ಕವಿತೆ

ಕವಿತೆ

ಆ – ಲಯ ಡಾ. ಅಜಿತ್ ಹರೀಶಿ ಆ ಕಲ್ಲುಗಳುಭೂಕಂಪಕ್ಕೆ ಸಿಲುಕಿನಡುಗಿ ಅಡಿಗಡಿಗೆಕುಸಿದು ಬಿದ್ದುದು ಅಲ್ಲ ಆಕಸ್ಮಿಕವಾಗಿಅದೇನೋ ತಾಗಿಅಲುಗಾಡಿನೆಲಕ್ಕುರುಳಿದ್ದೂ ಅಲ್ಲ..! ಏಕಶಿಲೆಯಂತೆಭದ್ರವಾಗಿದ್ದವುಗಳಬಡಿ-ಬಡಿದುಕೆಡವಿದ್ದು ನಾನೇ.. ಪಥ ಬದಲಿಸಿಸಮಯದಿಬಂಧಿಸುವ ಧನ್ಯನಾದಮೊಳಗಲೇ ಬೇಕಿದೆಕ್ರೀಯಾಶೀಲ ನಿನಾದ ಉರುಳಿ ಹೋದಕಲ್ಲುಗಳ ಆಯ್ದುಮತ್ತೆ ಕಟ್ಟಬೇಕಿದೆಅಡಿಯಿಂದಮುಡಿಯವರೆಗೂ..! * *

ಕವಿತೆ

ಖಾಲಿ ಬೆಂಚುಗಳ ಪ್ರಶ್ನೆ ದೇವು ಮಾಕೊಂಡ ನರೇಂದ್ರ, ನರೇಂದ್ರ!ಆಗ ಕೂಗಿನಲಿಏಕನಾದವಿತ್ತು ಹಾಳೆಗಳು ಮೆಲುಕು ಹಾಕುತ್ತಲೇ ಇದ್ದವುಕವಿತೆಯಾಗಿಹಾಡಾಗಿ ಈಗಆತಕಥೆಯಾಗಿದ್ದಾನೆಉಪಮೇಯಗಳ ನಡುವೆ ಸಿಲುಕಿಅಂತೆಕಂತೆಗಳ ಸಾಲು ಸೇರಿ ಅವನು ಕಟ್ಟಿ ಮೇಯಿಸಿದ ಧರ್ಮಹಗ್ಗ ಹರಿದುಕೊಂಡುಗೂಟ ಬದಲಿಸಿಕೊಂಡಿದೆಬಾಲಿಶ ಮೋಹ ಮಹಲುಗಳಿಗೆ ಅಂವ ನೆಟ್ಟ ಪಡಿ ಪದಾರ್ಥಗಳುಹಸಿಮಣ್ಣಿನ ಹುಸಿ ಬೀಜಗಳಾಗಿವೆ ನಾವೀಗ ಖಾಲಿ ಮೇಜುಗಳ ಹಿಂದೆ ನಿಂತುಕಪ್ಪು ಹಲಗೆಯ ಮೇಲೆ ಬರೆಯುವ ಹಾಗಿಲ್ಲಸಂತನೆಂದುಸನಾತನ ಪರಿಚಾರಕನೆಂದು ಈಗಖಾಲಿ ಬೆಂಚುಗಳೆ ಪ್ರಶ್ನೆ ಕೇಳುತ್ತಿವೆಅವನ ಮನೆಗೆ ಬಾಗಿಲುಗಳು ಎಷ್ಟೆಂದುಹಾಗಾಗಿನನ್ನ ತರಗತಿಯಲ್ಲಿ ನೀನೊಬ್ಬ ಪ್ರಶ್ನಾರ್ಥಕ ಚಿಹ್ನೆ ************************

