ಅಮ್ಮ
ಕವಿತೆ ಅಮ್ಮ ಸಂತೋಷ್ ಹೆಚ್ ಈ ಈ ಜೀವಕ್ಕೆ ಗರ್ಭದಿ ನೆಲೆ ಕೊಟ್ಟುಹೃದಯದಲಿ ಪ್ರೀತಿಯ ಬಚ್ಚಿಟ್ಟುಭವಿಷ್ಯದ ಕನಸಿನ ಗಿಡನೆಟ್ಟುನವಮಾಸ ಕಳೆದಳು ಅಮ್ಮ ನನ್ನ ಒಡಲಿಗೆ ಮಡಿಲಾದೆ ನೀನುಹಾಲನ್ನು ಎರೆದ ತಾಯಿಯು ನೀನುಈ ದೇಹಕ್ಕೆ ಉಸಿರನ್ನು ನೀಡಿದವಳು ನೀನುಆ ಋಣವ ತೀರಿಸಲಾಗದ ಮಗನಾದೆ ನಾನು ಮನೆಯೆಂಬ ಗುಡಿಗೆ ದೇವರು ನೀನುಹಸಿವನ್ನು ನೀಗಿಸೋ ಕರುಣಾಮಯಿ ನೀನುಬಿಸಿಲಲ್ಲೂ ಕೂಡ ನೆರಳಾದೆ ನೀನುಆ ಮರಕ್ಕೆ ನೀರೆರೆಯುವ ಮಗನಾದೆ ನಾನು ಅಜ್ಞಾನವೆಂಬ ಇರುಳನ್ನು ಸರಿದುಅರಿವೆಂಬ ಬೆಳಕನ್ನು ನೀಡಿದೆ ನೀನುಈ ಬಾಳಿಗೊಂದು ದೀಪವು ನೀನುಆ ದೀಪ […]
ಮಾತು ಮೀಟಿ ಹೋಗುವ ಹೊತ್ತು
ಕೊಡಗಿನ ಕಾನನದ ಮಡಿಲೊಳಗಿದ್ದುಕೊಂಡು ಯಾವ ವಾದ-ಪಂಥಗಳಿಗೂ ಪಕ್ಕಾಗದೆ, ಆಪ್ತವೆನಿಸುವಂತಹ ತಮ್ಮದೇ ಶೈಲಿ, ಭಾಷೆ, ತಂತ್ರ ಮತ್ತು ರೂಪಕಗಳನ್ನು ಕಂಡುಕೊಳ್ಳುತ್ತಾ ಕಾವ್ಯ ಕೃಷಿ ಮಾಡುತ್ತಿದ್ದಾರೆ ಸ್ಮಿತಾ. ಹೀಗೆಯೇ ಕಾವ್ಯದ ಸುಗ್ಗಿಯಾಗಿ ಅವರು ಸಾಹಿತ್ಯ ಶಿಖರದ ಉತ್ತುಂಗಕ್ಕೇರಲಿ ಎಂಬುದು ಓದುಗರ ಆಶಯ.
ಮತ್ತೆ ಮೈಸೂರು ತಲುಪಿದಾಗ ಅಂಡಮಾನ್ ನ ಮಧುರ ನೆನಪುಗಳು ತುಂಬಿ ತುಂಬಿ ನಮ್ಮೊಂದಿಗೆ ಬಂದಿದ್ದವು
ದಾರಾವಾಹಿ ಆವರ್ತನ ಅದ್ಯಾಯ-16 ಈಶ್ವರಪುರ ಪೇಟೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಚಿನ್ನವನ್ನು ಅಡವಿಟ್ಟು ಹಣ ಪಡೆದ ಗೋಪಾಲ ಸೀದಾ ಶಂಕರನ ಸೈಟಿಗೆ ಬಂದು ನಿಂತ. ಶಂಕರ ತನ್ನ ಮೇಸ್ತ್ರಿ ಸುಬ್ರಾಯನೊಡನೆ ಕಟ್ಟಡ ಕಾಮಗಾರಿಯ ಮಾತುಕತೆಯಲ್ಲಿದ್ದ. ಸ್ವಲ್ಪಹೊತ್ತಿನಲ್ಲಿ ಮೇಸ್ತ್ರಿಯನ್ನೂ ಕೂಲಿಯಾಳುಗಳನ್ನೂ ಕೆಲಸಕ್ಕೆ ತೊಡಗಿಸಿ ಗೋಪಾಲನತ್ತ ಬಂದ. ಗೋಪಾಲ, ಶಂಕರ ಹೇಳಿದ್ದಷ್ಟು ಹಣವನ್ನು ಕೊಟ್ಟು ಗುಜಿರಿಯನ್ನು ಕೊಂಡ. ಬಳಿಕ ತಾನು ಹೇಳಿದ ಜಾಗದ ವಿಷಯವಾಗಿ ಅವನೇನಾದರೂ ಮಾತಾಡುತ್ತಾನೋ ಎಂದು ಕಾದ. ಆದರೆ ಶಂಕರ ಬೇಕೆಂದೇ ಆ ವಿಷಯವನ್ನು ಮರೆತಂತೆ ನಟಿಸಿದ. […]
ಬಸ್ಸು ಅಂಕೋಲೆಯ ಬಸ್ ನಿಲ್ದಾಣದಲ್ಲಿ ಬಂದು ನಿಲ್ಲುವ ಹೊತ್ತಿಗೆ ಸರಿಯಾಗಿ ಸುತ್ತಲಿನ ಬೇಲೇಕೇರಿ, ಭಾವಿಕೇರಿ, ಕಣಗಿಲ ಮುಂತಾದ ಊರುಗಳಿಂದಲೂ ಬಸ್ಸುಗಳು ಬಂದು ನಿಲ್ಲುತ್ತಿದ್ದವು. ಎಲ್ಲ ಬಸ್ಸುಗಳಲ್ಲಿಯೂ ಅಷ್ಟಿಷ್ಟು ಕಾಲೇಜು ವಿದ್ಯಾರ್ಥಿಗಳು ಇರುತ್ತಿದ್ದರು. ಎಲ್ಲರೂ ಕೂಡಿಯೇ ಕಾಲೇಜಿನವರೆಗೆ ಕಾಲ್ನಡಿಗೆಯಲ್ಲಿ ನಡೆಯುವಾಗ ಇಂದಿನ ‘ದಿನಕರ ದೇಸಾಯಿ ರಸ್ತೆ’ ಅಕ್ಷರಶಃ ಜಾತ್ರೆ ಹೊರಟಂತೆ ಕಾಣುತ್ತಿತ್ತು
ಸೊಪ್ಪು ಹೂವೇ….
ಇತ್ತೀಚಿನ ದಿನಗಳಲ್ಲಿ ಪಕ್ಕದ ಹಳ್ಳಿಯಿಂದ ಪ್ರತಿದಿನ ಬರುವ ಸೊಪ್ಪಮ್ಮನೂ ಇಲ್ಲ. ಹೂವಮ್ಮನೂ ಇಲ್ಲ. ಅವರಿಗೆ ಬರುವ ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ವ್ಯಾಪಾರವೂ ಇಲ್ಲ. ಮನೆ ಬಳಿ ತಲುಪಿದರೂ ಯಾರೂ ಹತ್ತಿರ ಹೋಗಲಾಗದೆ ಒಂದು ರೀತಿ ಅನುಮಾನ. ದೂರದಿಂದಲೇ ಬೇಡವೆಂದು ಕಳಿಸುವ ಅನಿವಾರ್ಯ ಪರಿಸ್ಥಿತಿ..ವ್ಯಾಪಾರವಿಲ್ಲದ ಬದುಕಿನ ಸ್ಥಿತಿಗೆ ಹೂವಮ್ಮಂದಿರು ಉತ್ತರವಿಲ್ಲದೆ ಆಕಾಶ ನೋಡುವಂತಾಗಿದೆ
ಪ್ರೀತಿಗೆ ಒಂದು ಮಿತಿ ಇದೆ ಸ್ನೇಹಕೆ ಎಲ್ಲಿದೆ??
ಅಂದ ಹಾಗೆ ನನ್ನ ಅಣ್ಣನಂತಹ ಗೆಳೆಯನ ಪೂರ್ತಿ ಹೆಸರು ಡಾ. ಶೇಕ್ ಮೊಯರಫ್ ಅಲಿ.. ಆ ಮುದ್ದಾದ ರೂಪದರ್ಶಿಯ ಹೆಸರು ಅಫ್ರಿನ್ ಹಾಗು ಅವಳ ಪುಟ್ಟ ಅಕ್ಕಂದಿರ ಹೆಸರು ಜಾಸ್ಮಿನ್ ಮತ್ತು ನಜ್ನಿನ್.. ಎಲ್ಲರಿಗೂ ರಂಜಾನಿನ ಶುಭಾಶಯಗಳು..
