ಕಾವ್ಯಯಾನ

ಮಾತಿನಲಿ ಮೌನೋತ್ಸವ

Italian Culture, Window, Medieval, Brick, Geometric Shape, Stone ...

ಡಾ. ಅಜಿತ್ ಹರೀಶಿ

ಮಾತುಗಳ ಸಮ್ಮಿಲನ
ಜನ್ಮಾಂತರದ‌ ಗೆಳೆತನ
ಸಮ್ಮತಿಸಿ ಧ್ಯಾನಿಸಿದ ಮೌನ
ಸರಸದ ನಿನ್ನ ಮಾತಿನಲಿ ಜತನ

ಮಾತಿನ ಮುಗ್ಧತೆ ನೀರಸ
ಮನದ ಜ್ಞಾನ ಪಾದರಸ
ನೀ ಮಾತೊಳು ತರುವ
ಕಲೆಯ, ಮೌನದಿ ಪಡೆದವ

ನಾ ಹತ್ತಿಕ್ಕಿ ಬಚ್ಚಿಟ್ಟ ಮಾತು
ಮೌನದ ಮಣಿ ಪೋಣಿಸದು
ಉಕ್ಕುಕ್ಕಿ ಹರಿವ ನನ್ನ ಮಾತು
ಚಂದದ‌ ಹಾರವಾಗಿಸದು

ನನ್ನ ಗತ್ತಿನ ಭಾವ ತಂದಿತ್ತು
ನನಗೆ ಗೊತ್ತು ಎಂಬ ಗಮ್ಮತ್ತು
ತಿಳಿಯದೆ ನಾ ಆಡಿದರೂ
ಮೌನದಲೇ ದಂಡಿಸದಿರು

ಧರಿಸಿ ಧರಿತ್ರಿಯಾದೆ ನೀನು
ಪಾದಕ್ಕೆರಗಿ ಸೇವೆಗೈವೆ ನಾನು
ಕ್ಷಮಿಸು ಭರಿಸು ನನ್ನ ಮಾತನು
ಶೇಖರಿಸಿ ನಿನ್ನ ಮೌನವನು

***********

Leave a Reply

Back To Top