ಜೀವನ

ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “

Newly Graduated People Wearing Black Academy Gowns Throwing Hats Up in the Air

ಪ್ರೊ ಸುಧಾ ಹುಚ್ಚಣ್ಣವರ

“ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “

            “ದೃಷ್ಟಿಯಂತೆ ಸೃಷ್ಟಿ “ಎನ್ನುವ ಹಾಗೆ ನಮ್ಮಲ್ಲಿರುವ ವಿಶಾಲ ದೃಷ್ಟಿಕೋನಗಳೇ ನಮ್ಮ ಸುಂದರ ಬದುಕಿಗೆ ಆಧಾರವಾಗುತ್ತದೆ.ಸೃಷ್ಟಿಯಲ್ಲಿ ಇತರ ಜೀವಿಗಳಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತೀರ್ಮಾನ ಮಾಡುವ ವಿವೇಕ ಇರುವುದಿಲ್ಲ ಆದರೆ ಮನುಷ್ಯನಲ್ಲಿ ಈ ವಿವೇಕವೂ ಪೂರ್ಣ ಪ್ರಮಾಣದಲ್ಲಿ ವಿಕಾಸವಾಗಿದೆ.ಸೃಷ್ಟಿಯ ಆದಿಯಿಂದಲೂ ಮನುಷ್ಯ ತನ್ನ ವಿವೇಕವನ್ನು ಹಲವಾರು ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತ ಬಂದಿದ್ದಾನೆ.ನಮ್ಮ ಸುತ್ತಲಿರುವ ಒಳಿತು ಕೆಡಕುಗಳ ಮಧ್ಯದಲ್ಲಿಯೇ ವಿಭಿನ್ನವಾದ ದೃಷ್ಟಿಕೋನಗಳು ವಿಭಿನ್ನ ರೀತಿಯಲ್ಲಿ ನಮ್ಮನ್ನು ವಿಚಲಿತಗೊಳಿಸುತ್ತವೆ.ಆದರೆ ಮನುಷ್ಯ ಜನ್ಮದ ಶ್ರೇಷ್ಠತೆಯನ್ನು ಅರಿತುಕೊಂಡು ಸಾಗಿದಾಗ ನಮ್ಮ ಮನೋಭಾವನೆಗಳು ವಿಶಾಲ ಗೊಳ್ಳುತ್ತಾ ಹೋಗುತ್ತವೆ.ನಮ್ಮಲ್ಲಿ ಕೆಲವೊಮ್ಮೆ ಸಂಕುಚಿತ ಮನೋಭಾವನೆಗಳು ಒಡಮೂಡಿದಾಗ ನಾನೇ ಶ್ರೇಷ್ಠ ಎನ್ನುವ ಅಹಂಭಾವ ನಮ್ಮ ಅವನತಿಗೆ ಕಾರಣವಾಗುತ್ತದೆ.ಎಲ್ಲರಿಗಿಂತ ನಾನೊಬ್ಬನೇ ಶ್ರೇಷ್ಠ ನಾನೇ ವೀರ ಶೂರ ಧೀರ ಸುಂದರ ಸಶಕ್ತ ಸುಶಿಕ್ಷಿತ ಎಂಬ ಸಂಕುಚಿತ ಮನೋಭಾವನೆಗಳೆ ಮೂಡಿದಾಗ ಮನುಷ್ಯ ಜನ್ಮದ ನೈಜ ಬೆಳವಣಿಗೆ ಕುಂಠಿತವಾಗುತ್ತ ಹೋಗುತ್ತದೆ.ಬದಲಾಗಿ “ತನ್ನಂತೆ ಪರರು ನಾನು ಪರರಂತೆ ಸಹಜೀವಿ “ಎಂಬ ವಿಶಾಲ ಮನೋಭಾವನೆ ನಮ್ಮಲ್ಲಿದ್ದಾಗ ಯಾವುದೇ ವ್ಯತ್ಯಾಸಗಳು ನಮ್ಮಲ್ಲಿ ದುಃಖವನ್ನುಂಟು ಮಾಡಲಾರವು.

