ಗಝಲ್

ಗಝಲ್

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಯಾವ ಮಾತಿನ ನೆನಪು ಮರೆತಿಲ್ಲ ಸಾಕಿಎದೆಯಲಿ ತುಂಬಿದ ನೋವು ಕಳೆದಿಲ್ಲ ಸಾಕಿ ಮೌನ ಅನುಭವಿಸಿದ ಯಾತನೆ ಸಾಕಾಗಿದೆಕಾಲನ ಲೀಲೆ ಹೇಳಲು ಏನು ಉಳಿದಿಲ್ಲ ಸಾಕಿ ಕೀವು ತುಂಬಿಕೊಂಡಿದೆ ಹೃದಯದೊಳುಅದನು ಅನುಭವಿಸಲು ಜೀವ ಬೇಕಲ್ಲ ಸಾಕಿ ಹೇಗಾದರೂ ಆಗಲಿ ಸೈರೈಸಿಕೊಂಡು ನಡೆವೆಕೊನೆಗಾಲದ ದಿನಗಳಿಗೆ ಕಾದಿರುವೆನಲ್ಲ ಸಾಕಿ ಚುಚ್ಚು ಮಾತಿಗೆ ಬೆಚ್ಚಿಬೀಳದೆ ಉಳಿದಿರುವೆಮರುಳ ಬದುಕಿರುವ ತನಕ ಮಿಡಿಯಬಲ್ಲ ಸಾಕಿ *********

ಗಝಲ್

ಗಝಲ್ ಡಾ.ಗೋವಿಂದ ಹೆಗಡೆ ಮಾಸಿಹೋದ ನಗುವಿಗೇಕೆ ಬಣ್ಣ ಮೆತ್ತುವೆಕರಗಿಹೋದ ನಲಿವಿಗೇಕೆ ಬಣ್ಣ ಮೆತ್ತುವೆ ದಾರಿ ನಡೆ ನಡೆಯುತ್ತ ಸರಿಯಿತು ಕಾಲಕಂದಿಹೋದ ಕೆನ್ನೆಗೇಕೆ ಬಣ್ಣ ಮೆತ್ತುವೆ ಏರುವ ಖುಷಿ ಮುಗಿದು ಇಳಿಜಾರು ಈಗಕಾಂತಿ ಕಳೆದ ಕಣ್ಣಿಗೇಕೆ ಬಣ್ಣ ಮೆತ್ತುವೆ ಯಾವಾಗ ಅದು ಎದೆಯಲ್ಲಿ ಬೆಳಕಾಡಿದ್ದುಅರ್ಥ ಕಳೆದ ಮಾತಿಗೇಕೆ ಬಣ್ಣ ಮೆತ್ತುವೆ ಮಾತು ಮನಸು ಕೃತಿಗಳಲ್ಲಿ ಮೇಳವೆಲ್ಲಿದೆಋಜುತೆ ಮರೆತ ನಡತೆಗೇಕೆ ಬಣ್ಣ ಮೆತ್ತುವೆ ಹೆಳವ ಹೆಜ್ಜೆಗಳಲಿ ಈಗ ಸಾಗಿದೆ ಪಯಣರೆಕ್ಕೆ ಸವೆದ ಹಕ್ಕಿಗೇಕೆ ಬಣ್ಣ ಮೆತ್ತುವೆ ಯಾವ ರಂಗು ಬಳಿದರೇನು […]

ಕಾವ್ಯಯಾನ

ಮಳೆ ಒಲವು ವಸುಂಧರಾ ಕದಲೂರು ಸಂಜೆ ಮಳೆ, ಹನಿಗಳ ಜೊತೆನೆನಪುಗಳನು ಇಳಿಸಿತುತೋಯ್ದ ಮನದಲಿ ಬಚ್ಚಿಟ್ಟನೆನಪುಗಳ ಮೊಗ್ಗು ಅಂತೆಮಣ್ಣ ಘಮಲಿನಂತೆ ಹರಡಿತು ಇರುಳ ರಾಗ ಕದಪ ಮೇಲೆನವ ಯೌವನದ ಅಲೆಗಳಲಿರಂಜಿಸಿತು ಮನವು ಮಧುರರಾಗ ಗುನುಗುವಂತೆ ಅಂತೆಹೊಸೆದು ಹೊಸತು ಹಾಡಿತು ಮನವು ತೋಯ್ದ ಪರಿಗೆತನುವು ತಾನು ನಡುಗಿತುಬಳ್ಳಿ ಚಿಗುರು ಮರವನಪ್ಪಿಬೆಚ್ಚಗಾಗುವಂತೆ ಅಂತೆನೆಚ್ಚು ಹೆಚ್ಚಿ ಬಲವಾಯಿತು ಅಧರ ಬಿರಿದು ಮಧುರನುಡಿದು ಪಿಸು ಮಾತಿನಬಿಸಿ ಎದೆಗೆ ಇಳಿದಂತೆಅಂತೆ ಒಲವು ಆವರಿಸಿತು ಮಳೆಯೆಂದರೆ ಒಲವುಒಲವೆಂದರೆ ನೆನೆದ ನೆಲದಒದ್ದೆಯಂತೆ ಅಂತೆ ಎಂದುಮತ್ತೆ ಸಾರಿತು ಮನವುಮಧುರವಾಗಿ ನಡುಗಿತು […]

