ರಾತ್ರಿ ಮೆರವಣಿಗೆ
ಪ್ಯಾರಿಸುತ
ಹಗಲು ಸರಿದು ಇರುಳು ಕವಿದು
ಕಣ್ಣು ಕನಸುಬೇಡಿದೆ
ಹೃದಯ ಕಥೆ ಕೇಳಲು ತಣಿವರೆಸಿದೆ
ಬೆಚ್ಚಗೆ ಹೊದಿಕೆ ಮೈಗೆ ಮುಡಿಯಲಿನ್ನು
ರಾತ್ರಿ ಜೊತೆ ಮೆರವಣಿಗೆ….
ಚುಕ್ಕಿ ಚಂದ್ರನನ್ನು ಓಲೈಸುವಂತೆ
ಚಂದ್ರಕಾಂತಿ ಸೂರ್ಯಪ್ರಭೆಯನ್ನು ನಂಬಿರುವಂತೆ
ನಾನು ನಿನ್ನನ್ನು ಮಾತ್ರ ನಂಬಿದ್ದೇನೆ
ಇಲ್ಲಿ ನನ್ನ ನಿನ್ನ ನಂಬಿಕೆ ಮುಖ್ಯವಲ್ಲ
ಪ್ರೀತಿ ಜೀವಂತಿಕೆ ಅಷ್ಟೇ ಮುಖ್ಯವಾಗುವದು…!
ಬಿಕೋ ಅನ್ನುತ್ತಿರುವ ರೋಡಿನಲ್ಲಿ
ಬೀದಿದೀಪಗಳ ಅಲಂಕಾರ
ದಟ್ಟ ವಾಹನಗಳ ವಾದ್ಯಮೇಳ
ಅಕ್ಷತೆ ಹಾಕುವಂತೆ ರಪ ರಪ ಮಳೆಯ ಹನಿ
ದೀಪದೂಳುಗಳ ಗುಯ್ಯಗುಟ್ಟುವ ಮಂತ್ರಘೋಷ
ಅಪ್ಪಟ ಮದುವೆ ಮನೆಯಂತೆ ನೋಟಕ್ಕೆ ಸಿಗುವ
ಈ ರಾತ್ರಿ ಅಧ್ಭುತ ಸೃಷ್ಟಿಸಿದೆ…!
ಹೀಗೆ ಬಂದು ಹಾಗೆ ಹೋಗುವ ಕನಸುಗಳ
ಮೇಲೆ ಅದೇನು ಕವಿತೆ ಬರೆಯಲಿ
ಅದೇನೇ ಬರೆದರೂ ಅವಳ ಹಾಜರಾತಿ ಇರುವದು
ಅಲ್ಲೊಮ್ಮೆ ಇಲ್ಲೊಮ್ಮೆ ಬರುವ ಸುಳಿವು ಕೊಡುವನೀನು ,
ಅದೆಂತಹ ಮಾಯಗಾತಿ…!
ನನ್ನೆಲ್ಲ ರಾತ್ರಿಯನು ಧಾರೆಯರೆದರೂ
ಇನ್ನೂ ಮೀನಾಮೇಷ ಮಾಡುತ್ತಿರುವೆ
******