ಶಿಕ್ಷಣ ಆನ್ ಲೈನ್!

ಶಿಕ್ಷಣ ಆನ್ ಲೈನ್!

ವಿನುತಾ ಹಂಚಿನಮನಿ ವಿಕಾಸ ವಾದ (Evolution theory) ದ ಪ್ರಕಾರ ಜೀವಿಗಳ ಅಳಿವು ಉಳಿವು ಯಾವುದರ ಮೇಲೆ ಅವಲಂಬಿಸಿದೆ? ಯಾರು ಬದಲಾಗುತ್ತಿರುವ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಂಡರೋ ಅವರು ಗೆದ್ದವರು. ಬಲವಾನರು, ಬುದ್ಧಿವಂತರು ಇದರಲ್ಲಿ ಸೋತರು. ಪ್ರಾಣಿ ಇರಲಿ ಮನುಷ್ಯನಿರಲಿ ಪರಿಸರಕ್ಕೆ, ಪರಿಸ್ಥಿತಿಗೆ ಹೊಂದಿಕೊಂಡು ಜೀವಿಸುವದನ್ನು ಕಲಿತರಷ್ಟೇ ಬದುಕಬಹುದು. ಅದೇ ಸೂಕ್ತರು ಬದುಕುವರು ಸಶಕ್ತರಲ್ಲ ಅನ್ನುವುದು (survival of the fittest). ಈ ಬದಲಾಗುವ ಕ್ರಮ ಪ್ರಕೃತಿಯಲ್ಲಿ ಅನಿವಾರ್ಯ. ಪರಿವರ್ತನೆ ಜಗದ ನಿಯಮ. ಇದು ಎಲ್ಲ ಕ್ರಾಂತಿಗಳಿಗೂ ಅನ್ವಯಿಸುವುದು. […]

ಆನ್ಲೈನ್ ಶಿಕ್ಷಣ – ಪ್ರಯೋಗ?

ಅರ್ಪಣಾ ಮೂರ್ತಿ ಪ್ರಸ್ತುತ ಪರಿಸ್ಥಿತಿಯಲ್ಲಿ ಶೈಕ್ಷಣಿಕ ವರ್ಷದ ಆರಂಭವೇ ಗೊಂದಲಗಳಿಂದ ಕೂಡಿರುವ ಈ ಸಂದರ್ಭದಲ್ಲಿ, ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಇದಾಗಲೇ ಕಂಡುಕೊಂಡಿರುವ ಶಿಕ್ಷಣದ ಪರ್ಯಾಯ ಮಾರ್ಗದ ಹೆಸರೇ ಈ ಆನ್ಲೈನ್ ಶಿಕ್ಷಣ, ಈ ಪರ್ಯಾಯ ಮಾರ್ಗದ ಶಿಕ್ಷಣಕ್ಕೆ ಸರ್ಕಾರವು ಸಹ ಸಮ್ಮತಿಯ ಮುದ್ರೆ ಒತ್ತಿದೆ. ಈಗಿರುವ ಪ್ರಶ್ನೆಯೆಂದರೆ ಈ ಆನ್ಲೈನ್ ಶಿಕ್ಷಣ ಎಷ್ಟು ಪರಿಣಾಮಾತ್ಮಕವಾಗಿದೆ, ಮಕ್ಕಳ ಕಲಿಕೆಯ ಮಟ್ಟಕ್ಕೆ ಅದೆಷ್ಟು ಪೂರಕವಾಗಿದೆ ಅನ್ನುವುದು. ಮೊದಲಿಗೆ ಪ್ರಾಥಮಿಕ ಶಾಲಾ ಹಂತದ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನೀಡುವುದರ ಕುರಿತು […]