          ನಮ್ಮ ಸುತ್ತಮುತ್ತಲೂ ಸಣ್ಣವರು ದೊಡ್ಡವರು ಬಡವ ಶ್ರೀಮಂತ ಎಂದು ಹೇಳುತ್ತೇವೆ ಆದರೆ ಪರಸ್ಪರ ಹೋಲಿಸಿದಾಗ ಯಾರೂ ಸಣ್ಣವರಲ್ಲ ಯಾರೂ ದೊಡ್ಡವರಲ್ಲ ಈ ಸತ್ಯವನ್ನು ತಿಳಿದಾಗ ಮಾತ್ರ ನಮ್ಮಲ್ಲಿ ವಿಶಾಲ ದೃಷ್ಟಿಕೋನಗಳು ಸುಂದರ ಬದುಕಿಗೆ ಸೋಪಾನವಾಗುತ್ತದೆ.ಒಂದು ಕುಟುಂಬದ ವಾತಾವರಣದಿಂದ ಇಡೀ ವಿಶ್ವದ ವರೆಗೂ ನಾವು ಅವಲೋಕಿಸುತ್ತಾ ಸಾಗಿದಾಗ ಈ ದೊಡ್ಡಸ್ತಿಕೆಯ ಹೋರಾಟ ಸಮಾಜದ ಎಲ್ಲ ರಂಗಗಳಲ್ಲಿ ಇದ್ದೇ ಇದೆ, ಪ್ರತಿಯೊಬ್ಬನೂ ತಾನು ಎಲ್ಲರಿಗಿಂತ ದೊಡ್ಡವನಾಗಬೇಕು ಎಂದು ಭಾವಿಸುತ್ತಾನೆ. ಆದರೆ ಅದು ಹೋರಾಟದ ಸ್ವರೂಪ ಪಡೆದಾಗ ಮಾತ್ರ ಪರಸ್ಪರರಲ್ಲಿ ದ್ವೇಷ ಅಸೂಯೆಗೆ ಕಾರಣವಾಗುತ್ತದೆ. “ಅರಿತು ಸಾಗಿದಾಗ ಬದುಕೇ ಸುಂದರ” ಎನ್ನುವಂತೆ ಇಲ್ಲಿ ಯಾರೂ ಹೆಚ್ಚು ಅಲ್ಲ ಕಡಿಮೆಯೂ ಅಲ್ಲ ಒಬ್ಬರಿಗೊಬ್ಬರು ಸಹಕಾರ ಸಹಬಾಳ್ವೆಯೊಂದಿಗೆ ಸಾಗಿದಾಗ ಮಾತ್ರ ಜೀವನದ ಪಯಣ ಸುಲಭವಾಗುತ್ತದೆ.ಇಲ್ಲವಾದರೆ ಬರೀ ಸಂಕುಚಿತ ಮನೋಭಾವನೆಗಳೆ ನಮ್ಮನ್ನು ಆವರಿಸಿದರೆ ಜೀವನದ ಸಣ್ಣ ಪುಟ್ಟ ವಿಚಾರಗಳೂ ಸಹ ನಮಗೆ ಸಂಕೀರ್ಣವೆನಿಸುತವೆ. ನಮ್ಮ ದೃಷ್ಟಿಕೋನಗಳು ಎಂದಾಗ ಒಂದು ದೃಷ್ಟಾಂತ ನೆನಪಾಗುತ್ತದೆ ಅದೆಂದರೆ ,ದೊಡ್ಡದಾದ ಗುಡ್ಡದ ಕೆಳಗಡೆ ಒಂದು ಕುಟೀರ, ಆ ಕುಟೀರದ ಎದುರುಗಡೆ ಒಂದು ದಷ್ಟಪುಷ್ಟವಾಗಿ ಬೆಳೆದ ಹೆಮ್ಮೆಯನ್ನು ಕಟ್ಟಿರುತ್ತಾರೆ, ಒಂದು ದಿನ ಆ ಹೆಮ್ಮೆಯ ಮಾಲೀಕ ಗುಡ್ಡವನ್ನೇರಿ ವಿಶಾಲ ಆಗಸ ಹಸಿರು ಸೃಷ್ಟಿಯನ್ನು ನೋಡುವುದರಲ್ಲಿ ತನ್ಮಯನಾಗಿದ್ದ, ಹಾಗೆಯೇ ನೋಡುತ್ತಾ ಅಕಸ್ಮಾತಾಗಿ ಅವನ ದೃಷ್ಟಿಕೋನ ಗುಡ್ಡದ ಕೆಳಗಿರುವ ಕುಟೀರದ ಎದುರುಗಡೆ ಕಟ್ಟಿದ ಎಮ್ಮೆ ಅತ್ತ ಹರಿಯಿತು ಆಗ ಎತ್ತರದ ಗುಡ್ಡದ ಮೇಲಿಂದ ತನ್ನ ಎಮ್ಮೆಯನ್ನು ನೋಡಿದ ಮಾಲೀಕ ಅಂದುಕೊಳ್ಳುತ್ತಾನೆ “ಈ ಎಮ್ಮೆ ಎಷ್ಟು ಚಿಕ್ಕದಾಗಿ ಕಾಣುತ್ತಿದೆಎಲ್ಲಾ ” ಎಂದು ಅಂದುಕೊಂಡ.