ಕಾವ್ಯಯಾನ

ಕಾವ್ಯಯಾನ

ಇನಿಯನೆಂದರೆ… ನಿರ್ಮಲಾ ಆರ್. ಇನಿಯನೆಂದರೆ… ಇರುಳಲಿ ನಗುವ ಚಂದಿರನು ಬೆಳದಿಂಗಳಲಿ ನನ್ನೊಂದಿಗೆ ವಿಹರಿಸುವನು ತಾರೆಗಳ ನಡುವಲಿ ಇರುವನು ತಿಳಿ ಹಾಲಿನಂತಹ ಮನದವನು ಇನಿಯನೆಂದರೆ… ಆಗಸದಲಿ ಸದಾ ಮಿನುಗುವನು ದೂರದಿಂದಲೇ ನನ್ಮನದ ಧನಿಯ ಕೇಳುವನು ನನ್ನಂತರಾಳದ ಮಾತ ಅರಿಯುವನು ಪ್ರತಿ ಇರುಳಲಿ ನನಗಾಗಿ ಬರುವನು ಇನಿಯನೆಂದರೆ… ಕನಸ ಕಾಣುವ ಕಂಗಳಿಗೆ ತಂಪನೆರೆವನು ಕಂಡ ಕನಸಿಗೆ ಬಣ್ಣ ಹಚ್ಚುವನು ಕಣ್ಣ ಕಾಡಿಗೆಯ ಕದಿಯುವನು ಕಚಗುಳಿಯನಿಟ್ಟು ಕೆನ್ನೆಯ ರಂಗೇರಿಸುವನು ಇನಿಯನೆಂದರೆ… ಮನವೆಂಬ ಇಣುಕುವನು ತಿಳಿಯ ನೀರಲಿ ಚಹರೆಯ ಬಿಂಬ ಬಿಟ್ಟವನು ನಾ […]

ಕಾವ್ಯಯಾನ

ನನ್ನ ಕವಿತೆ ಅಮೃತಾ ಮೆಹಂದಳೆ ನನ್ನ ಕವಿತೆ,ರಾಗ ತಾಳ ಭಾವವಿಲ್ಲದ ಮೂಕ ಗೀತೆವೀಣೆಗೆ ತ೦ತಿ ಮೀಟದಮುರಳಿಗೆ ಕುಹೂ ಹಾಡದ ಶೋಕಗೀತೆಆದರೊಮ್ಮೊಮ್ಮೆ ಹಿಡಿದಿಟ್ಟರೆ ನಿಲ್ಲುವುದುನಗಿಸಿದರೆ ನಕ್ಕು ಅಳಿಸಿದರೆ ಅಳುವುದುಏಕಾ೦ತಕೆ ಜೊತೆ ಹಾಡಿದರೆ ಭಾವಗೀತೆನನ್ನ ಭಾವದ೦ತೆ… ನನ್ನ ಕವಿತೆ,ಬರಿದಾದ ಬಿಳಿಯಾದ ಹಾಳೆಯ೦ತೆನಡುನಡುವೆ ಕಪ್ಪು ಚುಕ್ಕೆಯಾಗುವುದು ಚಿ೦ತೆಚೆಲ್ಲಿದರೆ ಕಣ್ಣುಕುಕ್ಕುವುದು ಬಣ್ಣಬರಿದು ಮನ ಬಿ೦ಬಿಸುವುದು ಬರೀ ಸೊನ್ನೆಹರಿದರೆ ಚೂರು ಮುಚ್ಚಿಟ್ಟರೆ ನೆನಪುಎಚ್ಚರದಿ ಬಿಡಿಸಿದರೆ ಸೆಳೆವ ಚಿತ್ರದ೦ತೆನನ್ನ ಚಿತ್ತದ೦ತೆ… ನನ್ನ ಕವಿತೆ,ಆಗಸದಿ ತೇಲುವ ಮೋಡದ೦ತೆಕೆಲವೊಮ್ಮೆ ಮೈದು೦ಬಿ ಸುರಿಯುವುದು ವರ್ಷದ೦ತೆಒಮ್ಮೆ ಬಿಳುಪು, ಇನ್ನೊಮ್ಮೆ ಕಪ್ಪುಬಣ್ಣ ಬಣ್ಣ […]

