅವರನ್ನು ವೇಶ್ಯಾವಾಟಿಕೆಯ ಕೂಪದೊಳಗೆ ಬೀಳುವಂತೆ ಮಾಡುತ್ತಿವೆ. ಇಂತಹ ಹತ್ತಾರು ಹೆಣ್ಣುಮಕ್ಕಳನ್ನು ಲೇಖಕರು ಖುದ್ದಾಗಿ ಭೇಟಿಯಾಗಿ ಅವರ ಬಾಯಿಂದಲೇ ಕೇಳಿ ತಿಳಿದ ಅವರ ಬದುಕಿನ ಕರುಣಾಜನಕ ಕತೆಗಳೇ ಈ ಪುಸ್ತಕದ ಒಳಗಿರುವ ಆತ್ಮಗಳು. ಪ್ರಿಯರೆ,ನನ್ನ ‘ಅಸಹಾಯಕ ಆತ್ಮಗಳು’ my lang ನಲ್ಲಿ e-book ರೂಪದಲ್ಲಿ ಪ್ರಕಟವಾಗಿದೆ.ಬೆಲೆ ಕೇವಲ99=00 […]

ಕಾವ್ಯಯಾನ

ನನ್ನದಲ್ಲ ಬಿಡು ನೀ.ಶ್ರೀಶೈಲ ಹುಲ್ಲೂರು ಭಾರವಾದ ಹೆಜ್ಜೆಗಳಿಗೆ ಗೆಜ್ಜೆ ಏತಕೋ ನೊಂದುಬೆಂದ ಜೀವಕೀಗ ಅಂದವೇತಕೋ? ಕೋಪ ತಾಪ ಎಲ್ಲ ಬಿಡು ರೋಷವೇತಕೋ ನಮ್ಮ ಹಾಗೆ ಪರರ ತಿಳಿ ವಿರಸವೇತಕೋ? ನಮ್ಮ ನಡುವೆ ಕೊಳ್ಳಿ ಇಡುವ ಸುಳ್ಳು ಏತಕೋ ಅರಿತು ಬೆರೆವ ಮನಕೆ ಇರಿತ ದುರಿತವೇತಕೋ? ಅಳುವಿನಲೇ ನಲಿವ ಬದುಕು ಚಿಂತೆ ಏತಕೋ ನಾಕವಿಲ್ಲಿ ನರಕವಿಲ್ಲಿ ಕೊರಗು ಏತಕೋ? ನಾನು ನನದು ಎನುವ ಜನುಮ ಇನ್ನು ಏತಕೋ ಅವನ ಜೀವ ಅವನ ಕಾಯ ನನಗೆ ಏತಕೋ? *******

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಾವೆಲ್ಲ ಕಂದಿಲ ಮಂದತೆಯಲಿ ಹೊಸ ಕನಸುಗಳ ಕಂಡಿರುವೆವು ಕತ್ತಲ ಕೂಪದಿಂದ ಹೊರಬರಲು ಕಂದಿಲು ಹಿಡಿದು ಬಂದಿರುವೆವು ನಾಳೆಗಳು ನಮಗೂ ಬರಬಹುದೆಂಬ ಹೊಸ ಆಸೆಯ ಹೊತ್ತು ಬದುಕು ಬೆಳಕಿನಾಟದಲಿ ಕಳೆದು ಹೋದ ದಿನಗಳ ನೊಂದಿರುವೆವು ಮರೆಯಲಾಗದು ಹಚ್ಚಿಟ್ಟ ಕಂದಿಲು ಆರುವ ಮುನ್ನ ಉಂಡ ದಿನಗಳ ಎಣ್ಣೆ ಮುಗಿದಿತೆಂಬ ಭಯದಿಂದ ದಿನವು ನೊಂದ್ದಿದ್ದು ಕಂಡಿರುವೆವು ಬಡತನ ಸಿರಿತನ ಹಂಗುಗಳಿಲ್ಲದ ಕಂದಿಲು ಕತ್ತಲೆಯ ಕಳೆದಿದೆ ಮುಸ್ಸಂಜೆಯ ಗುಡಿಸಲು ಅರಮನೆಗಳಲಿ ಚೆಲ್ಲುವುದ ನೋಡಿರುವೆವು ಭರವಸೆಯೊಂದಿಗೆ ಕರಿ ಕತ್ತಲೆಯ ಕಳೆದು […]