ಮನಸು ಅರಳುವ ಕನಸು

ಕವಿತಾ ಜಿ.ಸಾರಂಗಮಠ ನಗುವ ಮನ ಹೊಂದಿದ ನೋವಿನ ಕತೆಜೀವನದ ದುಗುಡಗಳ ನೂರೆಂಟು ವ್ಯಥೆನಗು ಮೊಗದಿ ನೋವನೇ ಸೋಲಿಸುವ ನೀರೆಕರುಳ ಕುಡಿಗೂ ಅದನ್ನೇ ಬೋಧಿಸಿದ ತಾಯೆ! ಆಶಾ ಭಾವನೆಗಳ ಹೊತ್ತ ನಗುನೂರು ಕನಸಿನ ಭಾವಗಳ ಹೊತ್ತುಅದೆಷ್ಟೋ ಆಸೆಗಳ ಹತ್ತಿಕ್ಕಿನಾಳೆಗಳ ಸ್ವಾಗತಕೆ ನಗು ಬೀರುವಳು! ಹಗಲಿರುಳು ದುಡಿದು ಬಡತನ ಸೋಲಿಸುವ ಆಸೆ ಧೀರೆಗೆಛಲಬಿಡದ ದೋಣಿಯ ನಾವಿಕಳುಇಂದಲ್ಲ ನಾಳೆ ಗೆಲುವ ಹಠ ಅವಳಿಗೆ! ಅಂದಂದೇ ದುಡಿದು ಅಂದೇ ತಿಂದರೂಸ್ವಾಭಿಮಾನದ ನೆಲೆಗಟ್ಟು ಬಿಡದಾಕೆನಗುನಗುತ ಜೀವನ ಸವೆಸಿನಗುವ ಹೂ ಮಳೆ ಸುತ್ತ ಹರಡುವಾಕೆ! ಅವಳ ತೆರೆದ […]

ನಿತ್ಯ ಮುನ್ನುಡಿ ಕವಿತೆ

ಸ್ಮಿತಾ ಭಟ್ ಈ ದಿನ ಹೊಸದೊಂದು ಕವಿತೆಗೆ ಮುನ್ನುಡಿಯಾದರೂ ಬರೆಯಲೇ ಬೇಕುಮುನ್ನೆಡೆಗೆ ಬರುವ ಹಲವು ವಿಚಾರಗಳ ನಡುವೆಯೂ . ಅರೇ,!ಎಷ್ಟು ಚಂದದ ಸಾಲೊಂದು ಹುಟ್ಟಿದೆಈ ಕೊಗಿಲೆಯ ಉಯಿಲಿಗೆಇಂದು ಹುರುಪಿದೆ ನೊಡು. ಸುತ್ತುವ ಸಾಲುಗಳಿಗೀಗಹೊಸ ಭಾವಗಳ ಅಲಂಕಾರಉಪಹಾರದ ಗಡಿಬಿಡಿಯಲ್ಲಿಉಪಯೋಗಿಸಲಾಗದೇ ಉಳಿದೇ ಬಿಡುತ್ತದೆ. ಮೈಮುರಿದು ಏಳುವಾಗಿನ ತೀವ್ರತೆಗೆತಿಂಡಿ ಪಾತ್ರೆಗಳ ಗಲಬರಿಸುವಾಗ ಸ್ವಲ್ಪ ಕುಂದಾಗಿದೆ. ಸ್ನಾನದ ಮನೆಯಲ್ಲಿ ಮತ್ತೆ ನೆನಪಾಗುವಅದೇ ಸಾಲುಗಳ ಮುಂದುವರಿದ ಭಾಗಕನ್ನಡಿಯ ಮುಂದೆ ಕರಗಿ,ಅಡುಗೆ ಮನೆಯಿಂದಸೀದಿದ ವಾಸನೆಯೊಂದುಮೂಗಿಗೆ ರಾಚಿ,ಮುದ್ದಾದ ಸಾಲುಗಳೆಲ್ಲ ಈಗ ಕಮಟು. ಸಿಡಿಮಿಡಿಯ ಮನಸುಇಳಿವ ಕಣ್ಣಾಲಿಗಳನೂ ತಡೆದು […]

