ರಾಧೆಯ ಭಾವತಲ್ಲಣ

ರಾಧೆಯ ಭಾವತಲ್ಲಣ

ರಾಧೆಯ ಭಾವತಲ್ಲಣ ಚಂದನ  ಜಿ ಪಿ ನೆನಪಿದೆಯಾ ಕೃಷ್ಣಾ.. ಲಲಿತೆ ಏನನ್ನುತಿದ್ದಳು ಎಂದುನೀನು ನನಗೆ ಸಿಕ್ಕಿದ್ದು ಮಣ್ಣಲ್ಲಿ ಸಿಕ್ಕ ಮಾಣಿಕ್ಯವಂತೆ ಬೃಂದಾವನದ ಹೊನ್ನ ಹೂವಂತೆಯಾರಿಗೂ ಎಟುಕದ ಭಾಗ್ಯವಂತೆನನ್ನ ಏಳೇಳು ಜನ್ಮದ ಪುಣ್ಯವಂತೆ  ಕೃಷ್ಣಾ..ಸ್ಮೃತಿ ಪಟಲದಲ್ಲಿ ನಿನ್ನ ನೆನಪೆಲ್ಲವೂ ಸ್ಪುಟ-ನಿಚ್ಚಳ ನೀ ನನ್ನ ಅರಿತಂತೆ ಅರಿತು ನನ್ನ ಬೆರೆತಂತೆ ಒಮ್ಮೇಲೆ ನನ್ನ ತೊರೆದಂತೆ  ತೊರೆದು  ನನ್ನ ಮರೆತಂತೆ ಮರೆತವನ ನಾ ನೆನೆದಂತೆ ನೆನೆನೆನೆದು ಅತ್ತಂತೆ  ಕೇಳುತ್ತಿರುವೆಯ ಕೃಷ್ಣಾ..ವಿಶಾಖ ಏನೆಂದಳು ಗೊತ್ತೆ ನೀನು ನನ್ನಿಂದ ದೂರಾದದ್ದು ಪೂರ್ವ ಜನ್ಮದ ನನ್ನ ಪಾಪವಂತೆ ನಾನು ನತದೃಷ್ಠೆಯಂತೆ ನಿನ್ನ ಪ್ರೇಮ ಪೂಜೆಗೆ ಹೂವಾಗಿ ಭಾಮಾ ರುಕ್ಮಿಣಿಯರು ಇಹರಂತೆಅವರ ರತ್ನಾಭರಣಗಳ ಮೆರುಗಲ್ಲಿ ನನ್ನ ಹೂವಾಭರಣಗಳು ಬಡವಂತೆ  ನಾನು ಬೃಂದಾವನದ […]

ಇಲ್ಲಿ

ಕವಿತೆ ಇಲ್ಲಿ ಮುತ್ತು ಬಳ್ಳಾ ಕಮತಪುರ ಇಲ್ಲಿ ರೋಗಕ್ಕೂಧರ್ಮದ ಟಚ್ ಕೊಡುತ್ತಾರೆಪ್ರಶ್ನೆಸುವಂತಿಲ್ಲ ಸುಮ್ಮನೆಜಾಗಟೆ ಹೊಡೆಯಬೇಕು.. ಆಸ್ಪತ್ರೆಗಳು ಉಳ್ಳವರಿಗೆ ಇಲ್ಲಿಎಲ್ಲವೂ ವಸಿಲಿ ಭಾಜಿಗೆ ಮನೆಹಾಕುತ್ತಾರೆ ಏಕೆ ಎಂದೂಪ್ರಶ್ನೆಸುವಂತಿಲ್ಲ..? ಇಲ್ಲಿ ಬೆಡ್ಗೂ ಬ್ರೇಡಗೂ ಪಾಲಿಹಚ್ಚಬೇಕು ಏಕೆಂದರೆ ಅವರಿಗೆಹಸಿದವರ ನೋವು ಅವರಿಗೆಹಸಿಬಿಸಿಯಾಗಿ ಕಾಣುತ್ತದೆ…! ಇಲ್ಲಿ ಸಾವಿಗೂ ರಶೀದಿಪಡೆಯಬೇಕು…..! ಮಣ್ಣಾಗುವದಕ್ಕೂಕಾಯಬೇಕು,ಎದೆಯ ಮೇಲಿನಹೂ ಬಾಡುವವರೆಗೂ..!ಚಿತೆಗೆ ಕಟ್ಟಿಗೆ ಸಿಗುವವರೆಗೂ… ಶವ ಸಂಸ್ಕಾರಕ್ಕೂಜಾತಿ ಧರ್ಮದ ಬಣ್ಣಎಲ್ಲವೂ ಪ್ರಚಾರದ ಸಾಮಗ್ರಿಆದರೆ ಪ್ರಶ್ನೆಸುವಂತಿಲ್ಲ..? ಇಲ್ಲಿ ಬೆಂಕಿಯಲಿ ಅರಳಿನಿಂತ ಕುಸುಮಗಳು ಇವೆ …..!ಅಮಲಿನ ಲವಣ ಹಾಕದಿರುಇದು ಒಂದೇ ಕೊನೆಗೆ ನಾಕೇಳುವ ಆತ್ಮದ […]

ಮತ್ತೆ ಏನೇನೋ ವಿಚಾರಗಳಿವೆ ಬರೆಯಲಿಕ್ಕೆ. ಆದರೆ ಬರೆಯ ಹೊರಟ ಕೂಡಲೇ ಅದು ಸುತ್ತಿ ಸುತ್ತಿ ಸುಳಿದು ಮತ್ತದೇ ದಾರಿಗೆ ಹೊರಳಿಬಿಡುವುದು ಪರಿಸ್ಥಿತಿಯ ನಾವು ತಳ್ಳಿ ಹಾಕಲಾಗದ ಪ್ರಭಾವವೇ ಇರಬಹುದು. ಅದನ್ನು ಮೀರಬೇಕಾದ ಸಾವಾಲೊಂದು ಮುಂದೆ ಕುಳಿತಿದೆ. ಅದನ್ನೀಗ ಮೀರಲೇಬೇಕಿದೆ.

ನಿಜವಾದ ಹಸಿವು

ಅನುವಾದ ನಿಜವಾದ ಹಸಿವು ಆಂಗ್ಲಮೂಲ: ಪ್ರಸೂನ್ರಾಯ್ ಕನ್ನಡಕ್ಕೆ: ಕೋಡೀಹಳ್ಳಿಮುರಳೀಮೋಹನ್   ರಾಹುಲನಿಗೆ ಹಸಿವು ಆಯ್ತು! ಇದು ಒಂದು ವಿಚಿತ್ರ ಭಾವನೆಯಾಗಿದ್ದು, ಅವನಿಗೆ ಆತಂಕವನ್ನುಂಟುಮಾಡಿತು.  ರಾಹುಲ್ಗೆ ತನ್ನ ದೇಹ ಮತ್ತು ಮನಸ್ಸು ಏನು ಕೇಳುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಇಪ್ಪತ್ತೇಳು ವರ್ಷದ ರಾಹುಲ್ ಅಜ್ಜಿಯ ಕೊನೆಯ ವಿಧಿಗಳಿಗಾಗಿ ತನ್ನ ಪೂರ್ವಜರ ಮನೆಗೆ ಪ್ರಯಾಣಿಸುತ್ತಿದ್ದ. ರಾಹುಲ್ ಒಂದು ದಿನದ ಹಿಂದೆಯೇ ಕೋಲ್ಕತಾ ತಲುಪಿದ್ದ. ಅಂತ್ಯಕ್ರಿಯೆ ಪೂರ್ಣಗೊಂಡಿತು, ಆದರೆ ಇನ್ನೂ  ಕೊನೆಯ ವಿಧಿಗಳ ಧಾರ್ಮಿಕ ಆಚರಣೆಗಳು ಬಾಕಿ ಉಳಿದಿವೆ. ಪಶ್ಚಿಮ ಬಂಗಾಳದ […]

ಮನುಷ್ಯರ ಅಭಿವ್ಯಕ್ತಿಯು ನಾನಾ ರೂಪಗಳಲ್ಲಿ ಆಗುತ್ತಿರುವುದರಿಂದ ಅವರ ಯಶಸ್ಸನ್ನು ಅಳೆಯವುದಕ್ಕೆ ತೊಡಗುತ್ತೇವೆಯಾ? ಎಂದರೆ, ಅದೂ ಅಲ್ಲವೆನಿಸುತ್ತದೆ. ಮರಗಿಡ, ನದಿ,ಬೆಟ್ಟ ಪಶುಪಕ್ಷಿಗಳಾದಿಯಾಗಿ ಸಕವ ಚರಾಚರ ಜೀವಚೇತನಗಳೂ ತಮ್ಮ ಸಾಮರ್ಥ್ಯವನ್ನು ನಾನಾ ಬಗೆಯಲ್ಲಿ ಸಮರ್ಥವಾಗಿ ನಿರೂಪಿಸುತ್ತಿವೆಯಲ್ಲಾ!