ಹಾಗೆಯೇ ಗುಡ್ಡದ ಕೆಳಗಡೆ ನಿಂತಿರುವಂತಹ ಎಮ್ಮೆ ಅದೇ ಸಮಯಕ್ಕೆ ಸರಿಯಾಗಿ ಗುಡ್ಡದ ಮೇಲೆ ನಿಂತಿದ್ದ ತನ್ನ ಮಾಲೀಕನನ್ನು ನೋಡಿ” ನಮ್ಮ ಮಾಲಿಕ ಎಷ್ಟು ಕುಳ್ಳನಾಗಿ ಕಾಣುತ್ತಾ ನಲ್ಲ” ಎಂದುಕೊಂಡಿತು ಇಲ್ಲಿ ಮಾಲೀಕನ ದೃಷ್ಟಿಯಲ್ಲಿ ಎಮ್ಮೆ ಚಿಕ್ಕದು, ಎಮ್ಮೆಯ ದೃಷ್ಟಿಕೋನದಲ್ಲಿ ಮಾಲೀಕ ಚಿಕ್ಕವನಾಗಿ ಕಂಡ ,ವಾಸ್ತವದಲ್ಲಿ ನಿಜವಾಗಿ ನೋಡಿದರೆ ಯಾರೂ ಚಿಕ್ಕವರು ಅಲ್ಲ ದೊಡ್ಡವರೂ ಅಲ್ಲ ಕೇವಲ ನಮ್ಮ ನಮ್ಮ ದೃಷ್ಟಿಕೋನ ವಷ್ಟೇ.ಇಂತಹದ್ದೇ ಎಷ್ಟೋ ಸಂಗತಿಗಳು ನಮ್ಮ ಸುತ್ತಮುತ್ತಲೂ ನಾವು ಗಮನಿಸುತ್ತಾ ಸಾಗುತ್ತೇವೆ, ದೃಷ್ಟಿಕೋನಕ್ಕೆ ಅನುಸಾರವಾಗಿ ನಮಗಾಗುವ ಅನುಭವಗಳು ವಿಭಿನ್ನ ಹಾಗೂ ಕೆಲವೊಮ್ಮೆ ವಿಚಿತ್ರವೂ ಸಹ ಆಗಿರುತ್ತವೆ.ಒಂದು ಕುಟುಂಬದಲ್ಲಿ ಎಲ್ಲರ ಆಗುಹೋಗುಗಳನ್ನು ನೋಡಿಕೊಳ್ಳುವ ಮನೆಯ ಯಜಮಾನ ನಾನೊಬ್ಬನೇ ಶ್ರೇಷ್ಠ ಎಂದುಕೊಂಡರೆ ಅದು ಅವನ ಸಂಕುಚಿತ ದೃಷ್ಟಿಕೋನ ಹಾಗೆಯೇ ಕುಟುಂಬದಲಿ  ಎಲ್ಲರ ಬೇಕು ಬೇಡಿಕೆಗಳಿಗೆ ಸ್ಪಂದಿಸುವ ಎಲ್ಲರ ಆರೈಕೆ ಮಾಡುವ ಕುಟುಂಬದ ಒಡತಿ ನಾನೇ ಹೆಚ್ಚು ಎಂದುಕೊಂಡರೆ ಅದು ಅವರ ದೃಷ್ಟಿಕೋನ ಹೀಗೆ ಪ್ರತಿಯೊಬ್ಬರಲ್ಲೂ ಕೇವಲ ನಾನು ಹೆಚ್ಚು ಎನ್ನುವ ದೃಷ್ಟಿಕೋನ ವಿದ್ದರೆ ಪರಸ್ಪರ ಪ್ರೀತಿ ವಿಶ್ವಾಸ ಸಹಕಾರ ನಂಬಿಕೆ ಹೊಂದಾಣಿಕೆ ಇರಲಾರದು. ಈ ಸೃಷ್ಟಿಯಲ್ಲಿ ಒಂದು ತನ್ನ ಉಳಿವಿಗಾಗಿ ಇನ್ನೊಂದು ಜೀವಿಯ ಮೇಲೆ ಅವಲಂಬಿಸಿದೆ ,ಪರಸ್ಪರ ಅವಲಂಬನೆಯ ಸ್ವರೂಪವಾಗಿ ಇಡೀ ಸೃಷ್ಟಿ ಸಾಗುತ್ತಿದೆ ಇಲ್ಲಿ ನಾನು ಹೆಚ್ಚು ನೀನು ಕಡಿಮೆ ಎಂಬ ಭಾವವೇ ಬರಲಾರದು ಹಾಗೆಯೇ ಪ್ರತಿಯೊಬ್ಬ ಮನುಷ್ಯ ತನ್ನ ಇತಿಮಿತಿಯೊಳಗೆ ವಿಶಾಲ ದೃಷ್ಟಿಕೋನದಿಂದ ಜೀವನ  ಸಾಗಿದರೆ ಬದುಕು ಕಷ್ಟವೆನಿಸದು ಎಲ್ಲವೂ ಸರಳವಾಗಿ ಸುಲಲಿತವಾಗಿ ಇರುತ್ತದೆ.

