ಏಕಾಂತ… ಮೌನ…

ಏಕಾಂತ… ಮೌನ…

ಕವಿತೆ ಏಕಾಂತ… ಮೌನ… ಡಾ.ಕಾತ್ಯಾಯಿನಿ ಕುಂಜಿಬೆಟ್ಟು ನಿನ್ನೆ ಆಗಸದಲ್ಲಿಇರುಳಿನ ಹೊಕ್ಕುಳಲ್ಲಿಅರಳಿದ್ದ ಹೂವು ಇಂದು ಬಾಡುತ್ತಿದೆ ಅದರ ಎಸಳುಗಳನ್ನುನಾಳೆ ಭೂಮಿಯಲ್ಲಿ ಹುಡುಕಬೇಕು… ಹುಣ್ಣಿಮೆ – ಅಮಾವಾಸ್ಯೆಗಳನಡುವೆ ಮನವನ್ನು ಸವರಿಕೊಂಡುಕರಗಿ ಹೋದ ಪರಿಮಳವನ್ನುಗಾಳಿಯಲ್ಲಿ ಅರಸಬೇಕುದೀಪ ಹುಡುಕುವ ಕುರುಡನಂತೆ ನಿನ್ನೆ ಚಂದಿರ ನನ್ನ ಕೈಯಏಕತಾರಿಯಾಗಿದ್ದನಾಳೆ ನಾನೇ ಬೆಂಕಿ ಉರಿವ ಮಡಕೆಯಾಗುತ್ತೇನೆ ಅವನ ಕೈಯಲ್ಲಿ.ನಾಳಿದ್ದು…!ಉಳಿಯುವುದು ಬರೇಏಕಾಂತ… ಮೌನ… ***************************

ದ್ರೌಪದಿ ಶಸ್ತ್ರಧಾರಿಯಾಗು

ಅನುವಾದಿತ ಕವಿತೆ ದ್ರೌಪದಿ ಶಸ್ತ್ರಧಾರಿಯಾಗು ಕೆಲ ದಿನಗಳ ಹಿಂದೆ ಹಿಂದಿಯ ಹಾಸ್ಯ ನಟ ವೃಜೇಶ್ ಹೀರ್ಜಿ ಅವರು,  ತಮ್ಮ ಮಿತ್ರ  ಪುಷ್ಯಮಿತ್ರ ಉಪಾಧ್ಯಾಯ ಅವರ ಹಿಂದಿ ಕವಿತೆಯನ್ನು ಓದುವ ಒಂದು ವೀಡಿಯೋ ಫೇಸ್ ಬುಕ್ಕಿನಲ್ಲಿ ಕಾಣಿಸಿತ್ತು. ಅವರು ಭಾವಪೂರ್ಣವಾಗಿ ಓದಿದ್ದು ಅದನ್ನು ಪೂರ್ಣ ನೋಡುವಂತೆ ಮಾಡಿತು.  ಆ ಹಿಂದಿ ಕವಿತೆಯನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ. ನೂತನ ದೋಶೆಟ್ಟಿ ಕೈಗೆ ಮದರಂಗಿ ಹಾಕುತ್ತ ಕೂರುವ ಸಮಯವಿದಲ್ಲನಿನ್ನನ್ನು ನೀನು ಸಂಭಾಳಿಸಿಕೊಳ್ಳಬೇಕಾದ ಕಾಲನೀನೇ ನಿನ್ನ ಹುರಿದುಂಬಿಸಿಕೊಹಾಸು ಹಾಕಿ ಶಕುನಿ ಹೊಂಚಿ ಕುಳಿತಿದ್ದಾನೆಎಲ್ಲ ತಲೆಗಳೂ […]