ನಾನೂ ರಾಧೆ

ನಾನೂ ರಾಧೆ ಕವಿತೆ ಪೂರ್ಣಿಮಾ ಸುರೇಶ್ ನಮ್ಮೂರಿನ ತುಂಬೆಲ್ಲಾಅವರದೇ ಮಾತು- ಕತೆಕಾಡಿದೆ ಅವರ ಕಾಣುವತವಕದ ವ್ಯಥೆ ಆ ಹಾಲು ತುಳುಕುವ ಕೊಡಮೊಸರ ಮಡಕೆಅವಳ ಅರ್ಧ ಬಿಚ್ಚಿದ ಮುಡಿನವಿಲು ನಡಿಗೆಯ ಅಡಿಅವಳ ಮಿದುನುಡಿಯ ಚೆದುರುಆ ವಿಜನ ಬೀದಿದಟ್ಟನೆ ಬಿದಿರ ಮೆಳೆ ಯಮುನೆಯ ಕಚಗುಳಿ ಇಡುವಆ ಮೆಲ್ಲೆಲರುಅವನ ಗುನುಗಿನ ಬೆರಳುಅವಳ ಕಣ್ಣವೀಣೆಯ ಮೇಲೆಅವಳ ಅಕ್ಷತ ಬಿಂಬಅವನ ದಿಟ್ಟಿಯನು ತೊಳಗುವಬೆಳಕಿನ ಕಂಬ ಎಲ್ಲವನೂ ಇಣುಕಿಕಾಣುವ ಬಯಕೆಈ ಕಾತರ ದಗ್ಧ ಮನಕೆ,ಗೋಕುಲದ ಬಾಗಿಲಲ್ಲೆಒಲವ ಘಮಲುಪರಿಸರದ ತುಂಬರಾಸಲೀಲೆಯ ಅಮಲುಒಳಗೆ ಸುಳಿದಾಡಿದೆಅಲ್ಲಲ್ಲಿ ಎಡತಾಕಿದೆರಾಧಾಕೃಷ್ಣರ ಅರಸುತ ಸಿಕ್ಕಿದ […]

ವಿದ್ಯಾರ್ಥಿ ಪ್ರತಿಭೆ

ಭರವಸೆಯ ವಿದ್ಯಾರ್ಥಿ ಕವಿ ಪೂಜಾ ನಾಯಕ್ ಪೂಜಾ ನಾಯಕ್ ಮೂಲತ:  ಕುಮಟಾ ತಾಲ್ಲೂಕಿನ ನಾಡುಮಾಸ್ಕೇರಿಯವರಾಗಿದ್ದು ಸದ್ಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿಹೊಂದಿರುವ ಇವರು ತಮ್ಮ ಆರಂಭದ ಕೆಲ ಕವಿತೆಗಳಿಂದಲೇ ಭರವಸೆ ಮೂಡಿಸಿದ್ದಾರೆ.  ‘ಸದಾಶಯದೊಡನೆ ಮೂಡಿಬಂದ ಕವಿತೆಗಳು’               ಸಾಹಿತ್ಯ ರಚನೆಗೂ ಓದಿಗೂ ಏನಾದರೂ ಸಂಬಂಧವಿದೆಯೇ? ಸಾಹಿತ್ಯದ ವಿದ್ಯಾರ್ಥಿಗಳಿಗೆ ಮಾತ್ರವೇ ಕಾವ್ಯ ರಚನೆ ಸಿದ್ಧಿಸಿರುತ್ತದೆಯೇ? ಈ ಪ್ರಶ್ನೆಯಲ್ಲೇ ಹುರುಳಿಲ್ಲ. ಏಕೆಂದರೆ ಸಾಹಿತ್ಯೇತರ ಅಭ್ಯಾಸಗಳಲ್ಲಿ ತೊಡಗಿರುವವರಿಂದಲೂ ಹಲವಾರು ಶ್ರೇಷ್ಠ […]

