ನೆತ್ತರಿನ ಮಳೆ ಬಿದ್ದು….

ನೆತ್ತರಿನ ಮಳೆ ಬಿದ್ದು….

ನೆತ್ತರಿನ ಮಳೆ ಬಿದ್ದು…. ಅಲ್ಲಾಗಿರಿರಾಜ್ ಕನಕಗಿರಿ ನೆತ್ತರಿನ ಮಳೆ ಬಿದ್ದುಮೈ ಮನಸು ಕೆಂಪಾದವೋ. ಕಪ್ಪಾದ ಮೋಡದಲ್ಲಿಕೆಂಪಾದ ಮಿಂಚೊಂದು ಹರಿದು.ಊರು ಕೇರಿ ಕೆಂಪಾದವೋ. ಬಿಸಿಲುಂಡ ನೆಲದಾಗ ನದಿಯೊಂದುಕೆಂಪಾಗಿ ಕಾಡು ಮೇಡು ಕೆಂಪಾದವೋ. ಬರಗಾಲಕ್ಕೆ ಹುಟ್ಟಿದ ಕೂಸುಎದೆಯ ರಕುತ ಕುಡಿದುತೊಟ್ಟಿಲೊಳಗಿನ ಹಾಸಿಗೆ ಕೆಂಪಾದವೋ. ದಿಲ್ಲಿ ಗಡಿಗಳಲ್ಲಿಕೊರೆಯುವ ಚಳಿ ಬಿಸಿಯಾಗಿರೈತರ ಹೊಲಗದ್ದೆಗಳು ಕೆಂಪಾದವೋ. ಬಿಳಿ ಹಾಳೆಯ ಮೇಲೆ ಕವಿಯಅಕ್ಷರದ ಸಾಲುಗಳು ಹಸಿದವರದನಿ ಕೇಳಿ ಕೆಂಪಾದವೋಎಲ್ಲ ಕೆಂಪಾದವೋ……… **********************************

ನಮ್ಮ ರೈತ

ಭಾಮಿನಿ ಷಟ್ಪದಿ ನಮ್ಮ ರೈತ ಅಭಿಜ್ಞಾ ಪಿ ಎಮ್ ಗೌಡ ಲೋಕ ಬೆಳಗುವ ದಿವ್ಯ ಮೂರ್ತಿಯುನಾಕ ಮಾಡುತ ಧರೆಯ ಮಡಿಲನುದೇಕುತಿರುತಿಹ ನಿತ್ಯ ಹೊಲದಲಿದಣಿದ ಜೀವವಿದು|ನೂಕು ನುಗ್ಗಲು ಜನರ ಗುಂಪಲುಬೇಕು ಬೇಡುವನರಿತು ಸಾಗುವಬಾಕಿಯುಳಿಸದೆ ಭುವಿಯ ಕಾರ್ಯವಮಾಡೊ ನಿಸ್ವಾರ್ಥಿ|| ಹಸಿರ ಸೇಚಿಸಿ ಚಂದ ಗೊಳಿಸುತನಸುಕು ಕಾಲದೊಳೆದ್ದು ದುಡಿಯುತಕೆಸರು ಧರಣಿಗೆ ಚೆಲುವ ಮಾಡಿನಿಂತು ನೋಡಿಹನು|ಸಸಿನೆಯಿಂದಲೆ ಹಸನು ಮಾಡಿಸಿಬೆಸೆದ ಬಂಧವ ಗಟ್ಟಿಗೊಳಿಸುತತಸಕುಗೊಳ್ಳುವ ಪಾಪ ರೈತನುನಿತ್ಯ ಮರುಗುವನು|| ಭವದ ಭಯವನು ಸಹಿಸಿಕೊಳ್ಳುತದವನ ಸೂಸುವ ಬೆಳೆಯ ಬೆಳೆಯುತಸವಿದ ಭಾವದ ದಿವ್ಯ ಹೂರಣಮೆಚ್ಚಿ ನಡೆಯುವನು|ತವಕದಿಂದಲೆ ಕುಗ್ಗಿ ಹೋಗುವಬೆವರ […]