ಜೀವನ ಜಲಧಿ

ಕವಿತೆ ಜೀವನ ಜಲಧಿ ವೃತ್ಯಾನುಪ್ರಾಸ ಕವನ ಶುಭಲಕ್ಷ್ಮಿ ಆರ್ ನಾಯಕ ಜೀವನವು ಜಂಜಡದ ಜಟಿಲ ಜಲಧಿಸಹನೆ ಸದಾಚಾರದಿ ಸಾಗು ಸಮಚಿತ್ತದಿಹೂವಂಥ ಹೊಂಗನಸ ಹೊತ್ತು ಹೃದಯದಿಮನಕೆ ಮಾಧುರ್ಯವೀವ ಮಾತೃ ಮಮತೆಯಲಿ// ಸುಖದುಃಖಗಳ ಸುಮನದಿ ಸ್ವೀಕರಿಸಿ ಸಾಗಲಿಬದುಕಿನ ಬವಣೆಗಳ ಬೇಗುದಿಯ ಬದಿಗಿಡುತನಮ್ರತೆಯಲಿ ನಗುನಗುತ ನಲುಮೆಯ ನೀಡುತಸನ್ನಡತೆಯಲಿ ಸಮಾಜಕ್ಕೆ ಸಂದೇಶ ಸಾರುತ// ಅತ್ಯಾಚಾರ ಅನಾಚಾರ ಅಂಧಕಾರವ ಅಳಿಸುವಹೆಣ್ಣುಗಳ ಹಿಂಸಿಸುವ ಹಮ್ಮೀರರ ಹತ್ತಿಕ್ಕುವಕಪಟ ಕಾಮಗಳಿಗೆ ಕಡಿವಾಣವ ಕಟ್ಟುವಮೋಸದ ಮಾಯೆಗೆ ಮದ್ದರೆದು ಮಣಿಸುವ// ನೋವು ನಲಿವುಗಳಿಗೆ ನಗುತ ನಮಿಸುವಬದುಕು ಬರಡಾದರೂ ಭರವಸೆಯಲಿ ಬದುಕುವಆತ್ಮವಿಶ್ವಾಸ ಆಶಾಭಾವದಲಿ […]

ಹಚ್ಚಿಕೊಂಡರೆ

ಕವಿತೆ ಹಚ್ಚಿಕೊಂಡರೆ ನಿರ್ಮಲಾ ಶೆಟ್ಟರ ಸಾಕಿನ್ನು ಹೊರಡುಎನ್ನುವುದೆ ತಡ ಹೊರಡಲಾಗದು ಸರಿ ಇದ್ದುಬಿಡುಎಂದೊಡನೆ ಉಳಿಯಲಾಗದು ನಡೆಯುವ ಮುನ್ನ ನಿನ್ನೊಳಗಿನನನ್ನ ತೊರೆದು ನಡೆ ಎಂದೆನಲುಅದೆಷ್ಟು ಬಾರಿ ಅಂದುಕೊಂಡಿಲ್ಲತೊರೆಯಲಾಗದು ನನ್ನಒಳಗಿನ ನಿನ್ನ ಹೀಗೆ ಒಂದೊಮ್ಮೆ ಹಚ್ಚಿಕೊಂಡರೆರೆಕ್ಕೆ ಮೂಡಿ ನಿಂತ ಹಕ್ಕಿಮುನ್ನುಡಿ ತೀಡಿದ ಮೊದಲ ಪುಟತಾಯೊಡಲು ಸೀಳಿ ಬಂದ ಮೊಳಕೆ ಸಸಿಕಂಡಿಕೆ ಪೋಣಿಸಿಕೊಂಡ ಮಗ್ಗಎಲ್ಲದರಾಚೆ ಪ್ರೀತಿ ಕಾಪಿಟ್ಟುಕೊಂಡ ಹೃದಯ ನಡೆಯುವದು ಸರಳಾತೀ ಸರಳಅಲ್ಲಲ್ಲೆ ಚಾಚಿದ ಬೇರ ಕತ್ತರಿಸಿದಲ್ಲಿಚಿಗುರು ಆವರಿಸಿಕೊಂಡಂತೆ ಮಳೆಗೆಅಳಿದುಳಿದವು ತಮ್ಮಿರುವಿನ ಗುರುತಿನಲಿ ಭೂಮಿ ಬಸಿರ ಧಿಕ್ಕರಿಸಿದರೆಅತ್ತಂತೆ ಭಾನು ಮೋಡ ಸುರಿಸಿಮತ್ತೆ […]