ಕಾವ್ಯಯಾನ

ಗೋಡೆಯ ಮೇಲಾಡುವ ಚಿತ್ರ ಬಿದಲೋಟಿ ರಂಗನಾಥ್ ಒಳಬರಲಾದ ಬಾಗಿಲಲ್ಲಿಕಾದು ಕುಳಿತು ನಿನ್ನ ಪ್ರೀತಿಗೊಸ್ಕರ ಹಸಿದೆಚಂದಿರನ ಅಷ್ಟೂ ಬೆಳಕು ನಿನ್ನ ಕಣ್ಣಲ್ಲಿತ್ತುನೀನು ಪಾದಗಳು ನೆಲ ಸೋಕುವುದು ಬೇಡವೆಂದುರಂಗೋಲಿ ಬರೆದು ಕೂತೆ ಮುಗುಳು ನಗೆ ಮೆತ್ತಿರಂಗೋಲಿಗೂ ಕಣ್ಣು ಕಿವಿ ಎಲ್ಲಾ ಮೂಡಿದವು ನೀನು ಮಾತ್ರ ಬರಲಿಲ್ಲ ಗೋಡೆ ನೋಡುತ್ತಾ ಕೂತವನಿಗೆಅದರ ಮೇಲಾಡುವ ಚಿತ್ರ ಕರೆದಂತಾಯಿತುಅರೆ ! ಅವಳೇ ಅಲ್ಲವೆ ?ನನ್ನ ಚಿತ್ತಾರದ ಗೊಂಬೆಇಲ್ಲಿಗೂ ಬಂದಳೇ ?ಇಲ್ಲ ನಾನೇ ಅಲ್ಲಿಗೆ ಹೋದೆನೆ ?ಕಣ್ಣುಜ್ಜಿಕೊಂಡು ಮತ್ತೆ ಮತ್ತೆ ನೋಡಿದೆನವಿಲು ರೆಕ್ಕೆಬಿಚ್ಚಿ ನರ್ತಿಸುವಂತೆಗೋಡೆಯ ಮೇಲಿನ […]

ಪುಸ್ತಕ ಸಂಗಾತಿ

ವಿಮುಕ್ತೆ ಪುಸ್ತಕ: ವಿಮುಕ್ತೆ ಲೇಖಕರು: ಓಲ್ಗಾ ಅನುವಾದಕರು: ಅಜಯ್ ವರ್ಮ ಅಲ್ಲೂರಿ      ‘ವಿಮುಕ್ತ’ ತೆಲುಗಿನ ಖ್ಯಾತ ಸ್ತ್ರೀವಾದಿ ಲೇಖಕಿ ಓಲ್ಗಾ ಅವರ ಬಹುಚರ್ಚಿತ ಕೃತಿಗಳಲ್ಲಿ ಒಂದು. ಓಲ್ಗಾ ಎಂಬ ಹೆಸರಿನಿಂದಲೇ ದೇಶದಾದ್ಯಂತ ಗುರುತಿಸಿಕೊಂಡಿರುವ ಪೋಪೂರಿ ಲಲಿತ ಕುಮಾರಿಯವರು ಮೂಲತಃ ಆಂಧ್ರಪ್ರದೇಶದ ಗುಂಟೂರಿನವರು. ತೆಲುಗಿನ ಖ್ಯಾತ ಸ್ತ್ರೀವಾದಿ ಲೇಖಕಿ, ಚಿಂತಕಿ, ಅನುವಾದಕಿ, ಹಾಗೂ ಮಹಿಳಾ ಹಕ್ಕುಗಳ ಹೋರಾಟಗರ್ತಿಯಾಗಿರುವ ಇವರು ಪ್ರಸ್ತುತ ತೆಲುಂಗಾಣದ ಸಿಕಂದ್ರಾಬಾದಿನಲ್ಲಿ ನೆಲೆಸಿದ್ದಾರೆ. ಸ್ವೇಚ್ಛ, ನೀಲಿ ಮೇಘಾಲು, ರಾಜಕೀಯ ಕಥಲು, ಮಾಕು ಗೋಡಲು ಲೇವು, ಪ್ರಯೋಗಂ, […]