ಯುಗಾದಿಯ ಸೂರ್ಯಸ್ನಾನ

ಯುಗಾದಿಯ ಸೂರ್ಯಸ್ನಾನ ಸ್ಮಿತಾ ರಾಘವೇಂದ್ರ ಯುಗದ ಆದಿಯೂ ಪ್ರಕೃತಿಯ ಪ್ರೀತಿಯೂ ಯುಗ ಉರುಳಿ ಯುಗ ಬರಲು ನವ ಯುಗಾದಿ ಬಾಡುವಲ್ಲೂ ಬಿಡದೇ ಚಿಗುರುವ ಈ ಪ್ರಕೃತಿಯ ಆದಿ. ಇಡೀ ಪ್ರಕೃತಿಯೇ ಹೊಸ ಚೈತನ್ಯವೊಂದಕ್ಕೆ ತರೆದು ಕೊಳ್ಳುವ ಕಾಲ ಮರಗಳೆಲ್ಲ ಚಿಗುರೆಲೆಯ ಹೊದ್ದು ಹೂ ಹಣ್ಣು ಗೊಂಚಲುಗಳಿಂದ ನಳ ನಳಿಸಿ ಮತ್ತೊಂದು ಸೃಷ್ಟಿಗೆ ಬೀಜಗಳ ಪಸರಿಸಿ ತೃಪ್ತವಾಗುವ ಕಾಲ. ಆಗೆಲ್ಲ ಯುಗಾದಿ ಬಂತೆದರೆ ಬೆಟ್ಟಗುಡ್ಡಗಳ ತಿರುಗುವದೇ ಒಂದು ಸಂಭ್ರಮ ಗೊಂಚಲು ಗೊಂಚಲಾಗಿ ಬಾಗಿ ನಿಂತ ಸಂಪಿಗೆ, ನೇರಳೆ, ಕೌಳಿ,ಬಿಕ್ಕೆ […]

ಕಾವ್ಯಯಾನ

ಕವಿತೆ ಚೈತ್ರಾ ಶಿವಯೋಗಿಮಠ ಕವಿ ಕೆ.ಎಸ್.ಎನ್ ಕ್ಷಮೆ ಕೋರುತ್ತಾ….. ಬರೆದ ಕವಿತೆಯ ಬಿಚ್ಚಿ, ತುಂಡರಿಸಿ ಕೊಯ್ವರು, ಬರೆದುದರೆಲ್ಲದರಲಿ ಬರಿ ತಪ್ಪ ಕಾಣ್ವರು ಯಾವುದೂ ಸರಿ ಇಲ್ಲ ಎಂದಿವರ ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ!! ಭಾವ ಚಂದವಿರಲು, ಈ ಪದವು ಯಾಕೆ? ಪದಗಳೆಲ್ಲವುಕೆ ಸಮ್ಮತಿಯು ಇರಲು, ಭಾವ ತೀವ್ರತೆಯು ಸಾಕೆ? ಎಲ್ಲದಕೂ ಬರಿ ಕೊಂಕು ಎಲ್ಲದಕು ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ!! ಓದೋಕೆ ಲಯವಿರೆ, ಛಂದೋಬದ್ಧ ಇಲ್ಲಂತೆ! ಪ್ರಾಸವಿಲ್ಲದಿರೆ ಓದಲು ತ್ರಾಸಂತೆ.. ಪ್ರಾಸವಿರೆ, […]

ಕಾವ್ಯಯಾನ

ಕವಿತೆ ಹುಟ್ಟುವುದಿಲ್ಲ ಸ್ಮಿತಾ ರಾಘವೇಂದ್ರ ಆತ್ಮವೆಂಬ ಅನೂಹ್ಯ ಭಾವಗರ್ಭಗುಡಿಯ ಹೊಕ್ಕು ಹಲವು ಕವಿತೆಗಳು ತಣ್ಣಗೆ ಹೊರ ನಡೆಯುತ್ತವೆ ಕವಿತೆಯ ಹಡೆದ ಮೌನದಂತೆ! ನಭೋಮಂಡಲವ ತಿರು ತಿರುಗಿ ವಿರಮಿಸಿ ಉಸುರಿದಾಗೊಂದು- ನಿಟ್ಟುಸಿರು: ಆತ್ಮಕ್ಕೆ ದಕ್ಕಿದ್ದು ಕಾಯಕ್ಕೆ ದಕ್ಕುವದಿಲ್ಲ! ಅಣು ರೇಣುವಿನಲಿ ಪಲ್ಲವಿಸಿ ತಲೆದೂಗಿ ರಿಂಗಣಿಸಿ ಒಳಗೊಳಗೇ ಭೋರ್ಗರೆದು ಮಂಜುಗಟ್ಟಿದ ಕಣ್ಣ ತೊರೆದು ಅರಿಯದೇ ಉದುರಿದ ಕವಿತೆಯ ಕರುಣೆ- ತೊರೆದ ನಿರಾಳ ಬದುಕಿನ ಕೊನೆಯ ಕವಿತೆಗೆ ಮಾತೂ ಇರುವುದಿಲ್ಲ ಮೂಕ ಮರ್ಮರವೊಂದರ ಅಂತರಾತ್ಮ: ಸೋತ ಕಣ್ಣುಗಳಿಂದ ಸರಿದ ಸುಂದರ ನೋಟ. […]