ಅನುವಾದ ಸಂಗಾತಿ

ಕನ್ನಡ ಮೂಲ: ಸ್ಮಿತಾ ಅಮೃತರಾಜ್ ಇಂಗ್ಲೀಷಿಗೆ: ಸಮತಾ ಆರ್. ಹಸಿ ಮಣ್ಣ ಧ್ಯಾನ. ಬಿದ್ದಿದ್ದಾರೆ ಪೈಪೋಟಿಗೆ ಎಲ್ಲರೂದುರ್ಬೀನು ಧರಿಸಿ ಹಸಿ ಮಣ್ಣ ಅರಸಿಗುದ್ದಲಿ ಪೂಜೆ ನಡೆಸಿ ಲೇಪಿಸುತ್ತಿದ್ದಾರೆ ಡಾಂಬರುಫೌಂಡೇಶನ್ ಕ್ರೀಂ ಹಚ್ಚುವಂತೆ. ಸಂಕಟ ಸುಲಭಕ್ಕೆ ದಕ್ಕುವ ಸಂಗತಿಯಲ್ಲವೀಗ.ಹಾರ ಬಯಸುವ ದೂಳ ಕಣಕಣದ ಚಡಪಡಿಕೆಗೆಎಷ್ಟು ಚಂದದ ಮಿರುಗು ಬಣ್ಣದ ಲೇಪ. ಏದುಸಿರು ಬಿಡುವಾಗ ಬಿರುಬಿಸಿಲಿನಲ್ಲಿ ರೂಪಾಂತರಗೊಂಡ ಪ್ರಾಣವಾಯುಹೇಳಿಕೊಡಲಾಗುತ್ತಿದೆ ಇಲ್ಲೀಗ ಎಳೆಯರಿಗೆಚಿತ್ರಕ್ಕೆ ಬಣ್ಣ ತುಂಬುವ ಪಾಠಫ್ಯಾನಿನ ಅಡಿಯಲ್ಲಿ ಕುಳ್ಳಿರಿಸಿ. ತಲೆಯೆತ್ತಿದೆ ವಿಶಾಲ ಸಭಾಂಗಣತೇವದ ಗುರುತೇ ಸಿಗದಂತೆ,ಕೆರೆಯ ಸಮಾಧಿಯ ಮೇಲೆ.ನಡೆಸುತ್ತಿದ್ದಾರೆ ಹಿರಿಯರುಶುಷ್ಕ […]

ಬೆವರು ಹಾಗೂ ಹೆಣ್ಣು

ಕವಿತೆ ಬೆವರು ಹಾಗೂ ಹೆಣ್ಣು ನೂತನ ದೋಶೆಟ್ಟಿ ಹೆಂಟೆಯೊಡೆದು ಮಡಿ ಮಾಡಿಬೆವರ ಧಾರೆ ಎರೆದೆರೆದುನೀರುಣಿಸಿದ ಪೈರೀಗಕಾಳುಕಟ್ಟಿ ನಿಂತಿದೆಎದೆಯೆತ್ತರದ ಮಗನಂತೆ ಕೈಯ ಕೆಸರುಮನದ ಕೊಸರುಹಚ್ಚಿಟ್ಟ ಕಣ್ಣ ಹಣತೆಹನಿಸಿದ್ದ ಎದೆಯಾಮೃತ ಹಿಂಡಿ ತೆಗೆದ ಕಾಳ ಹಾಲುಸೇರಿ ಸವಿದ ಪಾಯಸಾನ್ನಸಂಭ್ರಮದ ನಗೆಯ ಮೋಡಿ ಆಳೆತ್ತರ ಬೆಳೆದ ಪೈರುಎದೆಯೆತ್ತರ ಬೆಳೆದ ಮಗಹೆಣೆದ ಕನಸುಗಳ ಕೊಂಡಿಬೆವರಿಗೂ ಹೆಣ್ಣಿಗೂ ತಾಳೆಯ ಮಾಡಿ. ********************************