ಗೆಳೆಯನ ಮಕ್ಕಳು

ಗೆಳೆಯನ ಮಕ್ಕಳು ಅಂಕಣ ಬರಹ ಎಷ್ಟೊ ವರ್ಷಗಳ ಬಳಿಕ ಗೆಳೆಯನ ಮನೆಗೆ ಹೋಗಬೇಕಾಯಿತು. ಅವನೂ ಅವನ ಹೆಂಡತಿಯೂ ಪ್ರೀತಿಯಿಂದ ಬರಮಾಡಿಕೊಂಡರು. ನಾನು ಅವರ ಮನೆ ಹೊಕ್ಕಾಗ ಎಂಟು ವರ್ಷದ ಮಗಳು ಬೊಂಬೆಗೆ ಸೀರೆಯುಡಿಸುತ್ತಿದ್ದಳು. ಹನ್ನೆರಡು ವರುಷದ ಮಗ ಸೋಫಾದಲ್ಲಿ ಮೈಚೆಲ್ಲಿ ಕಾಲನ್ನು ಆಗಸಕ್ಕೆ ಚಾಚಿ ಲ್ಯಾಪ್‍ಟಾಪಿನಲ್ಲಿ ವಿಡಿಯೊ ಗೇಂ ಆಡುತ್ತಿದ್ದ. ಮನೆಗೆ ಬಂದು ಹೋದವರ ಬಗ್ಗೆ ಖಬರಿಲ್ಲದಷ್ಟು ತನ್ಮಯನಾಗಿದ್ದ. ನನ್ನ ಗೆಳೆಯ `ಅಪ್ಪಿ ನೋಡೊ. ನನ್ನ ಕ್ಲಾಸ್‍ಮೇಟ್ ಬಂದಾನ. ಅಂಕಲ್‍ಗೆ ನಮಸ್ಕಾರ ಮಾಡು’ ಎಂದರೂ ಕಣ್ಣೆತ್ತಿ ನೋಡಲಿಲ್ಲ. […]

ಕಸಾಪಗೆ ಮಹಿಳಾ ಅದ್ಯಕ್ಷೆ ಬೇಕು

ಚರ್ಚೆ ಅಬ್ಬಾ! ಏನಿದು ವಿಪರ್ಯಾಸ,ಸರಾಸರಿ ನೂರು ವರ್ಷಗಳು ಉರುಳಿದರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೀಯ ಸ್ಥಾನವನ್ನು ಮಹಿಳೆಯರು ಅಲಂಕರಿಸಲಿಲ್ಲವೇಕೆ?  ಎನ್ನುವುದು ತಿಳಿದ ತಕ್ಷಣ ನನಗೆ ಕಾಡುತ್ತಿರುವ ಒಂದು ಬಹುದೊಡ್ಡ ಪ್ರಶ್ನೆಯೇ ಅದು. ಮಹಿಳೆಯರೇ ತಮಗೆ ಆ ಪದವಿ ಬೇಡವೆಂದು ಸುಮ್ಮನುಳಿದಿದ್ದಾರೋ? ಅಥವಾ ಆ ಸ್ಥಾನಕ್ಕೆ ಹೋಗಲು ಅವರಿಗೆ ಅವಕಾಶವನ್ನೇ ನೀಡಲಿಲ್ಲವೋ? ನಾನರಿಯೆ. ಆದರೆ ಇಲ್ಲಿಯವರೆಗೂ ಅಧ್ಯಕ್ಷೀಯ ಪೀಠವನ್ನು ಹತ್ತಲಿಲ್ಲ ಎಂಬ ಸಂಗತಿಯನ್ನಂತು ತಿಳಿದುಕೊಂಡೆ. ಪುರುಷನ ಜೀವನದ ಪ್ರತಿಯೊಂದು ಹಂತದಲ್ಲೂ ಹೆಣ್ಣಿನ ಪಾತ್ರ ಬಹುಮುಖ್ಯವಾದುದು. ಜನ್ಮಕೊಟ್ಟು ಸಾಕಿ ಸಲಹುವ […]