      “ಬದುಕು ಜಟಕಾ ಬಂಡಿ

ವಿಧಿ ಅದರ ಸಾಹೇಬ

 ಕುದುರೆ ನೀನ್ ಅವನು  ಪೆಳದಂತೆ ಪಯಣಿಗರು ಮದುವೆಗೂ ಮಸಣಕೊ ಹೋಗೆಂದ ಕಡೆ ಹೋಗು ಪದ ಕುಸಿಯೆ ನೆಲವಿಹುದು” ಮಂಕುತಿಮ್ಮ॥

ಎನ್ನುವ ಹಾಗೆ ಈ ಬದುಕಿನ ಪಯಣದಲ್ಲಿ ಎಲ್ಲವೂ ನಾವಂದುಕೊಂಡಂತೆ ಇರಲಾರದು ಕೆಲವೊಮ್ಮೆ ಸನ್ನಿವೇಶಗಳಿಗೆ ನಾವೇ ಹೊಂದಿಕೊಳ್ಳಬೇಕಾಗುತ್ತದೆ ಇದು ಅವಶ್ಯ ಹಾಗೂ ಅನಿವಾರ್ಯವೂ ಕೂಡಾ,ಬರೀ ಮುಂದೇನಾಗುವುದೋ ಎಂಬ ಆತಂಕ ಭಯದಲ್ಲಿ ಜೀವನ ಸಾಗಿಸು ವುದಲ್ಲ ,ಒಳ್ಳೆಯದೇ ಆಗುತ್ತದೆ ಎನ್ನುವ ಸಕಾರಾತ್ಮಕ ಮನೋಭಾವನೆಯಿಂದ ನಮ್ಮ ಕಾರ್ಯದಲ್ಲಿ ವೈಶಿಷ್ಟ್ಯಪೂರ್ಣವಾಗಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಎಲ್ಲವೂ ಒಳ್ಳೆಯದೇ ಆಗುತ್ತದೆ. “ಭಾವನೆ ಒಳ್ಳೆಯದಾದರೆ ಭಾಗ್ಯಕ್ಕೆನು ಕಡಿಮೆ” ಎನ್ನುವಂತೆ ನಮ್ಮ ಭಾವನೆಗಳು ಉತ್ತಮವಾಗಿದ್ದಾಗ ಒಳ್ಳೆಯ ದೃಷ್ಟಿಕೋನದಿಂದ ಕೂಡಿದ್ದಾಗ ನಮಗೆ ಸಿಗುವ ಪ್ರತಿಫಲವೂ ಸಹ ಉತ್ತಮವಾಗಿಯೇ ಇರುತ್ತದೆ.ಅನವಶ್ಯಕವಾಗಿ ಇಲ್ಲಸಲ್ಲದ ವಿಚಾರದಲ್ಲಿ ತೊಡಗದೆ ಆದಷ್ಟು ಸಕಾರಾತ್ಮಕವಾಗಿ ವಿಶಾಲ ಮನೋಭಾವನೆಯನ್ನು ಹೊಂದುತ್ತಾ ಪ್ರತಿಯೊಂದು ಸನ್ನಿವೇಶ ವಸ್ತು ವಿಷಯ ವ್ಯಕ್ತಿ ಎಲ್ಲದರಲ್ಲೂ ಒಳ್ಳೆಯದನ್ನು ಮಾತ್ರ ನಾವು ಕಾಣುತ್ತಾ ಸಾಗಿದರೆ ಬಹುಶಃ ನಮ್ಮ ಬದುಕೇ ಒಂದು ಸುಂದರವಾದ ತಾಣವಾಗುತ್ತದೆ.