ಪ್ರಸ್ತುತ

ಮಾನವನ ಮಿದುಳಿಗೇ ತಗಲಿರುವ ವೈರಸ್ ಗಣೇಶಭಟ್, ಶಿರಸಿ ಮಾನವನ ಮಿದುಳಿಗೇ ತಗಲಿರುವ ವೈರಸ್………….. ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ವೈರಸ್ ಯಾವುದೆಂದು ಕೇಳಿದರೆ ಚಿಕ್ಕ ಮಕ್ಕಳೂ ಕೂಡಾ ಕೊರೊನಾ ಎಂದು ಹೇಳುವಷ್ಟು ಅದರ ಹೆಸರು ಜನಜನಿತವಾಗಿದೆ. ಕೊರೊನಾ ವೈರಾಣು ತಗಲದಂತೆ ಸುರಕ್ಷಾ ಕ್ರಮವಾಗಿ ಮಾಲ್‍ಗಳನ್ನು, ಸಿನಿಮಾ, ನಾಟಕಗಳನ್ನು ಬಂದ್ ಮಾಡಲಾಗಿದೆ. ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಭಯದಿಂದಾಗಿ ಜನರ ಓಡಾಟ ಕಡಿಮೆಯಾಗಿದೆ. ಸಾರಿಗೆ ವ್ಯವಸ್ಥೆಯ ಬಳಕೆದಾರರ ಸಂಖ್ಯೆ ಕುಗ್ಗುತ್ತಿದೆ. ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿರುವುದರಿಂದ ಅಂಗಡಿ, […]

ಕಾವ್ಯಯಾನ

ದಕ್ಕಿತೆಷ್ಟು ಪ್ರೀತಿ ವಿನುತಾ ಹಂಚಿನಮನಿ (ವೆಲೆಂಟಾಯಿನ್ ಡೇ’ದ ಸಂಭ್ರಮ ಮುಗಿದಾಯ್ತು ಅದರ ಉತ್ತರಾರ್ಧ ಹೀಗೂ ಇರಬಹುದೇ …….) ಲಕ್ಷ್ಮಣ ರೇಖೆ ದಾಟಿದ ಒಂದು ತಪ್ಪಿಗೆ ದಕ್ಷಿಣೆ ತೆರಬೇಕಾಯ್ತು ನೂರೊಂದು ತೆಪ್ಪಗೆ ರಕ್ಷಣೆ ಇಲ್ಲದಾಯ್ತು ಕಾಡಿನಲಿ ತಾಯ್ತನಕೆ ದಕ್ಷ ಸಹನೆ ತ್ಯಾಗದ ಮೂರುತಿ ಸೀತೆಗೆ ಅಕ್ಷಯವಾದ ವನವಾಸ ಪತಿಯ ದೇಣಿಗೆ ಶ್ರೇಷ್ಠ ರಾಧೆಯ ಪ್ರೀತಿಗೆ ಹಂಬಲಿಸಿದವ ಅಷ್ಟ ಮಹಿಷಿಯರಿಗೆ ವಲ್ಲಭನಾದ ಗೋಕುಲದ ಕೃಷ್ಣ ಗೋಪಿಲೋಲನೀತ ದ್ವಾರಕಾಧೀಶನಾಗಿ ಬಾಲ್ಯದ ಗೆಳತಿಯ ಮರೆತ ಪದ್ಮಪತ್ರದ ಜಲಬಿಂದುವಾಗಿ ರಾಧೆಗೆ ದೊರೆತ ಐವರು ಶೂರ […]