ಕಾವ್ಯಯಾನ

ಮಾತಿನಲಿ ಮೌನೋತ್ಸವ ಡಾ. ಅಜಿತ್ ಹರೀಶಿ ಮಾತುಗಳ ಸಮ್ಮಿಲನಜನ್ಮಾಂತರದ‌ ಗೆಳೆತನಸಮ್ಮತಿಸಿ ಧ್ಯಾನಿಸಿದ ಮೌನಸರಸದ ನಿನ್ನ ಮಾತಿನಲಿ ಜತನ ಮಾತಿನ ಮುಗ್ಧತೆ ನೀರಸಮನದ ಜ್ಞಾನ ಪಾದರಸನೀ ಮಾತೊಳು ತರುವಕಲೆಯ, ಮೌನದಿ ಪಡೆದವ ನಾ ಹತ್ತಿಕ್ಕಿ ಬಚ್ಚಿಟ್ಟ ಮಾತುಮೌನದ ಮಣಿ ಪೋಣಿಸದುಉಕ್ಕುಕ್ಕಿ ಹರಿವ ನನ್ನ ಮಾತುಚಂದದ‌ ಹಾರವಾಗಿಸದು ನನ್ನ ಗತ್ತಿನ ಭಾವ ತಂದಿತ್ತುನನಗೆ ಗೊತ್ತು ಎಂಬ ಗಮ್ಮತ್ತುತಿಳಿಯದೆ ನಾ ಆಡಿದರೂಮೌನದಲೇ ದಂಡಿಸದಿರು ಧರಿಸಿ ಧರಿತ್ರಿಯಾದೆ ನೀನುಪಾದಕ್ಕೆರಗಿ ಸೇವೆಗೈವೆ ನಾನುಕ್ಷಮಿಸು ಭರಿಸು ನನ್ನ ಮಾತನುಶೇಖರಿಸಿ ನಿನ್ನ ಮೌನವನು ***********

ಸ್ವಾತ್ಮಗತ

ದೇವನೂರು ಮಹಾದೇವರೂ..! ಮತ್ತವರು ಹುಡುಕಿದ ಹೊಸ ಅಭಿವ್ಯಕ್ತಿ ಕ್ರಮಗಳ ಪ್ರಸ್ತುತತೆಯೂ.!! ದೇವನೂರ ಮಹಾದೇವ ದೇವನೂರ ಮಹಾದೇವ ಅವರು ಹುಟ್ಟಿದ್ದು ಜೂನ್ 10, 1948ರಂದು. ಹಾಗೆಂದು ಅವರ ಬಳಿ ಹೋಗಿ ‘ಹ್ಯಾಪಿ ಬರ್ತ್ ಡೇ ಸಾರ್’ ಅಂತ ಹೇಳಿದರೆ, ‘ಇವನ್ಯಾವನಯ್ಯಾ ಮಿಕ’ ಎಂದು ಗಂಭೀರರಾಗಿಬಿಡುತ್ತಾರೇನೋ ಅನಿಸುತ್ತದೆ. ಅವರು ಮನುಷ್ಯನ ಮೂಲ ಆಳವನ್ನು ತಲುಪದ ಯಾವ ಆಚರಣೆಗಳನ್ನೂ ಒಪ್ಪುವವರಲ್ಲವೇನೋ ಎಂದೆನಿಸುತ್ತಿದೆ. ದೂರದರ್ಶನ ಬಂದ ಪ್ರಾರಂಭದ ದಿನಗಳಲ್ಲಿ ಇರಾನ್, ಇರಾಕ್ ದೇಶಗಳ ಯುದ್ಧಗಳು ಕ್ರಿಕೆಟ್ ಆಟ ನೇರ ಪ್ರಸಾರವಾಗುವಂತೆ ವಾರ್ತೆಗಳಲ್ಲಿ ಪ್ರಸಾರವಾಗುತ್ತಿದ್ದವು. […]