ಸ್ವಾತ್ಮಗತ

ಶರಣೆ ನೀಲಾಂಬಿಕೆ..! ವಿಶಿಷ್ಟ ದಿಟ್ಟ ನಿಲುವಿನ ಚಿಂತಕಿ, ಅನುಭಾವಿ ಶರಣೆ ನೀಲಾಂಬಿಕೆ..! ಹನ್ನೆರಡನೆಯ ಶತಮಾನದಲ್ಲಿ ಅನೇಕ ಶರಣರು, ಸಾಧಕರು ತಮ್ಮ ಅನುಭಾವದಿಂದ ಕಲ್ಯಾಣ ಕ್ರಾಂತಿಗೆ ಕೊಡುಗೆಯಾದವರು. ಅವರಲ್ಲಿ ವಿಶಿಷ್ಟ, ಪ್ರಮುಖ ಚಿಂತಕಿ, ಅನುಭಾವಿ ದಿಟ್ಟ ನಿಲುವಿನ ಶರಣೆ ನೀಲಾಂಬಿಕೆ. ನೀಲಮ್ಮ ಬಸವಣ್ಣನವರ ಎರಡನೆಯ ಹೆಂಡತಿ. ಮೊದಲ ಪತ್ನಿ ಸೋದರ ಮಾವ ಬಲದೇವರ ಮಗಳು. ನೀಲಾಂಬಿಕೆ, ನೀಲಲೋಚನೆ, ನೀಲಮ್ಮ, ಮಾಯಾದೇವಿ ಎಂತೆಲ್ಲ ಹೆಸರಿರುವ ನೀಲಮ್ಮನ ಅಪ್ಪ ಅಮ್ಮ ಇವರ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಹರಿಹರ ಮತ್ತು ಭೀಮ ಕವಿಗಳು […]

ಕಾವ್ಯಯಾನ

ಒಂದಲ್ಲ—— ಎರಡು ಸೌಜನ್ಯ ದತ್ತರಾಜ ಹೇಳುತ್ತಾರೆಲ್ಲರೂ ನಾನು ನೀನು ಒಂದೇ ಎಂದು ಹೌದೆನಿಸುತ್ತದೆ ನೋಡಲು ಎದುರಿಗೆ ಇಬ್ಬರಿಗೂ ಇದೆ ಎರಡು ಕಣ್ಣು’ ಒಂದು ಮೂಗು ಒಂದು ಬಾಯಿ ಆದರೆ ಬಾಯೊಳಗಿನ ಹಲ್ಲುಗಳ ಲೆಕ್ಕ ಸಿಗುತ್ತಿಲ್ಲ ಮೆದುಳೊಳಗಿನ ಹುಳುಕುಗಳದ್ದು ಸಹ. ಈಗ ಹೇಗೆ ಹೇಳುವುದು ಮತ್ತೆ ಮತ್ತೆ ನಾನು ನೀನು ಒಂದೇ ಎಂದು!? ನಾನು ನೀನೂ ಒಂದೇ ಎನ್ನುತ್ತಲೇ ಇಬ್ಬರೂ ಒಂದಾಗಿ ಎರಡಾದವರು ನಾವು!…. ಇಬ್ಬರೂ ಒಂದಾಗಿದ್ದಾಗ ಸುತ್ತಲಿನವರೆಲ್ಲಾ ಹೇಳಿದರು ಇಬ್ಬರೂ ಒಂದಲ್ಲ ಬೇರೆ ಬೇರೆ ಎಂದರು ಈಗ […]

ಕಾವ್ಯಯಾನ

ಬದಲಾಗದ ಕ್ಷಣಗಳು… ಶಾಲಿನಿ ಆರ್. ಬದಲಾಗದ ಕ್ಷಣಗಳು, ನೀ’ ಬಂದು ಹೋದ ಘಳಿಗೆಗಳು, ಅದೇ ಚಳಿಗಾಳಿಯ ಇರುಳುಗಳು, ಚಂದ್ರಿಕೆಯ ಸುರಿವ ಬೆಳದಿಂಗಳು, ನಿನ್ನರಸುವ ಕಣ್ಣರೆಪ್ಪೆಗಳು, ಹ್ಞಾಂ, ಕಣ್ಣಂಚಿನಾ ಕೊನೆಯಲಿ ಕಂಡು ಕಾಣದ್ಹಾಂಗೆ ಜಿನುಗಿದ ಹನಿಗಳು, ಮತ್ತೇನಿಲ್ಲ,! ಮೌನದುಯ್ಯಾಲೆಯಲಿ ಬಿಗಿದ ಕೊರಳು, ಒಣನಗೆ , ದಾಹ! ಅಷ್ಟೇ, ಸಂಜೆಯ ಚಳಿಗಾಳಿಯಿರುಳಲಿ ನೀ ನಡೆದ ದಾರಿಯುದ್ದಕ್ಕೂ ಮಂಜುಮುಸುಕಿದ ಧೂಳ ಕಣಗಳು, ಮನದಾಳದಲ್ಲಿ ಅಲ್ಲ, ಮತ್ತೆ! ಯಾವುದು ಬದಲಾಗಿಲ್ಲ ನೀ ಬಂದು ಹೋದ ಘಳಿಗೆಗಳು, ಅದೇ ಚಳಿಯ ಇರುಳುಗಳು, ಚಂದ್ರಿಕೆಯ ಸುರಿವ […]