ಕಬ್ಬಿಗರ ಅಬ್ಬಿ – ಸಂಚಿಕೆ – ೨

ಚೊಕ್ಕಾಡಿಯ ಹಾಡುಹಕ್ಕಿ ಮಹಾದೇವ ಕಾನತ್ತಿಲ ಎರಡು ದಶಕಗಳ ಹಿಂದೆ, ಹಿಮಾಲಯದ ತಪ್ಪಲಿನ, ರಾಣೀಖೇತ್ ಎಂಬ ಜಾಗದಲ್ಲಿ, ಚಾರಣ ಮಾಡುತ್ತಿದ್ದೆ.  ಬೆಟ್ಟ ಹತ್ತುತ್ತಾ, ಓರ್ವ ಬೆಟ್ಟದ ಜೀವಿ ಜತೆಯಾದ. ಆತನ ಮನೆ ಬೆಟ್ಟದ ತುದಿಯ ಹತ್ತಿರ. ಬರೇ ಕಾಲುದಾರಿ,ಸುತ್ತೀ ಬಳಸೀ, ಮರ ಹತ್ತುವ ಲತೆಯಂತೆ ಗುಡ್ಡ ಹತ್ತುತ್ತೆ. ಆಸ್ಪತ್ರೆಗೆ ಬೇಕಾದಲ್ಲಿ ಹತ್ತಾರು ಕಿಲೋಮೀಟರ್ ದೂರ. ಆತನ ಹತ್ತಿರ, ನಾನು ಕೇಳಿದೆ, ಅನಾರೋಗ್ಯವಾದಾಗ ಏನು ಮಾಡುತ್ತೀರಿ ಅಂತ. ಆತ ಅಂದ, “ಇಧರ್ ವನಸ್ಪತಿಯೋಂ ಕೀ ಹವಾ ಹೈ, ಹಮ್ ಹಮೇಷಾ […]

ಅಬ್ಬರವಿಳಿದಾಗ

ಶೈಲಜಾ ಹಾಸನ್        ತಣ್ಣಗೆ ಗಾಳಿ ಬೀಸಿದಂತಾಗಿ ಮಾಧವಿ ನಡುಗಿದಳು. ಕೆರೆ ಏರಿ ಮೇಲೆ ಕುಳಿತಿದ್ದರಿಂದ ಕೆರೆಯ ಮೇಲಿಂದ ಹಾದು ಬರುತ್ತಿದ್ದ ಗಾಳಿ ಎದೆ ನಡುಗಿಸುವಂತಿತ್ತು. ಚಳಿ ಆಗುತ್ತಿದ್ದರೂ ಮಾಧವಿಗೆ ಮನೆಗೆ ಹೋಗುವ ಮನಸ್ಸು ಇರಲಿಲ್ಲ. ಏರಿ ಮೇಲೆ ಕುಳಿತು ಸಾಕಾದ ಮಾಧವಿ ನಿಧಾನವಾಗಿ ಕೆಳಗಿಳಿದು ನೀರಿಗೆ ಕಾಲು ಇಳಿಬಿಟ್ಟು ಚಪ್ಪಡಿ ಮೇಲೆ ಕುಳಿತಳು. ಕಾಲುಗಳೆರಡನ್ನು ನೀರಿನಲ್ಲಿ ಆಡಿಸುತ್ತಾ ಕಾಲಬೆರಳನ್ನು ಕಚ್ಚಲು ಬರುತ್ತಿದ್ದ ಮೀನುಗಳೊಡನೆ ಆಟವಾಡತೊಡಗಿದಳು. ಕೆಲವು ನಿಮಿಷಗಳಷ್ಟೆ ಆ ಆಟವೂ ಮುದ ನೀಡದೆ […]

ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು.

