ಅದ್ಭುತ ನಿರ್ದೇಶಕ
ಹಣೆಯ ಮೇಲೆ ಪುಟಗಟ್ಟಲ್ಲೆ ಚಿತ್ರಕಥೆ ಬರೆಯುವ,
ದೇವರೇ ನಿನ್ನೆಂತ ಅದ್ಭುತ ನಿರ್ದೇಶಕ!
ನಿನ್ನಾಜ್ಞೆಯಂತೆ ನಟಿಸುವುದಷ್ಟೆ ನಮ್ಮೆಲ್ಲರ ಕಾಯಕ!!
ಲಂಕೇಶರ ಅವ್ವ ಕವಿತೆ –
ಇಡೀ ಕವಿತೆಯ ಶರೀರ …ರಚನೆ, ಅದರ ಹೂರಣ ,ತರ್ಕ, ವಾದ, ಪ್ರೀತಿ, ಹೋಲಿಕೆ, ಅವ್ವನ ಪರ ಸಮರ್ಥನೆ…ಎಲ್ಲವೂ ಭಿನ್ನ. ಅವ್ವನನ್ನು ಅವಳ ಪ್ರತಿಭೆ, ಶಕ್ತಿ, ಕಸುವು, ಪ್ರೀತಿ, ಸಿಟ್ಟು, ದೌರ್ಬಲ್ಯ, ಕಣ್ಣೀರು, ಸಿಟ್ಟು, ಬಂಡಾಯ ಎಲ್ಲವನ್ನು ಕವಿ ಲಂಕೇಶ್ ಹಿಡಿದಿಡುತ್ತಾರೆ. ಕನ್ನಡದ ಕವಿತಾ ರಚನೆಗೆ , ವ್ಯಕ್ತಿಯ ಮೂರ್ತಿಯನ್ನು ಕಟೆದು ನಿಲ್ಲಿಸಿ, ಜೀವ ತುಂಬುವುದು ಹೇಗೆ , ನಮ್ಮೆದುರಿನ ಜೀವವನ್ನು , ಜೀವನವನ್ನು ಬದುಕಿ ಓಡಾಡಿದಂತೆ ಚಿತ್ರಿಸುವ ಕಲಾತ್ಮಕತೆ ಸಾಧಿಸಿ ಗೆಲ್ಲುವುದು ಪಿ.ಲಂಕೇಶರಂಥ ಪ್ರತಿಭೆಗೆ ಸಾಧ್ಯ
ನಿನ್ನನೇ ಪ್ರೀತಿಸುವೆ
ಯಾವಾಗಲೋ ನನ್ನ ನೆನಪಿಸಿ ಕರೆಮಾಡಿ
ನಿನ್ನ ಧ್ವನಿಯ ಮೋಡಿಗೆ ನಾನೆಲ್ಲ ಮರೆತು.
ನಿನ್ನ ಆಂತರ್ಯದ ಸಿಹಿಜೇನಲಿ ಬೆರೆತು
ನಾನಿನ್ನು ಪ್ರೀತಿಸುತಿರುವೆ ನಿನ್ನನೇ ಬಯಸಿ
ಸತ್ತು ಹೋಗುವುದೇ ಸಾವಲ್ಲ!
ಜೀವವೇ ಆಗಿರುವ ಪ್ರಾಣಸಖಿ
ತಾತ್ಸಾರದಲಿ ಬೆನ್ನ ತಿರುಗಿಸಿ
ಮಾತು ಬಿಡುವುದೂ…
ಸಾವೇ.