ಗಜಲ್
ಗಜಲ್ ಅರುಣಾ ನರೇಂದ್ರ ಇಲ್ಲಿ ಉಸಿರಿಗಾಗಿ ಒದ್ದಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿಅಲ್ಲಿ ಬದುಕಿಗಾಗಿ ಹುಡುಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಚಂದ್ರಮನ ಮುಖ ನೋಡಿ ತಿಂಗಳ ಪೂರ್ತಿ ರೋಜಾ ಮಾಡಿರುವೆಇವರು ನೋಟುಗಳ ಮುದ್ದಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಶಹರಿ ಹೊತ್ತಲ್ಲಿ ಸತ್ತವರು ನೆನಪಾಗಿ ಕಣ್ಣು ತುಂಬಿಕೊಳ್ಳುತ್ತವೆಇಫ್ತಾರ್ ಮಾಡುತ್ತ ಮಿಡುಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಹಗಲೆನ್ನದೆ ಇರುಳೆನ್ನದೆ ನಮಾಜು ಮಾಡಿ ದುವಾ ಬೇಡಿದ್ದೇನೆದೇಶದ ದಳ್ಳುರಿ ತಣ್ಣಗಾಗದೆ ತಡಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಕೆಂಪಾದ ಮೆಹಂದಿಯ ರಂಗು ಕಣ್ಣ ಸುರುಮಾವನ್ನೇ ಇರಿಯುತ್ತಿದೆಕಾಣದ […]
ಗುರು ಬಸವ
ಬಸವ ಜಯಂತಿಯ ವಿಶೇಷ ಕವಿತೆ ಗುರು ಬಸವ ಕೆ.ಶಶಿಕಾಂತ ಪೀಠ-ಪಟ್ಟವೇರಲಿಲ್ಲ,ಬಿರುದು-ಬಾವಲಿಗೆಳಸಲಿಲ್ಲಸಗ್ಗದ ದೇವತೆಯಂತೂ ಅಲ್ಲಪೂಜೆ-ಪರಾಕು ಬೇಕೇ ಇಲ್ಲಜಗದ ಸೇವೆಗೊಲಿದು ಬಂದಭಕ್ತನೀತ ಬಸವ…. ಭುವಿಯ ಮೇಲೆ ಗುರುಗಳಿಲ್ಲದೀವತೆಗಳಂತೂ ಸಾಧ್ಯವಿಲ್ಲಎಲ್ಲ ಎಲ್ಲ ನಾವೇ ಎಲ್ಲಎನುವ ಡೊಂಬರನುಡಿಯನಳಿದುನೆಲದ ಮೇಲೆ ಭಕ್ತರಿಲ್ಲಜಗವು ಜಂಗಮವಾಗಿಹುದಲ್ಲಇದ್ದರಹುದು ನಾನೇ ಒಬ್ಬಭಕ್ತನೆಂದ ಭೃತ್ಯನೀತ ಬಸವ… ಜಗದ ಕುರುಹನರಿಯದೆಯೂಜಗದ ಗುರು ತಾನೇ ಎಂದುಒರಲಿ ಒರಲಿ ತಮಟೆ ಹೊಡೆವಕೂಗುಮಾರಿ ಕೂಟದಿಗೊಡ್ಡುತನದ ಗಡ್ಡ ಬಿಸುಟುದೊಡ್ಡತನದ ಹಮ್ಮು ಹೊಸೆದುಕಿರಿಯ ತಾನು, ಹಿರಿಯರೆಲ್ಲರೆಂದುನಮಿಪ ಶಿವ ಭಕ್ತ ಪ್ರೇಮಿ ಬಸವ. ಹೆಣ್ಣು,ಹೊನ್ನು,ಮಣ್ಣಿಗೆಳಸಿಹಿರಿಯ ದೈವ ತಾವೇ ಎನಿಸಿಗರುವದಿಂದ ಅಳಿದು ಹೋದಹಿರಿಯನಲ್ಲ […]
ಜ್ಞಾನ ಜ್ಯೋತಿಗೆ ಶರಣು
ಬಸವ ಜಯಂತಿಯ ವಿಶೇಷ ಕವಿತೆ ಜ್ಞಾನ ಜ್ಯೋತಿಗೆ ಶರಣು ಪ್ರಭಾವತಿ ಎಸ್ ದೇಸಾಯಿ ಹುಟ್ಟು ಸೂತಕದ ಕುರುಹು ತ್ಯಜಿಸಿದಾತಅರಿವಿನ ಲಿಂಗವ ಕರದೊಳು ಕೊಟ್ಟಾತನರಜನ್ಮಕೆ ಹರಜನ್ಮದ ಅರಿವು ಮೂಡಿಸಿದಾತಭವ ಬಂಧನವ ಬಿಡಿಸಿದಾತಂಗೆ ಶರಣು ಜ್ಞಾನದ ಬೀಜ ಬಿತ್ತಿ,ಅಜ್ಞಾನದ ಕಳೆ ಕಳೆದಾತಲಿಂಗ ಭೇದವ ಅಳಿಸಿ ಸಮಾನತೆ ಹಕ್ಕು ನೀಡಿದಾತಜಾತಿಯ ಅಳಿಸಿ ಜಾತ್ಯಾತೀತ ರಾಷ್ಟ್ರ ನಿಮಿ೯ಸಿದಾತಶೋಷಣೆಯ ಧಿಕ್ಕರಿಸಿದಾತಂಗೆ ಶರಣು ನೊಂದ ಹೃದಯಗಳ ಒಂದು ಗೂಡಿಸಿದಾತಕಾಯಕದಿ ಆಥಿ೯ಕ ಸಮಾನತೆ ಸಾರಿದಾತವೇದ ಉಪನಿಷತ್ತುಗಳ ಭಾಷ್ಯವ ತ್ಯಜಿದಾತವಚನಾನುಭವಾಮೃತವ ಉಣಿಸಿದಾದಂಗೆ ಶರಣು ದೇಹವೇ ದೇವಾಲಯ,ಶಿರವೇ ಹೊನ್ನಕಳಸವೆಂದಾತದಯವೇ ಧರ್ಮದ […]