ಡಿಎಸ್.ರಾಮಸ್ವಾಮಿ ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು. ಈ ಕರೋನಾದ ಭಯ ನಮ್ಮೆಲ್ಲರನ್ನೂ ಎಷ್ಟು ಜರ್ಝರಿತಗೊಳಿಸಿದೆ ಎಂದರೆ ನಮ್ಮ ನಿತ್ಯದ ಜೀವನದ ಕನಿಷ್ಠ ಕೆಲಸ ಕಾರ್ಯಗಳಲ್ಲೂ ವಿಪರೀತ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿದೆ. ಒಂದೇ ಸೂರಿನೊಳಗಿದ್ದೂ ಅಪರಿಚಿತರಂತೆ ಬಾಳುವುದು ಅಭ್ಯಾಸವೇ ಆಗಿಬಿಟ್ಟಿದೆ. ನಿತ್ಯವೂ ಬೇಕಾಗುವ ತರಕಾರಿ, ಹಣ್ಣು, ಹೂವು, ದಿನಸಿ ತರುವುದಕ್ಕೂ ಸಮಯ ಹೊಂದಿಸಿಕೊಂಡು ಅವು ಯಾವ ಜಾಗದಲ್ಲಿ ಸಿಗುತ್ತವೆಯೋ ಅಲ್ಲಿಗೆ ದೌಡಾಯಿಸುವ ಪರಿಸ್ಥಿತಿ ಎಲ್ಲ ಊರಲ್ಲೂ ಸಾಮಾನ್ಯ ಸಂಗತಿಯಾಗಿದೆ. ಸರ್ಕಾರದ ಕಛೇರಿಗಳು ಅತಿ ಜರೂರು ಎಂದು […]

ಲಾಕ್ಡೌನ್ ಬೇಡಿಕೆ

ಗಣೇಶ್ ಭಟ್ ಸಮೂಹ ಸನ್ನಿಯಾಗುತ್ತಿರುವ ಲಾಕ್ಡೌನ್ ಬೇಡಿಕೆ ಕೊರೊನಾ ವೈರಸ್ ಹಾವಳಿಯ ಕುರಿತಾದ ಭಯದಿಂದಾಗಿ ಲಾಕ್ಡೌನ್ಗಾಗಿ ಒತ್ತಾಯ ಪ್ರಾರಂಭವಾಗಿದೆ.ಲಾಕ್ಡೌನ್ನಿಂದಾಗಿ ಕೊರೊನಾ ಪಿಡುಗನ್ನು ಹೋಗಲಾಡಿಸಬಹುದೆಂಬುದಕ್ಕೆ ಯಾವುದೇ ಆಧಾರವಿಲ್ಲ. 10, 20 ಅಥವಾ ಇನ್ನೂ ಎಷ್ಟೇ ವಾರಗಳ ಸಂಪೂರ್ಣ ಲಾಕ್ಡೌನ್ನಂತರವೂ ಜನರ ಓಡಾಟ ಪ್ರಾರಂಭವಾದಾಗ ವೈರಸ್ನ ಹಬ್ಬುವಿಕೆ ಒಮ್ಮೆಲೇ ಹೆಚ್ಚುವುದು ಸಹಜವೆಂದು ಸೋಂಕು ರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ.ಕೇಂದ್ರ ಸರ್ಕಾರ ರಚಿಸಿದ ತಜ್ಞರ ತಂಡ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ಭಾರತದಲ್ಲಿ ಲಾಕ್ಡೌನ್ ವಿಧಿಸದಂತೆ ಕಳೆದ ಫೆಬ್ರುವರಿಯಲ್ಲಿ ಸಲಹೆ ನೀಡಿತ್ತು. […]

ಗಝಲ್

ರತ್ನರಾಯ ಮಲ್ಲ ಕೋಟೆಯಲ್ಲಿ ಕುಂತಿರುವೆ ಬರುವವರೆಲ್ಲ ಬಂದುಬಿಡಿಹಸಿವಿನಿಂದ ಬಳಲುತಿರುವೆ ತಿನ್ನುವವರೆಲ್ಲ ತಿಂದುಬಿಡಿ ಬುದ್ಧಿಮಾತುಗಳು ಬುದ್ಧಿಭ್ರಮಣೆಯಲಿ ಕೊಳೆಯುತಿವೆಜೋಳಿಗೆಯು ಹರಿದಿದೆ ನೋಟುಗಳಿಂದ ತುಂಬಿಸಿಬಿಡಿ ಭೂಷಣವಾಗಿದ್ಧ ನಾಚಿಕೆಯ ಪರದೆಯನ್ನು ಎಸೆದಿರುವೆನೀವು ಬಂದ ಕೆಲಸವನ್ನು ಮುಗಿಸಿಕೊಂಡು ಹೋಗಿಬಿಡಿ ಪೂಜೆ-ಪುನಸ್ಕಾರದ ಜೊಳ್ಳು ಮೌಲ್ಯಗಳು ಬೇಡವಾಗಿವೆನಮ್ಮ ಪಾಡಿಗೆ ನಮಗೆ ಸುಖವಾಗಿ ಇರಲು ಬಿಟ್ಟುಬಿಡಿ ಹಸಿಮಾಂಸ ತಿನ್ನುವ ರಣಹದ್ದುಗಳ ಪರಪಂಚವಿದುಅನ್ನ ತಿನ್ನುವುದನ್ನು ಕಲಿತು ನೆಮ್ಮದಿಯಾಗಿ ಇದ್ದುಬಿಡಿ **************