ಕಾವ್ಯಯಾನ

ಕವಿತೆ ಮಿಲನ ವೀಣಾ ರಮೇಶ್ ಮದುವನದ ಅಂಗಳದಲಿಮಧುರ ಮೌನ ಹಾಸಿದೆಮಧು ಮನಸುಗಳು ಬೆಸೆದಿರೆ,ಮಧು ಅರಸುವ ದುಂಬಿಗಳುಮಧುವಿಹಾರದ ಹಿಗ್ಗಿನಲಿ ಹಸಿರ ಹಂದರದೊಳಗೆಗಂಧರ್ವರೆ ಧರೆಗಿಳಿದಂತೆಮುದ ನೀಡಿ ಮತ್ತೇರಿಸಿದಆಲಾಪದ ದುಂಬಿಗಳುಮಧು ಹನಿಯೊಂದುಜಾರಿದೆ,ಕೆನ್ನೆ ಮಾತಾಡಿದೆತುಸು ಬಣ್ಣದಲಿ,ಅದರುತಿದೆ ಅಧರಗಳು ಭಾವಗಳ ಅರಮನೆಯಲಿಮಧುಮಂಚದ ಉಯ್ಯಾಲೆಪ್ರೇಮರಾಗದಿ ತೂಗುತಿರೆಸವಿಗನಸುಗಳು ಬಿಗಿದಪ್ಪಿನನ್ನೊಡಲಲಿ ಕೂತಿರೇ ಮಧುಚಂದಿರನು ಕರೆದಿರೆಮೆಲ್ಲನೆತನುಮನಗಳು ಹೆಣೆದಿದೆಪ್ರೇಮದ ಚಿಲುಮೆಅಧರ ಸುಖದೊಳಗಿನಮದಿರೆ,ಯ ಬೆಚ್ಚನೆಯಹಿತದೊಳಗೆ ಮಧುಮಿಲನದ ಅರಸಿಗೆಚೈತ್ರವಸಂತನ ಆಗಮನದ ಸಂತಸಮತ್ತದೇ ಪ್ರತಿಪದೆಗೆಸಂಭ್ರಮದ ಮಧುಮಾಸ *********************

ಕಾವ್ಯಯಾನ

ಕವಿತೆ ನಾಲ್ಕು ಹೆಜ್ಜೆ ನಡೆಯಬಹುದಿತ್ತು ಪ್ಯಾರಿಸುತ ನಾಲ್ಕು ಹೆಜ್ಜೆ ನಡೆಯಬಹುದಿತ್ತು ನೀನುಒಂದೇ ಒಂದು ಹೆಜ್ಜೆ ಮುಂದೆ ಹಾಕಲಿಲ್ಲಕೈಕೈ ಹಿಡಿದು,ಭುಜಕೆ ಭುಜವ ರಕ್ಷಿಸಿಮೆಚ್ಚಿಕೊಂಡಿದ್ದೆ ನಾನುಹಿಡಿದ ಕೈ ಕೊಸರಿಕೊಂಡು ಅಲ್ಲೇ ನಿಂತೆ ನೀನುನಾನು ನೀನು ಮತ್ತು ಭವಿಷತ್ತಿನ ನಮ್ಮೆರಡುಮುದ್ದು ಮಕ್ಕಳಿಗೆ ನೀತಿಯನ್ನುನೀಡಬಹುದಿತ್ತು ನಾವು…ಇಬ್ಬರಲ್ಲಿ ಯಾರೋ ಒಬ್ಬರು ನೀತಿಗೆಟ್ಟಿದ್ದೇವೆಪುಟ ಹಿಮ್ಮುಖವಾಗಿ ಹಾರಿದಂತೆಲ್ಲಇಬ್ಬರು ಸ್ವಚ್ಛಂದ ಪ್ರೇಮಿಗಳು ಅನ್ನುವಅದೆಷ್ಟು ಪುರಾವೆಗಳು ಉಲ್ಲೇಖಿತವಾಗಿವೆಕೆಲವು ಪುಟಗಳು ಮಾಸಿ ಹರಿದು ಹೋಗಿವೆಅದರಲ್ಲೇನಾದರೂ ದಾಖಲಿಸಿದ್ದುಉಳಿದಿರಬಹುದೇನೋ…?! ನಾಲ್ಕು ಹೆಜ್ಜೆ ಮುಂದೆ ಹೋಗಿ,ತಿರುಗಿ ನೋಡಿದೆ ನಾನುನನ್ನ ಹೆಜ್ಜೆ ಅಳಿಸಿ,ಗುರುತು ಸಿಗದೆ ಹಲ್ಲು ತೋರಿದೆ […]