ಕಾವ್ಯಯಾನ

ಪ್ರೀತಿಯ ಗೆಳೆಯರೇ ಮೂಗಪ್ಪ ಗಾಳೇರ ಪ್ರೀತಿಯ ಗೆಳೆಯರೇ……. ನಿಮಗೊಂದು ಕತೆ ಹೇಳಬೇಕೆಂದಿರುವೆ ಎರೆಮಣ್ಣ ಕರಿ ಚೆಲುವು ಸುಳಿಗಾಳಿಯ ಅಲೆಮಾರಿಯ ನಡಿಗೆ ಬೈಕೊಂಡು ಹುರ್ಕೊಂಡು ಸರಿಯಾಗಿ ಕೇಳಿ ನಾ ಹೇಳುವ ಕಥೆಯಾ……..! ಪ್ರೀತಿಯ ಗೆಳೆಯರೇ……. ನಿಮಗೊಂದು ಪತ್ರ ಬರೆಯುವೆ ನಿಟ್ಟುಸಿರು ಬಿಡದೆ ಬಿಟ್ಟ ಕಣ್ಣುಗಳ ಮುಚ್ಚದೆ ಓದಿ ಅಲ್ಲಲ್ಲಿ ಹುಡುಕಿ ತಡಕಿ ಭಯಬಿದ್ದ ಮನಸ್ಸುಗಳನ್ನು ಪತ್ರದಲ್ಲಿ ಬಚ್ಚಿಟ್ಟಿರುವೆ……..! ಪ್ರೀತಿಯ ಗೆಳೆಯರೇ…… ನಿಮಗೊಂದು ಗುಟ್ಟು ಹೇಳಬೇಕೆಂದಿರುವೆ ಬಾರದ ದಿನಗಳಲ್ಲಿ ಕಳೆದ ಕಂಬನಿಯ ಕನಸುಗಳು ಚಿರತೆ ನಡಿಗೆ ಕದ್ದ ಪೂರ್ವಜರ ಉಸಿರು […]

ಪ್ರಬಂಧ

ಮಠದ ಆನೆ ರೇಶ್ಮಾ ಗುಳೇದಗುಡ್ಡಾಕರ್ ಆನೆ ಎಂದರೆ ಸಂಭ್ರಮ, ಸಡಗರ  ದೈವೀಕತೆ ಆಶ್ಚರ್ಯ ಹತ್ತು ಹಲವು ಉದ್ಗಾರ. ಊರಿನಲ್ಲಿ ಕಂಡರೆ .ಅದೆ ಆನೆ ಅಚಾನಕ್ ಅಗಿ ನಾವು ಹೋಗುವ ದಾರಿಯಲ್ಲಿ ,ಕಾಡಿನಲ್ಲಿ ಊರ ಬಯಲಿನಲ್ಲಿ ಕಂಡರೆ !!!! ಹೃದಯ ವೇ ಬಾಯಿಗೆ ಬಂದಂತಾಗುತ್ತದೆ .  ಅಲ್ಲವೇ ಅದನ್ನು ದೈರ್ಯ ವಾಗಿ ಸ್ವಾಗತಿಸುವರು ಸ್ವಲ್ಪ ಕಡಿಮೆಯೇ .     ಆನೆ ಎಂದರೆ ನೆನಪಾಗುವದು ಅದರ  ಗಾತ್ರ  ಗತ್ತು ರಾಜಗಾಂಭಿರ್ಯ ನಡಿಗೆ ಅದರ ತೊಕದಷ್ಟೇ ಇರುವ ಸಂಮಯಮ .ಆನೆ ಒಂದು […]

Back To Top