ಹಣೆಗೆ ಹಣೆ ಹಚ್ಚಿ

ಕವಿತೆ ಹಣೆಗೆ ಹಣೆ ಹಚ್ಚಿ ನಾಗರಾಜ ಹರಪನಹಳ್ಳಿ ಹಣೆಗೆ ಹಣೆ ಹಚ್ಚಿಪಿಸುಮಾತಾನಾಡೋಣಜಗಕೆ ಪ್ರೀತಿಯ ಹಾಡ ಹಾಡೋಣ ಇರುವಷ್ಟು ದಿನಹಗಲುಜೀವ ಕಾರುಣ್ಯದ ಹಾಡ ಹಾಡಿನೆಲದ ಜನಕೆ ಬದುಕ ಹಾಡೋಣ ಸುಖವೋ ದುಃಖವೋ ಸಮನಾಗಿ ಸ್ವೀಕರಿಸಿಹಣೆ ತುಂಬ , ಮನ ತುಂಬ ಸಿಹಿಯ ಹಂಚೋಣ ಬದುಕೆಂಬುದು ಸುಖದ ಹಾಸಿಗೆಯಲ್ಲಕಡು ಕಷ್ಟವನೆ ಹೊದ್ದ ದಾರಿಯೂ ಅಲ್ಲಎಂಬುದು ಸಾರಿ ಹೇಳೋಣ ಹಗಲು ಸೂರ್ಯನ ಪಯಣಇರುಳು ಚಂದ್ರನ ಗಗನಸುಳಿವ ಗಾಳಿಗೆ ದಣಿವಿಲ್ಲದಿರುವಾಗದುಡಿಮೆ ಒಲುವೆ ಜೊತೆ ಜೊತೆಗೆ ಎಂಬ ತತ್ವ ಸಾರೋಣ ಮಗನ ಹಣೆಗೆ ಹಣೆಯಿಟ್ಟುಬದುಕ […]

ಗಾಂಧಿ

ಕವಿತೆ ಗಾಂಧಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ಹದಿಹರೆಯದಲ್ಲಿ ಶ್ರವಣನನ್ನೂ ಹರಿಶ್ಚOದ್ರನನ್ನೂಅಡ್ಡೆಯಲ್ಲಿ ಕೂರಿಸಿ ಹೆಗಲಲ್ಲಿ ಹೊತ್ತು ನಡೆಯಲಾರಂಭಿಸಿದ ಈತಒಂದೂವರೆ ಶತಮಾನದಿಂದ ನಡೆಯುತ್ತಲೇ ಇದ್ದಾನೆಹೇ ರಾಮ್… ಹೇ ರಾಮ್… ಎನ್ನುತ್ತ…ಎಷ್ಟೋ ಬಾರಿಅಡ್ಡೆಯಲ್ಲಿ ಕುಳಿತ ಶ್ರವಣನಿಗೆ ವ್ರಣವಾಗಿದ್ದುಂಟುಹರಿಶ್ಚಂದ್ರನಿಗೆ ಭಗಂದರವಾಗಿ ನರಳಿದ್ದುಂಟುಆಗೆಲ್ಲ ತನ್ನ ಹೃದಯದಲ್ಲೇ ಹುಣ್ಣು ಆದವನಂತೆಪಶ್ಚಾತ್ತಾಪದ ಕಂಬನಿಯಲ್ಲಿ ನೆನೆಸಿದ ಮದ್ದು ಪಟ್ಟಿಯನ್ನು ಕಟ್ಟಿಹಗಲು ರಾತ್ರಿ ಶುಶ್ರೂಷೆ ಮಾಡಿಬರಿಗಾಲಲ್ಲಿ ಬಿಸಿಲು ಮಳೆ ಚಳಿ ಗಾಳಿಯೆನ್ನದೆ ನಡೆದಿದ್ದಾನೆಬಸುರಿ ಸೀತೆ ಹೊಟ್ಟೆಯೊಳಗೆ ಅವಳಿಭ್ರೂಣಗಳ ಹೊತ್ತು ತಿರುಗಿದಂತೆ ಹಾದಿಯುದ್ದಕ್ಕೂ ಕಸಾಯಿ ಮಾಂಸದಂಗಡಿಗಳಲ್ಲಿತಲೆ ಕೆಳಗಾಗಿ ನೇತಾಡುತ್ತ ಸಿಪ್ಪೆ ಸುಲಿಸಿಕೊಂಡು ಚೀರಾಡುವ […]