ಭರವಸೆಯ ಬೆಳಕು ಸನಿಹ

ಆಗ ಭರವಸೆಯು ಚಿಲುಮೆಯಂತೆ ಪುಟಿದೇಳುತ್ತದೆ. ಹೀಗೆ ಭರವಸೆಯಿಂದ ಆರಂಭಗೊಂಡ ಜೀವನ ಪಯಣ ಉನ್ನತ ಹೊಂಗನಸುಗಳ ಸಾಕಾರದತ್ತ ತಲುಪಿಸುವ ಪರಿ ಅಚ್ಚರಿ. ಹುಸಿ ನಿರೀಕ್ಷೆಗಳನ್ನು ದೂರವಿಟ್ಟರೆ ಭರವಸೆಯ ಬೆಳಕು ಸನಿಹ ಬಂದು ತಬ್ಬಿಕೊಳ್ಳದೇ ಇರದು.

ಅಕ್ಕನೆಂಬ ಹುರುಪು

ಹೊರ ಜಗಲಿಯ ಮೇಲೆ ಕೂತು ಹತ್ತಿ ಹೊಸೆದು ಬತ್ತಿ ಮಾಡುತಿದ್ದ ಗೋದಕ್ಕ ಬಾಯಿ ತುಂಬಾ ನಕ್ಕರು. ಒಂದೇ ಅಳತೆ, ಒಂದೇ ಬಿಗುವಾಗಿ ಹೊಸೆದ ಬತ್ತಿಯಲ್ಲೂ ಎಷ್ಟು ಶಿಸ್ತು. ಅಬ್ಬಾ ಈ ಹೆಂಗಸಿನ ಬತ್ತದ ಉತ್ಸಾಹಕ್ಕೆ ಆಶ್ಚರ್ಯವಾಯಿತು ನನಗೆ.

ನೆಲಮೂಲ ಸಂಸ್ಕೃತಿಯ ಕಲಿಸಿದ ವರನಟ ಡಾ. ರಾಜಕುಮಾರ

ಯುವಕರಿಗೆ ಯೋಗ್ಯ ಮಾರ್ಗದರ್ಶನ ಒಂದನ್ನು ಬಿಟ್ಟರೆ ಯಾವ ಕೊರತೆಗಳೂ ಇಲ್ಲ. ಡಾ. ರಾಜಕುಮಾರ ಅವರ ಕೃಷಿ ಸಂಬಂಧಿತ ಸಿನಿಮಾಗಳು ಇಂದಿಗೂ ಯುವಕರನ್ನು ಕೃಷಿಕ್ಷೇತ್ರದತ್ತ ಆಕರ್ಷಿಸುವ ಶಕ್ತಿ ಹೊಂದಿವೆ. ಡಾ. ರಾಜಕುಮಾರ ಅವರ ಕೃಷಿ ಸಂಬಂಧಿತ ಸಿನಿಮಾಗಳು ಕೇವಲ ಇಂದು ಮಾತ್ರವಲ್ಲ ಎಂದೆಂದಿಗೂ ಅನುಕರಣೀಯವಾಗಿವೆ

ಗಜಲ್

ಭೋಜರಾಜ ಕಾಳಿದಾಸನಿಂದ ಶ್ರದ್ದಾಂಜಲಿ ಕೇಳಿ ಖುಷಿ ಪಟ್ಟು ಜೀವ ಬಿಟ್ಟಿದ್ದನಂತೆ ಆಗ
ಬದುಕಿನ ಅವಿಸ್ಮರಣೀಯ ಘಟನೆ ನೆನಪಿಸಿ ಆ ಜೀವಗಳಿಗೆ ಖುಷಿ ಕೊಡಬಹುದು ಈಗ

Back To Top