ಆಲದ ಮರದ ಅಳಲು

ಕವಿತೆ ಆಲದ ಮರದ ಅಳಲು ನೂತನ ದೋಶೆಟ್ಟಿ ನಾನೊಂದು ಆಲದ ಮರ ಅಜ್ಜ ನೆಟ್ಟಿದ್ದಲ್ಲಬಿಳಲ ಬಿಟ್ಟು ಬೆಳೆದೆ, ಹರಡಿದೆ ಬಯಲ ತುಂಬ ನಾನು ಬೆರಳ ಚಾಚಿ ನಿಂತಿದ್ದೇನೆಅದರ ದಿಕ್ಕು ಬಯಲಿನಾಚೆಗಿದೆ!ಆ ಬೆರಳ ತುದಿಯವರೆಗೆ ನೋಡಿದಿರಿ, ನಡೆದಿರಿಅಲ್ಲೇ ಗುಂಪಾದಿರಿಓಟವಿನ್ನೂ ಮುಗಿದಿಲ್ಲಇದು ದೂರದಾರಿ ಗೆಳೆಯರೆ ಗಡಿರೇಖೆಗಳ ಅಳಿಸಿದಾಗನಾನು ಒಬ್ಬನೇ ಇದ್ದೆಬುದ್ಧನಿಗೆ ಹತ್ತಿರವಾದೆಅವನೂ ಆಲೂ ತಾನೆ? ನಾನು , ಬುದ್ಧ ಕೇಳಬೇಕಿದೆ ನಿಮ್ಮನ್ನುನಮ್ಮ ಬಿಳಲುಗಳ ಅಂಟಿಕೊಂಡಿರಿನೀವೇಕೆ ಆಲವಾಗಲಿಲ್ಲ? ಸಂವಿಧಾನವ ಕೇಳಿ ನೋಡಿನಾನು ಹೋರಾಡಿದ್ದುಕರ್ತವ್ಯ ಮಾಡುತ್ತಕಾಯಕ ದೇವರು ನನಗೆದೇವರ ಮರೆತ ಹಕ್ಕಿಗೆ ಯಾವ […]

ಗೊಲ್ಲರ ರಾಮವ್ವ

ಅನುವಾದಿತ ಕಥೆ ಗೊಲ್ಲರ ರಾಮವ್ವ(ಭಾಗ- ಒಂದು) ಮಾಜೀ ಪ್ರಧಾನ ಮಂತ್ರಿ ಶ್ರೀ ಪಿ.ವಿ. ನರಸಿಂಹರಾವ್ ಅವರ ಕಥೆಯ ಕನ್ನಡಾನುವಾದ ಪಿ.ವಿ.ನರಸಿಂಹರಾವ್ ತಮ್ಮ ಮಾತೃಭಾಷೆಯಾದ ತೆಲುಗಿನಲ್ಲೇ ಅಲ್ಲದೇ ಹಿಂದಿ, ಉರ್ದು, ಮರಾಠಿ ಭಾಷೆಗಳಲ್ಲಿ ಪರಿಣತಿ ಹೊಂದಿದ್ದರು. ತೆಲುಗಿನಲ್ಲಿ ಜ್ಞಾನ ಪೀಠ ಪ್ರಶಸ್ತಿ‌ ಪಡೆದ ವಿಶ್ವನಾಥ ಸತ್ಯನಾರಾಯಣ ಅವರವೇಯಿ ಪಡಗಲು (ಸಾವಿರ ಹೆಡೆ) ಕಾದಂಬರಿಯನ್ನು ಹಿಂದಿಗೆ “ಸಹಸ್ರ ಫಣ್” ಎಂಬ ಹೆಸರಲ್ಲಿ ಅನುವಾದ ಮಾಡಿದ್ದಾರೆ. ಮತ್ತೆ ಮರಾಠಿಯ ಹರಿನಾರಾಯಣ ಆಪ್ಟೆಯವರ ” ಪಣ್ ಲಕ್ಷ್ಯತ್ ಕೋಣ್ ಘೇತೊ ಕಾದಂಬರಿಯನ್ನು ತೆಲುಗಿಗೆ […]

ಉಳಿದ ಸಾರ್ಥಕತೆ!

