ಮನಸು ಅರಳುವ ಕನಸು

ಕವಿತಾ ಜಿ.ಸಾರಂಗಮಠ

ನಗುವ ಮನ ಹೊಂದಿದ ನೋವಿನ ಕತೆ
ಜೀವನದ ದುಗುಡಗಳ ನೂರೆಂಟು ವ್ಯಥೆ
ನಗು ಮೊಗದಿ ನೋವನೇ ಸೋಲಿಸುವ ನೀರೆ
ಕರುಳ ಕುಡಿಗೂ ಅದನ್ನೇ ಬೋಧಿಸಿದ ತಾಯೆ!

ಆಶಾ ಭಾವನೆಗಳ ಹೊತ್ತ ನಗು
ನೂರು ಕನಸಿನ ಭಾವಗಳ ಹೊತ್ತು
ಅದೆಷ್ಟೋ ಆಸೆಗಳ ಹತ್ತಿಕ್ಕಿ
ನಾಳೆಗಳ ಸ್ವಾಗತಕೆ ನಗು ಬೀರುವಳು!

ಹಗಲಿರುಳು ದುಡಿದು ಬಡತನ 
ಸೋಲಿಸುವ ಆಸೆ ಧೀರೆಗೆ
ಛಲಬಿಡದ ದೋಣಿಯ ನಾವಿಕಳು
ಇಂದಲ್ಲ ನಾಳೆ ಗೆಲುವ ಹಠ ಅವಳಿಗೆ!

ಅಂದಂದೇ ದುಡಿದು ಅಂದೇ ತಿಂದರೂ
ಸ್ವಾಭಿಮಾನದ ನೆಲೆಗಟ್ಟು ಬಿಡದಾಕೆ
ನಗುನಗುತ ಜೀವನ ಸವೆಸಿ
ನಗುವ ಹೂ ಮಳೆ ಸುತ್ತ ಹರಡುವಾಕೆ!

ಅವಳ ತೆರೆದ ಮನದ ನಗುವಿಗೊಂದು ನಮನ!!

*****

One thought on “ಮನಸು ಅರಳುವ ಕನಸು

  1. ಆಶಾಭಾವನೆ ಒಂದೇ ಪದ ಆಗಬೇಕು. ಪದ ಒಡೆದರೆ ಅರ್ಥ ಬೇರೆಯಾಗಿಬಿಡುತ್ತೆ. ಕವಿತೆ ಚೆನ್ನಾಗಿದೆ.

Leave a Reply

Back To Top