ಆ – ಲಯ
ಡಾ. ಅಜಿತ್ ಹರೀಶಿ
ಆ ಕಲ್ಲುಗಳು
ಭೂಕಂಪಕ್ಕೆ ಸಿಲುಕಿ
ನಡುಗಿ ಅಡಿಗಡಿಗೆ
ಕುಸಿದು ಬಿದ್ದುದು ಅಲ್ಲ
ಆಕಸ್ಮಿಕವಾಗಿ
ಅದೇನೋ ತಾಗಿ
ಅಲುಗಾಡಿ
ನೆಲಕ್ಕುರುಳಿದ್ದೂ ಅಲ್ಲ..!
ಏಕಶಿಲೆಯಂತೆ
ಭದ್ರವಾಗಿದ್ದವುಗಳ
ಬಡಿ-ಬಡಿದು
ಕೆಡವಿದ್ದು ನಾನೇ..
ಪಥ ಬದಲಿಸಿ
ಸಮಯದಿ
ಬಂಧಿಸುವ ಧನ್ಯನಾದ
ಮೊಳಗಲೇ ಬೇಕಿದೆ
ಕ್ರೀಯಾಶೀಲ ನಿನಾದ
ಉರುಳಿ ಹೋದ
ಕಲ್ಲುಗಳ ಆಯ್ದು
ಮತ್ತೆ ಕಟ್ಟಬೇಕಿದೆ
ಅಡಿಯಿಂದ
ಮುಡಿಯವರೆಗೂ..!
- * *
ಚೆನ್ನಾಗಿದೆ ಕವಿತೆ
ಧನ್ಯವಾದಗಳು ಪೂರ್ಣಿಮಾ ಮೇಡಂ
ಚೆಂದದ ಕವಿತೆ
Nice