ಕವಿತೆ ಉಳಿದ ಸಾರ್ಥಕತೆ! ಸುಮನಸ್ವಿನಿ ನೀ ಅರ್ಧ ನಕ್ಕು ಉಳಿಸಿದಸಣ್ಣನಗು ನಾನು,ಸ್ವಲ್ಪ ಓದಿ ಕಿವಿ ಮಡಚಿಟ್ಟಹಳೇ ಪುಸ್ತಕ.. ನೀ ಅಷ್ಟುದ್ದ ನಡೆದು ಮಿಗಿಸಿದಕಾಲುಹಾದಿ ನಾನು,ಚೂರೇ ಅನುಭವಿಸಿ ಎದ್ದುಹೋದಸಂಜೆ ಏಕಾಂತ.. ನೀ ತುಸು ಹೊತ್ತೇ ಕೈಯಲಿಟ್ಟುನಲಿದ ಹೂ ನಾನು,ತೃಪ್ತಿಯಾದಷ್ಟು ಸವಿದು ಇರಿಸಿದದೇವಳದ ಪ್ರಸಾದ. ನಿನ್ನೇ ಧೇನಿಸುತ್ತೇನೆ ಈ ಕ್ಷಣಕ್ಕೂದಾರಿಬದಿಯ ಮೈಗಲ್ಲಿನಂತೆಮಿಕ್ಕುಳಿದ ಸಾರ್ಥಕತೆಯತುಂಬಿಕೊಳುವ ನಿರೀಕ್ಷೆಯಲಿ! ****************

ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ

ಅಂಕಣ ಬರಹ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮತ್ತು ಕೊಲೆ! ಪ್ರತಿನಿತ್ಯ ಇಂತಹ ಅಸಂಖ್ಯ ಸುದ್ದಿಗಳು ಸರ್ವೆ ಸಾಮಾನ್ಯ ಎನಿಸುವಷ್ಟು ಬರುತ್ತಿರುತ್ತವೆ. ಓದುವುದಕ್ಕೇ ಆಗದಂಥ ವಿಚಿತ್ರ ಸಂಕಟ… ನಿರ್ಲಕ್ಷಿಸುವುದು ಸಾಧ್ಯವಿಲ್ಲ, ಏನಾದರೂ ಮಾಡುವಾ ಎಂದರೆ ಮಾಡಲಾಗದ ಅಸಹಾಯಕತೆ… ಹಿಂದೆಯೇ ಇಂಥವನ್ನ ಎಷ್ಟು ದಿನ ಅಂತ ಸಹಿಸಿಕೊಳ್ಳುವುದು ಎನ್ನುವ ಬೆಂಬಿಡದ ಪ್ರಶ್ನೆ… ಇನ್ನೂ ಅರಳದ ಮೊಗ್ಗನ್ನ ತಮ್ಮ ಕೆಟ್ಟ ದಾಹಕ್ಕೆ ಬಳಸಿ ಬಿಸಾಡುತ್ತಾರಲ್ಲ, ರಕ್ತ ಕುದಿಯುತ್ತದೆ. ಎಲ್ಲೋ ಕೆಲ ಕಂದಮ್ಮಗಳಿಗೆ ಒಂದಷ್ಟು ಸಂತಾಪವಾದರೂ […]

