ಗಝಲ್

ಗಝಲ್

Purple Flower

ಮರುಳಸಿದ್ದಪ್ಪ ದೊಡ್ಡಮನಿ

ಯಾವ ಮಾತಿನ ನೆನಪು ಮರೆತಿಲ್ಲ ಸಾಕಿ
ಎದೆಯಲಿ ತುಂಬಿದ ನೋವು ಕಳೆದಿಲ್ಲ ಸಾಕಿ

ಮೌನ ಅನುಭವಿಸಿದ ಯಾತನೆ ಸಾಕಾಗಿದೆ
ಕಾಲನ ಲೀಲೆ ಹೇಳಲು ಏನು ಉಳಿದಿಲ್ಲ ಸಾಕಿ

ಕೀವು ತುಂಬಿಕೊಂಡಿದೆ ಹೃದಯದೊಳು
ಅದನು ಅನುಭವಿಸಲು ಜೀವ ಬೇಕಲ್ಲ ಸಾಕಿ

ಹೇಗಾದರೂ ಆಗಲಿ ಸೈರೈಸಿಕೊಂಡು ನಡೆವೆ
ಕೊನೆಗಾಲದ ದಿನಗಳಿಗೆ ಕಾದಿರುವೆನಲ್ಲ ಸಾಕಿ

ಚುಚ್ಚು ಮಾತಿಗೆ ಬೆಚ್ಚಿಬೀಳದೆ ಉಳಿದಿರುವೆ
ಮರುಳ ಬದುಕಿರುವ ತನಕ ಮಿಡಿಯಬಲ್ಲ ಸಾಕಿ

*********

Leave a Reply

Back To Top