ಕಾವ್ಯಯಾನ

ಲೀನವಾಗುವೆ ಕವಿತೆ ಸರಿತಾ ಮಧು ದಟ್ಟ ಕಾನನದ ನಡುವೆದಿಟ್ಟ ಹೆಜ್ಜೆಯನಿಟ್ಟು ನಡೆವೆಸುತ್ತಲೂ ಜೀಂಗುಡುವ ಸದ್ದು‌ಕತ್ತನೆತ್ತಲು ಕಾರ್ಮೋಡಗಳ ಕತ್ತಲುಅಡಿಇಡಲು ಕಲ್ಲು ಮುಳ್ಳಿನ ಹಾದಿಅಲ್ಲೇ ನಿಂತರೆ ಕ್ರೂರಮೃಗಗಳ ಭೀತಿ ಮುಗಿಲೆತ್ತರದ ಮರಗಳಿಗೆ ಒರಗಲೇ ಸ್ವಲ್ಪಮುಗಿದ ಹಾದಿಗೊಮ್ಮೆ ತಿರುಗಲೇ ಸ್ವಲ್ಪ ಭಯ , ಹಾ ! ಭಯದಣಿವ ಲೆಕ್ಕಿಸದೇ ಓಡಿದೆ ಮತ್ತೆನಾ ಕಳೆದುಕೊಂಡ ನನ್ನ ಸಾಮ್ರಾಜ್ಯಕ್ಕೆಅದು ಮಾತ್ರ ಎಂದಿಗೂ ನನ್ನದೇನಾನಲ್ಲಿ , ನಾನು ನನಗಾಗಿ ಮಾತ್ರಏಕಾಂತತೆಯ ಮೌನದೊಳಗೆಲೀನವಾಗುವುದೆನ್ನ ಮನ.. ******************************

ಪ್ರಶ್ನಿಸು ಪ್ರಶ್ನಿಸುತ್ತಲೇ ಇರು

ಕವಿತೆ ನಾಗರಾಜ ಹರಪನಹಳ್ಳಿ ಮುಗ್ಧತೆ ಸೌಂದರ್ಯವಹಾಗೆಲ್ಲ ಬೀದಿಗಿಡಲಾಗದುಒಲವೇಬೀದಿಯಲ್ಲಿ ಉರಿವ ಕಣ್ಣುಗಳಿವೆ ಹಾದಿ ಬೀದಿಗಳಲ್ಲಿ ಕರೋನಾ ಭಯಅದನ್ನೂ ಮೀರಿದ ಖದೀಮರ‌ ಸಂಚಿದೆಯಿಲ್ಲಿ ;ಸಮಾಜ ಇನ್ನೂ ಬದಲಾಗಿಲ್ಲಬದಲಿಸಲು ಯತ್ನಿಸಿದ ಬುದ್ಧ, ಬಸವ ,ಅಕ್ಕಅಲ್ಲಮ ಸೋತಿದ್ದಾರೆ….ಪುರೋಹಿತಶಾಹಿಯ ಕುತಂತ್ರಕೆ ಆನೆಕಾಲಿನ ಸಂಕೋಲೆಗೆ ಸಿಲುಕಿನೆಲಕೆ ಹತ್ತಿದ ರಕ್ತದ ಕಲೆ ಕಲ್ಯಾಣದ ಬೀದಿ ಬೀದಿಗಳಲಿಮತ್ತೆ ಅರಳಲಿ; ಅವೇ ಕಲ್ಯಾಣದ ಕ್ರಾಂತಿಯ ಹೂಚಿತ್ರಗಳಾಗಲಿ :ಅತ್ತ ಅತ್ತತ್ತ ಒಮ್ಮೆ ಹೊರಳಿ ನೋಡುಯಾವ ಹೆಸರುಗಳ ಇತಿಹಾಸದಲ್ಲಿ ಹೂಳಲಾಗಿದೆಯೋ ಅಲ್ಲಿಂದಲೇ ಕಸುವು ಪಡೆದುಕೊ ಗೆಳತಿ, ಆ ಕನಸುಗಳ ಹಂಚು ಕಲ್ಯಾಣದ ಬೀದಿಗಳಲಿ […]

Back To Top