ಶೂನ್ಯದುಂಗುರ….

ಶಿವಲೀಲಾ ಹುಣಸಗಿ ಅರಿವಿಗೆ ಬಾರದ ಕ್ಷಣ ನೆನೆದುಭಯದ ನಡುವೆ ನಲುಗುತಿವೆಹಿಂಡಿ ಹಿಪ್ಪೆಯಾದ ಮನಗಳುಆದ್ರತೆಗೊಂದು ಭದ್ರತೆಯಿಲ್ಲದೆಅಂಜಿಕೆಯ ಹಿನ್ನೋಟ ತಲೆ ಕೆಳಗೆಬಿಂಬಗಳ ಮೆಲುಕಿನ ಶರಣಾಗತಿಗೊತ್ತು ಗುರಿಯಿಲ್ಲದ ಮೌನಕೆಕೊರಳೊಡ್ಡಿ ನೇಣಿಗೇರಿದವರೆಲ್ಲಥಟ್ಟನೆ ಪ್ರತ್ಯಕ್ಷವಾದ..ಪ್ರೇತಾತ್ಮದಂತೆನರಕಗಳು ಅಂತಸ್ತಿನ ಅರಮನೆಯಉತ್ಸವ ಮೂರ್ತಿಗಳಾಗುವಾಗೆಲ್ಲಬಿಕ್ಕಳಿಕೆಗಳು,ನೀರಿಳಿಯದಾ ಗಂಟಲಲ್ಲಿಉಸಿರ ಬಿಗಿದಾಟಕೆ ಹರಕೆಯ ಜಪತಪನೆತ್ತಿಗಾದ ಗಾಯಕೆ ಸುಣ್ಣದಾ ಶೂಚಿತ್ತದಲ್ಲಿ ಮೂಡಿದ ನಕ್ಷತ್ರಗಳೆಲ್ಲವೂಬಾನ ಹುಡುಕಿ ಹೊರಟಂತೆಮಾನಗಳೆಲ್ಲ ಬಿಕರಿಯಾಗಿಹವುಮಾರುಕಟ್ಟೆಗೂ ಲಗ್ಗೆಯಿಡದೆಸಂದಿಗೊಂದಿಗಳಲ್ಲಿ ಅಡಗಿರುವಗಿರಾಕಿಗಳಿಗೇನು ಕೊರತೆಯಿಲ್ಲಮಾಂಸದ ಮುದ್ದೆ ಯಾವುದಾರೇನುಹರೆಯದಲಿ ಮಾಗಿರಬೇಕು ಅಷ್ಟೇತುಟಿಕಚ್ಚಿ ನರಳುವಾಗೆಲ್ಲ ಟೊಂಕದಾಡಾಬು ಸಡಿಲವಾಗಿ ಕಳಚಿದಂತೆಮನಸಿಗೆ ರುಚಿಸದಿದ್ದರು ಲೋಭವಿಲ್ಲದೇಹದಂಗಗಳಿಗೆ ಮೋಹದ‌ ಉಡುಗೊರೆಇಳೆಯ ಸೇರುವ ಕಾಯ ನಿರ್ಮೊಹಿಮಣ್ಣಾದವರ ಚರಿತ್ರೆ ಅರಹುವವರಿಲ್ಲಸಾವು…ಎಂದೆಂದಿಗೂ […]

Back To Top