ಅಂಕಣ ಬರಹ ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನ ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನಮೂಲ ಗುಜರಾತಿ: ಪನ್ನಾಲಾಲ್ ಪಟೇಲ್ ಕನ್ನಡಕ್ಕೆ : ಎಲ್.ವಿ.ಶಾಂತಕುಮಾರಿಪ್ರ : ಸಾಹಿತ್ಯ ಅಕಾಡೆಮಿಪ್ರ.ವರ್ಷ :೨೦೧೫ಬೆಲೆ : ರೂ.೧೯೦ಪುಟಗಳು : ೪೨೪   ಎಲ್.ವಿ.ಶಾಂತಕುಮಾರಿ ನಮ್ಮ ನಡುವಿನ ಬಹಳ ದೊಡ್ಡ ವಿದ್ವಾಂಸರು ಮತ್ತು ಅನುವಾದಕರು. ಅನೇಕ ಕ್ಲಾಸಿಕ್ ಗಳನ್ನು ಅವರು ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಮಾನವ ಜೀವನ : ಒಂದು ವಿಲಕ್ಷಣ ಪ್ರಹಸನ’ ಕಾದಂಬರಿಯು ಜ್ಞಾನಪೀಠ ಪ್ರಶಸ್ತಿ […]

ಗಝಲ್

ಗಝಲ್ ರತ್ನರಾಯ ಮಲ್ಲ ಸಿದ್ಧಾಂತಗಳು ಕಚ್ಚಾಡಿದರೆ ಮತ್ತೆಂದಿಗೂ ಹತ್ತಿರವಾಗಲಾರವುವಾಸನೆಗಳು ಬಡಿದಾಡಿದರೂ ಯಾವತ್ತೂ ದೂರವಾಗಲಾರವು ಜಗಳವು ಸಾಗುತ್ತಿದೆ ಅಲ್ಲಿ ಜೋರಾಗಿ ನಿನ್ನ ಮನ ಕಲುಕುವಂತೆನ್ಯಾಯ ಹುಡುಕುವ ಮನಗಳು ನೆಮ್ಮದಿಯಿಂದ ಬಾಳಲಾರವು ಮೂರನ್ನು ತೊರೆಯುವುದೆ ಇಂದು ಸೌಹಾರ್ದದ ರೂಪ ತಾಳಿದೆಕೈ-ಕಾಲುಗಳು ಹಿಡಿಯದ ಪ್ರತಿಭೆಗಳಿಗೆ ಪ್ರಚಾರ ಮುತ್ತಿಕ್ಕಲಾರವು ಕಸ ಗುಡಿಸುವ ಹುಚ್ಚು ಭ್ರಮೆಯಲ್ಲಿ ಕಸಬರಿಗೆ ಆಗದಿರು ನೀನುಸುಂದರ-ಉತ್ತಮ ಪೊರಕೆಗಳೂ ಸಹ ಪೂಜೆಗೆ ಒಳಗಾಗಲಾರವು ವೈಯಕ್ತಿಕ ಗಟ್ಟಿ ಹೆಜ್ಜೆಯೂರಬೇಕು ನಿಸ್ವಾರ್ಥದ ನೆಲೆಯಲ್ಲಿ ಇಲ್ಲಿಚೂರಿ ಹಾಕಿದ ಹೃದಯಗಳು ‘ಮಲ್ಲಿ’ ಎದೆಯಲ್ಲಿ ಉಳಿಯಲಾರವು ************************************

Back To Top