ಕಾವ್ಯಯಾನ

ರಾತ್ರಿ ಮೆರವಣಿಗೆ ಪ್ಯಾರಿಸುತ ಹಗಲು ಸರಿದು ಇರುಳು ಕವಿದು ಕಣ್ಣು ಕನಸುಬೇಡಿದೆ ಹೃದಯ ಕಥೆ ಕೇಳಲು ತಣಿವರೆಸಿದೆ ಬೆಚ್ಚಗೆ ಹೊದಿಕೆ ಮೈಗೆ ಮುಡಿಯಲಿನ್ನು ರಾತ್ರಿ ಜೊತೆ ಮೆರವಣಿಗೆ…. ಚುಕ್ಕಿ ಚಂದ್ರನನ್ನು ಓಲೈಸುವಂತೆ ಚಂದ್ರಕಾಂತಿ ಸೂರ್ಯಪ್ರಭೆಯನ್ನು ನಂಬಿರುವಂತೆ ನಾನು ನಿನ್ನನ್ನು ಮಾತ್ರ ನಂಬಿದ್ದೇನೆ ಇಲ್ಲಿ ನನ್ನ ನಿನ್ನ ನಂಬಿಕೆ ಮುಖ್ಯವಲ್ಲ ಪ್ರೀತಿ ಜೀವಂತಿಕೆ ಅಷ್ಟೇ ಮುಖ್ಯವಾಗುವದು…! ಬಿಕೋ ಅನ್ನುತ್ತಿರುವ ರೋಡಿನಲ್ಲಿ ಬೀದಿದೀಪಗಳ ಅಲಂಕಾರ ದಟ್ಟ ವಾಹನಗಳ ವಾದ್ಯಮೇಳ ಅಕ್ಷತೆ ಹಾಕುವಂತೆ ರಪ ರಪ ಮಳೆಯ ಹನಿ ದೀಪದೂಳುಗಳ ಗುಯ್ಯಗುಟ್ಟುವ […]

ಜ್ಞಾನಪೀಠ ವಿಜೇತರು

ವಿ.ಕೃ. ಗೋಕಾಕ್ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ. ಗೋಕಾಕ್..! ಕನ್ನಡದಲ್ಲಿ ನವ್ಯಕಾವ್ಯ ಪ್ರವರ್ತಕರಾಗಿ ‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕರು ಕೃಷ್ಣರಾಯ-ಸುಂದರಮ್ಮ ದಂಪತಿಗಳಿಗೆ ೯-೮-೧೯0೯ರಲ್ಲಿ ಜನಿಸಿದರು. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ೧೯೩೧ರಲ್ಲಿ ಪುಣೆಯ ಫಗ್ರ್ಯುಸನ್ ಕಾಲೇಜಿನಲ್ಲಿ ಅನಂತರ ಆಕ್ಸಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು… ಉನ್ನತ ಶಿಕ್ಷಣ ಪಡೆದು ವಿದೇಶದಿಂದ ಬಂದ ಮೇಲೆ ಸಾಂಗ್ಲಿಯ ವಿಲ್ಲಿಂಗ್‍ಟನ್ ಕಾಲೇಜಿನಲ್ಲಿ, ಅನಂತರ ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ, […]

ಕಾವ್ಯಯಾನ

ಘನಿತ ಡಾ.ಗೋವಿಂದ ಹೆಗಡೆ ಘನಿತ ಇಬ್ಬನಿಯಲ್ಲಿ ತೊಯ್ದ ಪುಲಕದಲ್ಲಿ ಹೂವು ಇನ್ನೇನು ಆರಿಹೋಗುವ ಆತಂಕದಲ್ಲಿ ಇಬ್ಬನಿ ಬಿಂದು ನೋಡುತ್ತ ನಿಂತ ನಾನು-ನೀನು ಇನ್ನೇನು ಇದೇ ಇಬ್ಬನಿ ನಿನ್ನ ಕಂಗಳ ತೋಯಿಸುತ್ತದೆ ನಿನ್ನ ಮಡಿಲಿಗೆ ನನ್ನ ತಲೆಗೆ ಅವಿನಾ ಸಂಬಂಧ ಅದಕ್ಕೆ ಗೊತ್ತೇ ಈಗ ನೀನು ಸೆಳೆಯುವೆ ಮಡಿಲಿಗೆ ತಬ್ಬಿ ಮುದ್ದಿಸುವೆ ಅದುರುವ ತುಟಿಗಳಲ್ಲಿ “ನಾನಿದೀನಿ ಕಣೋ” ಹೇಳುವ ಹೇಳದಿರುವ ಸಂಭವದಲ್ಲಿ ತಾರೆಗಳು ಕಂಪಿಸಿವೆ ಅಲೆಗಳು ಮರ್ಮರ ನಿಲ್ಲಿಸಿವೆ ಎಷ್ಟೊಂದು ದೇಶಕಾಲಗಳು ಈ ಒಂದು ಕ್ಷಣಕ್ಕಾಗಿ ಮಿಡಿದಿವೆ ತುದಿಗಾಲಲ್ಲಿ, […]

Back To Top