ಕರ್ತವ್ಯಕ್ಕೆ ಬೇಕು ಪ್ರೀತಿಯ ಕೀಲೆಣ್ಣೆ
ಕರ್ತವ್ಯದ ಬೀಜ ಬಿತ್ತಿ ಜೀವನದ ಪರಮೋಚ್ಛ ಗುರಿಯಾದ ಮುಕ್ತಿಯ ಬೆಳೆಯನ್ನು ಬೆಳೆಯಬಹುದು.. ಅದಕ್ಕಾಗಿ ಕರ್ತವ್ಯಪರತೆಗೆ ಮನದ ಭೂಮಿಯನ್ನು ಹಸನು ಮಾಡಿ. ಹದಗೊಳಿಸಬೇಕು. ಕರ್ತವ್ಯಪರತೆಯು ಸಾಧಕರ ಎದೆಗಿಳಿದಿರುವ ಫಲವಾಗಿಯೇ ಅಮೂಲ್ಯ ಮಾನವ ಜೀವನದ ಮೌಲ್ಯವನ್ನು ಎತ್ತಿ ಹಿಡಿಯಲು ಸಾಧ್ಯವಾಗಿದೆ ಅಲ್ಲವೇ
ಸರ್ವಋತು ಬೆಳೆಗಳಾಗಿರುವ ಸಿರಿಧಾನ್ಯಗಳು ಪರಿಸರ ಪೂರಕವಾದ ಬೆಳೆಗಳು. ಅಧಿಕ ಪೌಷ್ಠಿಕಾಂಶ, ಕಬ್ಬಿಣಾಂಶ, ನಾರಿನಂಶ ಹೊಂದಿರುವುದರಿಂದ ಇವು ಉತ್ತಮ ಆಹಾರವೇ ಆಗಿವೆ. ಜೀವನ ಶೈಲಿ, ಅನುವಂಶೀಯ ಕಾಯಿಲೆಗಳಾದ ಮಧುಮೇಹ, ಆ್ಯಸಿಡಿಟಿ, ರಕ್ತದೊತ್ತಡ, ಮಲಬಾಧೆ, ಕರಳು ಸಂಬಂಧಿ ಕಾಯಿಲೆಗಳೇ ಮೊದಲಾದವುಗಳಿಗೆ ಸಿರಿಧಾನ್ಯಗಳ ನಿಯಮಿತ ಬಳಕೆಯಿಂದ ಶಾಶ್ವತ ಪರಿಹಾರವಿದೆಯೆಂದು ಆಹಾರತಜ್ಞರು ಪ್ರತಿಪಾದಿಸುತ್ತಿದ್ದಾರೆ.
ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ, ಕಾಂಗ್ರೇಸ್ ಮತ್ತು ಬಿ.ಜೆ.ಪಿ.ಹೊರತಾಗಿ ಕನ್ನಡಿಗರ ಹಿತಾಸಕ್ತಿಗಳನ್ನು ಕಾಯಬಲ್ಲಂತಹ ಪ್ರಾದೇಶಿಕ ರಾಜಕೀಯ ಪಕ್ಷವೊಂದು ಬೇಕೆಂದು ಕನ್ನಡಿಗರು ಬಯಸುವುದರಲ್ಲಿ ತಪ್ಪೇನೂ ಇಲ್ಲ.
ಜೋಡಿ ಬಾಗಿಲು
ನಾಟಕ, ನಾಟಕದೊಳಗೆ ನಾಟಕ
ಮಾಯೆಯೋ ನಿಜವೋ
ಕರ್ಮವೋ ಛಾಯೆಯೋ
ನಿಜ ಸೂತ್ರದಾರನ ಹುಡುಕಾಟ
ಮನೆಯೊಳಗೇ ನಡೆದಿದೆ
ಇಂಚುಪಟ್ಟಿ
ಮಗನ ಮೇಲೆ ಬಂದ ಕಳ್ಳತನದ ಅಪವಾದಕ್ಕೆ ಕೊನೆ ಹಾಡಲು ಅದೇ ಅಂಗಡಿಯಿಂದ ಇನ್ನೊಂದು ಇಂಚುಪಟ್ಟಿ ಖರಿದಿಸಿ ಲಾವಣ್ಯಳಿಗೆ ಕೊಟ್ಟಿದ್ದನ್ನು ಲಕ್ಷ್ಮಿ ಹೇಳಿರಲಿಲ್ಲ. ಮಗ ಅವಿನಾಶನ ಕೈಯಲ್ಲಿ ಅವನ ಇಂಚುಪಟ್ಟಿಯನ್ನು ಕಂಡ ಲಾವಣ್ಯಳಿಗೆ, ಲಕ್ಷ್ಮಿ ಮಾಡಿರಬಹುದಾದ ಕೆಲಸವನ್ನು ಊಹಿಸುವದು ಕಷ್ಟವಾಗಲಿಲ್ಲ. ‘ನಾಳೆ ಲಕ್ಷ್ಮಿಯಲ್ಲಿ ಕ್ಷಮೆ ಕೋರಬೇಕು’ ಎಂದು ಮನಸ್ಸಿನಲ್ಲೇ ಎಣಿಸಿದ ಲಾವಣ್ಯ ಕಣ್ಣಿನಿಂದ ಉದುರುವ ನೀರನ್ನು ಒರಸಿಕೊಂಡಳು.
ಕವಿತೆ ಮೂಕವಾಗಿದೆ
ಶೋಷಿತರ ಬೆವರ ಹನಿ ಹರಿಯುವಂತೆ
ಬಾರುಕೋಲಿನ ಹೊಡೆತಕ್ಕೆ ಸಿಕ್ಕ ಕೋಣದಂತೆ
ಸುಳಿಗೆ ಸಿಕ್ಕ ದೋಣಿಯಂತೆ ವಿಲವಿಲನೆ ಒದ್ದಾಡಿ
ನನ್ನ ಕವಿತೆ ಮೂಕವಾಗಿದೆ