ಗಝಲ್

ರತ್ನರಾಯ ಮಲ್ಲ

ಕೋಟೆಯಲ್ಲಿ ಕುಂತಿರುವೆ ಬರುವವರೆಲ್ಲ ಬಂದುಬಿಡಿ
ಹಸಿವಿನಿಂದ ಬಳಲುತಿರುವೆ ತಿನ್ನುವವರೆಲ್ಲ ತಿಂದುಬಿಡಿ

ಬುದ್ಧಿಮಾತುಗಳು ಬುದ್ಧಿಭ್ರಮಣೆಯಲಿ ಕೊಳೆಯುತಿವೆ
ಜೋಳಿಗೆಯು ಹರಿದಿದೆ ನೋಟುಗಳಿಂದ ತುಂಬಿಸಿಬಿಡಿ

ಭೂಷಣವಾಗಿದ್ಧ ನಾಚಿಕೆಯ ಪರದೆಯನ್ನು ಎಸೆದಿರುವೆ
ನೀವು ಬಂದ ಕೆಲಸವನ್ನು ಮುಗಿಸಿಕೊಂಡು ಹೋಗಿಬಿಡಿ

ಪೂಜೆ-ಪುನಸ್ಕಾರದ ಜೊಳ್ಳು ಮೌಲ್ಯಗಳು ಬೇಡವಾಗಿವೆ
ನಮ್ಮ ಪಾಡಿಗೆ ನಮಗೆ ಸುಖವಾಗಿ ಇರಲು ಬಿಟ್ಟುಬಿಡಿ

ಹಸಿಮಾಂಸ ತಿನ್ನುವ ರಣಹದ್ದುಗಳ ಪರಪಂಚವಿದು
ಅನ್ನ ತಿನ್ನುವುದನ್ನು ಕಲಿತು ನೆಮ್ಮದಿಯಾಗಿ ಇದ್ದುಬಿಡಿ

**************

Leave a Reply

Back To Top