ದಿಕ್ಸೂಚಿ

ಆಲಸ್ಯತನ ಓಡಿಸಿ ಅಚ್ಚರಿಗಳ ಸಾಧಿಸಿ. ಜಯಶ್ರೀ ಜೆ.ಅಬ್ಬಿಗೇರಿ ಕಳ್ಳತನ ಮಾಡಿ ಸಿಕ್ಕಿ ಬಿದ್ದ ವ್ಯಕ್ತಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರು ‘ನಿನ್ನ ಪರವಾಗಿ ಹೇಳುವುದೇನಾದರೂ ಇದ್ದರೆ ಹೇಳಬಹುದು ಎಂದು ಹೇಳಿದಾಗ ಅದಕ್ಕೆ ಆತ “ನ್ಯಾಯಾಧೀಶರೇ, ನನ್ನ ಜೊತೆಗೆ ನನ್ನ ತಂದೆ ತಾಯಿಗೂ ಶಿಕ್ಷೆ ವಿಧಿಸಿ. ಅವರನ್ನೂ ಜೈಲಿಗೆ ಕಳಿಸಿ” ಎಂದ. ನ್ಯಾಯಾಧೀಶರು ಕಾರಣ ಕೇಳಿದಾಗ ಕಳ್ಳ ಹೇಳಿದ “ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಒಂದು ಪೆನ್ಸಿಲ್ ಕದ್ದೆ. ನಮ್ಮ ತಂದೆ ತಾಯಿಗೆ ಗೊತ್ತಾದರೂ ಅವರು ಏನನ್ನೂ ಹೇಳಲಿಲ್ಲ. ನಂತರ ಬೇರೆ […]

ಜೀವನ

ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “ ಪ್ರೊ ಸುಧಾ ಹುಚ್ಚಣ್ಣವರ “ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “             “ದೃಷ್ಟಿಯಂತೆ ಸೃಷ್ಟಿ “ಎನ್ನುವ ಹಾಗೆ ನಮ್ಮಲ್ಲಿರುವ ವಿಶಾಲ ದೃಷ್ಟಿಕೋನಗಳೇ ನಮ್ಮ ಸುಂದರ ಬದುಕಿಗೆ ಆಧಾರವಾಗುತ್ತದೆ.ಸೃಷ್ಟಿಯಲ್ಲಿ ಇತರ ಜೀವಿಗಳಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತೀರ್ಮಾನ ಮಾಡುವ ವಿವೇಕ ಇರುವುದಿಲ್ಲ ಆದರೆ ಮನುಷ್ಯನಲ್ಲಿ ಈ ವಿವೇಕವೂ ಪೂರ್ಣ ಪ್ರಮಾಣದಲ್ಲಿ ವಿಕಾಸವಾಗಿದೆ.ಸೃಷ್ಟಿಯ ಆದಿಯಿಂದಲೂ ಮನುಷ್ಯ ತನ್ನ ವಿವೇಕವನ್ನು ಹಲವಾರು ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತ ಬಂದಿದ್ದಾನೆ.ನಮ್ಮ ಸುತ್ತಲಿರುವ […]

ಕಾವ್ಯಯಾನ

ಸ೦ಜೆ ಇಳಿಬಿಸಿಲು ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಎಷ್ಟು ಚೆ೦ದ ವಿದ್ದೆಯೇ ನೀನು,ಓರೆ ಬೈತಲೆಯವಳೆ, ಮಲ್ಲಿಗೆಯ ಮುಡಿದವಳೆಲ೦ಗ ದಾವಣಿಯಲ್ಲಿ ನಲಿದಾಡಿದವಳೆ,ಪಡಸಾಲೆಯಲಿ ಓಡಿ ಬ೦ದುಧಿಕ್ಕಿಯ ಹೊಡೆದು ಗಾಭರಿಯ ನೋಟದಲಿಪ್ರೇಮದೆಸಳುಗಳನೆಸೆದು ಓಡಿ ಹೋದವಳೆ! ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಕೆರೆಯ ಏರಿಯ ಮೇಲೆ ಕುಳಿತಿದ್ದ ಆ ಸ೦ಜೆತಾವರೆಯ ಮೊಗ್ಗುಗಳ ತೋರಿಸುತನಿನ್ನ ಮೊಲೆಗಳ ಹಾಗೆ ಎ೦ದು ನಾನ೦ದಾಗಹುಸಿ ಕೋಪದಲಿ ನನ್ನ ನೂಕಿದವಳೆಕೆರೆಯ ನೀರಲಿ ಕೆಡವಿನನ್ನ ಬಟ್ಟೆಯ ಜತೆಗೇ ನನ್ನ ಮನಸನ್ನೂಒದ್ದೆ […]

Back To Top