ಅಂಕಣ ಬರಹ ” ಹೆಣ್ಣೆಂಬ ತಾರತಮ್ಯವೇ ಪದೆ ಪದೆ ಕಾಡುವ ವಿಷಯ “ ಇಂದುಮತಿ ಲಮಾಣಿ ಪರಿಚಯ; ಇಂದುಮತಿ ಲಮಾಣಿ. ಬಿಜಾಪುರದವರು. ೧೯೫೯ ಜನನ. ಓದಿದ್ದು ಪಿಯುಸಿ.ಕತೆ ,ಕವನ ಸಂಕಲನ ,ಸಂಪಾದನಾ ಕೃತಿ ಸೇರಿ ೧೮ ಕೃತಿಗಳನ್ನು ಪ್ರಕಟಿಸಿದ್ದಾರೆ. ನನ್ನ ಆಸೆ ಎಂಬ ಕವನ ೯ ನೇ ತರಗತಿ ಕನ್ನಡ ಪಠ್ಯದಲ್ಲಿ ಸೇರಿದೆ. ಅತ್ತಿಮಬ್ಬೆ,ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದಿದ್ದಾರೆ.‌ ಬಿಜಾಪುರದ ಬಂಜಾರ ಸಮಾಜ ಸೇವಾ ಸಂಘದ ಅಧ್ಯಕ್ಷೆಯಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಬಿಜಾಪುರಮಹಿಳಾ ಸೇನಾ ಸಾಹಿತ್ಯ ಸಂಗಮದ […]

ಮೋಹದ ಬೆನ್ನು ಹತ್ತಿದರೆ . . . . .

ಲೇಖನ ಮೋಹದ ಬೆನ್ನು ಹತ್ತಿದರೆ ಜಯಶ್ರೀ.ಜೆ. ಅಬ್ಬಿಗೇರಿ  ಹೊಸದಾಗಿ ಮದುವೆಯಾದ ದಿನಗಳಲ್ಲಿ ಬಾಳ ಸಂಗಾತಿಯ ಮೋಹ ಅತಿಯೆನಿಸುವಷ್ಟು ಇರುತ್ತದೆ ಎಂದು ವಿಶೇಷವಾಗಿ ಹೇಳಬೇಕಿಲ್ಲ. ಈ ಮೋಹವೆಂಬುದು ಲೋಕಾರೂಢಿ. ಅದರಲ್ಲೇನು ವಿಶೇಷವಿದೆ ಎಂದು ಮನಸ್ಸು ಪ್ರಶ್ನೆ ಹಾಕಿ ನಗುವುದುಂಟು. ಮೋಹದ ಕುರಿತಾಗಿ ಪುಂಖಾನುಪುಂಖವಾಗಿ ಘಟನೆಗಳನ್ನು ಉಲ್ಲೇಖಿಸಬಹುದು. ಅದರಲ್ಲೂ ತುಳಸಿದಾಸರ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದ್ದದ್ದೇ ಇದೆ. ಅದನ್ನು ಹಾಗೆ ಒಮ್ಮೆ ಮೆಲಕು ಹಾಕುವುದಾದರೆ ಹೀಗೆ ಸಾಗುತ್ತದೆ. ತುಳಸಿದಾಸರಿಗೆ ತಮ್ಮ ಪತ್ನಿಯಲ್ಲಿ ಅಪಾರ ಆಸಕ್ತಿ. ಆಕೆಯನ್ನು ಬಿಟ್ಟಿರಲು ಮನಸ್ಸು ಒಪ್ಪುತ್ತಲೇ […]

ಕೊನೆಯ ಬೇಡಿಕೆ

ಪೂರ್ಣಿ ಹೋಟೆಲ್‌ನಿಂದ ಹೊರಬಂದಂತೆ ಕಂಡ ಅಜ್ಜ ಕತ್ತಲ ಕಾಲದ ಜೊತೆ ಮಲಗಿ ಮಿಲನ್ ಕ್ಲಾತ್ ಶಾಪ್ ಕಟ್ಟಿ ಹೊರಗ ನಿದ್ದೆ ಹೋಗಿದ್ದ.

“ಬೊಪ್ಪ ನನ್ನನ್ನು ಕ್ಷಮಿಸು”

ಉದಯ ಕುಮಾರ ಹಬ್ಬು ಅವರು ಈ ಆತ್ಮ ಕಥನದ ಮೂಲಕ ಒಂದು ಸಮೃದ್ಧ ಬಾಲ್ಯದ ಅಂತರಂಗವನ್ನು ಆ ಮೂಲಕ ಸಮಾಜದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಿತ್ರಣದ ಉಣಿಸನ್ನೂ ನೀಡಿರುವುದು ಓದುಗರಿಗೆ ಪ್ರಿಯವಾಗುವ ಸಂಗತಿ.

Back To Top