            ಒಂದು ಗುಲಾಬಿ ಹೂವನ್ನು ನೋಡಿದಾಗ ಒಬ್ಬ ವ್ಯಕ್ತಿ ಅದರ ಸೌಂದರ್ಯವನ್ನು ಆಸ್ವಾದಿಸುತ್ತಾನೆ ಇದು ವಿಶಾಲ ದೃಷ್ಟಿಕೋನ, ಬದಲಾಗಿ ಅದೇ ಹೂವನ್ನು ನೋಡಿದ ಮತ್ತೊಬ್ಬ ವ್ಯಕ್ತಿ ಆ ಗುಲಾಬಿ ಹೂವಿನ ಕೆಳಗಿರುವ ಮುಳ್ಳುಗಳನ್ನು ಮಾತ್ರ ಗಮನಿಸುತ್ತಾನೆ ಇದು ಸಂಕುಚಿತ ದೃಷ್ಟಿಕೋನ, ಬರೀ ಮುಳ್ಳಿನ ತಕರಾರುಗಳನ್ನು ಹೇಳುವ ವ್ಯಕ್ತಿಗೆ ಗುಲಾಬಿ ಹೂವಿನ ಸೌಂದರ್ಯದ ಅರಿವಾಗದು ಇಂತಹ ವ್ಯಕ್ತಿ ಗುಲಾಬಿ ಹೂವೇ ಮುಳ್ಳಿನಿಂದ ಕೂಡಿದೆ ಎನ್ನುತ್ತಾನೆ ಆದರೆ ಹೂವಿನ ಸೌಂದರ್ಯವನ್ನು ಮಾತ್ರ ಗಮನಿಸಿದ ವ್ಯಕ್ತಿ ಅದರ ಸುಂದರತೆಯನ್ನು ಸವಿಯುತ್ತಾನೆ.ಹೀಗೆಯೇ ನಮ್ಮ ಬದುಕು ಎಷ್ಟೋ ಸಾರಿ ಒಳ್ಳೆಯದನ್ನು ಬಿಟ್ಟು ಬರೀ ಕೆಟ್ಟದ್ದರ ಕಡೆಗೆ ಮಾತ್ರ ದೃಷ್ಟಿಕೋನ ವಾಲುತ್ತದೆ ಆಗ ಪ್ರಪಂಚದಲ್ಲಿ ಯಾವುದೂ ನಮಗೆ ಸರಿಯಾಗಿ ಕಾಣುವುದಿಲ್ಲ ಬದಲಾಗಿ ಎಷ್ಟೋ ನಕಾರಾತ್ಮಕ ಅಂಶಗಳಿದ್ದರೂ ಕೂಡ ಸಕಾರಾತ್ಮಕವಾಗಿ ರುವುದನ್ನು ಮಾತ್ರ ನಾವು ಗಮನಿಸುತ್ತಾ ಸಾಗಿದರೆ ನಮ್ಮಲ್ಲಿರುವ ದೃಷ್ಟಿಕೋನಗಳು ವಿಶಾಲಗೊಳುತಾ ಸಾಗುತ್ತವೆ ಆಗ ಈ ಬದುಕೇ ಒಂದು ಅದ್ಭುತ ಹಾಗೂ ವಿಶಿಷ್ಟ ಎನಿಸುತ್ತದೆ. ನಮ್ಮ ವಿಶಾಲ ದೃಷ್ಟಿಕೋನಗಳು  ಮಾತ್ರ ನಮ್ಮ ಮನೋಭಾವನೆಗಳನ್ನು ಬಲಗೊಳಿಸ ಬಲ್ಲವು.

      “ಬದುಕು ಜಟಕಾ ಬಂಡಿ-ವಿಧಿ ಅದರ ಸಾಹೇಬ

      ***********

2 thoughts on “ಜೀವನ

Leave a Reply

Back To Top